ಈ ಕಾರಿಗಾಗಿ ಸೆಲೆಬ್ರಿಟಿಗಳೇ ಲೈನ್‌ನಲ್ಲಿ ನಿಂತು ಕಾಯುತ್ತಾರೆ: ಯಾವ ಕಾರು ಗೊತ್ತಾ? ವಿಶೇಷತೆಗಳೇನು?
ಜಮರ್ನಿ ಮೂಲದ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ ಬೆಂಝ್ ತನ್ನ ಮರ್ಸಿಡಿಸ್ ಮೇಬ್ಯಾಕ್ GLS 600 ಫೇಸ್‌ಲಿಫ್ಟ್ (Mercedes-Maybach GLS 600 Facelift) ಎಸ್‍ಯುವಿಯನ್ನು ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮರ್ಸಿಡಿಸ್ ಮೇಬ್ಯಾಕ್ GLS 600 ಫೇಸ್‌ಲಿಫ್ಟ್ ಎಸ್‍ಯುವಿಯ ಆರಂಭಿಕ ಬೆಲೆಯು ರೂ.3.35 ಕೋಟಿಯಾಗಿದೆ.
ಮರ್ಸಿಡಿಸ್ ಮೇಬ್ಯಾಕ್ GLS 600 ಫೇಸ್‌ಲಿಫ್ಟ್ ಎಸ್‍ಯುವಿಯ ಹಿಂದಿನ ಆವೃತ್ತಿಗೆ ಹೋಲಿಸಿದರೆ, ನವೀಕರಿಸಿದ ಮಾದರಿಯು ಸುಮಾರು 39 ಲಕ್ಷ ರೂಪಾಯಿ ದುಬಾರಿಯಾಗಿದೆ. ನವೀಕರಿಸಿದ ಮರ್ಸಿಡಿಸ್ ಮೇಬ್ಯಾಕ್ GLS 600 ಫೇಸ್‌ಲಿಫ್ಟ್ 600 ಬ್ಲ್ಯಾಕ್, ಸಿಲ್ವರ್ ಮೆಟಾಲಿಕ್ ಮತ್ತು ಪೋಲಾರ್ ವೈಟ್ ಮೂರು ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ. ಈ ಐಷಾರಾಮಿ ಎಸ್‍ಯುವಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿನ್ಯಾಸ: ಮರ್ಸಿಡಿಸ್ ಮೇಬ್ಯಾಕ್ GLS 600 ಫೇಸ್‌ಲಿಫ್ಟ್ ಎಸ್‍ಯುವಿಯ ಮುಂಭಾಗದ ಫಾಸಿಕ ಹೊಸ ಗ್ರಿಲ್ ಮತ್ತು ಬಂಪರ್‌ನೊಂದಿಗೆ ಪರಿಷ್ಕರಿಸಲಾಗಿದೆ. ಇದರೊಂದಿಗೆ ಹೊಸ ಮೇಬ್ಯಾಕ್-ನಿರ್ದಿಷ್ಟ ಟೈಲ್‌ಪೈಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳಿಗಾಗಿ LED ಸಹ ಪಡೆಯುತ್ತದೆ. ಮಲ್ಟಿ-ಸ್ಪೋಕ್ 22-ಇಂಚಿನ ಚಕ್ರಗಳು ಸ್ಟ್ಯಾಂಡರ್ಡ್ ಆಗಿದ್ರೆ ಮತ್ತು ಕ್ಲಾಸಿಕ್ ಡೀಪ್-ಡಿಶ್ ಮೊನೊಬ್ಲಾಕ್ 23-ಇಂಚಿನ ಮೇಬ್ಯಾಕ್ ಆಯ್ಜೆಗಳಿವೆ.
ಎಂಜಿನ್: ಫೇಸ್‌ಲಿಫ್ಟ್ ಗಮನಾರ್ಹವಾದ ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದೆ ಮತ್ತು ನವೀಕರಿಸಿದ ಮರ್ಸಿಡಿಸ್ ಮೇಬ್ಯಾಕ್ GLS 600 ಫೇಸ್‌ಲಿಫ್ಟ್ ಎಸ್‍ಯುವಿಯು 4.0 ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್ ಅನ್ನು ಹೊಂದಿದೆ. ಈ 48V ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್‌ನೊಂದಿಗೆ ನವೀಕರಿಸಿದ ಎಂಜಿನ್ 557 bhp ಮತ್ತು 770 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಿಂದ ನಿರ್ವಹಿಸಲಾಗುತ್ತದೆ.

ಪರ್ಫಾಮೆನ್ಸ್: ಹೊಸ ಮರ್ಸಿಡಿಸ್ ಮೇಬ್ಯಾಕ್ GLS 600 ಫೇಸ್‌ಲಿಫ್ಟ್ ಎಸ್‍ಯುವಿಯು 4.9 ಸೆಕೆಂಡ್‌ಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಸ್‍ಯುವಿ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹೊಸ ಮರ್ಸಿಡಿಸ್ ಮೇಬ್ಯಾಕ್ GLS 600 ಎಸ್‍ಯುವಿಯು 4 ಮ್ಯಾಟಿಕ್ ಸಿಸ್ಟಮ್‌ನೊಂದಿಗೆ 4WD ಸೆಟಪ್‌ನೊಂದಿಗೆ ಬರುತ್ತದೆ. ಅಡಾಪ್ಟಿವ್ ಡ್ಯಾಂಪರ್‌ಗಳು ಸ್ಟ್ಯಾಂಡರ್ಡ್ ಆಗಿದ್ದರೂ, ವಿಶೇಷವಾದ ಮೇಬ್ಯಾಕ್ ಡ್ರೈವ್ ಮೋಡ್‌ನೊಂದಿಗೆ ಸಂಪೂರ್ಣ ಆಕ್ಟಿವ್ ಸಸ್ಪೆಕ್ಷನ್ ಕೂಡ ಒಂದು ಆಯ್ಕೆಯಾಗಿದೆ.
ಒಳಭಾಗ: ಈ ಐಷಾರಾಮಿ ಎಸ್‍ಯುವಿಯ ಒಳಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ನವೀಕರಿಸಿದ GLS 600 ಹೊಸ ಗ್ರಾಫಿಕ್ಸ್, ನವೀಕರಿಸಿದ ಟೆಲಿಮ್ಯಾಟಿಕ್ಸ್, ಆಯ್ದ ಕಾಮೆಂಡ್ ಗಳಿಗಾಗಿ ಕೈ ಸನ್ನೆಗಳು ಮತ್ತು ಫಿಂಗರ್‌ಪ್ರಿಂಟ್ ಸೆನ್ಸೆರ್ ಅನ್ನು ಒಳಗೊಂಡ ಇತ್ತೀಚಿನ-ಪೀಳಿಗೆಯ MBUX ಸಾಫ್ಟ್‌ವೇರ್‌ನೊಂದಿಗೆ ಬರುತ್ತದೆ. ಇದು ಹೊಸ ಸ್ಟೀರಿಂಗ್ ವೀಲ್ ಮತ್ತು ನವೀಕರಿಸಿದ ಎಸಿ ವೆಂಟ್‌ಗಳನ್ನು ಸಹ ಪಡೆಯುತ್ತದೆ. ಹಿಂಭಾಗದ ಬೆಂಚ್ ಸೀಟ್ ಮಸಾಜ್ ಫಂಕ್ಷನ್ ಕಾರ್ಯಗಳನ್ನು ನೀಡುತ್ತದೆ.

ಇದರೊಂದಿಗೆ ಬ್ಲ್ಯಾಕ್ ಮತ್ತು ಡ್ಯುಯಲ್-ಟೋನ್ ಮ್ಯಾಕಿಯಾಟೊ ಬೀಜ್/ಮಹೋಗಾನಿ ಬ್ರೌನ್ ನಪ್ಪಾ ಲೆದರ್ ಅಪ್ಹೋಲ್ಸ್ಟರಿಯಿಂದ ಆಯ್ಕೆ ಮಾಡಬಹುದು. ಹೆಚ್ಚುವರಿಯಾಗಿ, ಡ್ಯಾಶ್‌ಬೋರ್ಡ್ ಎರಡು ವಿಭಿನ್ನ ಪೂರ್ಣಗೊಳಿಸುವಿಕೆಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿಯು ಬ್ರೌನ್ ಓಪನ್-ಪೋರ್ ವಾಲ್‌ನಟ್ ವುಡ್ ಟ್ರಿಮ್ ಮತ್ತು ಆಂಥ್ರಾಸೈಟ್ ಓಪನ್-ಪೋರ್ ಓಕ್ ವುಡ್ ಟ್ರಿಮ್ ಆಗಿದೆ.
ಇತರ ವೈಶಿಷ್ಟ್ಯಗಳ ಮುಖ್ಯಾಂಶಗಳು 590W ಬರ್ಮೆಸ್ಟರ್ 3D ಸರೌಂಡ್ ಸೌಂಡ್ ಸಿಸ್ಟಮ್, ಲೆವೆಲ್ 2 ADAS ಸೂಟ್, ಮೇಬ್ಯಾಕ್-ನಿರ್ದಿಷ್ಟ ಆಂಬಿಯೆಂಟ್ ಲೈಟಿಂಗ್, ಫೋಲ್ಡ್-ಡೌನ್ ಆರ್ಮ್‌ರೆಸ್ಟ್‌ನಲ್ಲಿ ಕೇಂದ್ರೀಯ ಟ್ಯಾಬ್ಲೆಟ್, ವಿಸ್ತರಿಸಬಹುದಾದ ಲೆಗ್ ರೆಸ್ಟ್, ಟ್ವಿನ್ ರಿಯರ್ 11.6-ಇಂಚಿನ MBUX ಪರದೆಗಳು ಮತ್ತು ಮರ್ಸಿಡಿಸ್ ಸಿಗ್ನೇಚರ್ ಎನರ್ಜೈಸಿಂಗ್ ಪ್ಯಾಕೇಜ್ ಅನ್ನು ಹೊಂದಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








