ಬಿಡುಗಡೆ ಮುನ್ನವೇ ಹೊಸ ಮಹೀಂದ್ರಾ ಎಸ್‌ಯುವಿ ಕೂಪೆ ಪತ್ತೆ... ಕಾರಿನಲ್ಲಿ ಟ್ರಿಪಲ್ ಸ್ಕ್ರೀನ್ ಇದೆ!

ಭಾರತದಲ್ಲಿ ಕಾರು ಖರೀದಿಸುವವರ ಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಭಾರೀ ಹೆಚ್ಚಳವಾಗಿದೆ. ಇದನ್ನು ಅರಿತಿರುವ ಹಲವು ವಿದೇಶಿ ಕಾರು ಬ್ರಾಂಡ್‌ಗಳು ಕೂಡ ಲಾಭ ಪಡೆಯಲು ಭಾರತದಲ್ಲಿ ತಮ್ಮ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಹಾಗೆಂದು ಸ್ವದೇಶಿ ಬ್ರಾಂಡ್‌ಗಳು ಹಿಂದುಳಿದಿವೆ ಎಂದೇನಲ್ಲ. ಟಾಟಾ, ಮಹೀಂದ್ರಾದಂತಹ ಕಂಪನಿಗಳು ಕೂಡ ಉತ್ತಮ ಕಾರುಗಳನ್ನು ಪರಿಚಯಿಸುವ ಮೂಲಕ ಮುನ್ನುಗ್ಗುತ್ತಿವೆ. ಸದ್ಯ ದೇಶದಲ್ಲಿ ಹೊಸ ಸೆಗ್ಮೆಂಟ್ ಒಂದು ಭಾರೀ ಸದ್ದು ಮಾಡುತ್ತಿದೆ. ಅದೇ ಎಸ್‌ಯುವಿ ಕೂಪೆ, ಇತ್ತೀಚೆಗಷ್ಟೇ ಈ ಸೆಗ್ಮೆಂಟಿನಲ್ಲಿ ಸಿಟ್ರನ್ ಹಾಗೂ ಟಾಟಾ ತಮ್ಮ ಮೊದಲ ಕಾರುಗಳನ್ನು ಪರಿಚಯಿಸಿ ಉತ್ತಮ ಬೇಡಿಕೆ ಪಡೆದುಕೊಂಡಿವೆ.

ಇದೀಗ ಇದೇ ಸೆಗ್ಮೆಂಟಿಗೆ ಎಂಟ್ರಿಕೊಡಲು ಮಹೀಂದ್ರಾ ಸಜ್ಜಾಗುತ್ತಿದೆ. ಹೌದು ಇತ್ತೀಚೆಗಷ್ಟೆ ಮಹೀಂದ್ರಾದ ಮುಂಬರುವ ಎಕ್ಸ್‌ಯುವಿ.ಇ9 ಎಲೆಕ್ಟ್ರಿಕ್ ಎಸ್‌ಯುವಿ ಕೂಪೆಯನ್ನು (XUV.e9 elecrtic SUV Coupe) ರಸ್ತೆಯಲ್ಲಿ ಟೆಸ್ಟಿಂಗ್ ಮಾಡುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಈ ಟೆಸ್ಟ್ ಮ್ಯೂಲ್ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ.

new-mahindra-xuv-coupe-test-mule-spotted-in-bangalore

ಈ ಹೊಸ ಮಹೀಂದ್ರಾ ಕೂಪೆ ವಿಶೇಷತೆಯೆಂದರೆ ಇಂಟೀರಿಯರ್‌ನಲ್ಲಿ ಡ್ಯಾಷ್‌ಬೋರ್ಡ್‌ಗೆ ಅಂಟಿಕೊಂಡು ಫುಲ್ಲಿ ಡಿಜಿಟಲ್ ಟ್ರಿಪಲ್ ಸ್ಕ್ರೀನ್ ಒಳಗೊಂಡಿದೆ. ಮಹೀಂದ್ರಾ ಈ ಸೆಟಪ್‌ನೊಂದಿಗೆ ಇಂಟೀರಿಯರ್ ಡಿಸೈನ್ ಹಾಗೂ ತಂತ್ರಜ್ಞಾನದ ವಿಷಯದಲ್ಲಿ ಹೊಸ ಅಲೆ ಎಬ್ಬಿಸಲಿದೆ ಎಂದು ತೋರುತ್ತಿದೆ. ನಮ್ಮ ಪ್ರಕಾರ ಡ್ರೈವರ್ ಡಿಸ್ಪ್ಲೇ, ಸೆಂಟ್ರಲ್ ಇನ್ಫೋಟೈನ್ಮೆಂಟ್ ಸ್ಕ್ರೀನ್ ಸೇರಿದಂತೆ ಮುಂಭಾಗದ ಪ್ರಯಾಣಿಕನಿಗಾಗಿ ಮೂರನೇ ಸ್ಕ್ರೀನ್ ನೀಡಲಾಗಿದೆ.

ಎಲ್ಲಾ ಕಾರುಗಳಂತೆಯೇ ಇದರಲ್ಲೂ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯು ಸ್ಪೀಡ್, ಬ್ಯಾಟರಿ ಲೆವಲ್ ಮತ್ತು ನ್ಯಾವಿಗೇಷನ್‌ನಂತಹ ಎಲ್ಲಾ ಅಗತ್ಯ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇನ್ನು ಇನ್ಫೋಟೈನ್ಮೆಂಟ್ ಸಿಸ್ಟಮ್ ವಿಷಯಕ್ಕೆ ಬಂದರೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸೇರಿದಂತೆ ಮನರಂಜನೆಗಾಗಿ ಇರಲಿದೆ. ಆದರೆ ಮುಂಭಾಗದ ಪ್ರಯಾಣಿಕನಿಗೆ ಮೀಸಲಾದ ಸ್ಕ್ರೀನ್ ಏಕೆ ಎಂಬುದು ರಹಸ್ಯವಾಗಿ ಉಳಿದಿದೆ.

new-mahindra-xuv-coupe-test-mule-spotted-in-bangalore

ಈಗಾಗಲೇ ಟಾಟಾ ಮೋಟಾರ್ಸ್ ತನ್ನ ಕರ್ವ್ ಎಸ್‌ಯುವಿ ಕೂಪೆಯನ್ನು ಎಲೆಕ್ಟ್ರಿಕ್ ಹಾಗೂ ಇಂಧನ ಚಾಲಿತ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿ ಉತ್ತಮ ಬುಕಿಂಗ್‌ಗಳನ್ನು ಪಡೆದುಕೊಳ್ಳುತ್ತಿದೆ. ಸಿಟ್ರನ್ ಕೂಡ ತಕ್ಕ ಮಟ್ಟಕ್ಕೆ ಬುಕಿಂಗ್‌ಗಳನ್ನು ಸ್ವೀಕರಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ಎರಡೂ ಕಾರುಗಳಿಗಿಂತ ಉತ್ತಮ ಫೀಚರ್ಸ್‌ನೊಂದಿಗೆ ಮಹೀಂದ್ರಾ ಎಕ್ಸ್‌ಯುವಿ.ಇ9 ಎಲೆಕ್ಟ್ರಿಕ್ ಎಸ್‌ಯುವಿ ಕೂಪೆ ಬರುವ ನಿರೀಕ್ಷೆಯಿದೆ.

ಒಂದು ವೇಳೆ ಇದು ಎಲ್ಲಾ ಮಹೀಂದ್ರಾ ಕಾರುಗಳಂತೆಯೇ ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಾದರೆ ಎಸ್‌ಯುವಿ ಕೂಪೆ ವಿಭಾಗದಲ್ಲಿ ಟಾಪ್ ಕಾರಾಗಿ ನಿಲ್ಲುವ ಎಲ್ಲಾ ಸಾಧ್ಯತೆಗಳು ಇವೆ. ಈ ಕಾರು ಕೇವಲ ಎಲೆಕ್ಟ್ರಿಕ್ ಮಾತ್ರವಲ್ಲದೇ ಐಸಿಇ (ಇಂಧನ ಚಾಲಿತ) ಆವೃತ್ತಿಯಲ್ಲೂ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಮಹೀಂದ್ರಾ ಎಕ್ಸ್‌ಯುವಿ ಕೂಪೆ ವಿಶೇಷತೆಗಳು: ಮುಂಬರಲಿರುವ ಎಕ್ಸ್‌ಯುವಿ.ಇ9 ಕೂಪೆಯು ಐಸಿಇ ಆಧಾರಿತ ಎಕ್ಸ್‌ಯುವಿ 700 ನ ಎಲೆಕ್ಟ್ರಿಕ್ ವೇರಿಯೆಂಟ್ ಆಗಿದೆ. ಆದರೆ ಇದನ್ನು ತುಸು ವಿನ್ಯಾಸ ಬದಲಾವಣೆಗಳೊಂದಿಗೆ ವಿಶಿಷ್ಟ ಕೂಪೆ ಶೈಲಿಯ ಇಳಿಜಾರಿನ ರೂಫ್‌ನೊಂದಿಗೆ ಹೆಚ್ಚು ಆಕರ್ಷಕ ಡಿಸೈನ್ ನೀಡಲಾಗಿದೆ. ಹಾಗೆಯೇ ಕಾರಿನಲ್ಲಿ ಸಂಪೂರ್ಣ ಎಲ್ಇಡಿ ಸೆಟಪ್ ನೀಡಲಾಗಿದೆ.

ಹಿಂಭಾಗದ ಪ್ರೊಫೈಲ್ ದೃಢವಾದ ಬಂಪರ್ ಮತ್ತು ನಯವಾದ ಬಾಡಿ ಲೈಲ್‌ಗಳನ್ನು ಹೊಂದಿದೆ. ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ಹೊಸ ಅಲಾಯ್ ವೀಲ್‌ಗಳು, ಕಡಿಮೆ-ಡ್ರ್ಯಾಗ್ ಟೈರ್‌ಗಳನ್ನು ನೀಡಲಾಗಿದ್ದು, ಇದು ಎಕ್ಸ್ ಯುವಿ.ಇ 9ಗೆ ಉತ್ತಮ ಪರ್ಫಾಮೆನ್ಸ್ ಮತ್ತು ರೇಂಜ್ ಅನ್ನು ಸುಧಾರಿಸಲಿದೆ ಎಂದು ಹೇಳಬಹುದು.

ನಿರೀಕ್ಷೆಗಳು: ಎಕ್ಸ್ ಯುವಿ.ಇ9 ಎಸ್‌ಯುವಿ ಕೂಪೆಯಯಲ್ಲಿ 80 ಕಿಲೋವ್ಯಾಟ್ ಬ್ಯಾಟರಿಯನ್ನು ನೀಡುವ ನಿರೀಕ್ಷೆಯಿದ್ದು, ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 500 ಕಿ.ಮೀ ಓಡಿಸಬಹುದು. ಈ ವಾಹನವು ರಿಯರ್ ವೀಲ್ ಡ್ರೈವ್ (ಆರ್‌ಡಬ್ಲ್ಯುಡಿ) ಮತ್ತು ಆಲ್-ವೀಲ್ ಡ್ರೈವ್ (ಎಡಬ್ಲ್ಯುಡಿ) ಆಯ್ಕೆಗಳಲ್ಲಿ ಬರುವ ಸಾಧ್ಯತೆಯಿದೆ. ಟಾಪ್‌ ವೇರಿಯೆಂಟ್‌ಗಳು ಡ್ಯುಯಲ್-ಮೋಟಾರ್ ಸೆಟಪ್ ಪಡೆಯುವ ಸಾಧ್ಯತೆ ಇದೆ.

Source: Rushlane Link: https://www.rushlane.com/mahindra-xuv-coupe-spied-with-triple-screen-layout-launch-next-year-12507577.html

Article Published On: Tuesday, October 1, 2024, 12:06 [IST]
English summary
New mahindra xuv coupe test mule spotted in bangalore
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+