ಬಜೆಟ್‌ ಬಳಿಕ ಹೊಸ ಪೆಟ್ರೋಲ್‌ ಡೀಸೆಲ್‌ ದರ ಘೋಷಣೆ: ಬೆಲೆ ಕಂಡು ಕ್ಯಾರೇ ಎನ್ನದ ಜನತೆ!

ನಿನ್ನೆಯಷ್ಟೇ ಭಾರತದಲ್ಲಿ ಮೋದಿ ಸರ್ಕಾರ ಕೇಂದ್ರ ಬಜೆಟ್‌ 2024 ರ ಘೋಷನಣೆಯನ್ನು ಮಾಡಿತ್ತು. ಎಲ್ಲಾ ರಂಗದವರೂ ಸಹ ಬಹಳಷ್ಟು ಕುತೂಹಲದಿಂದ ನಿರೀಕ್ಷೆ ಮಾಡಿ ಕಾದು ಕುಳಿತಿದ್ದ ಬಜೆಟ್‌ ಬಹುತೇಕರಿಗೆ ನಿರಾಸೆಯನ್ನೇ ತಂದಿದೆ ಎಂದರೆ ತಪ್ಪಾಗಲಾರದು. ಬಹಳಷ್ಟು ಮಂದಿ ಈ ಬಜೆಟ್‌ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಸೇರಿಂದತೆ ಇಂಧನಗಳ ಹೊಸ ಬೆಲೆಯನ್ನು ಸರ್ಕಾರ ಘೋಷಣೆ ಮಾಡಲಿದೆ ಎಂದು ಅಂದುಕೊಂಡಿದ್ದರು. ಆದರೆ ಇದ್ಯಾವುದೂ ಸಹ ನಡೆಯಲಿಲ್ಲ ಎಂದೇ ಹೇಳಬಹುದು. ಇದೀಗ ಬಜೆಟ್‌ ನಂತರ ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಹೊಸ ಬೆಲೆ ಹೊರಬಿದ್ದಿದ್ದು, ಜನ ಶಾಕ್‌ ಆಗಿದ್ದಾರೆ.

ಹೌದು, ಈಗಾಗಲೇ ಹೇಳಿದಂತೆ ಬಜೆಟ್‌ನಲ್ಲಿ ಇಂಧನದ ಕುರಿತಾಗಿ ಯಾವುದೇ ಮಾತುಗಳಿರಲಿಲ್ಲ. ಆದರೆ ಇಂದು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು (Petrol And Diesel Price) ನೋಡಿರುವ ಜನ ಶಾಕ್‌ ಆಗಿದ್ದು, ಇಂದು ನಾವು ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಮಾಹಿತಿಗಳ ಪ್ರಕಾರ ಬೆಂಗಳೂರಿನಲ್ಲಿ ಹೊಸ ಪೆಟ್ರೋಲ್‌ ದರ 102.86 ರೂಪಾಯಿ ಮತ್ತು ಡೀಸೆಲ್‌ ಬೆಲೆ 88.94 ರೂಪಾಯಿಗಳು.

New Petrol And Diesel Price In Your City After Union Budget 2024

ಬಜೆಟ್‌ನಿಂದ ಪೆಟ್ರೋಲ್‌ ಡೀಸೆಲ್‌ ಅಥವಾ ವಾಹನ ಕ್ಷೇತ್ರಗಳಿಗೆ ಹೆಚ್ಚಿನ ಯಾವುದೇ ಉಪಯೋಗವಾಗಿಲ್ಲ ಎಂದರೆ ತಪ್ಪಾಗಲಾರದು ಅಲ್ಲವೇ. ಫೇಮ್‌ 3, ಹೊಸ ಸ್ಕ್ರಾಪಿಂಗ್‌ ನೀತಿ ಸೇರಿದಂತೆ ಹಲವು ಯೋಜನೆಗಳನ್ನು ಎದುರು ನೋಡಿದ್ದ ಜನರಿಗೆ ಸರ್ಕಾರ ಮೂರು ಕಾಸಿನ ಕಿಮ್ಮತ್ತು ನೀಡಿಲ್ಲ ಎಂದರೆ ತಪ್ಪಾಗಲಾರದು.

ವಾಹನ ಕ್ಷೇತ್ರಕ್ಕೆ ಸಿಕ್ಕ ಬಜೆಟ್‌ನ ಕುರಿತಾಗಿ ಕೊಂಚ ವಿವರವಾಗಿ ನೋಡುವುದಾದರೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು, ತಮ್ಮ ಬಜೆಟ್‌ ಭಾಷಣದಲ್ಲಿ ದೇಶದಲ್ಲಿ ವಿದ್ಯುತ್ ಚಾಲಿತ ವಾಹನ (Electric Vehicle - EV)ಗಳ ಬಳಕೆ ಉತ್ತೇಜಿಸುವ ಯಾವುದೇ ಯೋಜನೆಯನ್ನು ಘೋಷಣೆ ಮಾಡಲಿಲ್ಲ. ಈ ಹಿನ್ನೆಲೆ, ಷೇರುಪೇಟೆಯಲ್ಲಿ ಪ್ರಮುಖ ವಿದ್ಯುತ್ ಚಾಲಿತ ವಾಹನ ತಯಾರಕ ಕಂಪನಿಗಳಾದ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾ ಷೇರುಗಳು ಶೇಕಡ 3% ವರೆಗೆ ಕುಸಿತ ಕಂಡವು.

New Petrol And Diesel Price In Your City After Union Budget 2024

ಎನ್‌ಎಸ್‌ಇ (ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ - NSE)ಯಲ್ಲಿ ಮಧ್ಯಾಹ್ನ 12:30ರ ವೇಳೆಗೆ ಟಾಟಾ ಮೋಟಾರ್ಸ್ (Tata Motors) ಷೇರುಗಳು ಶೇಕಡ 3% ಕುಸಿತಕಂಡು ರೂ.975ರಲ್ಲಿ ವಹಿವಾಟಾಗುತ್ತಿದೆ. ಹಾಗೆಯೇ ಮಹೀಂದ್ರಾ (Mahindra) ಷೇರುಗಳು ಶೇಕಡ 2% ಇಳಿಕೆಯಾಗಿದ್ದು, ರೂ.2,763ರಲ್ಲಿ ವಹಿವಾಟು ನಡೆಯುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಚಾಲಿತ ವಾಹನೋದ್ಯಮವು ಗಮನಾರ್ಹವಾಗಿ ಬೆಳವಣಿಗೆಯಾಗುತ್ತಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರದ ಬೆಂಬಲ ನಿರ್ಣಾಯಕವಾಗಿದೆ ಎಂದು ಉದ್ಯಮ ಸಂಸ್ಥೆಗಳು ಬಲವಾಗಿ ಪ್ರತಿಪಾದಿಸಿದ್ದವು. ಪ್ರಧಾನಿ ಮೋದಿ ನೇತೃತ್ವದ 3.0 ಸರ್ಕಾರ ಹೈಬ್ರಿಡ್ (ಎಲೆಕ್ಟ್ರಿಕ್ + ಪೆಟ್ರೋಲ್) ವಾಹನಗಳಿಗೂ ಭಾರೀ ಕೊಡುಗೆ ನೀಡಬಹುದು ಎಂಬ ನಿರೀಕ್ಷೆಗಳು ಇದ್ದವು. ಆದಾಗ್ಯೂ ಅದು ನೆರವೇರಲಿಲ್ಲ.

ಇದರಿಂದ ಹೈಬ್ರಿಡ್ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ (Maruti Suzuki) ಷೇರುಗಳು ಶೇಕಡ 2% ಕುಸಿತವಾಗಿದ್ದು, ರೂ.12,400ರಲ್ಲಿ ವಹಿವಾಟು ನಡೆಯುತ್ತಿದೆ. ದೇಶದಲ್ಲಿ ಚಾರ್ಜಿಂಗ್ ಮೂಲಸೌಕರ್ಯದ ಸಮಸ್ಯೆಯಿಂದ ಹೈಬ್ರಿಡ್ (Hybrid) ವಾಹನಗಳು ಪರ್ಯಾಯವಾಗಲಿವೆ ಎನ್ನಲಾಗಿದ್ದು, ಹೈಬ್ರಿಡ್ ವಾಹನಗಳಿಗೆ ಪ್ರಸ್ತುತ ಶೇಕಡ 28% ಜಿಎಸ್‌ಟಿ ವಿಧಿಸಲಾಗುತ್ತಿದೆ. ಅದನ್ನು ಕೈಗೆಟುಕುವಂತೆ ಮಾಡಲು ತೆರಿಗೆಯನ್ನು ಕಡಿಮೆ ಮಾಡಬಹುದು ಎಂಬ ಆಟೋಮೊಬೈಲ್ ತಜ್ಞರು ಅಂದಾಜಿಸಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, July 24, 2024, 13:52 [IST]
English summary
New petrol and diesel price in your city after union budget 2024
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+