ನೆಕ್ಸಾದ ಮಾರುತಿ ಕಾರುಗಳಿಗೆ 1.5 ಲಕ್ಷವರೆಗೆ ಭರ್ಜರಿ ಡಿಸ್ಕೌಂಟ್: ಕನಸಿನ ಆಫರ್ ಈಗ ನಿಮ್ಮ ಮುಂದೆ!
ಭಾರತದಲ್ಲಿ ಸದ್ಯಕ್ಕೆ ಅತೀ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳು ಯಾವ ಕಂಪನಿಯದು ಎಂದು ಕೇಳಿದರೆ, ಎಲ್ಲರೂ ಕಣ್ಣು ಮುಚ್ಚಿಕೊಂಡು ಯಾವುದೇ ಸಂಶಯವಿಲ್ಲದೇ ಹೇಳುವಂತಹ ಹೆಸರು ಮಾರುತಿ ಸುಜುಕಿ. ಅಷ್ಟರ ಮಟ್ಟಿಗೆ ಮಾರುತಿ ಸುಜುಕಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನ ಹವಾ ಸೃಷ್ಟಿ ಮಾಡಿದೆ.
ಭಾರತಿಯ ಗ್ರಾಹಕರ ನಾಡಿ ಮಿಡಿತವನ್ನು ಅರಿತಿರುವ ಮಾರುತಿ ಸುಜುಕಿ (Maruti Suzuki) ಕಂಪನಿ, ಗ್ರಾಹಕರಿಗೆ ಬೇಕಾದ ಕಾರುಗಳನ್ನು, ಆಫರ್‌ಗಳನ್ನು ಸರಿಯಾದ ಸಮಯಕ್ಕೆ ನೀಡುತ್ತಾ ತನ್ನ ಕಾರಿನ ಮಾರಾಟವನ್ನು ಒಂದಲ್ಲಾ ಒಂದು ರೀತಿಯಲ್ಲಿ ಅಧಿಕ ಗೊಳಿಸುತ್ತಿದ್ದಾರೆ. ಮಾರುತಿ ಸುಜುಕಿ ಇದೀಗ ಅದೇ ರೀತಿಯಾದ ಮತ್ತೊಂದು ಭರ್ಜರಿ ಆಫರ್ ಅನ್ನು ಗ್ರಾಹಕರ ಮುಂದಿಟ್ಟಿದ್ದು, ಕಾರು ಕೊಳ್ಳಬೇಕು ಎಂದುಕೊಂಡವರ ಕಣ್ಣರಳಿಸಿದೆ.

ಹೌದು, ಮಾರುತಿ ಕಾರಿನ ಔದ್ಯೋಗಿಕ ಡೀಲರ್ ಆದ ನೆಕ್ಸಾ, ತಾನು ಮಾರಾಟ ಮಾಡುತ್ತಿರುವ ಕಾರುಗಳಿಗೆ ಒಂದೂವರೆ ಲಕ್ಷ ರೂ ವರೆಗಿನ ಭರ್ಜರಿ ಆಫರ್ ಅನ್ನು ನೀಡುತ್ತಿದೆ. ಮಾಹಿತಿಗಳ ಪ್ರಕಾರ ನೆಕ್ಸಾ ಡೀಲರ್‌ಶಿಪ್‌ನ XL6 ಮತ್ತು Invicto ಕಾರುಗಳನ್ನು ಹೊರತುಪಡಿಸಿ ಇನ್ನೆಲ್ಲಾ ಕಾರುಗಳಿಗೂ ಅನ್ವಯಿಸಲಿದೆ ಎಂದು ತಿಳಿದು ಬಂದಿದೆ. ನೆಕ್ಸಾದಲ್ಲಿ ಮಾರಾಟವಾಗುವ ಜಿಮ್ನಿ, ಗ್ರಾಂಡ್ ವಿಟಾರಾ, ಬಲೆನೋ, ಫ್ರಾಂಕ್ಸ್, ಸಿಯಾಸ್ ಮತ್ತು ಇಗ್ನಿಸ್ ಕಾರುಗಳಿಗೆ ಈ ಆಫರ್‌ಗಳು ಸಿಗಲಿದೆ.
ನೆಕ್ಸಾ ತನ್ನ ಕಾರುಗಳಿಗೆ ಈ ಆಫರ್ ಅನ್ನು ಫೆಬ್ರವರಿ ತಿಂಗಳು ಪೂರಾ ನೀಡುತ್ತಿದ್ದು, ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಈ ಕಾರುಗಳಲ್ಲಿ ಅತೀ ಹೆಚ್ಚು ಡಿಸ್ಕೌಂಟ್ ಅನ್ನು ಮಾರುತಿ ಸುಜುಕಿ ಜಿಮ್ನಿಗೆ ಸಿಗುತ್ತಿದ್ದು, ಎಲ್ಲಾ ಸೇರಿ ಸುಮಾರು 1.5 ಲಕ್ಷದವರೆಗೆ ಆಫರ್ ಸಿಗುತ್ತಿದ್ದು, ಜಿಮ್ನಿ ಪ್ರೀಯರು ತುದಿಗಾಲಲ್ಲಿ ನಿಂತಿದ್ದಾರೆ.

ಜಿಮ್ನಿ 5 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ನಂತರ ಅತೀ ಹೆಚ್ಚು ಆಫರ್ ಸಿಗುತ್ತಿರುವ ಅತೀ ಹೆಚ್ಚು ಆಫರ್ ಸಿಗುತ್ತಿರುವ ಎರಡನೇ ಕಾರು ಯಾವುದೆಂದರೆ ಇತ್ತೀಚೆಗಷ್ಟೇ ಲಾಂಚ್ ಆದ ಮಾರುತಿ ಸುಜುಕಿ ಗ್ರಾಂಡ್ ವಿಟಾರ. ಇದರ ಸ್ಟ್ರಾಂಗ್ ಹೈಬ್ರಿಡ್ ವೇರಿಯಂಟ್‌ಗೆ ಸುಮಾರು 75000 ವರೆಗೆ ಆಫರ್ ಸಿಗುತ್ತಿದ್ದು ಇದರ ಮೈಲ್ಡ್ ಹೈಬ್ರಿಡ್ ವೇರಿಯಂಟ್‌ಗೆ 50000 ವರೆಗೆ ಡಿಸ್ಕೌಂಟ್ ಸಿಗುತ್ತಿದೆ.
ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಸಹಭಾಗಿತ್ವ ಹೊಂದಿರುವುದರಿಂದ ಹೈರ್ಡರ್ ರೀತಿಯಲ್ಲಿಯೇ ಗ್ರ್ಯಾಂಡ್ ವಿಟಾರಾ ಸಹ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಅವುಗಳೆಂದರೆ, 1.5 - ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್, 1.5 - ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್. ಕ್ರಮವಾಗಿ 103 PS & 116 PS ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.
ಇದರ ಜೊತೆಗೆ ಇತರ ಕಾರುಗಳಾದ ಇಗ್ನಿಸ್‌ಗೆ 59000, ಬಲೇನೋ 37000, ಫ್ರಾಂಕ್ಸ್ ಟರ್ಬೋ 70000 ಮತ್ತು ಸಿಯಾಝ್ ಕಾರಿಗೆ ಸುಮಾರು 52000 ವರೆಗೆ ನೆಕ್ಸಾ ಡಿಸ್ಕೌಂಟ್ ನೀಡುತ್ತಿದ್ದು, ಗ್ರಾಹಕರು ಮಾರುತಿ ಸುಜುಕಿಯ ಈ ಹೊಸ ನಡೆಗೆ ಫಿಧಾ ಆಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications