ಹೊಸ ನವೀಕರಣಗಳೊಂದಿಗೆ ಹೊಸ ಸ್ಕೋಡಾ ಆಕ್ಟೀವಿಯಾ ಕಾರು ಅನಾವರಣ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ನವೀಕರಿಸಿದ ಸ್ಕೋಡಾ ಆಕ್ಟೀವಿಯಾ (New Skoda Octavia) ಕಾರನ್ನು ಅನಾವರಣಗೊಳಿಸಿದೆ. ಸ್ಖೋಡಾ ಆಕ್ಟೀವಿಯಾ ಎಂಬ ಜನಪ್ರಿಯ ಮಾದರಿಯು ಮಿಡ್-ಲೈಫ್ ಅಪ್‌ಡೇಟ್‌ ಅನ್ನು ಪಡೆದುಕೊಂಡಿದೆ. ಸ್ಕೋಡಾ ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಸ್ಕೋಡಾ ಆಕ್ಟೀವಿಯಾ ಸೆಡಾನ್‌ಗಳನ್ನು ಮಾರಾಟ ಮಾಡವಲ್ಲಿ ಯಶಸ್ವಿಯಾಗಿದೆ.

ಸ್ಕೋಡಾ ಆಕ್ಟೀವಿಯಾ ಕಟ್ಟುನಿಟ್ಟಾದ RDE ನಿಯಮಗಳಿಂದಾಗಿ ಭಾರತದಲ್ಲಿ ಈ ಮಾದರಿಯ ಸ್ಥಗಿತಗೊಳಿಸಿತು. ಆದರೆ ಈ ಹೊಸ ನವೀಕರಣಗಳೊಂದಿಗೆ ಇದನ್ನು ಮರಳಿ ತರುತ್ತಿದೆ. ಈ ಫೇಸ್‌ಲಿಫ್ಟೆಡ್ ಆಕ್ಟೀವಿಯಾ ರಿಫ್ರೆಶ್ ಮಾಡಿದ ವಿನ್ಯಾಸದೊಂದಿಗೆ ಸ್ಕೋಡಾ ಸರಣಿಯಲ್ಲಿ ಇದನ್ನು ಪ್ರತ್ಯೇಕಿಸುತ್ತದೆ. ಇದರ ಹೆಚ್ಚು ಕೋನೀಯ ಎಲ್ಇಡಿ ಹೆಡ್‌ಲೈಟ್‌ಗಳು, ಮುಂಭಾಗದ ಬಂಪರ್‌ನಲ್ಲಿ ಅಕ್ಸೆಟ್ ಅನ್ನು ಕ್ರೀಸ್‌ನ ಮೇಲೆ ಇರಿಸಲಾಗಿದೆ.

 Skoda Octavia

ಹೊಸ ಸ್ಕೋಡಾ ಆಕ್ಟೀವಿಯಾ ಕಾರು ಗಣನೀಯವಾಗಿ ನವೀಕರಣಗಳನ್ನು ನೋಡುತ್ತದೆ, ಅದರಲ್ಲೂ ವಿಶೇಷವಾಗಿ ಹೊಸ 13-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ನ ಸೇರ್ಪಡೆಯಾಗಿದೆ. ಈ ಸ್ಕ್ರೀನ್ ಫೋಕ್ಸ್‌ವ್ಯಾಗನ್ ಗಾಲ್ಫ್‌ನ ಇತ್ತೀಚಿನ ಅಪ್‌ಡೇಟ್‌ನೊಂದಿಗೆ ಹಂಚಿಕೊಳ್ಳಲಾದ ಆಯ್ಕೆಯ ವೈಶಿಷ್ಟ್ಯವಾಗಿದೆ. ಇದರ ವಾಯ್ಸ್ ಅಸಿಸ್ಟ್ ನಲ್ಲಿ ChatGPT ಎಐ ಸಂಯೋಜಿಸುತ್ತದೆ, ಬಳಕೆದಾರರ ಸಂವಹನವನ್ನು ಹೆಚ್ಚಿಸುತ್ತದೆ.

ಚಾರ್ಜಿಂಗ್ ಆಯ್ಕೆಗಳು ಗಮನಾರ್ಹ ಸುಧಾರಣೆಯನ್ನು ಕಂಡಿವೆ. 'ಫೋನ್ ಬಾಕ್ಸ್'ನ ಪರಿಚಯವು 15W ವರೆಗೆ ವೈರ್‌ಲೆಸ್ ಚಾರ್ಜಿಂಗ್ ಅನ್ನು ಅನುಮತಿಸುತ್ತದೆ. ಇನ್ನು ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಇದಲ್ಲದೆ, USB-C ಪೋರ್ಟ್‌ಗಳು ಈಗ 45W ಪವರ್ ಅನ್ನು ನೀಡುತ್ತವೆ. ಇದರೊಂದಿಗೆ ಹಲವು ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿವೆ.

 Skoda Octavia

ಈ ಹೊಸ ಸ್ಕೋಡಾ ಆಕ್ಟೀವಿಯಾ ಕಾರು 1.5-ಲೀಟರ್ ಎಂಜಿನ್ ಮತ್ತು ಮೈಲೇಜ್ ಹೆಚ್ಚಿಸಲು ಪರಿಷ್ಕರಿಸಿದ ಟರ್ಬೋಚಾರ್ಜರ್ ಅನ್ನು ಒಳಗೊಂಡಿದೆ. ಇದು 6-ಸ್ಫೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಆದರೆ ಏಳು-ಸ್ಫೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ನೊಂದಿಗೆ ಸಹ ಅಳವಡಿಸಬಹುದಾಗಿದೆ, 48V ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಅನ್ನು ಸಂಯೋಜಿಸುತ್ತದೆ.

ಆಕ್ಟೀವಿಯಾ ಪವರ್‌ಟ್ರೇನ್ ಲೈನ್‌ಅಪ್ ಸರಣಿಯು-ಟಾಪ್ ವಿಆರ್‌ಎಸ್ ಮಾದರಿಯೊಂದಿಗೆ ಪೂರ್ಣಗೊಳ್ಳುತ್ತದೆ, ಇದು ವಿಡಬ್ಲ್ಯೂ ಗಾಲ್ಫ್ ಜಿಟಿಐನಿಂದ ಟರ್ಬೋಚಾರ್ಜ್ಡ್ 2.0-ಲೀಟರ್ ಎಂಜಿನ್ ಅನ್ನು ಪಡೆದುಕೊಳ್ಳುತ್ತದೆ. ಈ ಸಂರಚನೆಯು ಏಳು-ವೇಗದ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎಂಜಿನ್ 263bhp ಮತ್ತು 370Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

 Skoda Octavia

ಈ ಹೊಸ ಸ್ಕೋಡಾ ಆಕ್ಟೀವಿಯಾ ಫೇಸ್‌ಲಿಫ್ಟ್ ಕಾರು ಎಸೆನ್ಸ್, ಸೆಲೆಕ್ಷನ್, ಸ್ಪೋರ್ಟ್‌ಲೈನ್ ಮತ್ತು ಆರ್‌ಎಸ್ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿರುತ್ತದೆ. 2024ರ ಸ್ಕೋಡಾ ಆಕ್ಟೀವಿಯಾ ಫೇಸ್‌ಲಿಫ್ಟ್ ಗಮನಾರ್ಹವಾಗಿ ಸುಧಾರಿತ ಸ್ಟೈಲಿಂಗ್, ವರ್ಧಿತ ಸುರಕ್ಷತೆ ಮತ್ತು ಆತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಮತ್ತಷ್ಟು ಪ್ರೀಮಿಯಂ ಆಗಿದೆ.

ಇನ್ನು ಸ್ಕೋಡಾ ಇಂಡಿಯಾ ತನ್ನ ಸ್ಕೋಡಾ ಸ್ಲಾವಿಯಾ ಮಿಡ್ ಸೈಜ್ ಸೆಡಾನ್‌ನ ಹೊಸ ಲಿಮಿಟೆಡ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿತು. ಈ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ ಎಂದು ಕರೆಯಲಾಗುವ ಈ ಹೊಸ ಲಿಮಿಟೆಡ್ ಎಡಿಷನ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.19.13 ಲಕ್ಷವಾಗಿದೆ. ವಿಶೇಷವಾಗಿ ಹೊಸ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ 500 ಯುನಿಟ್‌ಗಳು ಮಾತ್ರ ಮಾರಾಟವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, February 16, 2024, 16:12 [IST]
English summary
New skoda octavia revealed engine new tech details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+