ಭಾರತದಲ್ಲಿ ಹೊಸ ಟೊಯೋಟಾ SUV ಬಿಡುಗಡೆಗೆ ಸಜ್ಜು... ವಿಶೇಷತೆಗಳೇನು?

ಭಾರತದಲ್ಲಿ ಎಸ್‌ಯುವಿಗಳಿಗೆ ಕ್ರೇಜ್ ಹೆಚ್ಚಾಗಿದ್ದು, ಹಲವು ಬ್ರಾಂಡ್‌ಗಳು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಸಜ್ಜಾಗುತ್ತಿದ್ದಾರೆ. ಟೊಯೊಟಾ ಕೂಡ ಭಾರತೀಯ ಸಬ್-4-ಮೀಟರ್ ಎಸ್‌ಯುವಿ ವಿಭಾಗಕ್ಕೆ "ಅರ್ಬನ್ ಕ್ರೂಸರ್ ಟೈಸರ್" ನೊಂದಿಗೆ ಎಂಟ್ರಿಕೊಡಲು ಸಜ್ಜಾಗುತ್ತಿದೆ. ಈ ಹೊಸ ಕೊಡುಗೆಯು 2024 ರ ಮೊದಲ ತ್ರೈಮಾಸಿಕದೊಳಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಎಲ್ಲರಿಗೂ ತಿಳಿದಿರುವಂತೆ ಟೊಯೋಟಾ ಹಾಗೂ ಮಾರುತಿ ಸುಜುಕಿ ಪಾಲುದಾರಿಕೆಯಲ್ಲಿ ಈಗಾಗಲೇ ಹಲವು ಕಾರುಗಳು ಬಂದಿವೆ. ಈಗಲೂ ಮಾರುತಿ ಸುಜುಕಿಯೊಂದಿಗಿನ ಯಶಸ್ವಿ ಮೈತ್ರಿಯನ್ನು ಬಂಡವಾಳವಾಗಿಟ್ಟುಕೊಂಡು ಟೊಯೋಟಾದ ಹೊಸ ಎಸ್‌ಯುವಿ ಹೊರಬರಲಿದೆ. ಅಂದರೆ ಟೊಯೋಟಾ ಟೈಸರ್ ಜನಪ್ರಿಯ ಮಾರುತಿ ಫ್ರಾಂಕ್ಸ್ ಅನ್ನು ಆಧರಿಸಿದೆ ಎಂದು ತಿಳಿದುಬಂದಿದೆ.

new-toyota-urban-cruiser-taisor-suv-all-set-to-launch-in-india

ಈ ಮಾರುತಿ ಫ್ರಾಂಕ್ಸ್ ಕಳೆದ ವರ್ಷ ಬಿಡುಗಡೆಯಾಗಿ ಭಾರತದಲ್ಲಿ ಯಶಸ್ವಿಯಾಗಿ ಮಾರಾಟ ಕಾಣುತ್ತಿದೆ. ಇದು ಸೊಗಸಾದ ಮತ್ತು ಸಮರ್ಥ ಕ್ರಾಸ್ಒವರ್ ಆಗಿ ಗ್ರಾಹಕರಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಹಾಗಾಗಿ ಇದೀಗ ಟೊಯೋಟಾ ಕೂಡ ಸರಳವಾದ ರಿಬ್ಯಾಡ್ಜ್‌ಗಿಂತ ಭಿನ್ನವಾಗಿ, ಟೊಯೋಟಾ ತನ್ನನ್ನು ಪ್ರತ್ಯೇಕಿಸಲು ಸೂಕ್ಷ್ಮವಾದ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿ ಬಿಡುಗಡೆ ಮಾಡಲಿದೆಯಂತೆ.

ಹೊಸ ಬಂಪರ್‌ಗಳು, ವಿಶಿಷ್ಟ ಹೆಡ್‌ಲ್ಯಾಂಪ್ ಮತ್ತು DRL ಕಾಂಬೊ ಸೇರಿದಂತೆ ಅಲಾಯ್ ವೀಲ್‌ಗಳನ್ನು ಹೊಸ ಡಿಸೈನ್‌ನಲ್ಲಿ ಪರಿಚಯಿಸಲಿದೆ. ಇಂಟೀರಿಯರ್ ವಿಷಯದಲ್ಲಿ ಡ್ಯಾಶ್‌ಬೋರ್ಡ್ ಲೇಔಟ್ ಅನ್ನು ಅಪ್ಹೋಲ್‌ಸ್ಟರಿ ಮತ್ತು ಬಣ್ಣ ಆಯ್ಕೆಗಳಲ್ಲಿ ಟೊಯೋಟಾದ ತನ್ನದೇ ಡಿಸೈನ್‌ನೊಂದಿಗೆ ಹೊಸ ಲುಕ್ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

new-toyota-urban-cruiser-taisor-suv-all-set-to-launch-in-india

ಉಳಿದಂತೆ ಟೊಯೋಟಾ ಟೈಸರ್ ಫ್ರಾಂಕ್ಸ್‌ನಿಂದ ಎರವಲು ಪಡೆದ ವೈಶಿಷ್ಟ್ಯ-ಸಮೃದ್ಧ ಕ್ಯಾಬಿನ್‌ನೊಂದಿಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕಲರ್ ಎಂಐಡಿ ಹೊಂದಿರುವ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ವೈರ್‌ಲೆಸ್ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು ನೀಡುವ ಸಾಧ್ಯತೆಯಿದೆ.

ಸುರಕ್ಷತೆಯ ವಿಷಯದಲ್ಲೂ ಈಗಾಗಲೇ ಪ್ರತಿಸ್ಪರ್ಧಿಗಳಿಂದ ತೀವ್ರ ಪೈಪೋಟಿ ಇರುವುದರಿಂದ ಟೊಯೋಟಾ ಕೂಡ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್-ಹೋಲ್ಡ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ಎಬಿಎಸ್ ಜೊತೆಗೆ ಇಬಿಡಿ ಸೇರಿದಂತೆ ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಸ ಟೈಸರ್‌ನಲ್ಲಿ ನೀಡುವ ಸಾಧ್ಯತೆಗಳಿ ಹೆಚ್ಚಾಗಿ ಕಾಣುತ್ತಿವೆ.

new-toyota-urban-cruiser-taisor-suv-all-set-to-launch-in-india

ಎರಡು ಎಂಜಿನ್ ಆಯ್ಕೆ: ಟೊಯೋಟಾ ಕ್ರಾಸ್ಒವರ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯಲಿದೆ. 1.2-ಲೀಟರ್ NA ಡ್ಯುಯಲ್‌ ಜೆಟ್ ಮತ್ತು 1.0-ಲೀಟರ್ ಬೂಸ್ಟರ್‌ಜೆಟ್ ಟರ್ಬೋಚಾರ್ಜ್ಡ್ ಎಂಜಿನ್ ಇರಲಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್‌ನೊಂದಿಗೆ ಬರಲಿದೆ. ಇನ್ನೊಂದು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್‌ನೊಂದಿಗೆ ಬರುತ್ತದೆ. ಸಿಎನ್‌ಜಿ ಕೂಡ ಬರಬಹುದು.

ಇದೇ ವರ್ಷದ ಹಬ್ಬದ ಸೀಸನ್ ಅಕ್ಟೋಬರ್-ನವೆಂಬರ್ ಸುಮಾರಿಗೆ, ಟೊಯೋಟಾ ಟೈಸರ್‌ಗೆ ನಿರೀಕ್ಷಿತ ಬಿಡುಗಡೆ ಸಾಧ್ಯೆತೆಯಿದೆ. ಈ ಕಾಂಪ್ಯಾಕ್ಟ್ SUV ಟಾಟಾ ನೆಕ್ಸನ್, ಕಿಯಾ ಸೋನೆಟ್, ರೆನಾಲ್ಟ್ ಕಿಗರ್‌ನಂತಹ ಮಾದರಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸಲಿದೆ. ಟೈಸರ್ ಕೂಡ ವಿನ್ಯಾಸ, ವೈಶಿಷ್ಟ್ಯ-ಸಮೃದ್ಧ ಕ್ಯಾಬಿನ್ ಮತ್ತು ವೈವಿಧ್ಯಮಯ ಎಂಜಿನ್ ಆಯ್ಕೆಗಳೊಂದಿಗೆ ಹಚ್ಚು ಪೈಪೋಟಿ ನೀಡುವ ಸಾಮರ್ಥ್ಯವನ್ನು ಹೊಂದಿದೆ.

new-toyota-urban-cruiser-taisor-suv-all-set-to-launch-in-india

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 18, 2024, 13:32 [IST]
English summary
New toyota urban cruiser taisor suv all set to launch in india
Read more on ಟೊಯೋಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+