ಕಾರು ಮಾರುಕಟ್ಟೆ ಶೇಕ್: ಬರುತ್ತಿದೆ ಹೊಸ ಮಾರುತಿ ಎಲೆಕ್ಟ್ರಿಕ್ ಕಾರು... ಟಾಟಾ ಪಾಳಯದಲ್ಲಿ ನಡುಕ!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಪಂಚದ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳ ರೀತಿಯಲ್ಲೇ ಭಾರತದಲ್ಲೂ ಐಷಾರಾಮಿ ಕಾರು ಬ್ರಾಂಡ್‌ಗಳು ತಮ್ಮ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದೀಗ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿ ಎಲೆಕ್ಟ್ರಿಕ್ ವಾಹನ ರಂಗಕ್ಕೆ ಪ್ರವೇಶಲು ರೆಡಿಯಾಗಿದ್ದಾರೆ. ಈ ನಡುವೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation) ತನ್ನ ಮೊದಲ ಎಲೆಕ್ಟ್ರಿಕ್ ವಾಹನವಾದ ಇವಿಟಾರಾವನ್ನು ಇತ್ತೀಚೆಗೆ ಇಟಲಿಯ ಮಿಲನ್‌ನಲ್ಲಿ ಅನಾವರಣಗೊಳಿಸಿತ್ತು.
ಭಾರತೀಯ ಮಾರುಕಟ್ಟೆಯ ಜೊತೆಗೆ, ಯುರೋಪಿಯನ್ ಯೂನಿಯನ್ ಮತ್ತು ಜಪಾನ್‌ನಂತಹ ಅನೇಕ ಜಾಗತಿಕ ಮಾರುಕಟ್ಟೆಗಳಲ್ಲಿ ಇ-ವಿಟಾರಾ ಕಾರನ್ನು ಪರಿಚಯಿಸಲಾಗುವುದು. ಮಾರುತಿ ಸುಜುಕಿ ಇವಿಟಾರಾ (Maruti Suzuki eVitara) ಕಾರನ್ನು ಗುಜರಾತ್‌ನಲ್ಲಿರುವ ಕಂಪನಿಯ ಸೌಲಭ್ಯದಲ್ಲಿ ತಯಾರಿಸಲಾಗುವುದು. 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಚೊಚ್ಚಲ ಪ್ರವೇಶಕ್ಕೆ ಮುನ್ನ ಸುಜುಕಿ ತನ್ನ ಎಡಬ್ಲ್ಯೂಡಿ (AWD) ಸಿಸ್ಟಂ ಬಳಿಸಿ ಹಿಮದ ಮೇಲೆ ಪರ್ಫಾಮೆನ್ಸ್ ನೀಡುವ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದೆ.

ಈ ಟೀಸರ್ ವೀಡಿಯೋವನ್ನು ಸುಜುಕಿ ಗ್ಲೋಬಲ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ಹಿಮದಲ್ಲಿ ಇವಿಟಾರಾ ಮೂಲಮಾದರಿಯನ್ನು ಪರೀಕ್ಷಿಸುವುದನ್ನು ನಾವು ನೋಡುತ್ತೇವೆ. ಎಲೆಕ್ಟ್ರಿಕ್ ಎಸ್‌ಯುವಿಯನ್ನು ಜಪಾನ್‌ನ ಹೊಕ್ಕೈಡೊದ ಒಂದು ಹಿಮದ ಮೈದಾನದಲ್ಲಿ ಪರೀಕ್ಷಿಸಲಾಗಿದೆ. ಈ ಪರೀಕ್ಷೆಯ ಉದ್ದೇಶವು ಹಿಮಭರಿತ ಮೇಲ್ಮೈಗಳಲ್ಲಿ ಚಾಲನೆ ಮಾಡುವಾಗ ವಾಹನದಲ್ಲಿ ಯಾವ ಸಮಸ್ಯೆಗಳನ್ನು ಎದುರಾಗುತ್ತದೆ ಎಂಬುವುದು ಪರೀಕ್ಷಿಸಲಾಗಿದೆ.
ವೀಡಿಯೊದಲ್ಲ, ಇವಿಟಾರಾ ಹಿಮದಲ್ಲಿ ಸಲೀಸಾಗಿ ನ್ಯಾವಿಗೇಟ್ ಮಾಡುವುದನ್ನು ಕಾಣಬಹುದು. ಈ ಎಲೆಕ್ಟ್ರಿಕ್ ಎಸ್‍ಯುವಿಯ AWD ಸಿಸ್ಟಂ ವಾಹನದ ಟ್ರ್ಯಾಕ್ಷನ್ ಅನ್ನು ನಿರ್ವಹಿಸುತ್ತದೆ ಮತ್ತು ಸಿಲುಕಿಕೊಳ್ಳುವುದನ್ನು ತಪ್ಪಿಸುತ್ತದೆ. ಹಿಮದ ಮೇಲೆ ಚಾಲನೆ ಮಾಡುವುದು ಅತ್ಯಂತ ಟ್ರಿಕಿ ಆಗಿರಬಹುದು ಮತ್ತು ಅಂತಹ ಪರಿಸ್ಥಿತಿಗಳಲ್ಲಿ ಚಾಲನೆ ಮಾಡುವಾಗ ನಿರಂತರ ವೇಗವನ್ನು ಕಾಪಾಡಿಕೊಳ್ಳಲು ಯಾವಾಗಲೂ ಈ ಸಿಸ್ಟಂ ನೆರವಾಗುತ್ತದೆ.

ಈ ವೀಡಿಯೋ ಮೂಲಕ ಈ ಹೊಸ ಎಲೆಕ್ಟ್ರಿಕ್ ಕಾರು ಹಿಮದಲ್ಲೂ ಸಂಚರಿಸುತ್ತದೆ ಎಂಬುದನ್ನು ತೋರಿಸಿದೆ. ಇನ್ನು 2025ರ ವೇಳೆಗೆ ಭಾರತದಲ್ಲಿ ಸುಜುಕಿ ಮೋಟಾರ್ ಗುಜರಾತ್‌ನಲ್ಲಿ ಉತ್ಪಾದನೆಯು ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಬಿಡುಗಡೆಯಾದ ನಂತರ ಟಾಟಾ ಕರ್ವ್ ಇವಿ ಮತ್ತು ಎಂಜಿ ZS ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.
2023ರ ಜನವರಿ ಭಾರತದ ಆಟೋ ಎಕ್ಸ್‌ಪೋದಲ್ಲಿ ಮತ್ತು ನಂತರ ಅಕ್ಟೋಬರ್‌ನಲ್ಲಿ ಜಪಾನ್ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಲಾದ ಮಾರುತಿ ಇವಿಎಕ್ಸ್ ಕಾನ್ಸೆಪ್ಟ್ ನಿಂದ ಸ್ಫೂರ್ತಿ ಪಡೆದಿದೆ. ಪರಿಸರ ಸ್ನೇಹಿ ಎಸ್‍ಯುವಯನ್ನು ಸುಜುಕಿಯು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಮಾರುತಿ ಇ-ವಿಟಾರಾ 4,275 ಎಂಎಂ ಉದ್ದ, 1,800 ಎಂಎಂ ಅಗಲ, 1,635 ಎಂಎಂ ಎತ್ತರ, 2,700 ಎಂಎಂ ವೀಲ್‌ಬೇಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಕಾರಿನ ಹೊರಭಾಗದಂತೆಯೇ ಒಳಾಂಗಣವನ್ನು ಸ್ಟೈಲಿಶ್ ಆಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರಿನಲ್ಲಿ ಒನ್-ಪೀಸ್ ಡಿಸ್ ಪ್ಲೇ, ಸೆಂಟರ್ ಕನ್ಸೋಲ್‌ಗೆ ವಿನ್ಯಾಸ, ವರ್ಟಿಕಲ್ ಏರ್ ವೆಂಟ್‌ಗಳು ಮತ್ತು ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಸುಜುಕಿ ಇವಿಟಾರಾ (eVitara) ವಿನ್ಯಾಸವು ಒರಟಾದ ಎಸ್‍ಯುವಿ ಅಂಶಗಳೊಂದಿಗೆ ಹೈಟೆಕ್ ಫೀಚರ್ಸ್ ಗಳನ್ನು ಹೊಂದಿವೆ. ಈ ಮಾದರಿಯು ದೊಡ್ಡ ಟೈರ್‌ಗಳು, ಉದ್ದವಾದ ವೀಲ್‌ಬೇಸ್ ಮತ್ತು ಸಾಹಸಮಯ ಡ್ರೈವ್‌ಗಾಗಿ ದೃಢವಾದ ನಿಲುವನ್ನು ಹೊಂದಿದೆ.
ಈ ಸುಜುಕಿ ಇವಿಟಾರಾ ಕಾರಿನಲ್ಲಿ ಸುಧಾರಿತ BEV ಪವರ್‌ಟ್ರೇನ್‌ನಿಂದ ಚಾಲಿತವಾಗಿದೆ. ಇದು ಸುರಕ್ಷತೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾದ ಲಿಥಿಯಂ ಐರನ್-ಫಾಸ್ಫೇಟ್ ಬ್ಯಾಟರಿಗಳಿಂದ ನಡೆಸಲ್ಪಡುವ ಮೋಟಾರ್ ಮತ್ತು ಇನ್ವರ್ಟರ್ ಅನ್ನು ಸಂಯೋಜಿಸುವ ದಕ್ಷವಾದ ಎಕ್ಸಲ್ ಅನ್ನು ಬಳಸುತ್ತದೆ. ಈ ಸೆಟಪ್ ಸ್ಟಾಪ್ ಆಗಿರುವುದಕ್ಕೆ ಎಕ್ಸೆಲೆಟರ್ ಮಾಡುತ್ತದೆ ಮತ್ತು ಇದು ಪ್ರಬಲವಾದ ಓವರ್‌ಟೇಕಿಂಗ್ ಪವರ್ ನೀಡುತ್ತದೆ.


Click it and Unblock the Notifications