ನಿಸ್ಸಾನ್ ಕಂಪನಿಯ ಬ್ರಹ್ಮಾಸ್ತ್ರ: ಭಾರತಕ್ಕೆ ಬರಲಿದೆ ಜನಪ್ರಿಯ ಪೆಟ್ರೋಲ್ ಎಸ್‍ಯುವಿ

ಜಪಾನ್ ಮೂಲದ ನಿಸ್ಸಾನ್ (Nissan) ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆತ ಬ್ರ್ಯಾಂಡ್. ಭಾರತದಲ್ಲಿ ನಿಸ್ಸಾನ್ ಹೆಚ್ಚು ಜನಪ್ರಿಯವಾಗಿಲ್ಲ. ಸನ್ನಿ, ಮೈಕ್ರಾ ಮತ್ತು ಟೆರಾನೊದಂತಹ ಕೆಲವು ಮಾದರಿಗಳು ಹಿಟ್ ಆಗಿದ್ದವು, ಆದರೆ ನಂತರ ಜಪಾನಿನ ಬ್ರ್ಯಾಂಡ್ ಕುಸಿತವನ್ನು ಕಂಡಿತು. ಆದರೆ ಮ್ಯಾಗ್ನೈಟ್ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿ ಮೂಲಕ ದೊಡ್ಡ ಬ್ರ್ಯಾಂಡ್ ಕೇವಲ ಒಂದು ಕಾರು ಮಾರಾಟದ ಆಧಾರದ ಮೇಲೆ ನೆಲೆ ನಿಂತಿದೆ. ಇನ್ನು ನಿಸ್ಸಾನ್ ಕಂಪನಿಯು ಇತ್ತೀಚೆಗೆ ಎಕ್ಸ್-ಟ್ರಯಲ್ ಎಸ್‍ಯುವಿಯನ್ನು ಪರಿಚಯಿಸಿತು. ಇದೀಗ ನಿಸ್ಸಾನ್ ಕಂಪನಿಯು ಪೆಟ್ರೋಲ್ ಎಸ್‍ಯುವಿಯು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ನಿಸ್ಸಾನ್ ಕಂಪನಿಯು ಪೆಟ್ರೋಲ್ ಎಸ್‍ಯುವಿಯನ್ನು CBU (ಸಂಪೂರ್ಣವಾಗಿ ನಿರ್ಮಿಸಲಾದ) ಯುನಿಟ್ ಆಗಿ ತರಬಹುದು. ಈ ಹೊಸ ನಿಸ್ಸಾನ್ ಪೆಟ್ರೋಲ್ (Nissan Patrol) ಎಸ್‍ಯುವಿಯು ನವೀಕರಿಸಿದ ಪ್ಲಾಟ್‌ಫಾರ್ಮ್, ಸುಧಾರಿತ ಸ್ಟೈಲಿಂಗ್ ಮತ್ತು ನವೀಕರಿಸಿದ ಒಳಾಂಗಣದ ಬದಲಾವಣೆಯನ್ನು ಪಡೆದುಕೊಂಡಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ, ನಿಸ್ಸಾನ್ ಪೆಟ್ರೋಲ್ ಎಸ್‍ಯುವಿಯಲ್ಲಿ 3.5 ಲೀಟರ್ ಟ್ವಿನ್-ಟರ್ಬೊ V6 ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ.

Nissan Patrol

ಈ ಎಂಜಿನ್ 425 bhp ಮತ್ತು 700 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಹಿಂದಿನ 5.6 ಲೀಟರ್ V8 ಎಂಜಿನ್‌ಗೆ ಹೋಲಿಸಿದರೆ, ಹೊಸದು 100 bhp ಪವರ್ ಹೆಚ್ಚು ಶಕ್ತಿಶಾಲಿಯಾಗಿದೆ. ಇದೇ ಎಂಜಿನ್ ಅನ್ನು ಇಂಡಿಯಾ-ಸ್ಪೆಕ್ ಪೆಟ್ರೋಲ್‌ನೊಂದಿಗೆ ಪರಿಚಯಿಸುವ ಸಾಧ್ಯತೆಯಿದೆ. ಈ ಎಂಜಿನ್ ನೊಂದಿಗೆ 9-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಈ ನಿಸ್ಸಾನ್ ಪೆಟ್ರೋಲ್ ಎಸ್‍ಯುವಿಯಲ್ಲಿ ಫ್ಹೋರ್ ವ್ಹೀಲ್ ಡ್ರೈವ್ (4WD) ಸಿಸ್ಟಂ ಅನ್ನು ಹೊಂದಿದ್ದು, ಇದು ಮುಂಭಾಗ ಮತ್ತು ಹಿಂದಿನ ವ್ಹ್ಹೀಲ್ ಗಳಿಗೆ ನಿರಂತರ ಚಾಲನೆಯನ್ನು ಹೊಂದಿದೆ. ಈ ಎಸ್‍ಯುವಿಯ ಟಾಪ್-ಸ್ಪೆಕ್ ಮಾದರಿಗಳು ಸ್ಟ್ಯಾಂಡರ್ಡ್, ಇಕೋ, ಮಡ್, ಸ್ಯಾಂಡ್, ರಾಕ್ ಮತ್ತು ಸ್ಪೋರ್ಟ್ ಎಂಬ ಮೋಡ್ ಗಳನ್ನು ಹೊಂದಿವೆ. ಇನ್ನು ಈ ಎಸ್‍ಯುವಿಯಲ್ಲಿ ಅಡಾಪ್ಟಿವ್ ಏರ್ ಸಸ್ಪೆನ್‌ಶನ್‌ನೊಂದಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ.

Nissan Patrol

ನಿಸ್ಸಾನ್ ಪೆಟ್ರೋಲ್ ಅನೇಕ ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಎಸ್‍ಯುವಿಯಲ್ಲಿ ಹಿಂಬದಿಯ ಪ್ರಯಾಣಿಕರಿಗೆ ಡ್ಯುಯಲ್ 12.8-ಇಂಚಿನ ಸ್ಕ್ರೀನ್ ಸೆಟಪ್, ಗೆಸ್ಚರ್ ಕಂಟ್ರೋಲ್‌ನೊಂದಿಗೆ 14.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 14.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎ. 12-ಸ್ಪೀಕರ್ Klipsch ಪ್ರೀಮಿಯಂ ಸೌಂಡ್ ಸಿಸ್ಟಮ್, HUD ಮತ್ತು 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ಗಳನ್ನು ಹೊಂದಿವೆ.

ಇದರೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, 8-ವೇ ಪವರ್ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳು, ಎಲ್ಲಾ ಸಾಲುಗಳಿಗೆ USB-C ಪೋರ್ಟ್‌ಗಳು, ಟೈಲ್‌ಗೇಟ್ ಮತ್ತು ಇನ್ನಷ್ಟು ಫೂಚರ್ಸ್ ಗಳನ್ನು ಹೊಂದಿವೆ. ಇನ್ನು ಜಪಾನಿನ ವಾಹನ ತಯಾರಕರು ಭಾರತಕ್ಕಾಗಿ ಹೊಸ 5-ಸೀಟುಗಳ ಮಿಡ್ ಸೈಜ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

Nissan Patrol

ಹೊಸ ನಿಸ್ಸಾನ್ ಎಸ್‍ಯುವಿಯು ಡಸ್ಟರ್ ಮಾದರಿಯ ಪ್ಲಾಟ್‌ಫಾರ್ಮ್, ವೈಶಿಷ್ಟ್ಯಗಳು, ಪವರ್‌ಟ್ರೇನ್ ಮತ್ತು ಯುನಿಟ್ ಗಳೊಂದಿಗೆ ಹಂಚಿಕೊಳ್ಳುತ್ತದೆ. ಇನ್ನು ಈ ಹೊಸ ನಿಸ್ಸಾನ್ ಎಸ್‍ಯುವಿ ಬ್ರ್ಯಾಂಡ್‌ನ ಪರಿಚಿತ ವಿನ್ಯಾಸ ಭಾಷೆಯನ್ನು ಹೊಂದಿದ್ದು, ಮ್ಯಾಗ್ನೈಟ್‌ನೊಂದಿಗೆ ಹೊಂದಾಣಿಕೆಯಾಗುವ ಸಾಧ್ಯತೆಯಿದೆ ನಿಸ್ಸಾನ್ ಇಂಡಿಯಾ 7-ಸೀಟರ್ ರೆನಾಲ್ಟ್ ಡಸ್ಟರ್ ಮತ್ತು ಎಲೆಕ್ಟ್ರಿಕ್ ಕಾರ್‌ನ ರಿ-ಬ್ಯಾಡ್ಜ್ ಆವೃತ್ತಿಯನ್ನು ಸಹ ಪರಿಚಯಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, October 30, 2024, 8:30 [IST]
English summary
New nissan patrol suv india launch expected by 2026 details
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+