400 ಕಿ.ಮೀ ರೇಂಜ್, ಆಕರ್ಷಕ ವಿನ್ಯಾಸದ ಸ್ಕೋಡಾ ಎಪಿಕ್ ಎಲೆಕ್ಟ್ರಿಕ್ ಎಸ್‌ಯುವಿಯ ವಿಶೇಷತೆಗಳು
ಜನಪ್ರಿಯ ವಾಹನ ತಯಾರಕ ಸ್ಕೋಡಾ (Skoda) ಸ್ಕೋಡಾ ಆಟೋ ತನ್ನ ಎಪಿಕ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಇತ್ತೀಚೆಗೆ ಅನಾವರಣಗೊಳಿಸಿದೆ. ಎಪಿಕ್ ತನ್ನ ಹೆಸರನ್ನು 'ಎಪಿಕ್' ಪದದಿಂದ ಪಡೆದುಕೊಂಡಿದೆ. ಹೊಸ ಸ್ಕೋಡಾ ಎಪಿಕ್ ಎಲೆಕ್ಟ್ರಿಕ್ ಎಸ್‌ಯುವಿಗೆ ಯುರೋಪಿನ ಮಾರುಕಟ್ಟೆಯಲ್ಲಿ ಬೆಲೆಯು ಸುಮಾರು 25,000 ಯುರೋಗಳಷ್ಟು (ಅಂದಾಜು ರೂ. 23 ಲಕ್ಷ) ಇರುತ್ತದೆ.
ಸುಮಾರು 4.1 ಮೀಟರ್ ಉದ್ದವಿದ್ದು, ಇದು ಸ್ಕೋಡಾ ಕುಶಾಕ್‌ಗಿಂತ ಸ್ವಲ್ಪ ಚಿಕ್ಕದಾಗಿದೆ. ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯು ಒಂದು ಬಾರಿ ಚಾರ್ಜ್ ಮಾಡಿದರೆ 400 ಕಿ.ಮೀ ಚಲಿಸುತ್ತದೆ. ಈ ಹೊಸ ಸ್ಕೋಡಾ ಎಪಿಕ್ ಎಲೆಕ್ಟ್ರಿಕ್ ಎಸ್‌ಯುವಿಗೆ ID.2 ಜೊತೆಗೆ ಅದರ ಆಧಾರಗಳನ್ನು ಹಂಚಿಕೊಳ್ಳುತ್ತದೆ. ಹೊರಭಾಗವು ಆಧುನಿಕ ವಿನ್ಯಾಸ ಶೈಲಿಯನ್ನು ಹೊಂದಿದೆ. ಇದು ಸ್ಮಾರ್ಟ್ ಕಾರ್ಯವನ್ನು ಮತ್ತು ಪ್ರಾಯೋಗಿಕತೆಯನ್ನು ಒಟ್ಟಿಗೆ ಸಂಯೋಜಿಸುತ್ತದೆ ಎಂದು ಕಂಪನಿ ಹೇಳುತ್ತದೆ.

ಈ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ವಾಹನ ತಯಾರಕರು ಇನ್ನೂ ಯಾವುದೇ ವಿಶೇಷಣಗಳನ್ನು ಬಹಿರಂಗಪಡಿಸಿಲ್ಲ ಮತ್ತು ಮುಂದಿನ ವರ್ಷ ಬಿಡುಗಡೆಗೆ ಹತ್ತಿರದ ವೇಳೆ ಬಹಿರಂಗಪಡಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ಈ ಎಪಿಕ್ ಬ್ರ್ಯಾಂಡ್‌ನ ಮುಂಬರುವ ವರ್ಷಗಳಲ್ಲಿ ಆರು ಎಲೆಕ್ಟ್ರಿಕ್ ಕಾರುಗಳ ಒಂದಾಗಿದೆ. ಸ್ಕೋಡಾ ಹೊಸ ಎಲ್ರೋಕ್ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಈ ವರ್ಷದ ನಂತರ ಬರಲಿದೆ.
ಇನ್ನು ಸ್ಕೋಡಾ ಮುಂದಿನ 1 ವರ್ಷದಲ್ಲಿ ಹೊಸ ಸಬ್ -4 ಮೀಟರ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿಯು ನೇರವಾಗಿ ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ ಮತ್ತು ಮಹೀಂದ್ರಾ XUV300 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾವನ್ನು ಆಧಾರವಾಗಿರುವ MQB AO IN ಪ್ಲಾಟ್‌ಫಾರ್ಮ್‌ನ ಮಾರ್ಪಡಿಸಿದ ಆವೃತ್ತಿಯನ್ನು ಆಧರಿಸಿರುತ್ತದೆ.

ಈ ಹೊಸ ಸ್ಕೋಡಾ ಎಪಿಕ್ (Skoda Epiq) ಎಲೆಕ್ಟ್ರಿಕ್ ಎಸ್‌ಯುವಿ ಮುಂಭಾಗವು ಹೊಸ ಟೆಕ್-ಡೆಕ್ ಫೇಸ್ ಅನ್ನು ಪಡೆಯುತ್ತದೆ, ಇದು ಬ್ರ್ಯಾಂಡ್‌ನ ರೇಡಿಯೇಟರ್ ಗ್ರಿಲ್‌ನ ಆಧುನಿಕ ವ್ಯಾಖ್ಯಾನವಾಗಿದೆ ಎಂದು ಸ್ಕೋಡಾ ಹೇಳುತ್ತದೆ ಮತ್ತು ಗ್ಲಾಸ್ ಬ್ಲ್ಯಾಕ್ ಮೇಲ್ಮೈ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ರಾಡಾರ್ ಅನ್ನು ಮರೆಮಾಡಲಾಗುತ್ತದೆ.
ಈ ಹೊಸ ಸ್ಕೋಡಾ ಎಸ್‍ಯುವಿಯ ಗ್ರಿಲ್ ಅನ್ನು ಹೊಸ T-ಆಕಾರದ LED DRL ಗಳಿಂದ ಸುತ್ತುವರಿದಿದೆ ಮತ್ತು ಹೆಡ್‌ಲೈಟ್‌ಗಳು ಸ್ಪೋರ್ಟಿಂಗ್ ಮ್ಯಾಟ್ರಿಕ್ಸ್ LED ತಂತ್ರಜ್ಞಾನವನ್ನು ಕೆಳಗೆ ಜೋಡಿಸಲಾಗಿದೆ. ಬಂಪರ್ ಬೃಹತ್ ಲಂಬವಾದ ಸ್ಲ್ಯಾಟ್‌ಗಳನ್ನು ಹೊಂದಿದೆ, ಇದು ಜೀಪ್ ಎಸ್‍ಯುವಿಗಳಿನ ಸಾಂಪ್ರದಾಯಿಕ ಗ್ರಿಲ್ ಅನ್ನು ನಮಗೆ ನೆನಪಿಸುತ್ತದೆ. ಇದರ ಲೈನ್ ಗಳು ಒರಟಾದ ಲುಕ್ ನೀಡುತ್ತದೆ.

ಈ ಎಲೆಕ್ಟ್ರಿಕ್ ಎಸ್‍ಯುವಿಯು ವ್ಹೀಲ್ ಅರ್ಚಾರ್ ಗಳು ಮತ್ತು ಹಿಂಭಾಗದಲ್ಲಿ ಟಿ-ಆಕಾರದ ಎಲ್ಇಡಿ ಟೈಲ್‌ಲೈಟ್‌ಗಳನ್ನು ಸೇರಿಸಿ. ಈ ಸ್ಕೋಡಾ ಎಪಿಕ್ ಕಾನ್ಸೆಪ್ಟ್ ಕ್ಯಾಬಿನ್ ಡ್ಯುಯಲ್-ಟೋನ್ ಥೀಮ್‌ನೊಂದಿಗೆ ಗೊಂದಲ-ಮುಕ್ತ ವಿನ್ಯಾಸವನ್ನು ತೋರಿಸುತ್ತದೆ. ಮಾದರಿಯು ಎರಡು-ಸ್ಪೋಕ್ ಸ್ಟೀರಿಂಗ್ ವೀಲ್, 5.3-ಇಂಚಿನ ವರ್ಚುವಲ್ ಕಾಕ್‌ಪಿಟ್ ಮತ್ತು 13-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪಡೆಯುತ್ತದೆ.
ಈ ಸ್ಕೋಡಾ ಎಲೆಕ್ಟ್ರಿಕ್ ಎಸ್‍ಯುವಿಯ ಡ್ಯಾಶ್‌ಬೋರ್ಡ್ ಗ್ಲಾಸ್-ಬ್ಲಾಕ್ ಫಿನಿಶ್‌ನೊಂದಿಗೆ ಸರಳವಾದ ಸಾಲುಗಳನ್ನು ಹೊಂದಿದೆ. 490 ಲೀಟರ್ ವರೆಗೆ ಬೂಟ್ ಸಾಮರ್ಥ್ಯ ಸೇರಿದಂತೆ ಕ್ಯಾಬಿನ್‌ನಾದ್ಯಂತ ವೈರ್‌ಲೆಸ್ ಚಾರ್ಜಿಂಗ್ ಮತ್ತು ಸಾಕಷ್ಟು ತೆರೆದ ಸ್ಟೋರೇಜ್ ಸ್ಪೆಸ್ ಇದೆ ಎಂದು ಸ್ಕೋಡಾ ಹೇಳಿದೆ. ಸ್ಕೋಡಾ ಎಪಿಕ್ ಕಾನ್ಸೆಪ್ಟ್ ಮಾದರಿಯು 5-ಇಂಚಿನ ವರ್ಚುವಲ್ ಕಾಕ್‌ಪಿಟ್ ಮತ್ತು 13-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಪಡೆಯುತ್ತದೆ ಎಪಿಕ್ ಬೈ-ಡ್ರೈರಕ್ಷನಲ್ ಚಾರ್ಜಿಂಗ್ ಅನ್ನು ಬೆಂಬಲಿಸಲು ಸಾಧ್ಯವಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








