ಮಾರುತಿ ಡಿಜೈರ್ ಉತ್ಪಾದನೆ ಶೀಘ್ರದಲ್ಲೇ ಸ್ಥಗಿತ! ಹಾಗಾದ್ರೆ ಎಲ್ಲೋ ಬೋರ್ಡ್‌ ಕಥೆ?

ಹಳೆಯ (3ನೇ ತಲೆಮಾರಿನ) ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಮಾರುಕಟ್ಟೆಯಲ್ಲಿ ತನ್ನದೇ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳೊಂದಿಗೆ ಪ್ರಾಬಲ್ಯ ಹೊಂದಿದೆ. ಟೊಯೊಟಾ ಇಟಿಯೋಸ್ ಯಾವಾಗ ಸ್ಥಗಿತಗೊಂಡಿತೋ ಅಂದಿನಿಂದ ಮಾರುತಿ ಡಿಜೈರ್ ಆ ಜಾಗವನ್ನು ಆಕ್ರಮಿಸಿಕೊಂಡು ಕೈಗೆಟುಕುವ ಬೆಲೆಯ ಸೆಡಾನ್ ಜಾಗದಲ್ಲಿ ಚಾಂಪಿಯನ್ ಆಗಿ ಮುನ್ನುಗ್ಗುತ್ತಿದೆ. ಆದ್ರೆ ಈಗ ಹಳೆಯ ಮಾರುತಿ ಸುಜುಕಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಉತ್ಪಾದನೆಯು ಈ ವರ್ಷದ ಅಂತ್ಯದ ವೇಳೆಗೆ ಕೊನೆಗೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೂ ಕಾರಣವಿದೆ, ಈ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ.

ಪ್ರಸ್ತುತ, ಹಳೆಯ ಡಿಜೈರ್ ಅನ್ನು ಟ್ಯಾಕ್ಸಿ ವಿಭಾಗದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಮಾರುತಿ ಸುಜುಕಿ ಡಿಜೈರ್ ಟೂರ್-ಎಸ್ (Maruti Dzire Tour S)ಎಂದು ಕರೆಯಲಾಗುತ್ತದೆ. ಆದ್ರೆ ಈಗ ಹೊಸ ತಲೆಮಾರಿನ ಡಿಜೈರ್ ಬಿಡುಗಡೆಯಾಗಿರುವ ಕಾರಣ, ಎಲ್ಲರ ಕಣ್ಣು ಇದರಮೇಲಿದೆ. ಶೀಘ್ರದಲ್ಲೇ ಹೊಸದಾಗಿ ಬಿಡುಗಡೆಯಾದ ಡಿಜೈರ್ ಅನ್ನು ಟ್ಯಾಕ್ಸಿ ವಿಭಾಗಕ್ಕೆ ಪರಿಚಯಿಸುವ ಕಾರಣ, ಹಳೆಯ ಡಿಜೈರ್ 2024ರ ಅಂತ್ಯದ ವೇಳೆಗೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

new-maruti-suzuki-dzire-taxi-segment-details

ಆದ್ರೆ ಅದು ಅಷ್ಟು ಸುಲಭವಲ್ಲ, ಡಿಜೈರ್ ಅನ್ನು ಮಾರುಕಟ್ಟೆಯಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಿದರೆ ಮಾರುತಿ ಸುಜುಕಿಗೆ ತುಂಬಾ ನಷ್ಟವಾಗಲಿದೆ. ಕಾರಿನ ಪ್ರಬಲ ಸ್ಥಾನ, ಮಾರಾಟ ಮತ್ತು ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುವ ಅಪಾಯವೂ ಇದೆ. ಆದ್ದರಿಂದ, ಹೊಸ ಡಿಜೈರ್ ಟ್ಯಾಕ್ಸಿ ವಿಭಾಗಕ್ಕೆ ಕಾಲಿಡುವ ಮೊದಲು, ಅದರ ವೆಚ್ಚವನ್ನು ನಿಯಂತ್ರಣದಲ್ಲಿಡುವ ಪ್ರಮುಖ ಅಂಶಗಳನ್ನು ನೋಡಿಕೊಳ್ಳಬೇಕಿದೆ.

ಅಂದುಕೊಂಡಂತೆ ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಟ್ಯಾಕ್ಸಿ ವಿಭಾಗಕ್ಕೆ ಎಂಟ್ರಿ ಕೊಟ್ಟರೆ, 6 ಏರ್ ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿರುವ ಭಾರತದ ಮೊದಲ ಜನಪ್ರಿಯ ಟ್ಯಾಕ್ಸಿಯನ್ನು ನಾವು ಪಡೆಯಬಹುದು. ಹಾಗೆಯೇ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದ ಕ್ಯಾಬ್ ಎಂದು ಜನಪ್ರಿಯತೆ ಪಡೆಯಲಿದೆ.

new-maruti-suzuki-dzire-taxi-segment-details

ಎಷ್ಟು ನಿಜ?: ನಮ್ಮ ಪ್ರಕಾರ, ಹೊಸ ಡಿಜೈರ್ ಅನ್ನು ಟ್ಯಾಕ್ಸಿ ವಿಭಾಗಕ್ಕೆ ಪರಿಚಯಿಸುವುದು ಬಹುತೇಕ ಖಚಿತ. ಏಕೆಂದರೆ ಈ ಹಿಂದೆ ಗ್ಲೋಬಲ್ ಎನ್‌ಸಿಎಪಿಯಲ್ಲಿ ಹಳೆಯ ಡಿಜೈರ್ ಅನ್ನು ಕ್ರ್ಯಾಶ್ ಟೆಸ್ಟ್ ಮಾಡಿದ ವರದಿಯಲ್ಲಿ, ಈ ವರ್ಷದ ಅಂತ್ಯದ ವೇಳೆಗೆ ಹಳೆಯ ಡಿಜೈರ್ ಉತ್ಪಾದನೆಯನ್ನು ನಿಲ್ಲಿಸುವುದಾಗಿ ಕಂಪನಿ ಹೇಳಿತ್ತು, ಇದನ್ನು ಗಮನಿಸಿದರೆ ಹೊಸ ಡಿಜೈರ್ ಆ ಸ್ಥಾನವನ್ನು ತುಂಬುತ್ತದೆ ಎಂಬುದು ನಿಜವೆನಿಸುತ್ತಿದೆ.

CNG ಈಗಲೇ ಲಭ್ಯ: ಸಾಮಾನ್ಯವಾಗಿ ಕಾರು ತಯಾರಕರು ತಮ್ಮ ಕಾರುಗಳ ಸಿಎನ್‌ಜಿ ಆವೃತ್ತಿಗಳನ್ನು ಪೆಟ್ರೋಲ್/ಡೀಸೆಲ್ ಟ್ರಿಮ್‌ಗಳೊಂದಿಗೆ ಏಕಕಾಲದಲ್ಲಿ ಬಿಡುಗಡೆ ಮಾಡುವುದಿಲ್ಲ. ಆದ್ರೆ ಮಾರುತಿ ಸುಜುಕಿ ಹೊಸ ಡಿಜೈರ್ ಅನ್ನು ಸಿಎನ್‌ಜಿ ಟ್ರಿಮ್‌ಗಳ ಜೊತೆಗೆ ಏಕಕಾಲದಲ್ಲಿ ಬಿಡುಗಡೆ ಮಾಡಿದೆ. ಇದು ಕೂಡ ಹೊಸ ಡಿಜೈರ್ ಅನ್ನು ದೇಶಾದ್ಯಂತ ಟ್ಯಾಕ್ಸಿ ಫ್ಲೀಟ್‌ಗೆ ಪರಿಚಯಿಸಲು ಸಿದ್ಧವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಹೊಸ ಡಿಜೈರ್ ವಿಶೇಷತೆಗಳು: ಡಿಜೈರ್ ಹಿಂದಿನಂತಲ್ಲದೇ ಈ ಬಾರಿ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದೆ. ಇದು ಮುಖ್ಯವಾಗಿ ಮೈಲೇಜ್‌ಗಾಗಿ ಟ್ಯೂನ್ ಮಾಡಲಾಗಿದೆ. ಹೊಸ ಡಿಜೈರ್ ಮ್ಯಾನುವಲ್ ಟ್ರಿಮ್ 24.79 ಕಿ.ಮೀ ಮತ್ತು ಎಎಂಟಿ ಟ್ರಿಮ್ 25.71 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಪೆಟ್ರೋಲ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಿಮ್ ಜೊತೆಗೆ ಬಿಡುಗಡೆಯಾದ ಸಿಎನ್‌ಜಿಯು 33.73 ಕಿ.ಮೀ / ಕೆಜಿ ಮೈಲೇಜ್ ನೀಡುತ್ತದೆ. ಇದು ಕ್ಯಾಬ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಲಿರುವ ಅಂಶವಾಗಿದೆ. ಈ ಮೈಲೇಜ್ ಹೊಸ ಡಿಜೈರ್ ಅನ್ನು ತನ್ನ ವಿಭಾಗದಲ್ಲಿ ಪ್ರತಿಸ್ಪರ್ಧಿಗಳಿಲ್ಲದಂತೆ ಮಾಡಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 20, 2024, 15:06 [IST]
English summary
New maruti suzuki dzire taxi segment details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+