ಟಾಟಾಗೆ ನಡುಕ ಹುಟ್ಟಿಸಿದ ಹೊಸ ಮಹಿಂದ್ರಾ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳೇನು?

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಬಹುನಿರೀಕ್ಷಿತ XEV 9e ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಮಹೀಂದ್ರಾ XEV 9e (Mahindra XEV 9e) ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯು ಎಕ್ಶ್ ಶೋರೂಂ ಪ್ರಕಾರ ರೂ.21.9 ಲಕ್ಷವಾಗಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯ ಸಂಪೂರ್ಣ ಬೆಲೆ ವಿವರಗಳನ್ನು 2025ರ ಜನವರಿ ತಿಂಗಳ ಕೊನೆಯ ವಾರಗಳಲ್ಲಿ ಘೋಷಿಸಲಾಗುತ್ತದೆ. ಈ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಎಸ್‍ಯುವಿಯ ವಿತರಣೆಯು ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಪ್ರಾರಂಭವಾಗುತ್ತದೆ.

ವಿನ್ಯಾಸ: ಹೊಸ ಮಹೀಂದ್ರಾ XEV 9e ಎಲೆಕ್ಟ್ರಿಕ್ ಕೂಪ್ ಎಸ್‍ಯುವಿಯು ಅಗ್ರೇಸಿವ್ ಕ್ರೀಸ್‌ಗಳು ಮತ್ತು ಕಟ್‌ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯ ಮುಂಭಾಗದ ಫಾಸಿಕ ದೊಡ್ಡ ಫಾಕ್ಸ್ ಗ್ರಿಲ್ ಮತ್ತು LED ಹೆಡ್‌ಲ್ಯಾಂಪ್‌ಗಳನ್ನು LED ಲೈಟ್ ಬಾರ್‌ ಕನೆಕ್ಟಿವಿಟಿಯನ್ನು ಹೊಂದಿದೆ. ಇನ್ನು ಏರೋ-ಆಪ್ಟಿಮೈಸ್ಡ್ 19-ಇಂಚಿನ ಅಲಾಯ್ ವ್ಹೀಳ್ ಗಳನ್ನು ಸ್ಟ್ಯಾಂಡರ್ಡ್ ಅನ್ನು ಹೊಂದಿದ್ದರೆ, 20-ಇಂಚಿನ ಅಲಾಯ್ ವ್ಹೀಲ್ ಗಳ ಆಯ್ಕೆಯಾಗಿ ಲಭ್ಯವಿದೆ.

Mahindra XEV 9e

ಈ ಎಲೆಕ್ಟ್ರಿಕ್ ಎಸ್‌ಯುವಿಯು ಬೋಲ್ಡ್ ಶೋಲ್ಡರ್ ಲೈನ್‌ಗಳು, ಪಿಯಾನೋ ಬ್ಲ್ಯಾಕ್ ಕ್ಲಾಡಿಂಗ್, ತೆಳುವಾದ ಲೈಟ್ ಬಾರ್‌ನಿಂದ ಸಂಪರ್ಕಗೊಂಡಿರುವ ಸ್ಲಿಮ್ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ಸಣ್ಣ ಬೂಟ್ ಸ್ಪಾಯ್ಲರ್ ಅನ್ನು ಸಹ ಒಳಗೊಂಡಿದೆ. ಹೊಸ ಮಹೀಂದ್ರಾ XEV 9e ಎಲೆಕ್ಟ್ರಿಕ್ ಎಸ್‍ಯುವಿಯು INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಬ್ಯಾಟರಿ ಪ್ಯಾಕ್: ಈ ಮಹೀಂದ್ರಾ ಎಲೆಕ್ಟ್ರಿಕ್ ಎಸ್‍ಯುವಿಯು 59kWh ಮತ್ತು 79kWh LFP (ಲಿಥಿಯಂ-ಐರನ್ ಫಾಸ್ಫೇಟ್) ಬ್ಯಾಟರಿಗಳೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯು ಬ್ಲೇಡ್ ಸೆಲ್ ತಂತ್ರಜ್ಞಾನದೊಂದಿಗೆ ವರ್ಧಿಸಲಾಗಿದೆ. ಈ ಎಲೆಕ್ಟ್ರಿಕ್ ಎ‍ಸ್‍ಯುವಿಯಲ್ಲಿ 59kWh ಮತ್ತು 79kWh ಬ್ಯಾಟರಿ ಪ್ಯಾಕ್ ಗಳನ್ನು ಹೊಂದಿದ್ದು, ಇವುಗಳು ಕ್ರಮವಾಗಿ 228 bhp ಮತ್ತು 281 bhp ಪವರ್ ಅನ್ನು ಉತ್ಪಾದಿಸುತ್ತದೆ.

Mahindra XEV 9e

ದೊಡ್ಡದಾದ 79kWh ಬ್ಯಾಟರಿಯು 6.7 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಬ್ಯಾಟರಿ ಪ್ಯಾಕ್ 656km (MIDC ಸೈಕಲ್‌ನಲ್ಲಿ) ಮತ್ತು 533km (WLTP ಸೈಕಲ್‌ನಲ್ಲಿ) ರೇಂಜ್ ನೀಡುತ್ತದೆ. ಈ ಬ್ಯಾಟರಿಗಳು 175kWh DC ವರೆಗಿನ ಫಾಸ್ಟ್ ಚಾರ್ಜಿಂಗ್ ಬಳಸಿಕೊಂಡು ಕೇವಲ 20 ನಿಮಿಷಗಳಲ್ಲಿ 20% ರಿಂದ 80% ವರೆಗೆ ಚಾರ್ಜ್ ಮಾಡಬಹುದು. 11.2kW AC ಚಾರ್ಜರ್ ಮತ್ತು 7.3kWh ಚಾರ್ಜರ್ ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ.

ಫೀಚರ್ಸ್: ಹೊಸ ಮಹೀಂದ್ರಾ XEV 9e ಅನ್ನು ಸುಧಾರಿತ ಫೀಚರ್ಸ್ ಗಳೊಂದಿಗೆ ಸಜ್ಜುಗೊಳಿಸಿದೆ. ಪ್ರತ್ಯೇಕ 12.3-ಇಂಚಿನ ಡಿಸ್ ಪ್ಲೇಗಳೊಂದಿಗೆ ಮೂರು-ಡಿಸ್ ಪ್ಲೇ ಸೆಟಪ್ ಹೈಲೈಟ್ ಆಗಿದೆ. ಈ ಡಿಸ್ ಪ್ಲೇಗಳು 1920×720 ರೆಸಲ್ಯೂಶನ್ ಅನ್ನು ಹೊಂದಿವೆ ಮತ್ತು ಮಹೀಂದ್ರಾ Adrenox ಸಾಫ್ಟ್‌ವೇರ್‌ನಲ್ಲಿ ರನ್ ಆಗುತ್ತವೆ.

ಈ ಎಸ್‍ಯುವಿಯು ಎರಡು-ಸ್ಪೋಕ್ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಜೊತೆಗೆ ಲೋಗೋ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಡ್ರೈವ್ ಮೋಡ್‌ಗಳು ಮತ್ತು HVAC ಮತ್ತು ಸೆಂಟರ್ ಕನ್ಸೋಲ್ ಕಂಟ್ರೋಲ್ ಗಳಿಗಾಗಿ XUV700 ತರಹದ ಸ್ವಿಚ್‌ಗಿಯರ್ ಅನ್ನು ಒಳಗೊಂಡಿದೆ. ಹೆಚ್ಚಿನ ಟ್ರಿಮ್ ಲೆವೆಲ್ 2 ADAS ತಂತ್ರಜ್ಞಾನ, ಹೆಡ್-ಅಪ್ ಡಿಸ್ ಪ್ಲೇ, ಡಾಲ್ಬಿ ಅಟ್ಮಾಸ್‌ನೊಂದಿಗೆ 16-ಸ್ಪೀಕರ್ ಹರ್ಮನ್ ಕಾರ್ಡನ್ ಸಿಸ್ಟಮ್ ಮತ್ತು 360-ಡಿಗ್ರಿ ಕ್ಯಾಮೆರಾ, ಪನೊರೊಮಿಕ್ ಸನ್‌ರೂಫ್ ಅನ್ನು ಹೊಂದಿದೆ.

ಇದರೊಂದಿಗೆ ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಸಿಸ್ಟಮ್, ಏಳು ಏರ್‌ಬ್ಯಾಗ್‌ಗಳು ಮತ್ತು ಪಾರ್ಕಿಂಗ್ ಅಸಿಸ್ಟ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಎಂಟ್ರಿ ಲೆವ್ಲ್ ಒಂದು ರೂಪಾಂತರವು ಹಿಂಭಾಗದ AC ವೆಂಟ್‌ಗಳು, 4 ಸ್ಪೀಕರ್‌ಗಳು ಮತ್ತು 2 ಟ್ವೀಟರ್‌ಗಳು, ವೈರ್‌ಲೆಸ್ Apple CarPlay ಮತ್ತು Android Auto, ಸಂಪರ್ಕಿತ ಕಾರ್ ತಂತ್ರಜ್ಞಾನ, ಮೂರು-ಸ್ಕ್ರೀನ್ ಸೆಟಪ್, ಎತ್ತರ-ಹೊಂದಾಣಿಕೆ ಚಾಲಕ ಸೀಟ್ ಮತ್ತು ಸೀಟ್‌ಬೆಲ್ಟ್‌ನೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಗಳೊಂದಿಗೆ ಬರುತ್ತದೆ.

ಅಯಾಮಗಳು: ಈ ಹೊಸ ಮಹೀಂದ್ರಾ XEV 9e ಎಲೆಕ್ಟ್ರಿಕ್ ಎಸ್‍ಯುವಿಯು 4,790mm ಉದ್ದ, 1,905mm ಅಗಲ ಮತ್ತು 1,690mm ಎತ್ತರವನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿಯ 2,750mm ವೀಲ್‌ಬೇಸ್ ಅನ್ನು ಹೊಂದಿದೆ. ಈ ಹೊಸ ಮಹೀಂದ್ರಾ XEV 9e ಎಲೆಕ್ಟ್ರಿಕ್ ಎಸ್‍ಯುವಿಯ ಬುಟ್ ಸ್ಪೆಸ್ 665 ಲೀಟರ್ ಆಗಿದೆ.

More from DriveSpark

Article Published On: Wednesday, November 27, 2024, 14:47 [IST]
English summary
New mahindra xev 9e top things details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+