ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಶಿಯೋಮಿ ಬಿರುಗಾಳಿ: ಸ್ಮಾರ್ಟ್‌ಫೋನ್‌ಗಳಂತೆ ಅಗ್ಗದ ಬೆಲೆಯಲ್ಲಿ ಬರುತ್ತಾ?

ಶಿಯೋಮಿ (Xiaomi) ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಚೀನಾದ ದೈತ್ಯ ಬ್ರ್ಯಾಂಡ್ ಆಗಿದೆ. ಶಿಯೋಮಿ ಬ್ರ್ಯಾಂಡ್ ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಕಡಿಮೆ ಬೆಲೆಗೆ ಫೀಚರ್-ರಿಚ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಜನಪ್ರಿಯತೆಗಳಿಸಿದೆ. ಕೆಲವು ತಿಂಗಳ ಹಿಂದೆ, ಶಿಯೋಮಿ ಕಂಪನಿಯು ಕೇವಲ ಸ್ಮಾರ್ಟ್‌ಫೋನ್ ತಯಾರಿಕೆಯ ಜೊತೆ ದೊಡ್ಡ ಸಾಮರ್ಥ್ಯವನ್ನು ಹೊಂದಿರುವ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ಕಾಲಿಟ್ಟಿತು. ಇತ್ತೀಚೆಗೆ ಶಿಯೋಮಿ ಕಂಪನಿಯ ಮೊದಲ ಕಾರ್ ಶಿಯೋಮಿ SU7 (Xiaomi SU7) ಎಲೆಕ್ಟ್ರಿಕ್ ಕಾರು ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ಇದೀಗ ಶಿಯೋಮಿ ತನ್ನ ಎರಡನೇ ಮಾಡೆಲ್, YU7 ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಎಲೆಕ್ಟ್ರಿಕ್ ವಾಹನವು ಎಸ್‍ಯುವಿ ವಿಭಾಗದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕರರಾಗಿ ಖ್ಯಾತಿ ಗಳಿಸಿದೆ. 2025ರ ಜುಲೈ ತಿಂಗಳಿನ ವೇಳೆಗೆ ಶಿಯೋಮಿ ಎಲೆಕ್ಟ್ರಿಕ್ ಕಾರು ಚೀನಾದಲ್ಲಿ ಲಭ್ಯವಿರುತ್ತದೆ. ಇ-ಎಸ್‍ಯುವಿ ರಫ್ತು ಮಾಡುವ ಮೊದಲು ಬಲವಾದ ಸ್ಥಳೀಯ ಬೇಡಿಕೆಯನ್ನು ಸೃಷ್ಟಿಸಲಿದೆ.

Xiaomi YU7

ಮೊದಲ ಎರಡು ಮೂರು ವರ್ಷಗಳವರೆಗೆ ದೇಶೀಯ ಮಾರಾಟಕ್ಕೆ ಆದ್ಯತೆ ನೀಡಲು ಬ್ರ್ಯಾಂಡ್ ಯೋಜಿಸಿದೆ. ಶಿಯೋಮಿ YU7 (Xiaomi YU7) ಎಲೆಕ್ತ್ರಿಕ್ ಎಸ್‍ಯುವಿ 3,000mm ವ್ಹೀಲ್‌ಬೇಸ್ ಅನ್ನು ಹೊಂದಿದ್ದು, ಇದು SU7 ನಂತೆಯೇ ಇದೆ. ಆದರೆ ಇದರ ಉದ್ದ 4,999mm. 1,996mm ಅಗಲ ಮತ್ತು 1,600mm ಎತ್ತರವನ್ನು ಹೊಂದಿದೆ. ಇನ್ನು ಶಿಯೋಮಿ YU7 ಎಲೆಕ್ತ್ರಿಕ್ ಎಸ್‍ಯುವಿಯು ಪ್ರತಿಸ್ಪರ್ಧಿ ಟೆಸ್ಲಾ ಮಾಡೆಲ್ Y ಗಿಂತ ಪ್ರತಿ ಮೆಟ್ರಿಕ್‌ನಲ್ಲಿ ದೊಡ್ಡದಾಗಿದೆ.

ಇದು 4,751mm ಉದ್ದ, 1,920mm ಅಗಲ, 1,624mm ಎತ್ತರ ಮತ್ತು 2,890mm ವ್ಹೀಲ್‌ಬೇಸ್ ಹೊಂದಿದೆ. ಹೊಸ ಶಿಯೋಮಿ YU7 ಎಲೆಕ್ಟ್ರಿಕ್ ಎಸ್‍ಯುವಿಯು ಬ್ಲಾಂಕ್ಡ್-ಆಫ್ ಗ್ರಿಲ್, ಟಿಯರ್‌ಡ್ರಾಪ್-ಶೈಲಿಯ LED ಹೆಡ್‌ಲೈಟ್‌ಗಳು ಮತ್ತು ಬಂಪರ್‌ನ ಕೆಳಗಿನ ವಿಭಾಗದಲ್ಲಿ ಗಾಢವಾದ ಬಿಟ್‌ಗಳನ್ನು ಹೊಂದಿವೆ. ಇನ್ನು ಫ್ಲಶ್ ಪಾಪ್-ಅಪ್ ಡೋರ್ ಹ್ಯಾಂಡಲ್‌ಗಳನ್ನು ಸಹ ನೋಡಬಹುದು.

Xiaomi YU7

ಇನ್ನು ಬ್ಲ್ಯಾಕ್ ವ್ಹೀಲ್ ಅರ್ಚಾರ್ ಗಳು ಹೊಸದಾಗಿದೆ ಮತ್ತು ಸುಧಾರಿತ ಡ್ರೈವರ್ ಅಸಿಸ್ಸ್ಟ್ ಸಿಸ್ಟಂ (ADAS) ಅನ್ನು ಹೊಂದಿದೆ. LiDAR ತಂತ್ರಜ್ಞಾನವನ್ನು ಸೇರಿಸುವುದರ ಜೊತೆಗೆ ಸಿಗ್ನೇಚರ್ ರೂಫ್ ಹಂಪ್ ಅನ್ನು ಸಹ ಹೊಂದಿದೆ. ಇನ್ನು ವಿಭಿನ್ನವಾದ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದ ಟೈಲ್ ಲೈಟ್ ವಿಭಾಗಕ್ಕೆ ಹೊಸ ವಿನ್ಯಾಸದ ರೂಪದಲ್ಲಿ ಬರುತ್ತದೆ.

ಇನ್ನು ಒಟ್ಟಾರೆಯಾಗಿ ಶಿಯೋಮಿ YU7 ಫೆರಾರಿ ಪುರೋಸಾಂಗ್‌ನಂತೆಯೇ ಹೆಚ್ಚು ಸ್ವೂಪಿ ಕ್ರಾಸ್‌ಒವರ್ ತರಹದ ವಿನ್ಯಾಸವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ದೊಡ್ಡ ಹಾಂಚ್‌ಗಳು ಮತ್ತು ಪ್ಲಾಸ್ಟಿಕ್ ಕ್ಲಾಡಿಂಗ್ ಅಗತ್ಯವಿರುವ ಎಸ್‍ಯುವಿ ಸೂಚನೆಗಳನ್ನು ತರುತ್ತದೆ. ಇನ್ನು ಶಿಯೋಮಿ ಇಂಟೀರಿಯರ್ ಬಗ್ಗೆ ಇನ್ನೂ ನಿರ್ದಿಷ್ಟತೆಯನ್ನು ಬಹಿರಂಗಪಡಿಸಿಲ್ಲ.

Xiaomi YU7

ಹೊಸ ಶಿಯೋಮಿ YU7 ಎಲೆಕ್ಟ್ರಿಕ್ ಎಸ್‍ಯುವಿಯು 299hp (ಮುಂಭಾಗ) ಮತ್ತು 392hp (ಹಿಂಭಾಗ) ಪವರ್ ಅನ್ನು ಉತ್ಪಾದಿಸುತ್ತದೆ. ಚೀನಾದಲ್ಲಿ ಸಲ್ಲಿಸಿದ ಫೈಲಿಂಗ್‌ನ ಪ್ರಕಾರ 691hp ಯ ಸಂಯೋಜಿತ ಉತ್ಪಾದನೆಯನ್ನು ನೀಡುವ ಡ್ಯುಯಲ್-ಮೋಟರ್ ಸೆಟಪ್‌ನೊಂದಿಗೆ ಬಂದಿದೆ. ಈ ಸೆಟಪ್, ಟಾಪ್ ಸ್ಪೆಕ್ ನಲ್ಲಿ ಲಭ್ಯವಿದ್ದು, ಮ್ಯಾಕ್ಸ್ ರೂಪಾಂತರಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ.

YU7 ನ ಬ್ಯಾಟರಿಗಾಗಿ, Xiaomi ಚೀನಾ-ಪ್ರಧಾನ ಕಛೇರಿಯ CATL ನೊಂದಿಗೆ ಪಾಲುದಾರಿಕೆ ಹೊಂದಿದೆ, ಇದು ಟೆಸ್ಲಾಗೆ ಬ್ಯಾಟರಿಗಳನ್ನು ತಯಾರಿಸುತ್ತದೆ. ಗಮನಾರ್ಹವಾಗಿ, ಟೆಸ್ಲಾ CATL ನ ಅತಿ ದೊಡ್ಡ ಗ್ರಾಹಕ. NMC ಬ್ಯಾಟರಿಯ ನಿಖರವಾದ ಸಾಮರ್ಥ್ಯವನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಇದು ಟಾಪ್-ಸ್ಪೆಕ್ SU7 ಮಾದರಿಗಳಿಗೆ ಪವರ್ ನೀಡುವ ಅದೇ 101kWh ಯುನಿಟ್ ಆಗಿದೆ ಎಂದು ನಿರೀಕ್ಷಿಸಲಾಗಿದೆ.

Article Published On: Thursday, December 12, 2024, 13:49 [IST]
English summary
New xiaomi yu7 suv revealed design details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+