ಲ್ಯಾಂಬೋರ್ಗಿನಿ ಖರೀದಿಸಲಾಗುತ್ತಿಲ್ಲವೆಂದು ಕೊರಗಬೇಡಿ: ಶೋರೂಂ ತಲುಪಿದ ಟಾಟಾದ ಹೊಸ ಕಾರು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ತನ್ನ ಟಾಟಾ ಕರ್ವ್ (Tata Curvv) ಐಸಿಯೂ ಮತ್ತು ಇವಿ ರೂಪದಲ್ಲಿ ಬಿಡುಗಡೆ ಮಾಡುತ್ತಿವೆ. ಈ ಟಾಟಾ ಕರ್ವ್ ಎಲೆಕ್ಟ್ರಿಕ್ ಎಸ್‍ಯುವಿಯು ಆಗಸ್ಟ್ 7 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದ್ದು, ICE ಆವೃತ್ತಿಯ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಮಾದರಿಗಳು ಎಸ್‍ಯುವಿ ಕೂಪೆ ಬಾಡಿ ಸ್ಟೈಲ್ ಅನ್ನು ಹೊಂದಿದೆ. ಬಿಡುಗಡೆಗೆ ಮುನ್ನ ಈ ಹೊಸ ಟಾಟಾ ಕರ್ವ್ ಎಲೆಕ್ಟ್ರಿಕ್ ಎಸ್‍ಯುವಿಯು ದೇಶಾದ್ಯಂತ ಸ್ಥಳೀಯ ಡೀಲರ್‌ಶಿಪ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ.

ಟಾಟಾ ಕರ್ವ್‌ನ ಆಕರ್ಷಕ ವಿನ್ಯಾಸ, ಎಸ್‍ಯುವಿ ಕೂಪೆ ಡಿಸೈನ್ ಮಿಡ್‌ ಸೈಜ್ SUV ಮಾರುಕಟ್ಟೆಯಲ್ಲಿ ಕಂಡುಬರುವ ಬಾಕ್ಸಿ ವಿನ್ಯಾಸಕ್ಕೆ ವ್ಯತಿರಿಕ್ತವಾಗಿ, ಬಲವಾದ ಏರೋಡೈನಾಮಿಕ್ ಸ್ಟೈಲ್ ಹೊಂದಿದೆ. ಎತ್ತರದ ಸವಾರಿ ಅನುಭವ, ಕಠಿಣವಾದ ಕ್ಲಾಡಿಂಗ್ ಅದರ ಆಕರ್ಷಣೆಯನ್ನು ಹೆಚ್ಚಿಸಿವೆ. ಆಕರ್ಷಕ ರೂಫ್, ಅದರ ದೊಡ್ಡ ವೀಲ್‌ಗಳು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಕಾರಿಗೆ ಸಮತೋಲಿತ ನಿಲುವನ್ನು ನೀಡುತ್ತವೆ.

Tata Curvv EV

ಹೊಸ ಟಾಟಾ ಕರ್ವ್ ಎಸ್‍ಯುವಿ ಕೂಪ್‌ನ ಎಲೆಕ್ಟ್ರಿಕ್ ಆವೃತ್ತಿಯು ವರ್ಚುವಲ್ ಸನ್‌ರೈಸ್ ಮತ್ತು ಕರ್ವ್ ICE ಆವೃತ್ತಿಯು ಗೋಲ್ಡ್ ಎಸೆನ್ಸ್ ಎಂಬ ಎರಡು ಹೊಸ ಬಣ್ಣಗಳಲ್ಲಿ ಬರಲಿದೆ. ಲಾಂಗ್ ಡ್ರೈವ್‌ಗಳಿಗೆ ಹೋಗಲು ಇಷ್ಟಪಡುವ ಭಾರತೀಯ ಕುಟುಂಬಕ್ಕಾಗಿ ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಟಾಟಾ ತಿಳಿಸಿದೆ.

ಈ ಟಾಟಾ ಕರ್ವ್ ಎಲೆಕ್ಟ್ರಿಕ್ ಎಸ್‍ಯುವಿಯ ಸಿಗ್ನೇಚರ್ ವರ್ಚುವಲ್ ಸನ್‌ರೈಸ್ ಪೇಂಟ್ ಸ್ಕೀಮ್‌ ಅನ್ನು ಹೊಂದಿದೆ. ಕೂಪ್ ಸ್‍ಯುವಿಯ ಬಾಹ್ಯ ಮುಖ್ಯಾಂಶಗಳು ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ಬ್ಲ್ಯಾಕ್ ಕ್ಲಾಡಿಂಗ್, ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ LED ಲೈಟ್ ಬಾರ್‌ಗಳು, ಫಾಸಿಕ ಚಾರ್ಜಿಂಗ್ ಪೋರ್ಟ್, ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳು, ಫ್ಲೋಟಿಂಗ್ ರೂಫ್‌ಲೈನ್ ಮತ್ತು LED ಟೈಲ್‌ಲೈಟ್‌ಗಳನ್ನು ಹೊಂದಿವೆ

ಹೊಸ ಟಾಟಾ ಕರ್ವ್ ಇವಿಯಲ್ಲಿ ನೆಕ್ಸಾನ್, ಸಫಾರಿ ಮತ್ತು ಹ್ಯಾರಿಯರ್‌ನಂತೆಯೇ ವಿನ್ಯಾಸವನ್ನು ಹೊಂದಿರುತ್ತದೆ. ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಕರ್ವ್ ಇವಿ ಕಾರಿನಲ್ಲಿ ವೈರ್‌ಲೆಸ್ Android Auto ಮತ್ತು Apple CarPlay ಕನೆಕ್ಟಿವಿಟಿ, Arcade.EV ಮತ್ತು 15+ OTT ಅಪ್ಲಿಕೇಶನ್‌ಗಳ ಸಂಪೂರ್ಟ್ ಮತ್ತು JBL-ಮೂಲದ ಒಂಬತ್ತು ಸ್ಪೀಕರ್‌ಗಳೊಂದಿಗೆ 12-ಇಂಚಿನ Harman Kardon ಮೂಲದ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಪಡೆಯುತ್ತದೆ.

ಇನ್ನು ವೆಂಟಿಲೆಟಡ್ ಸೀಟುಗಳು, ಲೆಥೆರೆಟ್ ಅಂಶಗಳು, 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್ ಮತ್ತು ಮೂಡ್ ಲೈಟಿಂಗ್‌ನೊಂದಿಗೆ ಪನರೊಮಿಕ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ. ಟಾಟಾ ಕರ್ವ್ ಎಲೆಕ್ಟ್ರಿಕ್ ಮಾದರಿಯಲ್ಲಿ ಸುರಕ್ಷತಾ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಆರು ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳನ್ನು ಹೊಂದಿವೆ.

ಇದರೊಂದಿಗೆ 360-ಡಿಗ್ರಿ ಸರೌಂಡ್ ಕ್ಯಾಮೆರಾ, ಆಟೋ ಹೋಲ್ಡ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು, ಐಆರ್‌ಎ 2.0 ಸಂಪರ್ಕಿತ ತಂತ್ರಜ್ಞಾನ ಮತ್ತು ಲೆವೆಲ್ ADAS ಸೂಟ್ ಅನ್ನು ಹೊಂದಿದೆ. ಈ ಟಾಟಾ ಕರ್ವ್ ಇವಿ ಈಗಾಗಲೇ GNCAP ಮತ್ತು BNCAP ಕ್ರ್ಯಾಶ್ ಟೆಸ್ಟ್ ಗಳಿಗೆ ಒಳಗಾಗಿದೆ ಮತ್ತು ವಯಸ್ಕ ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳಾದ್ಯಂತ ಆಯ್ಕೆಗಳೊಂದಿಗೆ ನಮ್ಮ ಮಲ್ಟಿ ಪವರ್‌ಟ್ರೇನ್ ತಂತ್ರದ ಮುಂಚೂಣಿಯಲ್ಲಿ ಕರ್ವ್ ಇದೆ. ಟಾಟಾ ಕರ್ವ್ ಇವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಎಂಜಿ ZS ಇವಿ, ಮಹೀಂದ್ರಾ XUV400 , BYD ಅಟ್ಟೊ 3 ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, August 5, 2024, 19:23 [IST]
English summary
New tata curvv ev starts reaching dealerships ahead of launch
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+