Maruti Dzire: 6.79 ಲಕ್ಷ.. 34 Km ಮೈಲೇಜ್, ಮಾರುತಿ ಸುಜುಕಿಗೆ ವರವಾದ ಹೊಸ ಡಿಜೈರ್.. ಪ್ರತಿದಿನ 1,000 ಕಾರುಗಳ ಬುಕ್ಕಿಂಗ್!
ಮಾರುತಿ ಸುಜುಕಿ ಇಂಡಿಯಾ (Maruti Suzuki India), ನ.11 ರಂದು 4ನೇ ತಲೆಮಾರಿನ ನೂತನ ಡಿಜೈರ್ (4th Generation Dzire) ಸೆಡಾನ್‌ನ್ನು ಬಿಡುಗಡೆಗೊಳಿಸಿತ್ತು. ಸದ್ಯ ಈ 5-ಸ್ಟಾರ್ ಸೇಫ್ಟಿ ಕಾರು, ದಾಖಲೆ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ. ಪ್ರತಿದಿನ ಸರಿ ಸುಮಾರು 1,000 ಡಿಜೈರ್ ಸೆಡಾನ್‌ಗಳನ್ನು ಗ್ರಾಹಕರು ಆರ್ಡರ್ ಮಾಡುತ್ತಿದ್ದಾರೆ. ವಿಶೇಷವಾಗಿ ಬಹುತೇಕ ಖರೀದಿದಾರರು ಗರಿಷ್ಠ ಶ್ರೇಣಿ ರೂಪಾಂತರಗಳನ್ನೇ (ಟಾಪ್ ಎಂಡ್ ವೇರಿಯೆಂಟ್) ಬುಕ್ಕಿಂಗ್ ಮಾಡಲು ಮುಂದಾಗುತ್ತಿದ್ದಾರೆ. ಇದರೊಂದಿಗೆ 'ಡಿಜೈರ್' ಕಂಪನಿಗೆ ಅದೃಷ್ಟದ ಕಾರಾಗಿ ಬದಲಾಗಿದೆ.
ಈ ಮೊದಲು 3ನೇ ತಲೆಮಾರಿನ ಡಿಜೈರ್ (3rd Generation Dzire) ದಿನವೊಂದಕ್ಕೆ 500 ಬುಕ್ಕಿಂಗ್‌ಗಳನ್ನು ಪಡೆಯುತ್ತಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, 4ನೇ ತಲೆಮಾರಿನ ನೂತನ ಡಿಜೈರ್ ಹೊಂದುತ್ತಿರುವ ಆರ್ಡರ್‌ಗಳ ಸಂಖ್ಯೆ ದ್ವಿಗುಣಗೊಂಡಿದೆ. ನವೆಂಬರ್ 4 ರಂದು ಮಾರುತಿ ಸುಜುಕಿಯು ನೂತನ 'ಡಿಜೈರ್' ಸೆಡಾನ್‌ಗಾಗಿ ಅಧಿಕೃತವಾಗಿ ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ಶುರು ಮಾಡಿತ್ತು.

ಭಾರತದಾದ್ಯಂತ ಈ ಕಾರು 30,000ಕ್ಕೂ ಅಧಿಕ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ಬರೋಬ್ಬರಿ 5,000 ಡಿಜೈರ್ ಸೆಡಾನ್‌ಗಳನ್ನು ಗ್ರಾಹಕರಿಗೂ ವಿತರಣೆ ಮಾಡಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ನೂತನ ಡಿಜೈರ್ ಕಾರು, ಕನಿಷ್ಠ ರೂ.6.79 ಲಕ್ಷ ಮತ್ತು ಗರಿಷ್ಠ ರೂ.10.14 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ.
ಹೊಚ್ಚ ಹೊಸ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್ ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಹಾಗೂ ಝಡ್ಎಕ್ಸ್ಐ ಪ್ಲಸ್ ಎಂಬ ನಾಲ್ಕು ರೂಪಾಂತರಗಳ ಆಯ್ಕೆಯನ್ನು ಪಡೆದಿದೆ. ಈ ಕಾರು ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು & ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ.

ನೂತನ ಕಾರು 1.2-ಲೀಟರ್ 3-ಸಿಲಿಂಡರ್ ಝಡ್-ಸೀರೀಸ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟೆಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಪೆಟ್ರೋಲ್ ಚಾಲಿತ ರೂಪಾಂತರಗಳು 24.79 ರಿಂದ 25.71 ಕೆಎಂಪಿಎಲ್ ಹಾಗೂ ಸಿಎನ್‌ಜಿ ಚಾಲಿತ ರೂಪಾಂತರಗಳು 33.73 ಕೆಎಂ/ಕೆಜಿವರೆಗೆ ಮೈಲೇಜ್ ಕೊಡುತ್ತವೆ.
ಈ ಮಾರುತಿ ಸುಜುಕಿ ಡಿಜೈರ್ ಸೆಡಾನ್ ಪರ್ಲ್ ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ & ಬ್ಲ್ಯೂಯಿಷ್ ಬ್ಲ್ಯಾಕ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ದೊರೆಯುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು. ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 382 ಲೀಟರ್‌ನ ಬೂಟ್ ಸ್ಪೇನ್‌ನ್ನು ಒಳಗೊಂಡಿದೆ.

ಹೊಸ ಡಿಜೈರ್ ಕಾರು ಹತ್ತಾರು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ರೇರ್ ಸೆಂಟರ್ ಆರ್ಮ್‌ರೆಸ್ಟ್, ಸನ್‌ರೂಫ್, ಆಟೋ ಎಸಿ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ನೂತನ ಮಾರುತಿ ಸುಜುಕಿ ಡಿಜೈರ್ ಸುರಕ್ಷತೆಗೂ ಹೆಸರುವಾಗಿದೆ. ಗ್ಲೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್ ಗಳಿಸಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ 3-ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications