ಫ್ಯಾಮಿಲಿಗಾಗಿ ಕಾರು ಖರೀದಿಸುವ ಪ್ಲಾನ್ ಇದೆಯಾ? ಬಂತು ಹೊಸ ನಿಸ್ಸಾನ್ 7-ಸೀಟರ್ ಕಾರು

ಜಪಾನ್ ಮೂಲದ ನಿಸ್ಸಾನ್ (Nissan) ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ನಿಸ್ಸಾನ್ ಕಂಪನಿಯು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕೇವಲ ಒಂದು ಕಾರನ್ನು ಮಾತ್ರ ಮಾರಾಟ ಮಾಡುತ್ತಿದೆ. ಅದು ನಿಸ್ಸಾನ್ ಮ್ಯಾಗ್ನೈಟ್ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಇಷ್ಟು ದೊಡ್ಡ ಬ್ರ್ಯಾಂಡ್ ಕೇವಲ ಒಂದು ಕಾರು ಮಾರಾಟದ ಆಧಾರದ ಮೇಲೆ ನೆಲೆ ನಿಂತಿದೆ. ಈಗ ನಿಸ್ಸಾನ್ (Nissan) ಹೊಸ ಹೊಚ್ಚ ಹೊಸ ಎಕ್ಸ್-ಟ್ರಯಲ್ (X-Trail) ಕಾರನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಇದೊಂದು ಫುಲ್-ಸೈಜ್ ಎಸ್‌ಯುವಿಯಾಗಿದೆ. ಬನ್ನಿ.. ಈ ಕಾರಿನ ಬೆಲೆ ಹಾಗೂ ವಿಶೇಷತೆ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯೋಣ.

ಬೆಲೆಗಳು ಮತ್ತು ಬಣ್ಣಗಳ ಆಯ್ಕೆ: ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ (Nissan X-Trail) ರೂ.49.92 ಲಕ್ಷ (ಎಕ್ಸ್ ಶೋರೂಂ ದೆಹಲಿ) ಬೆಲೆಯನ್ನು ಹೊಂದಿದೆ. 3 ವರ್ಷ ಅಥವಾ 1 ಲಕ್ಷ ಕಿ.ಮೀ ವಾರಂಟಿಯೊಂದಿಗೆ ಖರೀದಿಗೆ ಲಭ್ಯವಿದೆ. ಮೂರು ಸಾಲುಗಳ ಈ ಕಾರು, 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪರ್ಲ್ ವೈಟ್, ಡೈಮಂಡ್ ಬ್ಲ್ಯಾಕ್ ಮತ್ತು ಷಾಂಪೇನ್ ಸಿಲ್ವರ್ ಎಂಬ 3 ಆಕರ್ಷಕ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ.

Nissan X-Trail

ಎಂಜಿನ್: ನಿಸ್ಸಾನ್ ಎಕ್ಸ್-ಟ್ರಯಲ್ 1.5-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 12ವಿ ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ.160 ಬಿಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 300 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಇಕೋ, ಸ್ಟ್ಯಾಂಡರ್ಡ್ ಹಾಗೂ ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಪಡೆದಿದೆ.

ವಿನ್ಯಾಸ: ಈ ಹೊಸ ಎಕ್ಸ್-ಟ್ರಯಲ್ ಅತ್ಯಾಧುನಿಕ ವಿನ್ಯಾಸ ಹೊಂದಿದೆ. ಹೊರಭಾಗದಲ್ಲಿ ನವೀನ ಗ್ರಿಲ್, ಎಲ್ಇಡಿ ಹೆಡ್‌ಲೈಟ್‌ಗಳು, 20-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಮತ್ತು 255/40 ಅಳತೆಯ ಟೈರ್‌ಗಳನ್ನು ಒಳಗೊಂಡಿದೆ. ಒಳಭಾಗದ ವಿನ್ಯಾಸ ಸಹ ಅತ್ಯುತ್ತಮವಾಗಿದೆ. ಸಿಎಂಎಫ್-ಸಿ ಫ್ಲಾಟ್‌ಫಾರಂ ಆಧರಿಸಿದ್ದು, 4,680 ಎಂಎಂ ಉದ್ದ, 1,840 ಎಂಎಂ ಅಗಲ ಹಾಗೂ 1,725 ​​ಎಂಎಂ ಎತ್ತರವಿದೆ. ಜೊತೆಗೆ 2,705 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.

Nissan X-Trail

ಫೀಚರ್ಸ್: ಎಕ್ಸ್-ಟ್ರಯಲ್ ಎಸ್‍ಯುವಿಯಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ ಕನೆಕ್ಟಿವಿಟಿ, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ಡಿಮ್ಮಿಂಗ್ ಐಆರ್‌ವಿಎಂ, ವೈರ್‌ಲೆಸ್ ಚಾರ್ಜರ್‌, ಡುಯಲ್ ಪೇನ್ ಪನೋರಮಿಕ್ ಸನ್‌ರೂಫ್ ಹಾಗೂ ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್‌ಗಳನ್ನು ಪಡೆದಿದೆ.

ಸುರಕ್ಷತಾ ಫೀಚರ್ಸ್: ಎಕ್ಸ್-ಟ್ರಯಲ್ ಎಸ್‍ಯುಯಲ್ಲಿ ಗರಿಷ್ಠ ರಕ್ಶಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ. 7 ಏರ್‌ಬ್ಯಾಗ್‌, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್) ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ವಿಡಿಸಿ (ವೆಹಿಕಲ್ ಡೈನಾಮಿಕ್ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಟ್ರಾಕ್ಷನ್ ಕಂಟ್ರೋಲ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

Nissan X-Trail

ಪ್ರತಿಸ್ಪರ್ಧಿಗಳು: ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿಗೆ ಟೊಯೊಟಾ ಫಾರ್ಚುನರ್, ಜೀಪ್ ಮೆರಿಡಿಯನ್, ಎಂಜಿ ಗ್ಲೋಸ್ಟರ್, ಹ್ಯುಂಡೈ ಟಕ್ಸನ್, ಮಹೀಂದ್ರಾ ಎಕ್ಸ್‌ಯುವಿ700 ಹಾಗೂ ಟಾಟಾ ಸಫಾರಿಗಳು ದೊಡ್ಡ ಎದುರಾಳಿಯಾಗಿವೆ. ಈಗಾಗಲೇ ನೂತನ ಎಕ್ಸ್-ಟ್ರಯಲ್ ಕಾರಿನ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ರೂ.1 ಲಕ್ಷ ಮುಂಗಡ ಹಣವನ್ನು ಪಾವತಿಸುವ ಮೂಲಕ ಕಾಯ್ದಿರಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, August 1, 2024, 19:22 [IST]
English summary
New nissan x trail top things to know details
Read more on nissan nissan x trail india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+