ಸೆಲೆಬ್ರಿಟಿಗಳು ಕ್ಯೂ ನಿಂತು ಖರೀದಿಸುವ ಹೊಸ ಮರ್ಸಿಡಿಸ್-ಎಎಂಜಿ ಜಿ 63 ವಿಶೇಷತೆಗಳು

ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಮರ್ಸಿಡಿಸ್-ಎಎಂಜಿ ಜಿ 63 (Mercedes-AMG G 63) ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.60 ಕೋಟಿಯಾಗಿದೆ. 120+ ಯೂನಿಟ್‌ಗಳ ಮೊದಲ ಬ್ಯಾಚ್ ಗಾಘಿ ಈಗಾಗಲೇ ಬುಕ್ಕಿಂಗ್ ಆಗಿದೆ. ಈ ಎಸ್‍ಯುವಿ ಈಗ ಆ ಐಕಾನಿಕ್ ಸಿಲೂಯೆಟ್, ಹೊಸ ಫೀಚರ್ಸ್ ಮತ್ತು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಉಳಿಸಿಕೊಂಡು ನವೀಕರಿಸಿದ ವಿನ್ಯಾಸದೊಂದಿಗೆ ಬರುತ್ತದೆ. ಈ ಮರ್ಸಿಡಿಸ್-ಎಎಂಜಿ ಜಿ 63 ಮಾದರಿಯು ಸೆಲೆಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ

ವಿನ್ಯಾಸ: ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಗ್ರಿಲ್‌ಗೆ ಟ್ವೀಕ್‌ಗಳು, ಪರಿಷ್ಕೃತ ಬಂಪರ್‌ಗಳು ಮತ್ತು ವ್ಹೀಲ್ ವಿನ್ಯಾಸಗಳು ಸೇರಿವೆ. ಈ ಎಸ್‍ಯುವಿ ಕ್ಯಾಬಿನ್ ಹೊಸ ಸ್ಟೀರಿಂಗ್ ವೀಲ್ ವಿನ್ಯಾಸ ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಪರಿಷ್ಕೃತ ಸ್ವಿಚ್‌ಗಿಯರ್‌ನಂತಹ ನವೀಕರಣಗಳನ್ನು ಪಡೆಯುತ್ತದೆ. ಇನ್ನು ಮರ್ಸಿಡಿಸ್‌ನ ಮ್ಯಾನುಫಕ್ತೂರ್ ಕಸ್ಟಮೈಸೇಶನ್ ಪ್ರೋಗ್ರಾಂ ಮೂಲಕ ತಮ್ಮ ಅಭಿರುಚಿಗೆ ತಕ್ಕಂತೆ ಕೆಲವು ಆಯ್ಕೆ ಗಳಿವೆ.

Mercedes-AMG G 63

ಫೀಚರ್ಸ್: ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯಲ್ಲಿ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯಲ್ಲಿ MBUX ಇನ್ಫೋಟೈನ್‌ಮೆಂಟ್ ಸಿಸ್ಟಂನಲ್ಲಿ ಹೊಸ 12.3-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್‌ನೊಂದಿಗೆ ಬಂದಿದೆ. ಈ ಎಸ್‍ಯುವಿಲ್ಲಿ ಅಂಡರ್‌ಬಾಡಿ ಕ್ಯಾಮೆರಾವನ್ನು ಹೊಂದಿದೆ. ಈ ಮರ್ಸಿಡಿಸ್‌ನ ಹೊಸ ಆಗ್ಮೆಂಟೆಡ್ ರಿಯಾಲಿಟಿ ನ್ಯಾವಿಗೇಷನ್ ಸಿಸ್ಟಮ್, 760 W ಬರ್ಮೆಸ್ಟರ್ 3D ಸೌಂಡ್ ಸಿಸ್ಟಮ್, ಕಸ್ಟಮೈಸ್ ಮಾಡಬಹುದಾದ ಆಂಬಿಯೆಂಟ್ ಲೈಟಿಂಗ್ ಮತ್ತು 360-ಡಿಗ್ರಿ ಕ್ಯಾಮೆರಾಗಳ ಜೊತೆ ಇತರ ಫೀಚರ್ಸ್ ಗಳಿವೆ.

ಎಂಜಿನ್: ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯಲ್ಲಿ 4.0-ಲೀಟರ್ V8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 576 bhp ಪವರ್ ಮತ್ತು 850 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದ ಮೂಲಕ 20 bhp ಹೆಚ್ಚುವರಿ ಬೂಸ್ಟ್ ಆಗುತ್ತದೆ. ಈ ಎಂಜಿನ್ ನೊಂದಿಗೆ 9-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್ ಆಟೋಮ್ಯಾಟಿಕ್ ಬಾಕ್ಸ್ ಅನ್ನು ನೀಡಲಾಗುತ್ತದೆ.

Mercedes-AMG G 63

ಮರ್ಸಿಡಿಸ್ ರೇಸ್ ಸ್ಟಾರ್ಟ್ ಅನ್ನು ಸಹ ನೀಡುತ್ತದೆ. ಈ ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯು 4.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯು ಬೃಹತ್ 229 mm ಗ್ರೌಂಡ್ ಕ್ಲಿಯರೆನ್ಸ್ ಜೊತೆಗೆ 700 mm ವಾಟರ್ ವೇಡಿಂಗ್ ಅನ್ನು ಹೊಂದಿದೆ.

ಸುರಕ್ಷತಾ ಫಿಚರ್ಸ್: ಹೊಸ ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳ ಸೂಟ್‌ನಲ್ಲಿ ಪ್ಯಾಸಿವ್ ಸುರಕ್ಷತಾ ತಂತ್ರಜ್ಞಾನದ ಹೋಸ್ಟ್‌ನಲ್ಲಿದೆ. ಇನ್ನು ಈ ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯಲ್ಲಿ ಹೊಸ ಅಡಾಪ್ಟಿವ್ ಡ್ಯಾಂಪರ್‌ಗಳು ಮತ್ತು ಹೈಡ್ರಾಲಿಕ್ಸ್-ಆಧಾರಿತ ರೋಲ್ ಸ್ಟೆಬಿಲೈಸೇಶನ್ ಸಿಸ್ಟಮ್‌ನೊಂದಿಗೆ ಸಸ್ಪೆಕ್ಷನ್ ಅನ್ನು ಸಹ ಪರಿಷ್ಕರಿಸಲಾಗಿದೆ.

Mercedes-AMG G 63

ಭಾರತಕ್ಕೆ ಆಗಮಿಸಲಿರುವ 2025ರ ಎಎಂಜಿ ಜಿ 63 ಎಸ್‍ಯುವಿಯ ಮೊದಲ ಬ್ಯಾಚ್ 120 ಯುನಿಟ್‌ಗಳು ಈಗಾಗಲೇ ಮಾರಾಟವಾಗಿವೆ ಎಂದು ಮರ್ಸಿಡಿಸ್ ಹೇಳಿದೆ. Q3 2025 ರಲ್ಲಿ ಭಾರತಕ್ಕೆ ಆಗಮಿಸಲಿರುವ ಪರ್ಫಾಮೆನ್ಸ್ ಎಸ್‍ಯುವಿಯ ಎರಡನೇ ಹಂಚಿಕೆಗಾಗಿ ಬುಕ್ಕಿಂಗ್‌ಗಳು ಈಗ ನಡೆಯುತ್ತಿವೆ. ಇನ್ನು ಜಿ-ಕ್ಲಾಸ್, ಎಸ್-ಕ್ಲಾಸ್ ಮತ್ತು ಮೇಬ್ಯಾಕ್ ಮಾದರಿಗಳನ್ನು ಒಳಗೊಂಡಿರುವ ಮಾದರಿಗಳು ವರ್ಷಾಂತ್ಯದ ಮೊದಲು ಬರಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, October 24, 2024, 8:30 [IST]
English summary
New mercedes amg g 63 top things details
Read more on mercedes benz india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+