ವಿಮಾನದಂತೆ ಸೌಕರ್ಯವಿರುವ ಹೊಸ ಟೊಯೊಟಾ ಕಾರಿನ ವಿಶೇಷತೆಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಹೊಸ ತಲೆಮಾರಿನ ಟೊಯೊಟಾ ಕ್ಯಾಮ್ರಿ (Toyota Camry) ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.48 ಲಕ್ಷವಾಗಿದೆ. ಟೊಯೊಟಾದ ಈ ಪ್ರೀಮಿಯಂ ಸೆಡಾನ್‌ನ ಈ ಜನರೇಷನ್ ಮಾದರಿಯು ಒಂದು ವರ್ಷದ ಹಿಂದೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡಿತ್ತು. ಈ ಪ್ರೀಮಿಯಂ ಸೆಡಾನ್ ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮುಂದುವರಿಯುತ್ತದೆ. ಈ ಹೊಸ ಸೆಡಾನ್ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಕ್ಯಾಮ್ರಿ ಕಾರಿನ ಬೆಲೆಯು ರೂ.1.83 ಲಕ್ಷವರೆಗೆ ಹೆಚ್ಚಾಗಿದೆ.

ಟೊಯೊಟಾ ಕ್ಯಾಮ್ರಿ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಸಿ-ಕ್ಲಾಸ್ ಲಿಮೋಸಿನ್ ಮತ್ತು ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಒಂಬತ್ತನೇ ತಲೆಮಾರಿನ ಟೊಯೊಟಾ ಕ್ಯಾಮ್ರಿ ಕಾರು TNGA-K ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದ್ದು, ಇದು ಗುರುತ್ವಾಕರ್ಷಣೆಯ ಕೇಂದ್ರ ಮತ್ತು ಸೀಟ್ ಸ್ಥಾನವನ್ನು ಕಡಿಮೆ ಮಾಡುವ ಮೂಲಕ ಸ್ಥಿರತೆ ಮತ್ತು ಡ್ರೈವಿಂಗ್ ಡೈನಾಮಿಕ್ಸ್ ಅನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಈ ಪ್ರೀಮಿಯಂ ಜಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Toyota Camry

ವಿನ್ಯಾಸ: ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಪರಿಚಿತ ಸಿಲೂಯೆಟ್ ಅನ್ನು ಉಳಿಸಿಕೊಂಡು, ಕ್ಯಾಮ್ರಿಯ ವಿನ್ಯಾಸವನ್ನು ಸಾಕಷ್ಟು ರಿಫ್ರೆಶ್ ಮಾಡಲಾಗಿದೆ. ಈ ಪ್ರೀಮಿಯಂ ಸೆಡಾನ್ ಮುಂಭಾಗ ಹ್ಯಾಮರ್‌ಹೆಡ್ ವಿನ್ಯಾಸ ಶೈಲಿಯನ್ನು ಹೊಂದಿದೆ. ಈ ಪ್ರೀಮಿಯಂ ಸೆಡಾನ್ ಶಾರ್ಪ್ ನೋಸ್, ಸ್ಲಿಮ್ LED ಹೆಡ್‌ಲ್ಯಾಂಪ್‌ಗಳು ಮತ್ತು U- ಆಕಾರದ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಒಳಗೊಂಡಿದೆ. ಇನ್ನು ಈ ಕಾರಿನಲ್ಲಿ ಕಿರಿದಾದ ಗ್ರಿಲ್ ಹೆಡ್‌ಲೈಟ್‌ಗಳನ್ನು ಕನೆಕ್ಟ್ ಮಾಡಿದೆ.

ಇನ್ನು ಹಿಂದಿನ ಮಾದರಿಗೆ ಹೋಲಿಸಿದರೆ 'T' ಲೋಗೋ ಮೇಲಕ್ಕೆ ಚಲಿಸಿದೆ ಮತ್ತು ಬಂಪರ್‌ಗಳು ಬಹುತೇಕ ಲೆಕ್ಸಸ್‌ನಂತಹ ಅಂವಿಲ್ ಆಕಾರವನ್ನು ಹೊಂದಿವೆ. ಈ ಪ್ರೀಮಿಂ ಸೆಡಾನ್ ನಲ್ಲಿ 18-ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹೊಸ ಸಿ-ಆಕಾರದ LED ಟೈಲ್ ಲ್ಯಾಂಪ್‌ಗಳನ್ನು ಹೊಂದಿವೆ. ಒಟ್ಟಾರೆಯಾಗಿ ಈ ಪ್ರೀಮಿಯಂ ಕಾರು ಲಕ್ಷುರಿ ಲುಕ್ ಅನ್ನು ಹೊಂದಿದೆ.

Toyota Camry

ಇಂಟಿರಿಯರ್: ಟೊಯೊಟಾ ಕ್ಯಾಮ್ರಿ ಕಾರಿನ ಒಳಭಾಗದಲ್ಲಿ 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ 12.3-ಇಂಚಿನ ಟಚ್‌ಸ್ಕ್ರೀನ್ ಜೊತೆಗೆ ಇನ್ಫೋಟೈನ್‌ಮೆಂಟ್ ಗಾಗಿ ಪರಿಷ್ಕರಿಸಿದ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಒಳಗೊಂಡಿದೆ. ಇದರೊಂದಿಗೆ ವೈರ್‌ಲೆಸ್ Apple CarPlay ಮತ್ತು Android Auto ಎರಡನ್ನೂ ನೀಡುತ್ತದೆ. ಇದು ಒಂಬತ್ತು-ಸ್ಪೀಕರ್ JBL ಸೌಂಡ್ ಸಿಸ್ಟಮ್, 10-ಇಂಚಿನ ಹೆಡ್-ಅಪ್ ಡಿಸ್ ಪ್ಲೇ ಮತ್ತು ಡಿಜಿಟಲ್ ಕೀ ಕಾರ್ಯವನ್ನು ಸಹ ಪ್ಯಾಕ್ ಮಾಡುತ್ತದೆ.

ಹಿಂಭಾಗದ ಸೀಟುಗಳು ಹಿಂಭಾಗದ ಸೆಂಟ್ರಲ್ ಕನ್ಸೋಲ್‌ನಲ್ಲಿ ಒರಗಿಕೊಳ್ಳುವ ಫಂಕ್ಷನ್ಸ್ ಮತ್ತು ಕಂಟ್ರೋಲ್ ಗಳನ್ನು ಪಡೆದುಕೊಳ್ಳುತ್ತದೆ. ಇನ್ನು ಹೆಚ್ಚಿನ ಸೌಕರ್ಯಕ್ಕಾಗಿ, ಡ್ಯುಯಲ್-ಜೋನ್ ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಹಿಂತೆಗೆದುಕೊಳ್ಳುವ ಸನ್‌ಶೇಡ್‌ನೊಂದಿಗೆ ಪನರೊಮಿಕ್ ಸನ್‌ರೂಫ್ ಅನ್ನು ನೀಡುತ್ತದೆ.ಇನ್ನು ಈ ಟೊಯೊಟಾದ ಸೇಫ್ಟಿ ಸೆನ್ಸ್ 3.0 ಸೂಟ್, ರಾಡಾರ್-ಆಧಾರಿತ ಕ್ರೂಸ್ ಕಂಟ್ರೋಲ್, ಲೇನ್ ಟ್ರೇಸಿಂಗ್ ಅಸಿಸ್ಟ್ ಮತ್ತು ರೋಡ್ ಸೈನ್ ಅಸಿಸ್ಟ್ ಜೊತೆಗೆ ಉತ್ತಮ ರಾತ್ರಿಯ ಗೋಚರತೆಗಾಗಿ ಆಟೋಮ್ಯಾಟಿಕ್ ಹೈ ಬೀಮ್‌ನೊಂದಿಗೆ ಬರುತ್ತದೆ.

Toyota Camry

ಎಂಜಿನ್: ಹೊಸ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ 2.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಂಡಿದೆ, ಆದರೆ ಇದು ಈಗ ಟೊಯೋಟಾದ ಐದನೇ ತಲೆಮಾರಿನ ಹೈಬ್ರಿಡ್ ಸಿಸ್ಟಮ್ (THS 5) ನೊಂದಿಗೆ ಬಂದಿದೆ. ಈ ನವೀಕರಿಸಿದ ಸೆಟಪ್ ಸಂಯೋಜಿತ ಪವರ್ ಉತ್ಪಾದನೆಯಲ್ಲಿ 4 ಪ್ರತಿಶತದಷ್ಟು ಹೆಚ್ಚಳವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ ಮತ್ತು ಒಟ್ಟು 230hp ಉತ್ಪಾದನೆಯನ್ನು ಹೊಂದಿದೆ. ಇದು ಹಿಂದಿನ ಮಾದರಿಗಿಂತ 12hp ಪವರ್ ಅನ್ನು ಹೊಂದಿದೆ.

ಇದು ಮೈಲೇಜ್ ಕೂಡ ಹೆಚ್ಚಿಸಲಿದೆ. ಇತರ ಹೈಬ್ರಿಡ್‌ಗಳಂತೆ, ಕ್ಯಾಮ್ರಿಯು eCVT ಗೇರ್‌ಬಾಕ್ಸ್ ಅನ್ನು ಬಳಸುತ್ತದೆ. ಇನ್ನು ಈ ಪ್ರೀಮಿಯಂ ಟೊಯೊಟಾ ಕಾರಿನ ಸುರಕ್ಷತಾ ವೈಶಿಷ್ಟ್ಯಗಳಲ್ಲಿ 9 ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿವೆ. ಇನ್ನು ಈ ಕಾರಿನಲ್ಲಿ ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿರುವ ಪ್ರೀಮಿಯಂಸೆಡಾನ್ ಆಗಿದೆ.

More from DriveSpark

Article Published On: Thursday, December 12, 2024, 8:30 [IST]
English summary
New toyota camry sedan top things
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+