ಹೊಸ ಮಾರುತಿ ಕಾರಿನಲ್ಲಿ ಈ 5 ಪ್ರಮುಖ ಫೀಚರ್‌ಗಳನ್ನು ನೀಡಬಹುದು.. 32 Km ಮೈಲೇಜ್, 6 ಲಕ್ಷ ಬೆಲೆ?
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited - MSIL) ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ನವೆಂಬರ್ 11 ರಂದು ಹೊಚ್ಚ ಹೊಸ ಡಿಸೈರ್ (Dzire) ಸೆಡಾನ್ ಬಿಡುಗಡೆಗೆ ದಿನಾಂಕ ನಿಗದಿಪಡಿಸಿದೆ. ಸದ್ಯ, ಬೆಂಗಳೂರಿನ ವಿವಿಧ ಡೀಲರ್‌ಶಿಪ್‌ಗಳು ನೂತನ ಕಾರಿಗಾಗಿ ಅನಧಿಕೃತ ಬುಕ್ಕಿಂಗ್‌ನ್ನು ಪಡೆಯುವುದಕ್ಕೆ ಶುರು ಮಾಡಿವೆ. ಜೊತೆಗೆ ಈ ಡಿಸೈರ್ ಸೆಡಾನ್ ಬಹುತೇಕ 'ಸ್ವಿಫ್ಟ್' ಹ್ಯಾಚ್‌ಬ್ಯಾಕ್‌ಗೆ ಹೋಲಿಕೆಯಾಗುವ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎಂದು ಕೂಡ ಮೂಲಗಳಿಂದ ತಿಳಿದುಬಂದಿದೆ.
2024ರ ಹೊಸ ಮಾರುತಿ ಸುಜುಕಿ ಡಿಸೈರ್ (Maruti Suzuki Dzire) ಸೆಡಾನ್ ಹೊರಭಾಗದಲ್ಲಿ ಅತ್ಯಾಧುನಿಕ ವಿನ್ಯಾಸ (ಡಿಸೈನ್) ಒಳಗೊಂಡಿರಲಿದೆ. ದೊಡ್ಡದಾಗಿರುವ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಫಾಗ್ ಲೈಟ್‌ಗಳು ಹಾಗೂ ವಿನೂತನವಾಗಿರುವ ಟೈಲ್ ಗೇಟ್‌ಗಳನ್ನು ಒಳಗೊಂಡಿದೆ. ಹೆಚ್ಚಿನ ಸಾಮರ್ಥ್ಯದ ಬೂಟ್ ಸ್ಪೇನ್‌ನ್ನು ಹೊಂದಿರುವ ನೀರಿಕ್ಷೆಯಿದ್ದು, ಹೊಸ ಬಣ್ಣದ ಆಯ್ಕೆಯಲ್ಲಿಯೂ ಮಾರಾಟಕ್ಕೆ ಬರಲಿದೆ ಎಂದು ಹೇಳಲಾಗಿದೆ.

ನೂತನ ಡಿಸೈರ್ ಕಾರು ಪ್ರಮುಖವಾಗಿ ಈ 5 ನವೀನ ವೈಶಿಷ್ಟ್ಯಗಳನ್ನು (ಫೀಚರ್) ಪಡೆದುಕೊಂಡಿರುವ ನಿರೀಕ್ಷೆಯಿದೆ. ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇಯನ್ನು ಬೆಂಬಲಿಸಬಲ್ಲ ಬೃಹತ್ ಗಾತ್ರದ 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಸಿಂಗಲ್-ಪೆನ್ ಸನ್‌ರೂಫ್, 6 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಗೊತ್ತಾಗಿದೆ.
ಈ ಸೆಡಾನ್ 'ಸ್ವಿಫ್ಟ್' ಹ್ಯಾಚ್‌ಬ್ಯಾಕ್‌ನಂತೆಯೇ ಪೆಟ್ರೋಲ್ & ಸಿಎನ್‌ಜಿ ಪವರ್‌ಟ್ರೇನ್ ಪಡೆದುಕೊಂಡಿರಲಿದೆ. ಪ್ರಸ್ತುತ ಖರೀದಿಗೆ ದೊರೆಯುವ ಸ್ವಿಫ್ಟ್ ಕಾರು 1.2-ಲೀಟರ್ 3- ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 82 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 112 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಸ್ವಿಫ್ಟ್ ಸಿಎನ್‌ಜಿ ಚಾಲಿತ ರೂಪವು ಇದೇ ಎಂಜಿನ್‌ನ್ನು ಒಳಗೊಂಡಿದೆ. ಆದರೆ, 69 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 102 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ. 24.80 ರಿಂದ 32.85 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ನೂತನ ಮಾರುತಿ ಸುಜುಕಿ ಡಿಸೈರ್ ಸೆಡಾನ್ ಅತಿ ಕಡಿಮೆ ಬೆಲೆಗೆ ಮಾರಾಟಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ. ರೂ.6.70 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದುಕೊಂಡಿರಬಹುದು ಎಂದು ಹೇಳಲಾಗಿದೆ. ಈ ಕಾರಿಗೆ ಹೋಂಡಾ ಅಮೇಜ್, ಹ್ಯುಂಡೈ ಔರಾ ಹಾಗೂ ಟಾಟಾ ಟಿಗೂರ್ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.
ಒಟ್ಟಾರೆಯಾಗಿ, ಕೆಲವೇ ದಿನಗಳಲ್ಲಿ ಮಾರಾಟಕ್ಕೆ ಬರಲಿರುವ 'ಡಿಸೈರ್' ಕಾರಿನ ಮೇಲೆ ಗ್ರಾಹಕರ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಈ ಕಾರು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡುರುವುದು ಬಹುತೇಕ ಖಚಿತವಾಗಿದ್ದು, ಮಾರಾಟಕ್ಕೆ ಬಂದ ಮೇಲೆ ಯಾವ ರೀತಿಯಲ್ಲಿ ಬೇಡಿಕೆ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications