ಕೈಗೆಟುಕುವ ಬೆಲೆಯಲ್ಲಿ ಬರಲಿದೆ ಹೊಸ ಸ್ಕೋಡಾ ಎಸ್‍ಯುವಿ: ಟಾಟಾ ನೆಕ್ಸಾನ್‌ಗೆ ಎದೆಬಡಿತ ಶುರು!
ಜನಪ್ರಿಯ ವಾಹನ ತಯಾರಕ ಸ್ಕೋಡಾ (Skoda) ಮುಂದಿನ 1 ವರ್ಷದಲ್ಲಿ ಹೊಸ ಸಬ್ -4 ಮೀಟರ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿಯು ನೇರವಾಗಿ ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ ಮತ್ತು ಮಹೀಂದ್ರಾ XUV300 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.
ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾವನ್ನು ಆಧಾರವಾಗಿರುವ MQB AO IN ಪ್ಲಾಟ್‌ಫಾರ್ಮ್‌ನ ಮಾರ್ಪಡಿಸಿದ ಆವೃತ್ತಿಯನ್ನು ಆಧರಿಸಿದೆ. ಸ್ಕೋಡಾ ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಿಗೆ ವಾರ್ಷಿಕವಾಗಿ ಸುಮಾರು 90,000 ಎಸ್‌ಯುವಿಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಸೇರಿದಂತೆ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.

ಹೊಸ ಸ್ಕೋಡಾ ಎಸ್‍ಯುವಿಯು ಕೇವಲ ಪ್ಲಾಟ್‌ಫಾರ್ಮ್ ಅಲ್ಲ, ಹೊಸ ಎಸ್‌ಯುವಿ ಕುಶಾಕ್ ಮಿಡ್ ಎಸ್‌ಯುವಿಯೊಂದಿಗೆ ಹಲವಾರು ಬಾಡಿ ಪ್ಯಾನೆಲ್‌ಗಳು, ಕಾಂಪೊನೆಂಟ್‌ಗಳು ಮತ್ತು ಎಂಜಿನ್ ವಿಶೇಷಣಗಳನ್ನು ಹಂಚಿಕೊಳ್ಳುತ್ತದೆ. ಇದರಿಂದ ಈ ಹೊಸ ಸ್ಕೋಡಾ ಎಸ್‍ಯುವಿಯು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಲು ಸಹಾಯ ಮಾಡುತ್ತದೆ. ಇನ್ನು ಈ ಹೊಸ ಎಸ್‍ಯುವಿಯು ಮ್ಯಾನುವಲ್ ಮತ್ತು ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ 1.0-ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ
ಈ ಎಂಜಿನ್ 110 bhp ಪವರ್ ಮತ್ತು 200 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಸ್ಕೋಡಾ ಎಸ್‍ಯುವಿಯು 1.0 ಲೀಟರ್ ಎಂಜಿನ್ ಹೊಂದಿರುವ ಹೊಸ ಕಾಂಪ್ಯಾಕ್ಟ್ ಎಸ್‍ಯುವಿ 4 ಮೀಟರ್‌ಗಿಂತ ಕಡಿಮೆ ಉದ್ದದ ಮತ್ತು 1.2-ಲೀಟರ್‌ಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ಕಾರುಗಳಿಗೆ ಅನ್ವಯವಾಗುವ ಕಡಿಮೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು.

ಇನ್ನು ಮ್ಯಾನುಯಲ್ ಮತ್ತು DCT ಯೊಂದಿಗೆ 1.5-ಲೀಟರ್ TSI ಎಂಜಿನ್‌ನೊಂದಿಗೆ ಕಾರ್ಯಕ್ಷಮತೆ-ಆಧಾರಿತ ಆವೃತ್ತಿಯನ್ನು ಸಹ ಪ್ರಾರಂಭಿಸಬಹುದು. ಈ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‌ಯುವಿಯ 2025ರ ಜನವರಿ-ಫೆಬ್ರವರಿಯಲ್ಲಿ ತಿಂಗಳ ನಡುವಿನ ಅವಧಿಯಲ್ಲಿ ಅನಾವರಣವಾಗಲಿದೆ. ಇನ್ನು ಈ ಹೊಸ ಸ್ಕೋಡಾ ಕಾರು 2025ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.
ಸ್ಕೋಡಾ ತನ್ನ ನವೀಕರಿಸಿದ ಸ್ಕೋಡಾ ಆಕ್ಟೀವಿಯಾ ಕಾರನ್ನು ಅನಾವರಣಗೊಳಿಸಿದೆ. ಸ್ಖೋಡಾ ಆಕ್ಟೀವಿಯಾ ಎಂಬ ಜನಪ್ರಿಯ ಮಾದರಿಯು ಮಿಡ್-ಲೈಫ್ ಅಪ್‌ಡೇಟ್ ಅನ್ನು ಪಡೆದುಕೊಂಡಿದೆ. ಸ್ಕೋಡಾ ಭಾರತದಲ್ಲಿ ಬರೊಬ್ಬರಿ 1 ಲಕ್ಷಕ್ಕೂ ಹೆಚ್ಚು ಸ್ಕೋಡಾ ಆಕ್ಟೀವಿಯಾ ಸೆಡಾನ್‌ಗಳನ್ನು ಮಾರಾಟ ಮಾಡವಲ್ಲಿ ಯಶಸ್ವಿಯಾಗಿದೆ. ಸ್ಕೋಡಾ ಕಂಪನಿಯು ಆಕ್ಟೀವಿಯಾ ಕಟ್ಟುನಿಟ್ಟಾದ RDE ನಿಯಮಗಳಿಂದಾಗಿ ಭಾರತದಲ್ಲಿ ಈ ಮಾದರಿಯ ಸ್ಥಗಿತಗೊಳಿಸಿತು.

ಆದರೆ ಈ ಹೊಸ ನವೀಕರಣಗಳೊಂದಿಗೆ ಇದನ್ನು ಮರಳಿ ತರುತ್ತಿದೆ. 2024ರ ಸ್ಕೋಡಾ ಆಕ್ಟೀವಿಯಾ ಫೇಸ್‌ಲಿಫ್ಟ್ (Skoda Octavia Facelift) ಗಮನಾರ್ಹವಾಗಿ ಸುಧಾರಿತ ಸ್ಟೈಲಿಂಗ್, ವರ್ಧಿತ ಸುರಕ್ಷತೆ ಮತ್ತು ಆತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಮತ್ತಷ್ಟು ಪ್ರೀಮಿಯಂ ಆಗಿದೆ. 2024ರ ಸ್ಕೋಡಾ ಆಕ್ಟೀವಿಯಾ ಫೇಸ್‌ಲಿಫ್ಟ್ ಕಾರಿನಲ್ಲಿ ರಿಫ್ರೆಶ್ ಮಾಡಿದ ವಿನ್ಯಾಸದೊಂದಿಗೆ ಸ್ಕೋಡಾ ಸರಣಿಯಲ್ಲಿ ಇದನ್ನು ಪ್ರತ್ಯೇಕಿಸುತ್ತದೆ.
ಇದರಲ್ಲಿ ಎಲ್ಇಡಿ ಮ್ಯಾಟ್ರಿಕ್ಸ್ ಬೀಮ್ ಹೆಡ್‌ಲೈಟ್‌ಗಳು, ಹೊಸ ಅಲಾಯ್ ವ್ಹೀಲ್ ಗಳು ಮತ್ತು ಅನಿಮೇಟೆಡ್ ಇಂಟೆಕೇಟರ್ಸ್ ಪರಿಷ್ಕೃತ ಎಲ್ಇಡಿ ಹಿಂಭಾಗದ ಲ್ಯಾಂಪ್ ಗಳು, ಮುಂಭಾಗದ ಬಂಪರ್‌ನಲ್ಲಿ ಅಕ್ಸೆಟ್ ಅನ್ನು ಕ್ರೀಸ್‌ನ ಮೇಲೆ ಇರಿಸಲಾಗಿದೆ. ಹೊಸ 13-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ನ ಸೇರ್ಪಡೆಯಾಗಿದೆ. ಈ ಸ್ಕ್ರೀನ್ ಫೋಕ್ಸ್‌ವ್ಯಾಗನ್ ಗಾಲ್ಫ್‌ನ ಇತ್ತೀಚಿನ ಅಪ್‌ಡೇಟ್‌ನೊಂದಿಗೆ ಹಂಚಿಕೊಳ್ಳಲಾದ ಆಯ್ಕೆಯ ವೈಶಿಷ್ಟ್ಯವಾಗಿದೆ.


Click it and Unblock the Notifications








