ಸಖತ್ ಸ್ಟೈಲಿಶ್ ಲುಕ್‌ನ ಹೊಸ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ ವಿಶೇಷತೆಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಇಂಡಿಯಾ ತನ್ನ ಸ್ಕೋಡಾ ಸ್ಲಾವಿಯಾ ಮಿಡ್ ಸೈಜ್ ಸೆಡಾನ್‌ನ ಹೊಸ ಲಿಮಿಟೆಡ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿತು. ಈ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ (Skoda Slavia Style Edition) ಎಂದು ಕರೆಯಲಾಗುವ ಈ ಹೊಸ ಲಿಮಿಟೆಡ್ ಎಡಿಷನ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.19.13 ಲಕ್ಷವಾಗಿದೆ.

ವಿಶೇಷವಾಗಿ ಹೊಸ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ 500 ಯುನಿಟ್‌ಗಳು ಮಾತ್ರ ಮಾರಾಟವಾಗಲಿದೆ. ಇದು ಬಹು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬರುತ್ತದೆ ಮತ್ತು ಒಂದೇ ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಸ್ಕೋಡಾ ಸ್ಲಾವಿಯಾ ಸ್ಟೈಲ್ ಆವೃತ್ತಿಯು ಸೆಡಾನ್‌ನ ಟಾಪ್-ಆಫ್-ಲೈನ್ ಸ್ಟೈಲ್ ರೂಪಾಂತರವನ್ನು ಆಧರಿಸಿದೆ. ಇದು ಸಾಮಾನ್ಯ ಶೈಲಿಯ ರೂಪಾಂತರಕ್ಕಿಂತ ಸುಮಾರು 30,000 ರೂ. ದುಬಾರಿಯಾಗಿದೆ.

Skoda Slavia Style Edition

ಎಂಜಿನ್: ಹೊಸ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ ಮಾದರಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 150 PS ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಫೀಡ್ DSG ಮತ್ತು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಮುಂಭಾಗದ ವ್ಹೀಲ್ ಗಳಿಗೆ ಪವರ್ ರವಾನಿಸುತ್ತದೆ.

ಫೀಚರ್ಸ್: ಹೊಸ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ ಕಾರಿನಲ್ಲಿ Apple CarPlay ಮತ್ತು Android Auto ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಆಂಕರೇಜ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವು ಫೀಚರ್ಸ್ ಗಳನ್ನು ಹೊಂದಿವೆ. ಸ್ಲಾವಿಯಾ 5-ಸ್ಟಾರ್ ಗ್ಲೋಬಲ್ NCAP ರೇಟಿಂಗ್ ಅನ್ನು ಪಡೆದುಕೊಂಡಿದೆ, ಇದು ಮಾರಾಟದಲ್ಲಿರುವ ಭಾರತದಲ್ಲಿ ತಯಾರಿಸಿದ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.

Skoda Slavia Style Edition

ಬಣ್ಣಗಳ ಆಯ್ಕೆ: ಹೊಸ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್ ಮತ್ತು ಟೊರ್ನಾಡೋ ರೆಡ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಸ್ಟ್ಯಾಂಡರ್ಡ್ ಸ್ಕೋಡಾ ಸ್ಲಾವಿಯಾ 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೇಸ್‌ ಹೊಂದಿದೆ.

ವಿನ್ಯಾಸ: ಸ್ಲಾವಿಯಾ ಸ್ಟೈಲ್ ಎಡಿಷನ್ ಮಾದರಿಯು ಬ್ಲ್ಯಾಕ್ ಬಣ್ಣದ ಬಿ-ಪಿಲ್ಲರ್‌ಗಳು, ಬ್ಲ್ಯಾಕ್ ಮೀರರ್ ಕವರ್‌ಗಳು ಮತ್ತು ಬ್ಲ್ಯಾಕ್ ರೂಫ್ ಮೇಲೆ 'ಎಡಿಷನ್' ' ಬ್ಯಾಡ್ಜ್ ಅನ್ನು ಪಡೆಯುತ್ತದೆ. ಕ್ಯಾಬಿನ್ ಹೊಸ 'ಸ್ಲಾವಿಯಾ' ಬ್ರಾಂಡ್ ಸ್ಕಫ್ ಪ್ಲೇಟ್‌ಗಳನ್ನು ಪಡೆಯುತ್ತದೆ. ಇನ್ನು ಈ ಕಾರಿನ ಸ್ಟೀಯರಿಂಗ್ ವ್ಹೀಲ್ 'ಎಡಿಷನ್' ' ಬ್ಯಾಡ್ಜ್ ಅನ್ನು ಪಡೆಯುತ್ತದೆ. ಇನ್ನು ಇದರೊಂದಿಗೆ ಡ್ಯುಯಲ್ ಡ್ಯಾಶ್‌ಕ್ಯಾಮ್ ಮತ್ತು ಸ್ಕೋಡಾ ಲೋಗೋ ಪ್ರೊಜೆಕ್ಷನ್‌ನೊಂದಿಗೆ ಪಡಲ್ ಲ್ಯಾಂಪ್‌ಗಳನ್ನು ಹೊಂದಿದೆ.

ಹೊಸ ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ ಮಾದರಿಯ ಬಗ್ಗೆ ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಪೆಟ್ರ್ ಜನೆಬಾ ಮಾತನಾಡಿ, ಸ್ಲಾವಿಯಾ ಸ್ಟೈಲ್ ಆವೃತ್ತಿಯು ನಮ್ಮ ವಿವೇಚನಾಶೀಲ ಗ್ರಾಹಕರನ್ನು ಆಲಿಸುವ ಮತ್ತು ನಮ್ಮ ಗ್ರಾಹಕರಿಗೆ ಅತ್ಯಂತ ವಿಶೇಷವಾದ, ಆದರೆ ಹೆಚ್ಚಿನ ಮೌಲ್ಯದ ಉತ್ಪನ್ನವನ್ನು ನೀಡುವ ಮತ್ತೊಂದು ಉದಾಹರಣೆಯಾಗಿದೆ. ಇದು ನಮ್ಮ ಗ್ರಾಹಕರ ಅತ್ಯಂತ ಕೇಂದ್ರೀಕೃತ ಸೆಟ್‌ಗಾಗಿ ಬಹಳ ಸೀಮಿತ ಸಂಖ್ಯೆಯಲ್ಲಿ ಬರುತ್ತದೆ ಎಂದು ಹೇಳಿದರು.

ಈ ಕಾರಿನಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು ಇಎಸ್‌ಸಿ, ಇಡಿಎಸ್, ಟೈರ್ ಪ್ರೆಷರ್ ಮಾನಿಟರ್, ಹಿಲ್ ಹೋಲ್ಡ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ ಕೂಲಿಷನ್ ಬ್ರೇಕ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ರೈನ್ ಸೆನ್ಸಿಂಗ್ ವೈಪ್ಸ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ಹೊಂದಿವೆ. ಇನ್ನು ಸ್ತ್ಯಾಂಡರ್ಡ್ ಸ್ಕೋಡಾ ಸ್ಲಾವಿಯಾ ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, February 16, 2024, 11:58 [IST]
English summary
New skoda slavia style edition top things details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+