ಬರುತ್ತಿದೆ ಹೊಸ ಟೊಯೊಟಾ ಎಲೆಕ್ಟ್ರಿಕ್ ಕಾರು: ಟಾಟಾಗೆ ಆತಂಕ ಶುರು
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ಮಾರುತಿ eVX-ಆಧಾರಿತ ಅರ್ಬನ್ ಎಸ್‍ಯುವಿ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸಿದೆ ಒಂದು ವರ್ಷದ ಬಳಿಕ ಉತ್ಪಾದನಾ ಆವೃತ್ತಿಯಾದ ಅರ್ಬನ್ ಕ್ರೂಸರ್ ಇವಿಯನ್ನು ಅನಾವರಣಗೊಳಿಸಿದೆ. ಟೊಯೊಟಾ ಅರ್ಬನ್ ಕ್ರೂಸರ್ ಇವಿ (Toyota Urban Cruiser EV) ಸ್ವಲ್ಪ ಚಿಕ್ಕದಾಗಿದೆ ಮತ್ತು ವಿನ್ಯಾಸವನ್ನು ಹೊರತುಪಡಿಸಿ, ಇದು ಇತ್ತೀಚೆಗೆ ಬಹಿರಂಗಪಡಿಸಿದ ಸುಜುಕಿ ಇ ವಿಟಾರಾದೊಂದಿಗೆ ಬಹಳಷ್ಟು ಅಂಶಗಳನ್ನು ಹಂಚಿಕೊಳ್ಳುತ್ತದೆ. ಇದು ಮಾರುತಿ ಸುಜುಕಿಯ ಬ್ಯಾಡ್ಜ್‌ನೊಂದಿಗೆ ಭಾರತಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ.
ಟೊಯೊಟಾ ಅರ್ಬನ್ ಕ್ರೂಸರ್ ಇವಿ ಕಾನ್ಸೆಪ್ಟ್ ಮಾದರಿಯಿಂದ ಅನೇಕ ವಿವರಗಳನ್ನು ಅಂತಿಮ ಉತ್ಪಾದನಾ ಮಾದರಿಗಾಗಿ ಟೋನ್ ಮಾಡಲಾಗಿದೆ. ಈ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಇವಿ ಗ್ರಿಲ್ ಮತ್ತು ಹೆಡ್‌ಲೈಟ್‌ಗಳು ಇನ್ನೂ ತೆಳುವಾದ ಯುನಿಟ್ ಗಳಾಗಿದ್ದರೂ, ಕಾನ್ಸೆಪ್ಟ್ ಮಾದರಿಯಲ್ಲಿ ಕಂಡುಬರುವಂತೆ ಅವು ಸ್ಲಿಮ್ ಆಗಿರುವುದಿಲ್ಲ ಮತ್ತು ಮುಂಭಾಗದ ಬಂಪರ್ ಕಡಿಮೆ ಕೋನೀಯ ರೇಡಿಯೇಟರ್ ವಿಭಾಗವನ್ನು ಸಹ ಅಳವಡಿಸಿಕೊಂಡಿದೆ.

ಈ ಎಲೆಕ್ಟ್ರಿಕ್ ಎಸ್‍ಯುವಿ ಬದಿಗಳಲ್ಲಿ, ಇ-ಎಸ್‍ಯುವಿಯ ಹೆಚ್ಚಿನ ವಿವರಗಳನ್ನು ಕಾನ್ಸೆಪ್ಟ್ ರೀತಿಯಲ್ಲೇ ಉಳಿಸಿಕೊಳ್ಳಲಾಗಿದೆ. ಈ ಟೊಯೊಟಾ ಅರ್ಬನ್ ಕ್ರೂಸರ್ ಇವಿ ಎಸ್‍ಯುವಿಯಲ್ಲಿ 18-ಇಂಚಿನ ಅಥವಾ 19-ಇಂಚಿನ ಏರೋ-ಆಪ್ಟಿಮೈಸ್ಡ್ ವ್ಹೀಲ್ ಗಳೊಂದಿಗೆ ಬರುತ್ತದೆ. ಇನ್ನು ಇ ವಿಟಾರಾದಂತೆ, ಅರ್ಬನ್ ಕ್ರೂಸರ್ ಇವಿಯು ಸಿ-ಪಿಲ್ಲರ್‌ನಲ್ಲಿ ಹಿಂಭಾಗದ ಡೋರ್ ಹ್ಯಾಂಡ್ ಗಳನ್ನು ಹೊಂದಿದೆ.
ಟೊಯೊಟಾ ಅರ್ಬನ್ ಕ್ರೂಸರ್ ಇವಿ ಮಾದರಿಯ ಹಿಂಭಾಗದಲ್ಲಿ ಟೊಯೊಟಾದ ಹೊಸ 'ಬಾರ್ನ್-ಇವಿ' ಕಾನ್ಸೆಪ್ಟ್ ಅನ್ನು ಟೈಲ್-ಲೈಟ್‌ಗಳು ಮತ್ತು ರೂಫ್ ಸ್ಪಾಯ್ಲರ್‌ನ ಟೋನ್-ಡೌನ್ ಮತ್ತು ಉದ್ದವಾದ ಆವೃತ್ತಿಯನ್ನು ಮತ್ತು ದಪ್ಪನಾದ ಹಿಂಭಾಗದ ಬಂಪರ್ ಅನ್ನು ಒಳಗೊಂಡಿದೆ. ಇನ್ನು ಹಿಂದಿನ ಶೈಲಿಯಲ್ಲಿ, ಅರ್ಬನ್ ಕ್ರೂಸರ್ ಇ ವಿಟಾರಾದೊಂದಿಗೆ ಗಮನಾರ್ಹವಾಗಿ ಹೋಲಿಕೆಯನ್ನು ಹೊಂದಿದೆ.

ಇನ್ನು ಡ್ಯುಯಲ್-ಟೋನ್ ಡಿಸ್ ಪ್ಲೇ ಗಳಿಗಿಂತ ವ್ಯತಿರಿಕ್ತ ಬ್ಲ್ಯಾಕ್ ರೂಫ್ ಅನ್ನು ಹೊಂದಿದೆ. ಈ ಕಾನ್ಸೆಪ್ಟ್ ಮಾದರಿಯು 4,285mmಒಟ್ಟಾರೆ ಉದ್ದ ಮತ್ತು 1,800mm ಅಗಲವನ್ನು ಹೊಂದಿದೆ. ಇನ್ನು ಈ ಟೊಯೊಟಾ ಎಲೆಕ್ಟ್ರಿಕ್ ಎಸ್‍ಯುವಿಯು 2,700mm ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಕುತೂಹಲಕಾರಿಯಾಗಿ, ಈ ಆಯಾಮಗಳು ಅರ್ಬನ್ ಕ್ರೂಸರ್ ಇವಿಯನ್ನು ಸುಜುಕಿ ಇ ವಿಟಾರಾಕ್ಕಿಂತ ಸ್ವಲ್ಪ ದೊಡ್ಡದಾಗಿಸುತ್ತವೆ
ಇನ್ನು ಈ ಟೊಯೊಟಾ ಅರ್ಬನ್ ಕ್ರೂಸರ್ ಇವಿಯು 5.2 ಮೀಟರ್ ಟರ್ನಿಂಗ್ ರೇಡಿಯಸ್ ಅನ್ನು ಹೇಳಿಕೊಂಡಿದೆ. ಈ ಟೊಯೋಟಾ ಇ-ಎಸ್‌ಯುವಿ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್‌ನಿಂದ ಬ್ಯಾಟರಿ ಪ್ಯಾಕ್ ಆಯ್ಕೆಗಳು ಮತ್ತು ಮೋಟಾರ್‌ಗಳವರೆಗೆ ಇ ವಿಟಾರಾದೊಂದಿಗೆ ಬಹಳಷ್ಟು ಹಂಚಿಕೊಳ್ಳುತ್ತದೆ . ಇನ್ನು ಅರ್ಬನ್ ಕ್ರೂಸರ್ ಇವಿಯು 49kWh ಮತ್ತು 61kWh ಸಾಮರ್ಥ್ಯದೊಂದಿಗೆ ಲಿಥಿಯಂ-ಐರನ್ ಫಾಸ್ಫೇಟ್ ಶೆಲ್ ಗಳನ್ನು ಹೊಂದಿದೆ.

ಚಿಕ್ಕ ಬ್ಯಾಟರಿ ಹೊಂದಿರುವ ಅರ್ಬನ್ ಕ್ರೂಸರ್‌ಗಳು ಮುಂಭಾಗದ ಆಕ್ಸಲ್-ಮೌಂಟೆಡ್ 144hp, 189Nm ಮೋಟರ್ ಅನ್ನು ಹೊಂದಿರುತ್ತದೆ, ಆದರೆ ದೊಡ್ಡ ಬ್ಯಾಟರಿಯು 174hp ಮತ್ತು 189Nm ಮುಂಭಾಗದ ಮೋಟಾರ್ ಅನ್ನು ಪ್ಯಾಕ್ ಮಾಡುತ್ತದೆ. ಇ ವಿಟಾರಾದಂತೆ, AWD ಆವೃತ್ತಿಯು ಸಹ ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ 61kWh ಬ್ಯಾಟರಿಯಿಂದ ಚಾಲಿತವಾಗಿದೆ ಮತ್ತು ಹೆಚ್ಚುವರಿ 65hp ಹಿಂಭಾಗದ ಆಕ್ಸಲ್-ಮೌಂಟೆಡ್ ಮೋಟಾರ್‌ನೊಂದಿಗೆ ಬರುತ್ತದೆ.
AWD ರೂಪದಲ್ಲಿ ಅರ್ಬನ್ ಕ್ರೂಸರ್ ಒಟ್ಟು 184hp ಮತ್ತು 300Nm ಟಾರ್ಕ್ ಅನ್ನು ಹೊಂದಿದೆ. ಈ ಆವೃತ್ತಿಗಳು ಹಿಲ್-ಡಿಸೆಂಟ್ ಕಂಟ್ರೋಲ್ ಮತ್ತು 'ಟ್ರಯಲ್ ಮೋಡ್' ಅನ್ನು ಸಹ ಪಡೆಯುತ್ತವೆ, ಇದು ಒರಟು-ರಸ್ತೆಯ ಸಮಯದಲ್ಲಿ ಸಹಾಯ ಮಾಡುತ್ತದೆ. ಅರ್ಬನ್ ಕ್ರೂಸರ್ ಇವಿಯ ಕ್ಯಾಬಿನ್ ಡ್ಯಾಶ್‌ಬೋರ್ಡ್ ಲೇಔಟ್ ಮತ್ತು ಟು-ಸ್ಪೋಕ್ ಸ್ಟೀರಿಂಗ್ ವೀಲ್‌ನಿಂದ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 10.1-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ನವರೆಗೆ ಇ ವಿಟಾರಾಗೆ ಹೋಲುತ್ತದೆ.
ಇನ್ನು ಟೊಯೊಟಾ ಬಿಡುಗಡೆ ಮಾಡಿದ ಚಿತ್ರಗಳು ಆಟೋ ಹೋಲ್ಡ್, ಡ್ರೈವ್ ಮೋಡ್‌ಗಳು, ಸಿಂಗಲ್-ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ತೋರಿಸುತ್ತವೆ. ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ 40:20:40 ಸ್ಪ್ಲಿಟ್-ಫೋಲ್ಡಿಂಗ್ ಫಂಕ್ಷನ್‌ನೊಂದಿಗೆ ಸ್ಲೈಡಿಂಗ್ ಮತ್ತು ರಿಕ್ಲೈನಿಂಗ್ ಫಂಕ್ಷನ್‌ನೊಂದಿಗೆ ಬರುತ್ತವೆ ಎಂದು ಜಪಾನಿನ ಬ್ರ್ಯಾಂಡ್ ದೃಢಪಡಿಸಿದೆ.


Click it and Unblock the Notifications








