ರಾಶಿ ಫೀಚರ್ಸ್, 6 ಏರ್‌ಬ್ಯಾಗ್‌ಗಳ ಮೂಲಕ ಹಿಂದೆಗಿಂತಲೂ ಬಲಿಷ್ಠವಾಗಿ ಅಖಾಡಕ್ಕೆ ಇಳಿದ ಹೊಸ ಮಾರುತಿ ಸ್ವಿಫ್ಟ್
ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಭಾರತೀಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಜನಪ್ರಿಯ ಮತ್ತು ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಇದೀಗ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತದಲ್ಲಿ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಬಿಡುಗಡೆ ಮಾಡಿದೆ.
ಈ ಮಾರುತಿ ಸ್ವಿಫ್ಟ್ ಕಾರು LXi, VXi, VXi (O), ZXi, ಮತ್ತು ZXi+ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಸ್ವಿಫ್ಟ್ ಕಾರಿನ ಬೆಲೆಯು ರೂ.6.49 ಲಕ್ಷದಿಂಡ ರೂ.9.64 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಹಿಂದಿನ ಸ್ವಿಫ್ಟ್ ಕಾರಿನ ಬೆಲೆಗೆ ಹೋಲಿಸಿದರೆ ಅಂದಾಜು 25,000 ರೂ. ದುಬಾರಿಯಾಗಿದೆ. ಈ ಸ್ವಿಫ್ಟ್ ಕಾರಿನ ವಿನ್ಯಾಸ, ಒಳಭಾಗ ಮತ್ತು ತಾಂತ್ರಿಕ ವಿಷಯದಲ್ಲಿ ಗಮನಾರ್ಹ ಬದಲಾವಣೆಗಳೊಂದಿಗೆ ಬಂದಿದೆ.

ಹೊಸ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹೊಸ Z-ಸೀರಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದೆ. ಈ ಎಂಜಿನ್ 80.46 bhp ಪವರ್ ಮತ್ತು 111.7 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಯುನಿಟ್ (AGS) ಅನ್ನು ಜೋಡೀಸಲಾಗಿದೆ.
ಮಾರುತಿ ಸುಜುಕಿ ಪ್ರಕಾರ, ಮ್ಯಾನುವಲ್ ರೂಪಾಂತರವು 24.80km ನಷ್ಟು ಮೈಲೇಜ್ ನೀಡಿದರೆ, AGS ರೂಪಾಂತರವು 25.75 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮೇ.1 ರಿಂದಲೇ ಈ ಕಾರಿನ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ರೂ.11 ಸಾವಿರ ಮುಂಗಡ ಹಣವನ್ನು ಪಾವತಿಸುವ ಮೂಲಕ ಕಾಯ್ದಿರಿಸಬಹುದು. ನೂತನ ಸ್ವಿಫ್ಟ್ ಭರಪೂರ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ದರದಲ್ಲಿ ಸಿಗುವುದರಿಂದ ಹಲವರ ಕುಟುಂಬದ ಆಯ್ಕೆಯ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.

ಹೊಸ ಮಾರುತಿ ಸ್ವಿಫ್ಟ್ ಅನ್ನು ಸಿಜ್ಲಿಂಗ್ ರೆಡ್, ಲುಸ್ಟರ್ ಬ್ಲೂ, ನಾವೆಲ್ ಆರೆಂಜ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಆರು ಮೊನೊಟೋನ್ ಪೇಂಟ್ ಸ್ಕೀಮ್‌ಗಳಲ್ಲಿ ಲಬ್ಯವಿದೆ. ಇನ್ನು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಸಿಜ್ಲಿಂಗ್ ರೆಡ್, ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಲುಸ್ಟರ್ ಬ್ಲೂ ಮತ್ತು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು ಹೊಂದಿವೆ.
ಸ್ವಿಫ್ಟ್ ZXi+ ರೂಪಾಂತರ: ಈ ಟಾಪ್-ಎಂಡ್ ZXi+ ಟ್ರಿಮ್ ಮಾದರಿಯಲ್ಲಿ ಸೆಂಟರ್ ಫ್ಲೋಟಿಂಗ್, 3D ವಿನ್ಯಾಸದೊಂದಿಗೆ ಚಾಲಕ-ಆಧಾರಿತ ಕಾಕ್‌ಪಿಟ್, ಡಿಜಿಟಲ್ AC ಪ್ಯಾನೆಲ್, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸುಜುಕಿ ಕನೆಕ್ಟ್, ವೈರ್‌ಲೆಸ್ ಫೋನ್ ಚಾರ್ಜರ್, ಟೈಪ್-ಎ ಮತ್ತು ಸಿ USB ಚಾರ್ಜಿಂಗ್ ಪೋರ್ಟ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳು ಮತ್ತು ಅರ್ಕಾಮಿಸ್ ಸರೌಂಡ್‌ನಂತಹ ಕೆಲವು ವಿಶೇಷ ವೈಶಿಷ್ಟ್ಯಗಳೊಂದಿಗೆ ನೀಡಲಾಗುತ್ತಿದೆ.

ಸ್ವಿಫ್ಟ್ ZXi: ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ZXi ರೂಪಾಂತರದ ಫಿಚರ್ಸ್ ಬಗ್ಗೆ ಹೇಳುವುದಾದರೆ, ಈ ಮಾದರಿಯಲ್ಲಿ ಎಸಿ ವೆಂಟ್‌ಗಳು, ಫುಲ್ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಮತ್ತು ಹಿಂಭಾಗದ ವಾಷರ್ ಮತ್ತು ವೈಪರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಗ್ರಾಹಕರು ಈ ಫಿಚರ್ಸ್ ಅನ್ನು ಗಮನಿಸಿ ಈ ರೂಪಾಂತರವನ್ನು ಆಯ್ಕೆ ಮಾಡಿಕೊಳ್ಳಬಹುದು.
ಸ್ವಿಫ್ಟ್ VXi - VXi (O) ರೂಪಾಂತರಗಳು: ಮಧ್ಯ-ಹಂತದ VXi ಮತ್ತು VXi (O) ರೂಪಾಂತರಗಳು 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಡಿಫಾಗರ್, ಮ್ಯಾನ್ಯುವಲ್ ಕೀ ಸ್ಟಾರ್ಟ್ ಫಂಕ್ಷನಲಿಟಿ, ಪ್ರೊಜೆಕ್ಟರ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಹ್ಯಾಲೊಜೆನ್ ಟರ್ನ್ ಸಿಗ್ನಲ್‌ಗಳು, ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್‌ಗಳೊಂದಿಗೆ ORVM ಗಳು, 165/80 R14 MRF ಅನ್ನು ಹೊಂದಿವೆ.

ಸ್ವಿಫ್ಟ್ LXi: ಎಂಟ್ರಿ ಲೆವೆಲ್ LXi ರೂಪಾಂತರವು ಹೊಸದಾಗಿ ವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಪರಿಷ್ಕೃತ ಮುಂಭಾಗದ ಬಂಪರ್, ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಅಲಾಯ್ ವ್ಹೀಲ್ ಗಳು, ಬ್ಲ್ಯಾಕ್ ಣ್ಣದ ಡೋರ್ ಹ್ಯಾಂಡಲ್‌ಗಳು ಮತ್ತು ಸಾಂಪ್ರದಾಯಿಕ ಹಿಂಭಾಗದ ಡೋರ್ ಸಂಯೋಜಿತ ಹ್ಯಾಂಡಲ್‌ಗಳನ್ನು (ಸಿ-ಪಿಲ್ಲರ್ ಮೌಂಟೆಡ್ ಘಟಕಗಳ ಬದಲಿಗೆ) ಒಳಗೊಂಡಿದೆ. ಈ ಮಾದರಿಯಲ್ಲಿ ಆರು ಏರ್‌ಬ್ಯಾಗ್‌ಗಳು, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್, ಎಬಿಎಸ್ ಮತ್ತು EBD ಹೊಂದಿದೆ.


Click it and Unblock the Notifications