ದಸರಾ ಹಬ್ಬಕ್ಕೆ ಮಹೀಂದ್ರಾ ಥಾರ್ ರೋಕ್ಸ್ ವಿತರಣೆ ಪ್ರಾರಂಭ: ಡಿಮ್ಯಾಂಡ್ ನೋಡಿ ಬೆಚ್ಚಿಬಿದ್ದ ಎದುರಾಳಿಗಳು
ಮಹೀಂದ್ರಾ ಥಾರ್ ಯಾವಾಗಲೂ ಹಾರ್ಡ್‌ಕೋರ್ ಆಫ್-ರೋಡ್ ಡಿಎನ್‌ಎ, ಗೋ-ಎನಿವೇರ್ ಸಾಮರ್ಥ್ಯ ಮತ್ತು ಒರಟಾದ ಲೈಫ್ ಸ್ಟೈಲ್ ಎಸ್‍ಯುವಿಯಾಗಿದೆ. ಆಫ್-ರೋಡ್ ವಾಹನ ಎಂದಾಗ ಎಲ್ಲರ ಮನಸ್ಸಿಗೆ ಬರುವುದು ಮಹೀಂದ್ರಾ ಥಾರ್ (Mahindra Thar) ಎಂದರೆ ತಪ್ಪಲ್ಲ. ಭಾರತದಲ್ಲಿ ಬಹಳ ವರ್ಷಗಳಿಂದ ಮಾರಾಟವಾಗುತ್ತಿರುವ ಜನಪ್ರಿಯ ಆಫ್ ರೋಡರ್ ಎಸ್‍ಯುವಿ. ಭಾರತದಲ್ಲಿ ಥಾರ್ ಎಸ್‍ಯುವಿಗೆ ದೊಡ್ಡ ಅಭಿಮಾನಿ ಬಳಗವಿದೆ. ಆದರೆ ಎಂದಿಗೂ ಫ್ಯಾಮಿಲಿ ಎಸ್‌ಯುವಿಯಾಗಿರಲಿಲ್ಲ. ಇದಕ್ಕೆ ಹೊರತಾಗಿರಲಿಲ್ಲ 2020ರ ಬಿಡುಗಡೆಗೊಂಡ 3-ಡೋರ್ ಥಾರ್. ಇನ್ನು ಹೊಸ ಥಾರ್ 5-ಡೊರಿನ ಆವೃತ್ತಿ ಥಾರ್ ರೋಕ್ಸ್ ಹೊಸ ಬದಲಾವಣೆಗಳೊಂದಿಗೆ ಸ್ವಾತಂತ್ರ್ಯ ದಿನದಂದು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು.
ಈ ಹೊಸ ಮಹೀಂದ್ರಾ ಥಾರ್ ರೋಕ್ಸ್ (Mahindra Thar Roxx) ಎಸ್‍ಯುವಿ ಖರೀದಿಗಾಗಿ ಅಕ್ಟೋಬರ್ 3ಕ್ಕೆ ಬುಕ್ಕಿಂಗ್ ಅನ್ನು ಪ್ರಾರಂಭಿಸಿತ್ತು. ಇದೀಗ ದಸರಾ ಹಬ್ಬಕ್ಕೆ ಈ ಮಹೀಂದ್ರಾ ಥಾರ್ ರೋಕ್ಸ್ ಎಸ್‍ಯುವಿಯ ವಿತರಣೆಯನ್ನು ಪ್ರಾರಂಭಿಸಿದೆ. ಈ ಥಾರ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭವಾದಗ 60 ನಿಮಿಷಗಳಲ್ಲಿ 1.76 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದುಕೊಂಡು ಹೊಸ ದಾಖಲೆ ಬರೆದಿದೆ.

ಇನ್ನು ಮಹೀಂದ್ರಾ ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮಹೀಂದ್ರಾ ಥಾರ್ ರೋಕ್ಸ್ ಎಸ್‍ಯುವಿ ಕಾಯುವ ಅವಧಿಯನ್ನು ಕಡಿಮೆ ಮಾಡುತ್ತದೆ. ಈ ಮಹೀಂದ್ರಾ ಥಾರ್ ರಾಕ್ಸ್ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ಉತ್ತಮವಾಗಿರುವ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಸರ್ಕ್ಯೂಲರ್ ಫಾಗ್ ಲೈಟ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.
ಈ ಹೊಸ ಥಾರ್ ರೋಕ್ಸ್ 4X4 ಪ್ರತ್ಯೇಕವಾಗಿ 2.2-ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಈ ಎಂಜಿನ್ 175 bhp ಪವರ್ ಮತ್ತು 370 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಅನ್ನು ಹೊಂದಿದೆ. ಇನ್ನು ಡೀಸೆಲ್ 4X2 ರೂಪಾಂತರಗಳು, 2.2-ಲೀಟರ್ TGDi ಪೆಟ್ರೋಲ್ ರೂಪಾಂತರವು 152hp ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಟೋಮ್ಯಾಟಿಕ್ ರೂಪಾಂತರವು 177 hp ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತೊಂದೆಡೆ, ಮಹೀಂದ್ರಾ ಥಾರ್ ರೋಕ್ಸ್‌ನಲ್ಲಿರುವ ಬೇಸ್ 2.2-ಲೀಟರ್ ಡೀಸೆಲ್ ಎಂಜಿನ್ 162 hp ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ 4X4 ಪವರ್‌ಟ್ರೇನ್‌ಗಳೊಂದಿಗೆ ಟಾಪ್ ಸ್ಪೆಕ್ ಮಾದರಿಗಳು 175hp ಮತ್ತು 370Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಡೀಸೆಲ್ ಪವರ್‌ಟ್ರೇನ್‌ಗಳು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಹೊಂದಿದೆ. ಮೈಲೇಜ್ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ಎಂಜಿನ್ 12.40 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮತ್ತೊಂದೆಡೆ, ಡೀಸೆಲ್ ಎಂಜಿನ್ 15.20 ಕಿ.ಮೀ ನಷ್ಟು ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ. ಥಾರ್ ರೋಕ್ಸ್ ನಗರ ಮತ್ತು ಹೆದ್ದಾರಿಯಲ್ಲಿ ಕ್ರಮವಾಗಿ 10.82 ಕಿ.ಮೀ ಮತ್ತು 15.44 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಇತ್ತೀಚೆಗೆ ಮಹೀಂದ್ರಾ ಕಂಪನಿಯು ಥಾರ್ ರಾಕ್ಸ್‌ಗೆ ಹೊಸ ಇಂಟೀರಿಯರ್ ಬಣ್ಣದ ಆಯ್ಕೆಯನ್ನು ನೀಡಿದೆ. ರಾಕ್ಸ್‌ನ 4x4 ರೂಪಾಂತರಗಳಿಗಾಗಿ ಹೊಸ ಮೋಚಾ ಬ್ರೌನ್ ಒಳಾಂಗಣವನ್ನು ಪರಿಚಯಿಸಲಾಗಿದೆ. ಥಾರ್ ರೋಕ್ಸ್ 4X4 ಎಸ್‍ಯುವಿಯಲ್ಲಿ ಐವರಿ ಬಣ್ಣದ ಜೊತೆ ಮೋಚಾ ಬ್ರೌನ್ ಬಣ್ಣದ ಇಂಟಿರಿಯರ್ ಮಾದರಿಯನ್ನ್ ಆಯ್ಕೆ ಮಾಡಿಕೊಳ್ಳಬಹುದು. ಥಾರ್ ರೋಕ್ಸ್ 4X4 ಎಸ್‍ಯುವಿ MX5, AX5L, AX7L ಮತ್ತು MX5 4X4 ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.
ಮೊದಲಿಗೆ ಥಾರ್ ರೋಕ್ಸ್ 4X4 ಎಸ್‍ಯುವಿಯ ಲೋ-ಸ್ಪೆಕ್ MX5 ರೂಪಾಂತರದ ಬೆಲೆಯು 18.79 ಲಕ್ಷವಾಗಿದೆ. ಇನ್ನು AX5L 4X4 ಡೀಸೆಲ್ ಆಟೋಮ್ಯಾಟಿಕ್ ಬೆಲೆಯು ರೂ. 20.99 ಲಕ್ಷ ರೂ.ಗಳಾಗಿದೆ. ಇನ್ನು AX7L 4X4 ಡೀಸೆಲ್ ಅನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳೊಂದಿಗೆ ನೀಡಲಾಗಿದ್ದು, ಕ್ರಮವಾಗಿ ರೂ.20.99 ಲಕ್ಷ ಮತ್ತು ರೂ.22.49 ಲಕ್ಷ ಬೆಲೆಗಳನ್ನು ಹೊಂದಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.


Click it and Unblock the Notifications








