ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV400 Pro SUV ಬೆಲೆ, ರೇಂಜ್, ಫೀಚರ್ಸ್ ವಿಶೇಷತೆಗಳು

ಪ್ರಮುಖ ಸ್ವದೇಶಿ SUV ತಯಾರಕ ಕಂಪನಿಯಾದ ಮಹೀಂದ್ರಾ, ಇತ್ತೀಚೆಗೆ XUV400 Pro ರೇಂಜ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಎಲೆಕ್ಟ್ರಿಕ್ ಪ್ರೊ ರೇಂಜ್ ಅನ್ನು ಮೂರು ಹೊಸ ರೂಪಾಂತರಗಳಲ್ಲಿ ಪರಿಚಯಿಸಲಾಗಿದ್ದು, ಪ್ರತಿಯೊಂದೂ ವರ್ಧಿತ ಸೌಕರ್ಯ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿರುವುದಾಗಿ ಮಹೀಂದ್ರಾ ಹೇಳಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಸೌಕರ್ಯ: XUV400 Pro ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ, ಇದರಲ್ಲಿ 26.04 cm ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 26.04 cm ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಆಧುನಿಕ ಸಂಪರ್ಕ ಮತ್ತು ಸುಲಭ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದರ Adrenox ಸಂಪರ್ಕಿತ ಕಾರ್ ಸಿಸ್ಟಮ್, 50 ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್‌ಗಳನ್ನು ನೀಡುವುದರಿಂದ ಒಟ್ಟಾರೆ ವಾಹನ ಕಾರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಮಹೀಂದ್ರಾ ತಿಳಿಸಿದೆ.

new-mahindra-electric-xuv400-pro-suv-price-range-features-specs

ಹೆಚ್ಚುವರಿಯಾಗಿ, ಪ್ರೊ ಶ್ರೇಣಿಯು ಎಲ್ಲಾ ಪ್ರಯಾಣಿಕರಿಗೆ ಸ್ಥಿರವಾದ ಆರಾಮದಾಯಕ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಹಿಂಭಾಗದ ಏರ್‌ ವೆಂಟ್‌ಗಳಿಂದ ಪೂರಕವಾಗಿರುವ ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್‌ನೊಂದಿಗೆ ಎತ್ತರದ ಕ್ಯಾಬಿನ್ ಅನುಭವವನ್ನು ನೀಡುತ್ತದೆ. ವೈರ್‌ಲೆಸ್ ಚಾರ್ಜರ್‌ನ ಅನುಕೂಲತೆ ಮತ್ತು ಹಿಂಭಾಗದ ಯುಎಸ್‌ಬಿ ಪೋರ್ಟ್ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಅತ್ಯಾಧುನಿಕ ವಿನ್ಯಾಸ: XUV400 Pro ರೇಂಜ್ ಹೊಸ ನೆಬ್ಯುಲಾ ಬ್ಲೂ ಬಣ್ಣದ ಆಯ್ಕೆಯೊಂದಿಗೆ ನಯವಾದ ಶಾರ್ಕ್ ಫಿನ್ ಆಂಟೆನಾದೊಂದಿಗೆ ಎಲೆಕ್ಟ್ರಿಕ್ SUV ಯ ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆಧುನಿಕ ಮತ್ತು ಪ್ರೀಮಿಯಂ ಡ್ಯುಯಲ್-ಟೋನ್ ಒಳಾಂಗಣಗಳನ್ನು ಒಳಗೊಂಡಿದೆ. ಒಳಾಂಗಣವು ಏರಿ ಲೈಟ್-ಗ್ರೇ ಬಣ್ಣದ ಜೊತೆಗೆ ಪ್ರೀಮಿಯಂ ಮೈಲ್ಡ್-ಬ್ಲಾಕ್ ಬಣ್ಣದಲ್ಲಿ ಆಕರ್ಷಕವಾಗಿ ಕಾಣುತ್ತದೆ.

new-mahindra-electric-xuv400-pro-suv-price-range-features-specs

ಬ್ಲೂ ಬ್ಯಾಕ್‌ಲೈಟಿಂಗ್ ಜೊತೆಗೆ ಕಂಟ್ರೋಲ್ ನಾಬ್‌ಗಳು, ಶಿಫ್ಟ್ ಲಿವರ್ ಮತ್ತು ವೆಂಟ್ ಬೆಜೆಲ್‌ಗಳ ಮೇಲಿನ ಸ್ಯಾಟಿನ್ - ಕಾಪರ್ ಅಕ್ಸೆಂಟ್‌ಗಳು ಎಲೆಕ್ಟ್ರಿಕ್ ಪವರ್‌ಟ್ರೇನ್ ಇರುವಿಕೆಯನ್ನು ಎತ್ತಿ ತೋರಿಸುತ್ತವೆ. ಸ್ಪೋರ್ಟಿ, ಆರಾಮದಾಯಕವಾದ ಸೀಟ್‌ಗಳು ಸೂಕ್ಷ್ಮವಾದ ಕಾಪರ್ ಅಲಂಕಾರಿಕ ಹೊಲಿಗೆಯೊಂದಿಗೆ ಲೆಥೆರೆಟ್, ಏಕೀಕೃತ, ಪ್ರೀಮಿಯಂ ಒಳಾಂಗಣ ವಿನ್ಯಾಸವನ್ನು ಪ್ರಸ್ತುತಪಡಿಸುತ್ತದೆ.

ಬೆಲೆ ಮತ್ತು ಬ್ಯಾಟರಿ: ಹೊಸ XUV400 Pro ರೇಂಜ್ ಅನ್ನು ಆರಂಭಿಕ ಬೆಲೆ 15.49 ಲಕ್ಷಕ್ಕೆ (ಎಕ್ಸ್‌ ಶೋರೂಂ) ಬಿಡುಗಡೆ ಮಾಡಲಾಗಿದೆ. ಇದರ ಮೂರು ವೇರಿಯೆಂಟ್‌ಗಳನ್ನು ನೋಡುವುದಾದ್ರೆ, EC Pro (34.5 kWh ಬ್ಯಾಟರಿ, 3.3 kW AC ಚಾರ್ಜರ್), EL Pro (34.5 kWh ಬ್ಯಾಟರಿ, 7.2 kW AC ಚಾರ್ಜರ್) ಮತ್ತು EL Pro (39.4 kWh ಬ್ಯಾಟರಿ, 7.2 kW AC ಚಾರ್ಜರ್).

new-mahindra-electric-xuv400-pro-suv-price-range-features-specs

ಹೊಸ ಎಲೆಕ್ಟ್ರಿಕ್ SUV ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ವೈಶಿಷ್ಟ್ಯಗಳ ಪರಿಚಯದೊಂದಿಗೆ ಅದರ ತಾಂತ್ರಿಕ ಸಾಮರ್ಥ್ಯಗಳನ್ನು ಇನ್ನಷ್ಟು ಹೆಚ್ಚಿಸಲಿದೆ. ಇದು ಮುಂದಿನ ಕೆಲವು ತಿಂಗಳುಗಳಲ್ಲಿ ಬ್ರಾಡ್‌ಕಾಸ್ಟ್ ಫರ್ಮ್‌ವೇರ್ ಅಪ್‌ಡೇಟ್‌ಗಳ ಮೂಲಕ ಲಭ್ಯವಾಗಲಿದೆ. ಈ ವರ್ಧನೆಯು ಅಲೆಕ್ಸಾ ಹೊಂದಾಣಿಕೆಯೊಂದಿಗೆ, ನ್ಯಾವಿಗೇಷನ್ ಮತ್ತು ಬಳಕೆದಾರ ಸ್ನೇಹಿ ಚಾಲನಾ ಅನುಭವವನ್ನು ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Sunday, January 14, 2024, 1:00 [IST]
English summary
New mahindra electric xuv400 pro suv price range features specs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+