Toyota: ಹೊಸ ಟೊಯೊಟಾ ಕಾರಿನ ಬಿಡುಗಡೆಗೆ ದಿನಾಂಕ ನಿಗದಿ.. ಯಾವುದು?

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಗ್ಲಾನ್ಜಾ, ಇನ್ನೋವಾ, ಅರ್ಬನ್ ಕ್ರೂಸರ್ ಹೈರಿಡರ್, ಹಿಲಕ್ಸ್ ಮತ್ತು ಅರ್ಬನ್ ಕ್ರೂಸರ್ ಟೈಸರ್ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಕಂಪನಿಯು ಹೊಚ್ಚ ಹೊಸ ಕಾರಿನ ಬಿಡುಗಡೆಗೆ ದಿನಾಂಕವನ್ನು ನಿಗದಿಪಡಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಭಾರತದಲ್ಲಿ ಮಾರುಕಟ್ಟೆಯಲ್ಲಿ ನೂತನ ಪ್ರೀಮಿಯಂ ಸೆಡಾನ್ ಟೊಯೊಟಾ ಕ್ಯಾಮ್ರಿ (Toyota Camry) ಡಿಸೆಂಬರ್ 11 ರಂದು ಮಾರಾಟಕ್ಕೆ ಬರಲಿದೆ. ಈಗಾಗಲೇ ಜಾಗತಿಕವಾಗಿಯೂ ಖರೀದಿಗೆ ಲಭ್ಯವಿದೆ. ಈ 9ನೇ ತಲೆಮಾರಿನ (9th-Generation) ಕ್ಯಾಮ್ರಿ ಸೆಡಾನ್ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಇಂಗ್ಲಿಷ್ ಭಾಷೆಯ 'ಯು' ಅಕ್ಷಕರಕ್ಕೆ ಹೋಲಿಕೆಯಾಗುವ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್ಇಡಿ ಡಿಆರ್‌ಎಲ್‌ಗಳನ್ನು ಪಡೆದಿದೆ. ಈ ಕಾರಿನಲ್ಲಿ 5 ಜನರು ಓಡಾಟ ನಡೆಸಬಹುದು.

New Toyota Camry Sedan Launch In December 11 India

ಈ ಹೊಸ ಟೊಯೊಟಾ ಕ್ಯಾಮ್ರಿ ಕಾರು 2.5-ಲೀಟರ್ 4-ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಫ್ರಂಟ್ ವೀಲ್ ಡ್ರೈವ್ ತಂತ್ರಜ್ಞಾನ ಹೊಂದಿರುವ ಮಾದರಿ (ಮಾಡೆಲ್), 222 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು ಆಲ್ ವೀಲ್ ಡ್ರೈವ್ ತಂತ್ರಜ್ಞಾನ ಒಳಗೊಂಡಿರುವ ಮಾದರಿ, 229 ಬಿಹೆಚ್‍ಪಿ ಅಶ್ವ ಶಕ್ತಿ ಉತ್ಪಾದಿಸುತ್ತದೆ.

ನೂತನ ಟೊಯೊಟಾ ಕ್ಯಾಮ್ರಿ ಸೆಡಾನ್ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7.0-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜಿಂಗ್, 9-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಮ್, ಯುಎಸ್‌‍ಬಿ-ಸಿ ಚಾರ್ಜಿಂಗ್ ಪೋರ್ಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಒಳಗೊಂಡಿದೆ.

New Toyota Camry Sedan Launch In December 11 India

ಪ್ರಸ್ತುತ ದೇಶೀಯ ಗ್ರಾಹಕರ ಖರೀದಿಗೆ ದೊರೆಯುವ 'ಟೊಯೊಟಾ ಕ್ಯಾಮ್ರಿ' ಕಾರು ರೂ.46.17 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. ಈ ಸೆಡಾನ್‌ನ್ನು ಇವತ್ತು ಬುಕ್ಕಿಂಗ್ ಮಾಡಿದರೂ 1 ತಿಂಗಳ ಬಳಿಕ ವಿತರಣೆ ಮಾಡಲಾಗುತ್ತದೆ. ಆಟಿಟ್ಯೂಡ್ ಬ್ಲ್ಯಾಕ್, ಪ್ಲಾಟಿನಂ ವೈಟ್ ಪರ್ಲ್, ಗ್ರ್ಯಾಫೈಟ್ ಮೆಟಾಲಿಕ್, ರೆಡ್ ಮೈಕಾ ಮತ್ತು ಸಿಲ್ವರ್ ಮೆಟಾಲಿಕ್ ಒಳಗೊಂಡಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.

ಈ ಕಾರು 2.5-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇದು 218 ಪಿಎಸ್ ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹೊರಹಾಕುತ್ತದೆ. ಜೊತೆಗೆ ಇಸಿವಿಟಿ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. ಸ್ಪೋರ್ಟ್, ಇಕೋ ಮತ್ತು ನಾರ್ಮಲ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. 16 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

New Toyota Camry Sedan Launch In December 11 India

ದೇಶದ ಶ್ರೀಮಂತ ಖರೀದಿದಾರರಿಗೆ 'ಟೊಯೊಟಾ ಕ್ಯಾಮ್ರಿ' ಇಷ್ಟದ ಸೆಡಾನ್ ಆಗಿದೆ. ಪ್ರಮುಖವಾಗಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (7-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್, 3-ಝೋನ್ ಕ್ಲೇಮೇಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್‌ಪ್ಲೇ ಹಾಗೂ ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸಲಿದೆ. ಸುರಕ್ಷತೆಯ ದೃಷ್ಟಿಯಿಂದ 9 - ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಪಾರ್ಕಿಂಗ್ ಅಸಿಸ್ಟ್ ಹಾಗೂ ರೈನ್ ಸೆನ್ಸಿಂಗ್ ವೈಪರ್‌ನಂತಹ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, November 18, 2024, 17:23 [IST]
English summary
New toyota camry sedan launch december 11 in india
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+