ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಎಸ್‍ಯುವಿ: ಮೇಬ್ಯಾಕ್ EQS ಇವಿ ವಾಕ್‌ಅರೌಂಡ್ ವೀಡಿಯೋ
ಮರ್ಸಿಡಿಸ್ ಬೆಂಝ್ ಪ್ರಸಿದ್ಧ ಐಷಾರಾಮಿ ಕಾರು ತಯಾರಕ ಕಂಪನಿ. ಇತ್ತೀಚೆಗೆ, ಜರ್ಮನ್ ಬ್ರ್ಯಾಂಡ್ ದೇಶದ ಮೊದಲ ಎಲೆಕ್ಟ್ರಿಕ್ ಮೇಬ್ಯಾಕ್ ಮಾದರಿಯಾದ EQS ಎಸ್‍ಯುವಿಯನ್ನು ಪರಿಚಯಿಸುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿತು. ನಿರೀಕ್ಷೆಯಂತೆ, EQS ಐಷಾರಾಮಿ ವೈಶಿಷ್ಟ್ಯಗಳು ಮತ್ತು ವಿಶೇಷಣಗಳಲ್ಲಿ ಸಮೃದ್ಧವಾಗಿರುವ ಮಾದರಿ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತದೆ. ಡ್ಯುಯಲ್ ಮೋಟಾರ್ ಸೆಟಪ್ ಮತ್ತು 4MATIC ಆಲ್-ವೀಲ್ ಡ್ರೈವ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿರುವ ವಾಹನವು ಸಿಂಗಲ್ ಚಾರ್ಜ್‌ನಲ್ಲಿ ಸುಮಾರು 611 ಕಿ.ಮೀ ರೇಂಜ್ ಅನ್ನು ಹೊಂದಿದೆ ಎಂದು ಮರ್ಸಿಡಿಸ್ ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯು 122kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.
ಕಾರ್ಯಕ್ಷಮತೆಯ ಅಂಕಿಅಂಶಗಳಿಗೆ ಬರುವುದಾದರೆ, ಮರ್ಸಿಡಿಸ್ EQS ಎಲೆಕ್ಟ್ರಿಕ್ ಎಸ್‍ಯುವಿಯು 4.4 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಭಾರತದಲ್ಲಿ ಇದರ ಟಾಪ್ ಸ್ಪೀಡ್ ಅನ್ನು 210 ಕಿ.ಮೀ.ಗೆ ನಿಗದಿಪಡಿಸಿದೆ. ಇದು 200kW DC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವುದರಿಂದ ಚಾರ್ಜಿಂಗ್ ಬಗ್ಗೆ ಚಿಂತಿಸಬೇಕಾಗಿಲ್ಲ. ವಾಹನವು ಸಂಪೂರ್ಣವಾಗಿ ಹೇಗೆ ಕಾಣುತ್ತದೆ ಎಂಬುದನ್ನು ನೋಡಲು ವಾಕ್-ಅರೌಂಡ್ ವೀಡಿಯಯೋ ನೋಡಿ.
ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಮೇಬ್ಯಾಕ್ EQS EV ಅನ್ನು ಭಾರತದಲ್ಲಿ ಸೆಪ್ಟೆಂಬರ್ 5, 2024 ರಂದು ಬಿಡುಗಡೆಗೊಳಿಸ್ಲೌ ಯೋಜಿಸಿದೆ. ಇನ್ನೆರಡು ದಿನಗಳಲ್ಲಿ ಇದರ ಬೆಲೆ ತಿಳಿಯಲಿದೆ. ಇದು MBUX ಹೈಪರ್‌ಸ್ಕ್ರೀನ್, ಹಿಂಭಾಗದ ಪ್ರಯಾಣಿಕರಿಗೆ ಡ್ಯುಯಲ್ 11.6-ಇಂಚಿನ ಡಿಸ್ ಪ್ಲೇ, 15-ಸ್ಪೀಕರ್ ಬರ್ಮೆಸ್ಟರ್ ಮೂಲ ಧ್ವನಿ ವ್ಯವಸ್ಥೆ, 64-ಬಣ್ಣದ ಆಂಬಿಯೆಂಟ್ ಲೈಟಿಂಗ್, ಏರ್ ಸಸ್ಪೆಕ್ಷನ್, ADAS, 360-ಡಿಗ್ರಿ ಸರೌಂಡ್ ಕ್ಯಾಮೆರಾ ಮತ್ತು ಸರೌಂಡ್ ಕ್ಯಾಮೆರಾಗಳಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.
ಹೊಸ ಮರ್ಸಿಡಿಸ್ ಮೇಬ್ಯಾಕ್ EQS (Mercedes-Maybach EQS ) ಎಸ್‍ಯುವಿ ಮಾದರಿಯು ಸ್ಟ್ಯಾಂಡರ್ಡ್ EQS ಎಸ್‍ಯುವಿಗೆ ಸಮಾನವಾದ ಆಯಾಮಗಳನ್ನು ಹೊಂದಿರುತ್ತದೆ. ಈ ದುಬಾರಿ ಎಸ್‍ಯುವಿಯ ಬಾಹ್ಯ ಮುಖ್ಯಾಂಶಗಳು ಬಾನೆಟ್‌ನಲ್ಲಿ ಮೂರು-ಪಾಯಿಂಟ್ ಸ್ಟಾರ್ ಬ್ಯಾಡ್ಜ್, ಕ್ರೋಮ್ ಸ್ಟ್ರಿಪ್‌ಗಳು, ಡಿ-ಪಿಲ್ಲರ್‌ನಲ್ಲಿ ಮೇಬ್ಯಾಕ್ ಲೋಗೋ ಮತ್ತು 22-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








