ಬೆಂಗಳೂರಿನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಹೊಸ ಬ್ರಹ್ಮಾಸ್ತ್ರ: ಬರುತ್ತಿದೆ ಹೊಸ ಎಲೆಕ್ಟ್ರಿಕ್ ಕಾರು

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಈ ವರ್ಷ ಥಾರ್ ರೋಕ್ಸ್, ಎಕ್ಸ್‌ಯುವಿ 3 ಎಕ್ಸ್‌ಒ, ಸ್ಕಾರ್ಪಿಯೋ ಎನ್ ಮತ್ತು ಎಕ್ಸ್‌ಯುವಿ700 ಸೇರಿದಂತೆ ಹಲವು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿತು. ಇತ್ತೀಚಿನ ವರ್ಷಗಳಲಿ ಮಹೀಂದ್ರಾ (Mahindra) ಕಾರುಗಳ ಮಾರಾಟದಲ್ಲಿ ಭಾರೀ ಬೆಳವಣಿಗೆಯನ್ನು ಸಾಧಿಸುತ್ತಿದೆ. ಮಹೀಂದ್ರಾ ಕಂಪನಿಯು ಇತ್ತೀಚೆಗೆ ತನ್ನ ಹೊಸ ಮಹೀಂದ್ರಾ BE 6 ಮತ್ತು XEV 9e ಎಂಬ ಎರಡು ಹೊಸ ಎಲೆಕ್ಟ್ರಿಕ್ ಎಸ್‍ಯುವಿಗಳ ಪರಿಚಯದೊಂದಿಗೆ ಎಲೆಕ್ಟ್ರಿಕ್ ಕಾರು ವಿಭಾಗಕ್ಕೆ ದಾಪುಗಾಲು ಹಾಕಿದೆ.

ಇವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಮಹೀಂದ್ರಾ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ. BE 6 ಮತ್ತು XEV 9e ಎಲೆಕ್ಟ್ರಿಕ್ ಎಸ್‍ಯುವಿಗಳ ಜೊತೆಗೆ ಮಹಿಂದ್ರಾ ಕಂಪನಿಯು XEV 7e (Mahindra XEV 7e)ಎಂಬ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ರೆಡಿಯಾಗುತ್ತಿದೆ.ಮಹೀಂದ್ರಾ BE 6 ಮತ್ತು XEV 9e ಎಲೆಕ್ಟ್ರಿಕ್ ಎಸ್‍ಯುವಿಗಳಂತಲ್ಲದೆ, ಇದು ಜನಪ್ರಿಯ XUV700 ಎಸ್‍ಯುವಿಯನ್ನು ಆಧರಿಸಿದೆ.

Mahindra XEV 7e

ಹೊಸ ಮಹೀಂದ್ರಾ XEV 7e ಎಲೆಕ್ಟ್ರಿಕ್ ಎಸ್‍ಯುವಿಯು ಅನೇಕ ಬಾಡಿ ಪ್ಯಾನೆಲ್‌ಗಳು ಮತ್ತು ಇತರ ವಿನ್ಯಾಸ ಅಂಶಗಳನ್ನು ಹಂಚಿಕೊಳ್ಳುತ್ತದೆ. 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ಮುಂಚಿತವಾಗಿ ಮುಂಬರುವ ಮಹೀಂದ್ರಾ XEV 7e ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಮಹೀಂದ್ರಾದ ಇತ್ತೀಚಿನ ಎಲೆಕ್ಟ್ರಿಕ್ ಎಸ್‍ಯುವಿ ಗಳಿಗೆ ಹೋಲುವ ವಿಭಿನ್ನ ಮುಂಭಾಗದ ವಿನ್ಯಾಸದೊಂದಿಗೆ ಬಹುತೇಕ ಅಂತಿಮ ರೂಪವನ್ನು ತಲುಪಿದೆ

ಮಹೀಂದ್ರಾ XUV 700 ಎಸ್‍ಯುವಿಗೆ ಹೋಲಿಸಿದರೆ ಮಹೀಂದ್ರಾ XEV 7e ಎಲೆಕ್ಟ್ರಿಕ್ ಎಸ್‍ಯುವಿಯು ವಿಭಿನ್ನವಾದ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಹೊಸ ಎಲೆಕ್ಟ್ರಿಕ್ ಎಸ್‍ಯುವಿಯ ಹಿಂಭಾಗದ ವಿಭಾಗವು XUV700 ಗೆ ಹೋಲುತ್ತದೆ. ಉತ್ಪಾದನಾ ಆವೃತ್ತಿಯು ವಿಭಿನ್ನ ಲೈಟ್ ಗ್ರಾಫಿಕ್ಸ್‌ನೊಂದಿಗೆ ಒಂದೇ ರೀತಿಯ ಟೈಲ್‌ಲೈಟ್‌ಗಳನ್ನು ಹೊಂದಿದೆ ಎಂದು ನಾವು ನಿರೀಕ್ಷಿಸುತ್ತೇವೆ.

Mahindra XEV 7e

ಮಹೀಂದ್ರಾ XEV 7e ಎಲೆಕ್ಟ್ರಿಕ್ ಎಸ್‍ಯುವಿಯು XEV 9e ಎಲೆಕ್ಟ್ರಿಕ್ ಮಾದರಿಯಂತೆಯೇ ಡ್ಯಾಶ್‌ಬೋರ್ಡ್‌ನಲ್ಲಿ ಅಗಾಧವಾದ ಟ್ರಿಪಲ್-ಸ್ಕ್ರೀನ್ ಸೆಟಪ್‌ನೊಂದಿಗೆ ಮಹೀಂದ್ರಾ XEV 7e ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಕಾಣಿಸಿಕೊಂಡಿದೆ. ಈ ಮಹಿಂದ್ರಾ XEV 7e ಎಲೆಕ್ಟ್ರಿಕ್ ಎಸ್‍ಯುವಿಯ ಉತ್ಪಾದನಾ ಆವೃತ್ತಿಯಲ್ಲಿ ಇಂತಹ ಸೆಟಪ್ ಅನ್ನು ನಿರೀಕ್ಷಿಸುವುದು ಸುರಕ್ಷಿತವಾಗಿದೆ.

ಹೊಸ ಮಹೀಂದ್ರಾ XEV 7e ಎಲೆಕ್ಟ್ರಿಕ್ ಎಸ್‍ಯುವಿ ಲೆವೆಲ್ 2 ADAS ಟೆಕ್, ವೆಂಟಿಲೇಟೆಡ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, Android Auto, Apple CarPlay, ಪನೋರಮಿಕ್ ಸನ್‌ರೂಫ್ ಮತ್ತು ಇತರ ಇತ್ತೀಚಿನ ಬಟನ್ ಗಳನ್ನು ಒಳಗೊಂಡಂತೆ ಟೆಕ್ನೊಂದಿಗೆ ಲೋಡ್ ಆಗುತ್ತದೆ ಎಂದು ನಿರೀಕ್ಷಿಸಬಹುದು.

Mahindra XEV 7e

ಈ ಮಹೀಂದ್ರಾXEV 7e ಎಲೆಕ್ಟ್ರಿಕ್ ಎಸ್‍ಯುವಿಯ ಪವರ್‌ಟ್ರೇನ್ XEV 9e ಎಲೆಕ್ಟ್ರಿಕ್ ಎಸ್‍ಯುವಿಯಂತೆಯೇ 59kWh ಮತ್ತು 79kWh ಎಂಬ ಎರಡೂ ಬ್ಯಾಟರಿ ಪ್ಯಾಕ್ ಆಯ್ಕೆಗಳ ಆಯ್ಕೆಯೊಂದಿಗೆ ಬರಲಿದೆ. ಚಿಕ್ಕ ಬ್ಯಾಟರಿ ಪ್ಯಾಕ್‌ನೊಂದಿಗೆ XEV 7e ರೂಪಾಂತರವು 224bhp ಯೊಂದಿಗೆ ಹಿಂಭಾಗದ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಯಾಗುವ ಸಾಧ್ಯತೆಯಿದೆ, ಆದರೆ ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಸ್ವಲ್ಪ ಹೆಚ್ಚು ಶಕ್ತಿಶಾಲಿ 278bhp ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, December 27, 2024, 12:04 [IST]
English summary
New mahindra xev 7e spotted testing in bengaluru details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+