ಮಾರುತಿ, ಹೋಂಡಾ, ಸ್ಕೋಡಾ ಕಂಪನಿಗಳಿಂದ ಬಿಡುಗಡೆಗೆ ಸಜ್ಜಾಗಿವೆ ಹೊಸ ಸೆಡಾನ್‌ಗಳು!
ಭಾರತದಲ್ಲಿ ಸೆಡಾನ್‌ಗಳು ಮೊದಲಿನಂತೆ ಹೆಚ್ಚಿನ ಬೇಡಿಕೆ ಪಡೆಯುತ್ತಿಲ್ಲ, ಒಂದು ವರ್ಗದ ಜನಕ್ಕೆ ಮಾತ್ರ ಈಗ ಸೆಡಾನ್‌ಗಳು ಇಷ್ಟವಾಗುತ್ತಿವೆ. ಬಹುತೇಕ ಮಾರುಕಟ್ಟೆಯನ್ನು ಪ್ರಸ್ತುತ ಎಸ್‌ಯುಗಳೇ ದಕ್ಕಿಸಿಕೊಂಡಿವೆ. ಆದರೂ ಭಾರತದಲ್ಲಿ ಟಾಟಾ ಮೋಟಾರ್ಸ್, ಹೋಂಡಾ, ಮಾರುತಿ ಸುಜುಕಿದಂತಹ ವಾಹನ ತಯಾರಕರು ಸೆಡಾನ್ ಆಯ್ಕೆಗಳನ್ನು ಒದಗಿಸುತ್ತಿವೆ. ಹೊಸ ಡಿಸೈನ್, ಆಕರ್ಷಕ ಫೀಚರ್ಸ್‌ನೊಂದಿಗೆ ಸ್ಕೋಡಾ ಸ್ಲಾವಿಯಾ, ಹೋಂಡಾ ಅಮೇಜ್ ಮತ್ತು ಮಾರುತಿ ಸುಜುಕಿ ಡಿಜೈರ್ ಹೊಸ ಅವತಾರದಲ್ಲಿ ಬಿಡುಗಡೆಗೆ ಸಜ್ಜಾಗಿವೆ. ಮುಂಬರುವ ಈ ಸೆಡಾನ್‌ಗಳ ನಿರೀಕ್ಷಿತ ವೈಶಿಷ್ಟ್ಯಗಳು, ಬೆಲೆ ಮತ್ತು ಇತರ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಹೊಸ ಹೋಂಡಾ ಅಮೇಜ್: ದಸರಾ ಅಥವಾ ದೀಪಾವಳಿ ಹಬ್ಬದ ಸೀಸನ್‌ನಲ್ಲಿ, ಹೊಸ ಹೋಂಡಾ ಅಮೇಜ್ ಭಾರತದಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ. ನವೀಕರಿಸಿದ ಸೆಡಾನ್ ಅದೇ 1.2-ಲೀಟರ್ ಪೆಟ್ರೋಲ್ ಎಂಜಿನ್ (88.7 ಬಿಹೆಚ್ ಪಿ ಮತ್ತು 110 ಎನ್ಎಂ) ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿಯೊಂದಿಗೆ ಬರಲಿದೆ. ಇದು ಹೊಸ ಸಿಟಿ ಸೆಡಾನ್‌ನಿಂದ ಪ್ರೇರಿತವಾದ ಕೆಲವು ಗಮನಾರ್ಹ ಕಾಸ್ಮೆಟಿಕ್ ಮತ್ತು ವೈಶಿಷ್ಟ್ಯ ವರ್ಧನೆಗಳನ್ನು ಒಳಗೊಂಡಿರುತ್ತದೆ.

ಸ್ಕೋಡಾ ಸ್ಲಾವಿಯಾ ಫೇಸ್‌ಲಿಫ್ಟ್: ಸ್ಕೋಡಾ ತನ್ನ ಸ್ಲಾವಿಯಾ ಸೆಡಾನ್‌ಗಾಗಿ ಹಲವಾರು ಗಮನಾರ್ಹ ನವೀಕರಣಗಳನ್ನು ಮಾಡಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಎಲ್ಲಾ ಆಧುನಿಕ ವಾಹನಗಳಲ್ಲಿ ಸಾಮಾನ್ಯವಾಗಿರುವ ಕಾರಣ ಸ್ಕೋಡಾ ಸ್ಲಾವಿಯಾದಲ್ಲೂ ಲೆವೆಲ್-2 ADAS ನೀಡಬಹುದು. ಇದರ ಅಳವಡಿಕೆಯು ಅದರ ಸುರಕ್ಷತೆಯನ್ನು ಸುಧಾರಿಸುವ ನಿರೀಕ್ಷೆಯಿದೆ.
ಯಾಂತ್ರಿಕವಾಗಿ, ಫೇಸ್ ಲಿಫ್ಟೆಡ್ ಸೆಡಾನ್ 1.5-ಲೀಟರ್, 4-ಸಿಲಿಂಡರ್ ಟಿಎಸ್ಐ ಪೆಟ್ರೋಲ್ (150 ಬಿಹೆಚ್ ಪಿ / 250 ಎನ್ಎಂ) ಎಂಜಿನ್ ಮತ್ತು 1.0-ಲೀಟರ್, 3-ಸಿಲಿಂಡರ್ ಟಿಎಸ್ಐ ಪೆಟ್ರೋಲ್ (115 ಬಿಹೆಚ್ ಪಿ / 175 ಎನ್ಎಂ) ಎಂಜಿನ್ ಇರಲಿದೆ. ಪ್ರಸ್ತುತ ಮಾದರಿಯ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ ಡಿಸಿಟಿ ಆಟೋ ಗೇರ್‌ಬಾಕ್ಸ್ ಆಯ್ಕೆಗಳು ಸಹ ಲಭ್ಯವಿರುತ್ತವೆ.

ಹೊಸ ಮಾರುತಿ ಸುಜುಕಿ ಡಿಜೈರ್: ನವೀಕರಿಸಿದ ಮಾರುತಿ ಸುಜುಕಿ ಡಿಜೈರ್ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಹೊಸ ಬಂಪರ್‌ಗಳು, ರಿಫ್ರೆಶ್ಡ್ ಹೆಡ್ ಲ್ಯಾಂಪ್‌ಗಳು, ಹೊಸ ಅಲಾಯ್ ವೀಲ್‌ಗಳಂತಹ ಬಾಹ್ಯ ವರ್ಧನೆಗಳೊಂದಿಗೆ ಬರಲಿದೆ. ಈ ಸೆಡಾನ್ ಫ್ರಾಂಕ್ಸ್-ಪ್ರೇರಿತ ಕ್ಯಾಬಿನ್ ಅನ್ನು ಒಳಗೊಂಡಿರಲಿದೆ, ಸಿಂಗಲ್-ಪ್ಯಾನ್ ಸನ್ ರೂಫ್, 360-ಡಿಗ್ರಿ ಕ್ಯಾಮೆರಾವನ್ನು ಹೊಂದಿರಲಿದೆ.
ವೈರ್‌ಲೆಸ್ ಫೋನ್ ಚಾರ್ಜರ್, ಆರು ಏರ್‌ಬ್ಯಾಗ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಇರಲಿವೆ. ಹೊಸ 1.2-ಲೀಟರ್, 3-ಸಿಲಿಂಡರ್ ಝಡ್-ಸೀರಿಸ್ ಪೆಟ್ರೋಲ್ ಎಂಜಿನ್, ಮ್ಯಾನುವಲ್ ಅಥವಾ ಎಎಂಟಿ ಗೇರ್ ಬಾಕ್ಸ್ ಗಳೊಂದಿಗೆ ಜೋಡಿಸಲ್ಪಟ್ಟಿದೆ, ಪ್ರಸ್ತುತ ಡಿಜೈರ್ ಬೆಲೆಯು ರೂ.6.57 ಲಕ್ಷದಿಂದ ರೂ.9.39 ಲಕ್ಷಗಳಾಗಿದೆ. ಹೊಸ ಆವೃತ್ತಿಯು ಹೆಚ್ಚಿನ ಬೆಲೆಯನ್ನು ಪಡೆಯುವ ನಿರೀಕ್ಷೆಯಿದೆ.

ಮೇಲೆ ತಿಳಿಸಲಾದ ಎಲ್ಲಾ ಸೆಡಾನ್ ಕಾರುಗಳ ಅಧಿಕೃತ ಬಿಡುಗಡೆ ದಿನಾಂಕಗಳನ್ನು ಬಹಿರಂಗಪಡಿಸಿಲ್ಲ. ಆದರೆ ಶೀಘ್ರದಲ್ಲೇ ಖರೀದಿಗೆ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ. ಬಿಡುಗಡೆ ಬಳಿಕ ಈ ಸೆಡಾನ್‌ಗಳು ಯಾವಮಟ್ಟಿಗೆ ಗ್ರಾಹಕರನ್ನು ಸೆಳೆದು ತಮ್ಮ ಗತವೈಭವವನ್ನು ಮರಳಿ ಪಡೆಯಲಿವೆ ಎಂಬುದನ್ನು ಕಾದುನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications