ಯುವಕರಿಗೆ ಸಿಹಿಸುದ್ದಿ: ಪೊಲೊ ಬದಲು ಬರುತ್ತಿದೆ ಮತ್ತೊಂದು ಪರ್ಫಾಮೆನ್ಸ್ ಫೋಕ್ಸ್‌ವ್ಯಾಗನ್ ಕಾರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ಗಾಲ್ಫ್ ಜಿಟಿಐ ಪರ್ಫಾಮೆನ್ಸ್ ಹ್ಯಾಚ್‌ಬ್ಯಾಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ (Volkswagen Golf GTI) ಹಾಟ್ ಹ್ಯಾಚ್ ಅನ್ನು ಸರ್ಕಾರದ ಯೋಜನೆಯ ಅಡಿಯಲ್ಲಿ ಆಮದು ಮಾಡಿಕೊಳ್ಳಲಾಗುವುದು, ಯಾವುದೇ ಹೋಮೋಲೋಗೇಶನ್ ಕಾರ್ಯವಿಧಾನಗಳಿಗೆ ಒಳಗಾಗದೆ 2,500 ಯುನಿಟ್ ವಾಹನಗಳನ್ನು ತರಲು ಅವಕಾಶವಿದೆ. ಫೋಕ್ಸ್‌ವ್ಯಾಗನ್ ಗಾಲ್ಫ್ GTI ಭಾರತದಲ್ಲಿ 2025ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಸಂಪೂರ್ಣವಾಗಿ ಆಮದು ಮಾಡಿಕೊಳ್ಳುವ ಯುನಿಟ್ ಆಗಿರುವುದರಿಂದ ಬೆಲೆಯು ದುಬಾರಿಯಾಗಿರುತ್ತದೆ.
ಫೋಕ್ಸ್‌ವ್ಯಾಗನ್ ಗಾಲ್ಫ್ GTI ಭಾರತದಲ್ಲಿ ಬಿಡುಗಡೆಗೊಂಡ ಬಳಿಕ ಯಾವುದೇ ನೇರ ಪ್ರತಿಸ್ಪರ್ಧಿಗಳು ಇಲ್ಲ. ಆದರೆ ಕೆಲವು ವಿಷಯಗಳಲ್ಲಿ ಮಿನಿ ಕೂಪರ್ ಎಸ್ ಮಾದರಿಯೊಂದಿಗೆ ಸ್ಪರ್ಧಿಸುತ್ತದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಈ ವರ್ಷದ ಆರಂಭದಲ್ಲಿ ನವೀಕರಣವನ್ನು ಪಡೆದ ಫೋಕ್ಸ್‌ವ್ಯಾಗನ್ ಗಾಲ್ಫ್ GTI ಕಾರಿನಲ್ಲಿ 2.0 ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.

ಈ ಹೊಸ ಗಾಲ್ಫ್ GTI ಕಾರು ಕೇವಲ 5.9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಫೋಕ್ಸ್‌ವ್ಯಾಗನ್ ಹೇಳಿಕೊಂಡಿದೆ. ಇದು ಅದರ ಹಿಂದಿನದಕ್ಕಿಂತ ವೇಗವಾಗಿದೆ. ಈ ಪರ್ಫಾಮೆನ್ಸ್ ಕಾರು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಕಾರು ಪೊಲೊ ಮಾದರಿಗಿಂತ ಭರ್ಜರಿ ಪರ್ಫಾರಿ ಅನ್ನು ನೀಡುವುದು ಪಕ್ಕಾ.
ಇನ್ನು ಈ ಫೋಕ್ಸ್‌ವ್ಯಾಗನ್ ಗಾಲ್ಫ್ GTI ಕಾರು ಎಲೆಕ್ಟ್ರಾನಿಕ್ ನಿಯಂತ್ರಿತ ಫ್ರಂಟ್-ಆಕ್ಸಲ್ ಡಿಫರೆನ್ಷಿಯಲ್ ಲಾಕ್, ಪ್ರೋಗ್ರೆಸ್ಸಿವ್ ಸ್ಟೀರಿಂಗ್ ಮತ್ತು ಐಚ್ಛಿಕ ಅಡಾಪ್ಟಿವ್ ಸಸ್ಪೆನ್ಶನ್‌ನಂತಹ ಪರ್ಫಾಮೆನ್ಸ್ ವೈಶಿಷ್ಟ್ಯಗಳು ಅದರ ಡ್ರೈವಿಂಗ್ ಡೈನಾಮಿಕ್ಸ್ ಅನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ನವೀಕರಿಸಿದ ಗಾಲ್ಫ್ ಜಿಟಿಐಯು 12.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ನವೀಕರಿಸಿದ ಗ್ರಾಫಿಕ್ಸ್ ಮತ್ತು ಚಾಟ್‌ಜಿಪಿಟಿ ವಾಯ್ಸ್ ಅಸಿಸ್ಟ್ ಅನ್ನು ಹೊಂದಿದೆ.

ಇದರೊಂದಿಗೆ ಜಿಟಿಐ-ನಿರ್ದಿಷ್ಟ ಗ್ರಾಫಿಕ್ಸ್, ಟಾರ್ಟನ್ ಸೀಟ್ ಅಪ್ಹೋಲ್ಸ್ಟರಿ, ಪುಶ್-ಟು-ಸ್ಟಾರ್ಟ್ ಬಟನ್, ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಬ್ಲ್ಯಾಕ್ ಫಿನಿಶ್, 18-ಇಂಚಿನ 'ರಿಚ್‌ಮಂಡ್' ಡೈಮೆಂಟ್ ಕಟ್ ಅಲಾಯ್ ವ್ಹೀಲ್ ಗಳು, ದೊಡ್ಡ ಏರ್ ಇನ್‌ಟೇಕ್‌ಗಳೊಂದಿಗೆ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಆಕರ್ಷಕವಾಗಿದೆ. ಇನ್ನು ಈ ಕಾರಿನ ಒಳಭಾಗದಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಒಳಗೊಂಡಿದೆ.
ಇನ್ನು ಡ್ಯುಯಲ್-ಟೋನ್ ಫುಲ್ ರೂಫ್ ಸ್ಪಾಯ್ಲರ್, ಎಲ್ಇಡಿ ಸ್ಟ್ರಿಪ್ ಹೊಂದಿರುವ ಬಾನೆಟ್, ಫೋಕ್ಸ್‌ವ್ಯಾಗನ್ ಲೋಗೋ, ಕೆಂಪು ಬ್ರೇಕ್ ಕ್ಯಾಲಿಪರ್‌ಗಳು ಮತ್ತು 3D-ಕಾಣುವ LED ಟೈಲ್‌ಲ್ಯಾಂಪ್‌ಗಳು ಮತ್ತ್ಯ್ ಇತರ ಅಂಶಗಳನ್ನು ಹೊಂದಿವೆ. ಇನ್ನು ಈ ಫೋಕ್ಸ್‌ವ್ಯಾಗನ್ ಈ ಹಿಂದೆ 2016 ರಲ್ಲಿ ಭಾರತದಲ್ಲಿ ಪೋಲೊ ಜಿಟಿಐ ಅನ್ನು ಪರಿಚಯಿಸಿತ್ತು. ಇದು ಭರ್ಜರಿ ಪರ್ಫಾಮೆನ್ಸ್ ಮತ್ತು ಅತ್ಯುತ್ತಮ ನಿರ್ವಹಣೆಯೊಂದಿಗೆ ಕಾಂಪ್ಯಾಕ್ಟ್ ಮತ್ತು ಸ್ಪೋರ್ಟಿ ಕಾರನ್ನು ಹುಡುಕುತ್ತಿರುವ ಖರೀದಿದಾರರಿಂದ ಉತ್ತಮ ಆಯ್ಕೆಯಾಗಿ ಖ್ಯಾತಿಗಳಿಸಿತು.

ಫೋಕ್ಸ್‌ವ್ಯಾಗನ್ ಪೊಲೊ GTI ಕಾರು 1.8 ಲೀಟರ್ ಟರ್ಬೋಚಾರ್ಜ್ಡ್ TSI ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿತ್ತು. ಈ ಎಂಜಿನ್ 190 bhp ಪವರ್ ಮತ್ತು 320 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








