ವಿಮಾನದಂತೆ ಸೌಕರ್ಯವಿರುವ ಹೊಸ ಟೊಯೊಟಾ ಕಾರು ಬಿಡುಗಡೆ: ಬೆಚ್ಚಿಬಿದ್ದ ಎದುರಾಳಿಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಒಂಬತ್ತನೇ ತಲೆಮಾರಿನ ಟೊಯೊಟಾ ಕ್ಯಾಮ್ರಿ (Toyota Camry) ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.48 ಲಕ್ಷವಾಗಿದೆ. ಟೊಯೊಟಾದ ಈ ಪ್ರೀಮಿಯಂ ಸೆಡಾನ್‌ನ ಈ ಜನರೇಷನ್ ಮಾದರಿಯು ಒಂದು ವರ್ಷದ ಹಿಂದೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡಿತ್ತು. ಈ ಪ್ರೀಮಿಯಂ ಸೆಡಾನ್ ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮುಂದುವರಿಯುತ್ತದೆ. ಈ ಹೊಸ ಸೆಡಾನ್ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಕ್ಯಾಮ್ರಿ ಕಾರಿನ ಬೆಲೆಯು ರೂ. 1.83 ಲಕ್ಷ ಹೆಚ್ಚಿದೆ.

ಟೊಯೊಟಾ ಕ್ಯಾಮ್ರಿ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಸಿ-ಕ್ಲಾಸ್ ಲಿಮೋಸಿನ್ ಮತ್ತು ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಒಂಬತ್ತನೇ ತಲೆಮಾರಿನ ಟೊಯೊಟಾ ಕ್ಯಾಮ್ರಿ ಕಾರು TNGA-K ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದ್ದು, ಇದು ರುತ್ವಾಕರ್ಷಣೆಯ ಕೇಂದ್ರ ಮತ್ತು ಸೀಟ್ ಸ್ಥಾನವನ್ನು ಕಡಿಮೆ ಮಾಡುವ ಮೂಲಕ ಸ್ಥಿರತೆ ಮತ್ತು ಡ್ರೈವಿಂಗ್ ಡೈನಾಮಿಕ್ಸ್ ಅನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.

Toyota Camry

ಇದರ ಪರಿಚಿತ ಸಿಲೂಯೆಟ್ ಅನ್ನು ಉಳಿಸಿಕೊಂಡು, ಕ್ಯಾಮ್ರಿಯ ವಿನ್ಯಾಸವನ್ನು ಸಾಕಷ್ಟು ರಿಫ್ರೆಶ್ ಮಾಡಲಾಗಿದೆ. ಈ ಪ್ರೀಮಿಯಂ ಸೆಡಾನ್ ಮುಂಭಾಗ ಹ್ಯಾಮರ್‌ಹೆಡ್ ವಿನ್ಯಾಸ ಶೈಲಿಯನ್ನು ಹೊಂದಿದೆ. ಈ ಪ್ರೀಮಿಯಂ ಸೆಡಾನ್ ಶಾರ್ಪ್ ನೋಸ್, ಸ್ಲಿಮ್ LED ಹೆಡ್‌ಲ್ಯಾಂಪ್‌ಗಳು ಮತ್ತು U- ಆಕಾರದ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಒಳಗೊಂಡಿದೆ. ಇನ್ನು ಈ ಕಾರಿನಲ್ಲಿ ಕಿರಿದಾದ ಗ್ರಿಲ್ ಹೆಡ್‌ಲೈಟ್‌ಗಳನ್ನು ಕನೆಕ್ಟ್ ಮಾಡಿದೆ.

ಇನ್ನು ಹಿಂದಿನ ಮಾದರಿಗೆ ಹೋಲಿಸಿದರೆ 'T' ಲೋಗೋ ಮೇಲಕ್ಕೆ ಚಲಿಸಿದೆ ಮತ್ತು ಬಂಪರ್‌ಗಳು ಬಹುತೇಕ ಲೆಕ್ಸಸ್‌ನಂತಹ ಅಂವಿಲ್ ಆಕಾರವನ್ನು ಹೊಂದಿವೆ. ಈ ಪ್ರೀಮಿಂ ಸೆಡಾನ್ ನಲ್ಲಿ 18-ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹೊಸ ಸಿ-ಆಕಾರದ LED ಟೈಲ್ ಲ್ಯಾಂಪ್‌ಗಳನ್ನು ಹೊಂದಿವೆ. ಇನ್ನು ಈ ಕಾರಿನ ಒಳಭಾಗದಲ್ಲಿ 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ 12.3-ಇಂಚಿನ ಟಚ್‌ಸ್ಕ್ರೀನ್ ಜೊತೆಗೆ ಇನ್ಫೋಟೈನ್‌ಮೆಂಟ್ ಗಾಗಿ ಪರಿಷ್ಕರಿಸಿದ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿದೆ.

Toyota Camry

ಇದರೊಂದಿಗೆ ವೈರ್‌ಲೆಸ್ Apple CarPlay ಮತ್ತು Android Auto ಎರಡನ್ನೂ ನೀಡುತ್ತದೆ. ಇದು ಒಂಬತ್ತು-ಸ್ಪೀಕರ್ JBL ಸೌಂಡ್ ಸಿಸ್ಟಮ್, 10-ಇಂಚಿನ ಹೆಡ್-ಅಪ್ ಡಿಸ್ ಪ್ಲೇ ಮತ್ತು ಡಿಜಿಟಲ್ ಕೀ ಕಾರ್ಯವನ್ನು ಸಹ ಪ್ಯಾಕ್ ಮಾಡುತ್ತದೆ. ಹಿಂಭಾಗದ ಸೀಟುಗಳು ಹಿಂಭಾಗದ ಸೆಂಟ್ರಲ್ ಕನ್ಸೋಲ್‌ನಲ್ಲಿ ಒರಗಿಕೊಳ್ಳುವ ಫಂಕ್ಷನ್ಸ್ ಮತ್ತು ಕಂಟ್ರೋಲ್ ಗಳನ್ನು ಪಡೆಯುತ್ತವೆ.

ಇನ್ನು ಹೆಚ್ಚಿನ ಸೌಕರ್ಯಕ್ಕಾಗಿ, ಡ್ಯುಯಲ್-ಜೋನ್ ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಹಿಂತೆಗೆದುಕೊಳ್ಳುವ ಸನ್‌ಶೇಡ್‌ನೊಂದಿಗೆ ಪನರೊಮಿಕ್ ಸನ್‌ರೂಫ್ ಅನ್ನು ನೀಡುತ್ತದೆ.ಇನ್ನು ಈ ಟೊಯೊಟಾದ ಸೇಫ್ಟಿ ಸೆನ್ಸ್ 3.0 ಸೂಟ್, ರಾಡಾರ್-ಆಧಾರಿತ ಕ್ರೂಸ್ ಕಂಟ್ರೋಲ್, ಲೇನ್ ಟ್ರೇಸಿಂಗ್ ಅಸಿಸ್ಟ್ ಮತ್ತು ರೋಡ್ ಸೈನ್ ಅಸಿಸ್ಟ್ ಜೊತೆಗೆ ಉತ್ತಮ ರಾತ್ರಿಯ ಗೋಚರತೆಗಾಗಿ ಆಟೋಮ್ಯಾಟಿಕ್ ಹೈ ಬೀಮ್‌ನೊಂದಿಗೆ ಬರುತ್ತದೆ.

Toyota Camry

ಈ ಪ್ರೀಮಿಯಂ ಟೊಯೊಟಾ ಕಾರಿನ ಇತರ ವೈಶಿಷ್ಟ್ಯಗಳಲ್ಲಿ 9 ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿವೆ. ಯಾಂತ್ರಿಕವಾಗಿ, ಹೊಸ ಕ್ಯಾಮ್ರಿ ತನ್ನ 2.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಂಡಿದೆ, ಆದರೆ ಇದು ಈಗ ಟೊಯೋಟಾದ ಐದನೇ ತಲೆಮಾರಿನ ಹೈಬ್ರಿಡ್ ಸಿಸ್ಟಮ್ (THS 5) ನೊಂದಿಗೆ ಬಂದಿದೆ.

ಈ ನವೀಕರಿಸಿದ ಸೆಟಪ್ ಸಂಯೋಜಿತ ಪವರ್ ಉತ್ಪಾದನೆಯಲ್ಲಿ 4 ಪ್ರತಿಶತದಷ್ಟು ಹೆಚ್ಚಳವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ ಮತ್ತು ಒಟ್ಟು 230hp ಉತ್ಪಾದನೆಯನ್ನು ಹೊಂದಿದೆ. ಇದು ಹಿಂದಿನ ಮಾದರಿಗಿಂತ 12hp ಪವರ್ ಅನ್ನು ಹೊಂದಿದೆ. ಇದು ಮೈಲೇಜ್ ಕೂಡ ಹೆಚ್ಚಿಸಲಿದೆ. ಇತರ ಹೈಬ್ರಿಡ್‌ಗಳಂತೆ, ಕ್ಯಾಮ್ರಿಯು eCVT ಗೇರ್‌ಬಾಕ್ಸ್ ಅನ್ನು ಬಳಸುತ್ತದೆ.

More from DriveSpark

Article Published On: Wednesday, December 11, 2024, 15:56 [IST]
English summary
New toyota camry launched price details
Read more on toyota india new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+