ಸ್ಕೋಡಾ ಹೊಸ ಕಾರಿನ ಬೆಲೆ ಇಷ್ಟೇನಾ? ಪ್ರತಿ ಕಿ.ಮೀಗೆ ಕೇವಲ 24 ಪೈಸೆ ವೆಚ್ಚ ಅಷ್ಟೇ!

ಭಾರತದಲ್ಲಿ ಸ್ಪೋರ್ಟ್ ಯುಟಿಲಿಟಿ ವಾಹನಗಳಿಗೆ (ಎಸ್‍ಯುವಿ) ಹೆಚ್ಚಿನ ಬೇಡಿಕೆ ಪಡೆಯುತ್ತಿರುವಾ ಸ್ಕೋಡಾ ತನ್ನ ಬಹುನಿರೀಕ್ಷಿತ ಸ್ಕೋಡಾ ಕೈಲಾಕ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಸ್ಕೋಡಾ ಕೈಲಾಕ್ (Skoda Kylaq) ಎಸ್‍ಯುವಿಯ ಎಲ್ಲಾ ರೂಪಾಂತರಗಳ ಸಂಪೂರ್ಣ ಬೆಲೆ ವಿವರಗಳನ್ನು ಇತ್ತೀಚೆಗೆ ಬಹಿರಂಗಪಡಿಸಿತು. ಸ್ಕೋಡಾ ಕೈಲಾಕ್ ಎಸ್‍ಯುವಿಯ ಎಂಟ್ರಿ ಲೆವೆಲ್ ಕ್ಲಾಸಿಕ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.89 ಲಕ್ಷವಾದರೆ, ಟಾಪ್ ಸ್ಪೆಕ್ ಪ್ರೆಸ್ಟೀಜ್ ರೂಪಾಂತರದ ಬೆಲೆಯು ರೂ.14.40 ಲಕ್ಷವಾಗಿದೆ.

ಈ ಹೊಸ ಸ್ಕೋಡಾ ಕೈಲಾಕ್ ಎಸ್‍ಯುವಿಗಾಗಿ ಅಧಿಕೃತವಾಗಿ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತದೆ. ಹೊಸ ಸ್ಕೋಡಾ ಕೈಲಾಕ್ ಎಸ್‍ಯುವಿಯು ಭಾರತದಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೊನೆಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಈ ಸ್ಕೋಡಾ ಕೈಲಾಕ್ ಎಸ್‌ಯುವಿ ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್+ ಮತ್ತು ಪ್ರೆಸ್ಟೀಜ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

Skoda Kylaq

ಸ್ಕೋಡಾ ಮತ್ತು ಅದರ ಮೂಲ ಬ್ರ್ಯಾಂಡ್ ಫೋಕ್ಸ್‌ವ್ಯಾಗನ್‌ನಿಂದ ಕಾರುಗಳನ್ನು ಖರೀದಿಸಲು ಜನರು ಹಿಂಜರಿಯುವುದಕ್ಕೆ ಒಂದು ಕಾರಣವೆಂದರೆ ಆ ಕಾರುಗಳ ನಿರ್ವಹಣಾ ವೆಚ್ಚಗಳಿಂದಾಗಿ ಎಂದು ಹೇಳಬಹುದು. ಈ ವಿದೇಶಿ ಬ್ರಾಂಡ್ ಕಾರುಗಳಿಗೆ ನಿರ್ವಹಣಾ ವೆಚ್ಚ ದುಬಾರಿಯಾಗಿರುವುದರಿಂದ ಕಾರು ಪ್ರೇಮಿಗಳು ಕೂಡ ಎರಡೂ ಬಾರಿ ಯೋಚಿಸುತ್ತಾರೆ. ಆದರೆ ಇದೀಗ ಯಾವುದೇ ಟೆನ್ಷನ್ ಇಲ್ಲದೇ ಸ್ಕೋಡಾದ ಹೊಸ ಕಾರನ್ನು ತೆಗೆದುಕೊಳ್ಳಬಹುದು ಎಂದು ತಯಾರಕರು ಹೇಳುತ್ತಾರೆ.

ಈ ವಿಭಾಗದಲ್ಲಿ ಕೈಲಾಕ್ ಅತ್ಯಂತ ಕಡಿಮೆ ಬೆಲೆಯ ಕಾರು ಎಂದು ಸ್ಕೋಡಾ ಹೇಳಿಕೊಂಡಿದೆ. ಮೊದಲ 33,333 ಗ್ರಾಹಕರಿಗೆ 5 ವರ್ಷಗಳವರೆಗೆ ಪ್ರತಿ ಕಿ.ಮೀ.ಗೆ ನಿರ್ವಹಣಾ ವೆಚ್ಚ ರೂ 0.24 ಎಂದು ಸ್ಕೋಡಾ ಹೇಳಿಕೊಂಡಿದೆ. ಮೊದಲ 33333 ಗ್ರಾಹಕರು 3 ವರ್ಷಗಳ ಸ್ಟ್ಯಾಂಡರ್ಡ್ ಪ್ಯಾಕೇಜ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಇದು ನಿರ್ವಹಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Skoda Kylaq

800000 ಕಿಲೋಮೀಟರ್‌ಗಳ ಸಂಪೂರ್ಣವಾದ ಟೆಸ್ಟ್ ನಡೆಸಿ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿ ಸ್ಕೋಡಾ ಈ ಕಾರನ್ನು ಉತ್ತಮ ರೀತಿಯಲ್ಲಿ ಬಿಡುಗಡೆ ಮಾಡಿದೆ. ಇದು ಮುಖ್ಯವಾಗಿ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದೆ. ಇದಲ್ಲದೆ, ಈ ಕಾರಿನಲ್ಲಿ ಸ್ಥಳೀಯ ಘಟಕಗಳನ್ನು ಬಳಸಲಾಗುತ್ತದೆ. ಇದು ಬಿಡಿ ಭಾಗಗಳ ಲಭ್ಯತೆಯನ್ನು ಖಾತ್ರಿ ಪಡಿಸುತ್ತದೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಫೋಕ್ಸ್‌ವ್ಯಾಗನ್ ಗ್ರೂಪ್ ತನ್ನ ಇಂಡಿಯಾ 2.0 ಯೋಜನೆಯಡಿಯಲ್ಲಿ MQB A0 IN ಪ್ಲಾಟ್‌ಫಾರ್ಮ್‌ನೊಂದಿಗೆ ಗುರಿಯನ್ನು ಹೊಂದಿದೆ. ಸ್ಕೋಡಾ ಕೈಲಾಕ್ ಎಸ್‌ಯುವಿಯಲ್ಲಿ ಕುಶಾಕ್ ಮತ್ತು ಸ್ಲಾವಿಯಾದೊಂದಿಗೆ ಬಳಸಿದ ಅದೇ 1.0-ಲೀಟರ್ TSI ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Skoda Kylaq

ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗುತ್ತದೆ. ಸ್ಕೋಡಾ ಕೈಲಾಕ್ ಎಸ್‍ಯುವಿಯು 10.5 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವರೆಗೆ ವೇಗವನ್ನು ಪಡೆದುಕೊಳ್ಳುತ್ತದೆ. QB-A0-IN ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುವ ಕುಶಾಕ್ ಮತ್ತು ಸ್ಲಾವಿಯಾದಂತಹ ಜನಪ್ರಿಯ ಮಾದರಿಗಳನ್ನು ಸ್ಕೋಡಾ ಈಗಾಗಲೇ ಹೊಂದಿದೆ.

ಈ ಪ್ಲಾಟ್‌ಫಾರ್ಮ್ ಅನ್ನು ಬಳಸುವ ಮೂರನೇ ಸ್ಕೋಡಾ ಕಾರು ಕೈಲಾಕ್ ಅಗಿದೆ. ಸ್ಕೋಡಾ ಕೈಲಾಕ್ ಹೊಸ ಎಸ್‍ಯುವಿಯು ಸ್ಕೋಡಾ ಬ್ರ್ಯಾಂಡ್‌ನ ಇತ್ತೀಚಿನ 'ಮಾಡರ್ನ್ ಸಾಲಿಡ್' ವಿನ್ಯಾಸ ಭಾಷೆಯ ಅಂಶಗಳನ್ನು ಒಳಗೊಂಡಿದೆ. ಇನ್ನು ಎಸ್‍ಯುವಿಯು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಬೋರ್ಡ್‌ನಾದ್ಯಂತ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ.

More from DriveSpark

Article Published On: Wednesday, December 4, 2024, 14:16 [IST]
English summary
New skoda kylaq suv maintenance cost details
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+