ಅತಿಕಡಿಮೆ ಬೆಲೆಯಲ್ಲಿ ಲಕ್ಷುರಿ ಫೀಚರ್ಸ್‌ನ ಸ್ಕೋಡಾ ಕಾರು: ಬುಕ್ಕಿಂಗ್, ವಿತರಣೆ ಮಾಹಿತಿ ಬಹಿರಂಗ

ಭಾರತೀಯ ಮಾರುಕಟ್ಟೆಯಲ್ಲಿ ಸ್ಪೋರ್ಟ್ ಯುಟಿಲಿಟಿ ವಾಹನಗಳಿಗೆ (ಎಸ್‍ಯುವಿ) ಹೆಚ್ಚಿನ ಬೇಡಿಕೆ ಪಡೆಯುತ್ತಿರುವಾ ಸ್ಕೋಡಾ ತನ್ನ ಬಹುನಿರೀಕ್ಷಿತ ಸ್ಕೋಡಾ ಕೈಲಾಕ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಸ್ಕೋಡಾ ಕೈಲಾಕ್ (Skoda Kylaq) ಸಬ್ 4-ಮೀಟರ್ ಎಸ್‍ಯುವಿ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.89 ಲಕ್ಷವಾಗಿದೆ. ಈ ಬಹುನಿರೀಕ್ಷಿತ ಸ್ಕೋಡಾ ಕೈಲಾಕ್ ಎಸ್‌ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಮುಂದಿನ ತಿಂಗಳು ಡಿಸೆಂಬರ್ 2 ರಂದು ಪ್ರಾರಂಭವಾಗಲಿದೆ. ಇನ್ನು ಈ ಸ್ಕೋಡಾ ಕೈಲಾಕ್ ಎಸ್‌ಯುವಿಯ ವಿತರಣೆಯು 2025ರ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ.

QB-A0-IN ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುವ ಕುಶಾಕ್ ಮತ್ತು ಸ್ಲಾವಿಯಾದಂತಹ ಜನಪ್ರಿಯ ಮಾದರಿಗಳನ್ನು ಸ್ಕೋಡಾ ಈಗಾಗಲೇ ಹೊಂದಿದೆ. ಈ ಪ್ಲಾಟ್‌ಫಾರ್ಮ್ ಅನ್ನು ಬಳಸುವ ಮೂರನೇ ಸ್ಕೋಡಾ ಕಾರು ಕೈಲಾಕ್ ಅಗಿದೆ. ಈ ಸ್ಕೋಡಾ ಕೈಲಾಕ್ ಎಸ್‌ಯುವಿ 446 ಲೀಟರ್ ಬೂಟ್ ಸ್ಪೇಸ್ ಸಾಮರ್ಥ್ಯವನ್ನು ಹೊಂದಿದ್ದು, ಈ ಎಸ್‍ಯುವಿಯ ಸೀಟುಗಳನ್ನು ಮಡಚಿದರೆ 1,265 ಲೀಟರ್‌ಗೆ ಬೂಟ್ ಸ್ಪೇಸ್ ಅನ್ನು ವಿಸ್ತರಿಸಬಹುದು. ಈ ಎಸ್‍ಯುವಿ 189mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

Skoda Kylaq

ಸ್ಕೋಡಾ ಕೈಲಾಕ್ ಹೊಸ ಎಸ್‍ಯುವಿಯು ಸ್ಕೋಡಾ ಬ್ರ್ಯಾಂಡ್‌ನ ಇತ್ತೀಚಿನ 'ಮಾಡರ್ನ್ ಸಾಲಿಡ್' ವಿನ್ಯಾಸ ಭಾಷೆಯ ಅಂಶಗಳನ್ನು ಒಳಗೊಂಡಿದೆ. ಕೈಲಾಕ್ ಕ್ಲೀನ್ ಲೈನ್‌ಗಳ ಜೊತೆ ಮುಂಭಾಗದ ಲ್ಯಾಂಪ್ ಗಳೊಂದಿಗೆ ಕುಶಾಕ್‌ನಂತೆ ಸ್ವಲ್ಪ ಕಾಣಿಸುತ್ತದೆ. ಈ ಎಸ್‍ಯುವಿಯ ಟ್ರೆಂಡಿಂಗ್ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಎಲ್ಇಡಿ ಡಿಆರ್ಎಲ್ ಅರೇಂಜ್ಮೆಂಟ್ ಅಪ್ ಟಾಪ್ ಮತ್ತು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಕೆಳ ಭಾಗದಲ್ಲಿ ಇದೆ. ಇದರೊಂದಿಗೆ ಅಲ್ಯೂಮಿನಿಯಂ-ಲುಕ್ ಸ್ಪಾಯ್ಲರ್‌ನೊಂದಿಗೆ ಎರಡು-ಟೋನ್ ಬಂಪರ್ ಸೇರಿವೆ.

ಇನ್ನು ಈ ಹೊಸ ಕೈಲಾಕ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಟೂ-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ಅನೇಕ ಅಂಶಗಳನ್ನು ಹಂಚಿಕೊಳ್ಳುತ್ತದೆ. ಇದು ನವೀಕರಿಸಿದ OS, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್ ಅನ್ನು ಸಹ ಒಳಗೊಂಡಿದೆ.

Skoda Kylaq

ಈ ಸ್ಕೋಡಾ ಕೈಲಾಕ್ ಎಸ್‍ಯುವಿಯಲ್ಲಿ ಸನ್‌ರೂಫ್ (ಸಿಂಗಲ್-ಪೇನ್), ಕೀಲೆಸ್ ಎಂಟ್ರಿ, ವೈರ್‌ಲೆಸ್ ಫೋನ್ ಚಾರ್ಜರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಮುಂಭಾಗದ ಸೀಟ್ ವೆಂಟಿಲೇಶನ್ ಮತ್ತು ಲೆಥೆರೆಟ್ ಅಪ್ಹೋಲ್‌ಸ್ಟರಿಗಳನ್ನು ಒಳಗೊಂಡಿದೆ. ಕೈಲಾಕ್ ಚಾಲಕನಿಗೆ ಮಾತ್ರವಲ್ಲದೆ ಮುಂಭಾಗದ ಪ್ರಯಾಣಿಕರಿಗೂ ಫಾರ್ವಡ್ ಸೀಟ್ ಹೊಂದಾಣಿಕೆಯನ್ನು ಹೊಂದಿದೆ.

ಇನ್ನು ಈ ಎಸ್‍ಯುವಿಯು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಬೋರ್ಡ್‌ನಾದ್ಯಂತ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ. ಸ್ಕೋಡಾ ಕೈಲಾಕ್ ಎಸ್‌ಯುವಿಯಲ್ಲಿ ಕುಶಾಕ್ ಮತ್ತು ಸ್ಲಾವಿಯಾದೊಂದಿಗೆ ಬಳಸಿದ ಅದೇ 1.0-ಲೀಟರ್ TSI ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

Skoda Kylaq

ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗುತ್ತದೆ. ಈ ಸ್ಕೋಡಾ ಕೈಲಾಕ್ ಎಸ್‍ಯುವಿಯು 10.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಕೈಲಾಕ್ ಎಸ್‍ಯುವಿಯು ಭಾರತದಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೊನೆಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಸ್ಕೋಡಾ ಈ ವರ್ಷದ ಫೆಬ್ರವರಿಯಲ್ಲಿ 'ನೇಮ್ ಯುವರ್ ಸ್ಕೋಡಾ' ಅಭಿಯಾನವನ್ನು ಪ್ರಾರಂಭಿಸಿದ್ದರು. ಇಂಗ್ಲಿಷ್ ವರ್ಣಮಾಲೆಯಲ್ಲಿ K ಯಿಂದ ಪ್ರಾರಂಭವಾಗುವ ಮತ್ತು Q ನೊಂದಿಗೆ ಕೊನೆಗೊಳ್ಳುವ ಹೆಸರನ್ನು ಸೂಚಿಸಲು ಕೇಳಲಾಯಿತು. ಈ ಅಭಿಯಾನದಲ್ಲಿ ಮೊಹಮ್ಮದ್ ಜಿಯಾದ್ ಅವರು ನೀಡಿದ 'ಕೈಲಾಕ್' ಹೆಸರೇ ಆಯ್ಕೆಯಾಗಿರುವುದು.

More from DriveSpark

Article Published On: Friday, November 8, 2024, 8:30 [IST]
English summary
New skoda kylaq suv bookings and delivery details
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+