ಹೊಸ ಮಹೀಂದ್ರಾ ಥಾರ್ ರೋಕ್ಸ್ ಮೈಲೇಜ್ ಕೇಳಿದ್ರೆ ಶಾಕ್ ಆಗ್ತೀರಾ! ಎಷ್ಟು ಗೊತ್ತಾ?
ಮಹೀಂದ್ರಾ ಥಾರ್ ಯಾವಾಗಲೂ ಹಾರ್ಡ್‌ಕೋರ್ ಆಫ್-ರೋಡ್ ಡಿಎನ್‌ಎ, ಗೋ-ಎನಿವೇರ್ ಸಾಮರ್ಥ್ಯ ಮತ್ತು ಒರಟಾದ ಲೈಫ್ ಸ್ಟೈಲ್ ಎಸ್‍ಯುವಿಯಾಗಿದೆ. ಆಫ್-ರೋಡ್ ವಾಹನ ಎಂದಾಗ ಎಲ್ಲರ ಮನಸ್ಸಿಗೆ ಬರುವುದು ಮಹೀಂದ್ರಾ ಥಾರ್ (Mahindra Thar). ಭಾರತದಲ್ಲಿ ಬಹಳ ವರ್ಷಗಳಿಂದ ಮಾರಾಟವಾಗುತ್ತಿರುವ ಜನಪ್ರಿಯ ಆಫ್ ರೋಡರ್ ಎಸ್‍ಯುವಿ ಮಾದರಿಯಾಗಿದೆ. ಈ ಮಹೀಂದ್ರಾ ಥಾರ್ ಎಸ್‍ಯುವಿಗೆ ದೊಡ್ಡ ಅಭಿಮಾನಿ ಬಳಗವಿದೆ. ಆದರೆ ಇದು ಎಂದಿಗೂ ಫ್ಯಾಮಿಲಿ ಎಸ್‌ಯುವಿಯಾಗಿರಲಿಲ್ಲ. ಇದಕ್ಕೆ ಹೊರತಾಗಿರಲಿಲ್ಲ 2020ರ ಬಿಡುಗಡೆಗೊಂಡ 3-ಡೋರ್ ಥಾರ್. ಮಹೀಂದ್ರಾ ಕಂಪನಿಯು ಹೊಸ ಥಾರ್ 5-ಡೊರಿನ ಆವೃತ್ತಿ ಥಾರ್ ರೋಕ್ಸ್ ಹೊಸ ಬದಲಾವಣೆಗಳೊಂದಿಗೆ ಬಂದಿದೆ.
ಹೊಸದಾಗಿ ಬಿಡುಗಡೆಯಾದ ಐದು-ಡೋರಿನ ಥಾರ್ ರೋಕ್ಸ್ ಆಫ್-ರೋಡರ್‌ನ ಎಲ್ಲಾ ಗುಣಲಕ್ಷಣಗಳೊಂದಿಗೆ ಅತ್ಯಂತ ಸಮರ್ಥವಾದ ಎಸ್‍ಯುವಿಯಾಗಿದೆ. ಮಹೀಂದ್ರಾ ಥಾರ್ ರೋಕ್ಸ್ (Mahindra Thar Roxx) ಬೆಲೆ, ವಿನ್ಯಾಸ, ಪ್ರಾಯೋಗಿಕತೆ ಮತ್ತು ಪವರ್‌ಟ್ರೇನ್ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇದು ಮಲ್ಟಿ ಯುಟಿಲಿಟಿ ವಾಹನ ಎಂದು ಕೂಡ ಹೇಳಬಹುದು. ನೀವು ಹೊಸ ಎಸ್‍ಯುವಿಯನ್ನು ಫ್ಯಾಮಿಲಿ ಎಸ್‍ಯುವಿಯಾಗಿ ಬಳಸಬಹುದು.

ಮಹೀಂದ್ರಾ ಥಾರ್ ರೋಕ್ಸ್ ಒಂದು ಡೀಸೆಲ್ ಮತ್ತು ಒಂದು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡುತ್ತದೆ. ಎರಡೂ ಪವರ್‌ಟ್ರೇನ್‌ಗಳಲ್ಲಿ ಎರಡು ಸ್ಟೇಟ್ಸ್ ಟ್ಯೂನ್ ಇದೆ. ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಹೊಂದಿರುವ 2.2-ಲೀಟರ್ TGDi ಪೆಟ್ರೋಲ್ ರೂಪಾಂತರವು 152hp ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಆಟೋಮ್ಯಾಟಿಕ್ ರೂಪಾಂತರವು 177 hp ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಮತ್ತೊಂದೆಡೆ, ಮಹೀಂದ್ರಾ ಥಾರ್ ರೋಕ್ಸ್‌ನಲ್ಲಿರುವ ಬೇಸ್ 2.2-ಲೀಟರ್ ಡೀಸೆಲ್ ಎಂಜಿನ್ 162 hp ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ 4X4 ಪವರ್‌ಟ್ರೇನ್‌ಗಳೊಂದಿಗೆ ಟಾಪ್ ಸ್ಪೆಕ್ ಮಾದರಿಗಳು 175hp ಮತ್ತು 370Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಪವರ್‌ಟ್ರೇನ್‌ಗಳು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರುತ್ತವೆ.

ಮೈಲೇಜ್ ಅಂಕಿಅಂಶಗಳಿಗೆ ಸಂಬಂಧಿಸಿದಂತೆ, ಪೆಟ್ರೋಲ್ ಎಂಜಿನ್ 12.40 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮತ್ತೊಂದೆಡೆ, ಡೀಸೆಲ್ ಎಂಜಿನ್ 15.20 ಕಿ.ಮೀ ನಷ್ಟು ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿ ಉಲ್ಲೇಖಿಸಲಾದ ಅಂಕಿಅಂಶಗಳು ARAI- ಪ್ರಮಾಣೀಕೃತವಾಗಿವೆ ಎಂಬುದನ್ನು ಗಮನಿಸಿ. ಥಾರ್ ರೋಕ್ಸ್ ನಗರ ಮತ್ತು ಹೆದ್ದಾರಿಯಲ್ಲಿ ಕ್ರಮವಾಗಿ 10.82 ಕಿ.ಮೀ ಮತ್ತು 15.44 ಕಿ.ಮೀ ಮೈಲೇಜ್ ಅನ್ನು ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಮಹೀಂದ್ರಾ ಥಾರ್ ರೋಕ್ಸ್ ಎಸ್‍ಯುವಿಗೆ ರೂ.12.99 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. ಈ ಮಹೀಂದ್ರಾ ಥಾರ್ ರೋಕ್ಸ್ ಕ್ಯಾಬಿನ್ ಅನ್ನು ಮೃದುವಾದ ಸ್ಪರ್ಶ ಸಾಮಗ್ರಿಗಳನ್ನು ಮತ್ತು ಡ್ಯುಯಲ್ ಟೋನ್ ಥೀಮ್ ಅನ್ನು ಲೈಟ್ ಕಲರ್ ಆಯ್ಕೆಯೊಂದಿಗೆ ಕುಟುಂಬ ಬಳಕೆಗೆ ಹೆಚ್ಚು ಆರಾಮದಾಯಕವಾಗಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದು ಸ್ವಾಗತಾರ್ಹ ಕ್ರಮವಾಗಿದ್ದರೂ, ಒಳಾಂಗಣವನ್ನು ಸ್ವಚ್ಛವಾಗಿಡಲು ಸ್ವಲ್ಪ ಪ್ರಯತ್ನವನ್ನು ತೆಗೆದುಕೊಳ್ಳಬಹುದು.

3-ಡೋರ್ ಥಾರ್‌ನ ಸಂಪೂರ್ಣ ಕಪ್ಪು ಕ್ಯಾಬಿನ್ ಅನ್ನು ಬಳಸಲು ಸುಲಭವಾಗಿತ್ತು. ಬಿಳಿ ಬಣ್ಣವಾಗಿರುವುದರಿಂದ ಸ್ವಚ್ಛವಾಗಿಡುವುದು ದೊಡ್ಡ ಸವಾಲು. ರೋಕ್ಸ್ ಫಿಚರ್ಸ್ ವಿಷಯದಲ್ಲಿ ಥಾರ್ 3-ಡೋರ್ ಮಾದರಿಯನ್ನು ಮೀರಿಸುತ್ತದೆ. ರೋಕ್ಸ್ ವಿಶೇಷ ಫೀಚರ್ಸ್, ಪನರೊಮಿಕ್ ಸನ್‌ರೂಫ್, ಪವರ್ಡ್ ಮತ್ತು ವೆಂಟಿಲೆಟೆಡ್ ಸೀಟುಗಳು ಮತ್ತು ಪ್ರೀಮಿಯಂ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಸೇರಿವೆ.
ಇನ್ನು ಡಿಜಿಟಲ್ ಕಾಕ್‌ಪಿಟ್ ಅನ್ನು ಟ್ವಿನ್ 26.03 ಸೆಂ ಸ್ಕ್ರೀನ್‌ಗಳೊಂದಿಗೆ ಅಪ್‌ಗ್ರೇಡ್ ಮಾಡಲಾಗಿದೆ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯನ್ನು ಸಂಪೂರ್ಟ್ ಮಾಡುತ್ತದೆ. ಇನ್ನು ಲೆವೆಲ್-2 ADAS ಅನ್ನು ಹೊಂದಿದೆ. ಇನ್ನು ಥಾರ್‌ಗೆ ಐದು ಬಣ್ಣಗಳಿಗೆ ಹೋಲಿಸಿದರೆ ರೋಕ್ಸ್ ಮಾದರಿಯು ಏಳು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.


Click it and Unblock the Notifications