ಭಾರತದಲ್ಲಿ ಕಾಣಿಸಿಕೊಂಡ ಹೊಸ ರೆನಾಲ್ಟ್ ಮೆಗಾನೆ ಇ-ಟೆಕ್ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಭಾರೀ ಸಂಚಲವನ್ನು ಸೃಷ್ಟಿಸುತ್ತಿದೆ. ಈ ನಡುವೆ ರೆನಾಲ್ಟ್ ಮೆಗಾನ್ ಇ-ಟೆಕ್ ಕಾರು ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಈ ಹೊಸ ರೆನಾಲ್ಟ್ ಮೆಗಾನೆ ಇ-ಟೆಕ್ ಮಾದರಿಯು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ನಂತಹ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಕಾರನ್ನು ಅನೇಕ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಕಾಣಿಸಿಕೊಂಡ ರೆನಾಲ್ಟ್ ಮೆಗಾನೆ ಇ-ಟೆಕ್ ನಿರ್ದಿಷ್ಟ ಮಾದರಿಯನ್ನು ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ. ಈ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಇದು ಇನ್ನು ಖಚಿತವಾಗಿಲ್ಲ. ರೆನಾಲ್ಟ್ ಮೆಗಾನ್ ಇ-ಟೆಕ್ ಕಾನ್ಸೆಪ್ಟ್ಟ್ ಮಾದರಿಯು ಮೆಗಾನ್ eVision 2020 ನಿಂದ ಸ್ಫೂರ್ತಿ ಪಡೆದುಕೊಂಡಿದೆ.

Renault Megane e-Tech

ಈ ಹೊಸ ಮಾದರಿಯು ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಗಮನಾರ್ಹ ವೈಶಿಷ್ಟ್ಯಗಳು ಕೆಳಗಿನ ಭಾಗಗಳ ಉದ್ದಕ್ಕೂ ಕ್ಲಾಡಿಂಗ್ ಮತ್ತು ಬಂಪರ್‌ಗಳನ್ನು ಹೊಂದಿದೆ. ಈ ಹೊಸ ರೆನಾಲ್ಟ್ ಮೆಗಾನ್ ಇ-ಟೆಕ್ ಕಾರು ಹೊರಭಾಗವು LED DRLಗಳೊಂದಿಗೆ ಸ್ವೆಪ್ಟ್-ಬ್ಯಾಕ್ LED ಹೆಡ್‌ಲ್ಯಾಂಪ್‌ಗಳು, ಲೈಟ್ ಬಾರ್‌ನಿಂದ ಸಂಪರ್ಕಗೊಂಡಿರುವ ಒಂದು ಜೋಡಿ ಸ್ಲಿಮ್ LED ಟೈಲ್‌ಲೈಟ್‌ಗಳು, ಡೋರುಗಳ ಮೇಲೆ ಹಿಂತೆಗೆದುಕೊಳ್ಳುವ ಹ್ಯಾಂಡಲ್‌ಗಳು ಮತ್ತು ಏರೋ-ಆಪ್ಟಿಮೈಸ್ಡ್ ವ್ಹೀಲ್ ಗಳನ್ನು ಹೊಂದಿವೆ.

ಇನ್ನು ಈ ಹೊಸ ರೆನಾಲ್ಟ್ ಮೆಗಾನ್ ಇ-ಟೆಕ್ ಕಾರಿನ ಒಳಬಾಗದಲ್ಲಿ ರೆನಾಲ್ಟ್ OpenR ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ 12-ಇಂಚಿನ ಪೋರ್ಟ್ರೇಟ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಜೊತೆಗೆ 12.3-ಇಂಚಿನ L-ಆಕಾರದ ಕ್ಲಸ್ಟರ್ ಡಿಸ್ ಪ್ಲೇಯನ್ನು ಹೊಂದಿದೆ. ಈ ರೆನಾಲ್ಟ್ ಮೆಗಾನ್ ಇ-ಟೆಕ್ ಕಾರಿನಲ್ಲಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ.

Renault Megane e-Tech

ಇದರಲ್ಲಿರುವ ಎರಡು ಬ್ಯಾಟರಿ ಪ್ಯಾಕ್ 40kWh ಮತ್ತು 60kWh ಆಗಿದೆ. ಇದರಲ್ಲಿ 40kWh ಬ್ಯಾಟರಿ ಪ್ಯಾಕ್ 130 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, 60kWh ಬ್ಯಾಟರಿ ಪ್ಯಾಕ್ 216 bhp ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಹ್ಯುಂಡೈ ಕೋನಾ ಎಲೆಕ್ಟ್ರಿಕ್, ಎಂಜಿ ಆಸ್ಟರ್ ಇವಿ ಮತ್ತು ಮಿನಿ ಕೂಪರ್ ಎಸ್‌ಇಯಂತಹ ಕಾರುಗಳಲ್ಲಿ ಆಸಕ್ತಿ ಹೊಂದಿರುವವರಿಗೆ ರೆನಾಲ್ಟ್ ಮೆಗಾನ್ ಇ-ಟೆಕ್ ಉತ್ತಮ ಆಯ್ಕೆಯಾಗಿದೆ. ಪ್ರಸ್ತುತ, ರೆನಾಲ್ಟ್ CMF-A EV ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಎಲೆಕ್ಟ್ರಿಕ್ ಮಾದರಿಯಾಗಿದೆ. ಇನ್ನು ರೆನಾಲ್ಟ್ ಕಂಪನಿಯು 2025ರ ಡಸ್ಟರ್ ಬಿಡುಗಡೆಗೆ ಸಿದ್ಧವಾಗುತ್ತಿದೆ.

Renault Megane e-Tech

ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‌ಯುವಿಯ ವಿಶ್ವ ಪ್ರೀಮಿಯರ್ ಇತ್ತೀಚೆಗೆ ಪೋರ್ಚುಗಲ್‌ನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತು. ಮುಂಬರುವ ಮಾದರಿಯು ಮುಂದಿನ ವರ್ಷದ ಆರಂಭದಲ್ಲಿ ಯುರೋಪಿಯನ್ ಮಾರುಕಟ್ಟೆಗೆ ಬರಲಿದೆ. ಇದರ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಡಸ್ಟರ್ ಭಾರೀ ಜನಪ್ರಿಯತೆ ಗಳಿಸಿದ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಡಸ್ಟರ್ ಯುರೋಪ್ ಮತ್ತು ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ರೆನಾಲ್ಟ್ ಗ್ರೂಪ್‌ನ (ರೆನಾಲ್ಟ್ + ಡೇಸಿಯಾ) ಅತ್ಯಂತ ಯಶಸ್ವಿ ಮಾದರಿಯಾಗಿದೆ.

ಡೇಸಿಯಾ (Dacia) ಅಥವಾ ಡಸ್ಟರ್ ಮಾದರಿಯು 2010 ರಿಂದ 2.2 ಮಿಲಿಯನ್ ಯುನಿಟ್‌ಗಳನ್ನು ಉತ್ಪಾದಿಸಿದೆ. 2024ರ ರೆನಾಲ್ಟ್ ಡಸ್ಟರ್ (Renault Duster) ಹೊಸ ಸ್ಟೈಲಿಂಗ್ ಮತ್ತು ಎಲ್ಲಾ ಹೊಸ ಮೆಕ್ಯಾನಿಕ್ಸ್ ಜೊತೆಗೆ ಹೆಚ್ಚು ನವೀಕರಣಗಳೊಂದಿಗೆ ಒಳಾಂಗಣದೊಂದಿಗೆ ಬರುತ್ತದೆ.ನ್ಯೂ ಜನರೇಷನ್ ಡೇಸಿಯಾ ಡಸ್ಟರ್ ಅನ್ನು ರೆನಾಲ್ಟ್-ನಿಸ್ಸಾನ್ ಅಲೈಯನ್ಸ್‌ನ CMF-B ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಲಾಗಿದೆ.

ಇದು ಸ್ಯಾಂಡೆರೊ ಮತ್ತು ಜೋಗರ್‌ಗೆ ಆಧಾರವಾಗಿದೆ. ಹೊಸ ಎಸ್‍ಯುವಿಯ ಪ್ರೊಫೈಲ್‌ನಲ್ಲಿ, ಹೊಸ ಡಸ್ಟರ್ ಕೆಲವು ಆಧುನಿಕ ಸ್ಟೈಲಿಂಗ್ ಅಂಶಗಳೊಂದಿಗೆ ಪರಿಚಿತವಾಗಿದೆ. ಈ ಹೊಸ ಜನರೇಷನ್ ಮಾದರಿಯು ಹಿಂದಿನ ಮಾದರಿಗಿಂತ ಸ್ವಲ್ಪ ಉದ್ದವಾಗಿದೆ. ಇದು ಗಮನಾರ್ಹವಾಗಿ ದೊಡ್ಡದಾಗಿ ಮತ್ತು ಸ್ಪೋರ್ಟಿಯರ್ ಆಗಿ ಕಾಣುತ್ತದೆ. ಹೊಸ ಡಸ್ಟರ್ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಮತ್ತು ಸೆಂಟ್ರಲ್ ಕನ್ಸೋಲ್ ಅನ್ನು ಒಳಗೊಂಡಿರುವ ಎಲ್ಲಾ-ಹೊಸ ಒಳಾಂಗಣದೊಂದಿಗೆ ಬರುತ್ತದೆ.

Source: Autocar India

More from DriveSpark

Article Published On: Thursday, February 29, 2024, 11:51 [IST]
English summary
New renault megane e tech spied in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+