Maruti Dzire: ನಾಳೆ ಬಹುನಿರೀಕ್ಷಿತ ಮಾರುತಿ ಸುಜುಕಿ ಡಿಜೈರ್ ಸೆಡಾನ್ ಬಿಡುಗಡೆ: ಬೆಲೆ ಎಷ್ಟು.. ವಿಶೇಷತೆಗಳೇನು?
ಮಾರುತಿ ಸುಜುಕಿ (Maruti Suzuki), ನಾಳೆ (ಸೋಮವಾರ) ನಾಲ್ಕನೇ ತಲೆಮಾರಿನ ಡಿಜೈರ್ (4th Generation Dzire) ಸೆಡಾನ್‌ನ್ನು ಬಿಡುಗಡೆಗೊಳಿಸಲಿದೆ. ನ.8ರಂದು ಜಾಗತಿಕವಾಗಿ ಕಾರುಗಳ ಸುರಕ್ಷತೆ ಪರೀಕ್ಷಿಸುವ 'ಗ್ಲೋಬಲ್ ಎನ್‌ಸಿಎಪಿ' ಈ ಡಿಜೈರ್ ಕಾರಿಗೆ 5-ಸ್ಟಾರ್ ರೇಟಿಂಗ್‌ನ್ನು ಕೊಟ್ಟಿದೆ. ಇದರಿಂದ ನೂತನ ಸೆಡಾನ್ ಮೇಲೆ ಗ್ರಾಹಕರು ಕೂಡ ದೊಡ್ಡಮಟ್ಟದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದೆ. ಆಸಕ್ತ ಖರೀದಿದಾರರು ರೂ.11 ಸಾವಿರ ಟೋಕನ್ ಮೊತ್ತವನ್ನು ಮುಂಗಡವಾಗಿ ಪಾವತಿಸುವ ಮೂಲಕ 'ಡಿಜೈರ್' ಕಾರನ್ನು ಬುಕ್ಕಿಂಗ್ ಮಾಡಬಹುದು. ಬನ್ನಿ.. ಈ ನೂತನ ಸೆಡಾನ್ ನಿರೀಕ್ಷಿತ ಬೆಲೆ, ಮೈಲೇಜ್ ಹಾಗೂ ವಿಶೇಷತೆ ಕುರಿತಂತೆ ಸಂಪೂರ್ಣವಾದ ಮಾಹಿತಿ ತಿಳಿಯೋಣ.
ವಿನ್ಯಾಸ (Design): ಹೊಚ್ಚ ಹೊಸ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್ ಹೊರಭಾಗದಲ್ಲಿ ಅತ್ಯಾಧುನಿಕವಾದ ವಿನ್ಯಾಸ ಒಳಗೊಂಡಿದೆ. ಕೆಲವೇ ದಿನಗಳ ಹಿಂದೆ ಈ ಕಾರನ್ನು ಅನಾವರಣಗೊಳಿಸಲಾಗಿದ್ದು, ವಿನ್ಯಾಸ ಸಂಬಂಧ ಹಲವಾರು ವಿಚಾರಗಳು ಬಹಿರಂಗಗೊಂಡಿವೆ. ನೂತನ ಕಾರು, ಮಧ್ಯಮ ವರ್ಗದ ಜನರನ್ನು ತನ್ನತ್ತ ಆಕರ್ಷಿಸುವ ಸಲುವಾಗಿ ಜಬರ್ದಸ್ತ್ ಪ್ರೀಮಿಯಂ ಲುಕ್‌ನ್ನು ಹೊಂದಿದೆ.

ಈ ಡಿಜೈರ್ ಕಾರು, ಮುಂಭಾಗ (ಫ್ರಂಟ್) ಬೃಹದಾಕಾರದ ಗ್ರಿಲ್, ಅತ್ಯುತ್ತಮವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. ಹಿಂಭಾಗ (ರೇರ್) ಸಹ ಉತ್ತಮವಾಗಿರುವ ವಿನ್ಯಾಸ ಹೊಂದಿದ್ದು, ಇಂಗ್ಲಿಷ್ ಭಾಷೆಯ 'ವೈ' ಅಕ್ಷರದ ಆಕಾರಕ್ಕೆ ಹೋಲಿಕೆಯಾಗುವ ಟೈಲ್‌ಲೈಟ್‌ಗನ್ನು ಪಡೆದಿದೆ. ಜೊತೆಗೆ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.
ಕಾರ್ಯಕ್ಷಮತೆ (Performance): ಸದ್ಯಕ್ಕೆ ನೂತನ ಮಾರುತಿ ಸುಜುಕಿ ಡಿಜೈರ್ ಸೆಡಾನ್ ಪವರ್‌ಟ್ರೇನ್ ಕುರಿತಂತೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಈ ಕಾರು, ಸ್ವಿಫ್ಟ್‌ನಂತೆ 1.2-ಲೀಟರ್ 3-ಸಿಲಿಂಡರ್ ಜಡ್-ಸೀರೀಸ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿರಲಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿರಲಿದೆ ಎನ್ನಲಾಗಿದೆ.

ಹೊಸ ಡಿಜೈರ್ ಕಾರು ಯಾವ ಬೈಕ್‌ಗೂ ಕಮ್ಮಿಯಿಲ್ಲದಂತೆ ಗರಿಷ್ಠ ಮೈಲೇಜ್ ಕೂಡ ನೀಡಲಿದೆ ಎಂದು ತಿಳಿದುಬಂದಿದೆ. ಇದರ ಪೆಟ್ರೋಲ್ ಚಾಲಿತ ರೂಪಾಂತರಗಳು (ವೇರಿಯೆಂಟ್), ಬರೋಬ್ಬರಿ 24.79 ರಿಂದ 25.71 ಕೆಎಂಪಿಎಲ್ ಹಾಗೂ ಸಿಎನ್‌ಜಿ ಚಾಲಿತ ರೂಪಾಂತರಗಳು 33.73 ಕೆಎಂ/ಕೆಜಿ ವರೆಗೆ ಮೈಲೇಜ್ ಕೊಡುತ್ತವೆ ಎಂದು ಹೇಳಲಾಗಿದೆ.
ವೈಶಿಷ್ಟ್ಯಗಳು (Features): ಈ ಸೆಡಾನ್ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಪ್ರಮುಖವಾಗಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್ ಮತ್ತು 3-ಸ್ಪೋಕ್ ಸ್ಟೀರಿಂಗ್ ವೀಲ್‌ನ್ನು ಒಳಗೊಂಡಿರಬಹುದು ಎನ್ನಲಾಗಿದೆ.

ಆಸನ ಆಯ್ಕೆ & ಬೆಲೆ (Seat Capacity & Price): ಹೊಚ್ಚ ಹೊಸ ಮಾರುತಿ ಸುಜುಕಿ ಡಿಜೈರ್ ಸೆಡಾನ್ 5 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಲಭ್ಯವಾಗಲಿದೆ. ಜೊತೆಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದ್ದು, ರೂ.7 ರಿಂದ ರೂ.10 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿರಬಹುದು ಎಂದು ತಿಳಿದುಬಂದಿದೆ.
ಸುರಕ್ಷತಾ ವೈಶಿಷ್ಟ್ಯಗಳು (Safety Features): ಈ ಕಾರು ಪ್ರಯಾಣಿಕರ ರಕ್ಷಣೆಗಾಗಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಈಗಾಗಲೇ ನೂತನ ಡಿಜೈರ್ ಸೆಡಾನ್ 6-ಏರ್‌ಬ್ಯಾಗ್ ಮತ್ತು ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ಒಳಗೊಂಡಿರಲಿದೆ ಎಂಬುದು ದೃಢಪಟ್ಟಿದೆ. ಶುಕ್ರವಾರ ಗ್ಲೋಬಲ್ ಎನ್‌ಸಿಎಪಿ ಈ ಕಾರಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications