ಭಾರತದಲ್ಲಿ ಮೂಲೆಗುಂಪಾಗಿದ್ದ ಬ್ರಾಂಡ್‌ಗೆ ಜೀವ ತುಂಬಿದ ಕಾರು... 9,040 ವಾಹನಗಳ ಮಾರಾಟ!

ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ಮೋಟಾರ್ (Nissan Motor), ಭಾರತದಲ್ಲಿ ತನ್ನ ಕಾರ್ಯಾಚರಣೆ ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ ಒಟ್ಟು 5,13,241 ಯುನಿಟ್‌ ವಾಹನಗಳನ್ನು ಮಾರಾಟ ಮಾಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿರುವುದಾಗಿ ಹೇಳಿದೆ. ಹೆಚ್ಚುವರಿಯಾಗಿ, ಕಳೆದ ನವೆಂಬರ್ 2024 ರಲ್ಲಿ ಕಂಪನಿಯು ಒಟ್ಟು 9,040 ವಾಹನಗಳ ಮಾರಾಟವನ್ನು ದಾಖಲಿಸಿದೆ. ಇದರಲ್ಲಿ ದೇಶೀಯ ಮಾರಾಟವು 2,342 ಯುನಿಟ್‌ ವಾಹನಗಳಾಗಿದ್ದರೆ, ರಫ್ತು 6,698 ಯುನಿಟ್‌ಗಳಷ್ಟಿದೆ. ಇದರಲ್ಲಿ ಗೇಮ್‌ಚೇಂಜರ್ ಹೊಸ ನಿಸ್ಸಾನ್ ಮ್ಯಾಗ್ನೈಟ್ SUV ಆಗಿದ್ದು, ಇತರ ವಾಹನಗಳ ಸ್ಥಿರ ಬೇಡಿಕೆಯೊಂದಿಗೆ ಕಂಪನಿ ಮುನ್ನುಗ್ಗುತ್ತಿದೆ.

ಅಕ್ಟೋಬರ್ 2024 ರಲ್ಲಿ ಮಾರಾಟವಾದ 5,570 ವಾಹನಗಳಿಗೆ ಹೋಲಿಸಿದರೆ, ನವೆಂಬರ್‌ನಲ್ಲಿ 9,040 ಯೂನಿಟ್‌ ವಾಹನಗಳ ಮಾರಾಟದೊಂದಿಗೆ ಶೇ62 ರಷ್ಟು ತಿಂಗಳ ಹೆಚ್ಚಳವನ್ನು ಕಂಡಿದೆ. ಹಾಗೆಯೇ ವಾರ್ಷಿಕ ಬೆಳವಣಿಗೆ ನೋಡಿಕೊಂಡರೆ ನವೆಂಬರ್ 2023 ರಲ್ಲಿ 2,081 ಯುನಿಟ್‌ಗಳನ್ನು ರಫ್ತು ಮಾಡಾಲಾಗಿತ್ತು. ಈ ಮೂಲಕ ಶೇ222 ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ.

nissan-5-lakh-domestic-sales-milestone-total-sales-9040-units-november-2024

ದೇಶಿಯ ಮಾರಾಟ ಸೇರಿದಂತೆ ವಿದೇಶಗಳಿಗೆ ರಫ್ತು ಮಾಡಲಾಗುತ್ತಿರುವ ಕಾರುಗಳನ್ನು ನೋಡುತ್ತಿದ್ದರೆ, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಿಸ್ಸಾನ್‌ನ ಬೆಳವಣಿಗೆಯ ಹೆಜ್ಜೆಗುರುತು ಮತ್ತು ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ಗ್ರಾಹಕರು ಬ್ರ್ಯಾಂಡ್‌ನ 'ಮೇಡ್ ಇನ್ ಇಂಡಿಯಾ' ವಾಹನಗಳಲ್ಲಿ ಇಟ್ಟಿರುವ ನಂಬಿಕೆಯನ್ನು ಎತ್ತಿತೋರುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.

ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಮಾತನಾಡಿ, "ನಮ್ಮ ಬ್ರ್ಯಾಂಡ್ 5 ಲಕ್ಷ ದೇಶೀಯ ಮಾರಾಟದ ಮೈಲಿಗಲ್ಲನ್ನು ದಾಟುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ನಮ್ಮ ಗ್ರಾಹಕರು ನಮ್ಮ ವಾಹನಗಳ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯ ಮೇಲೆ ಇಟ್ಟಿರುವ ನಿರಂತರ ನಂಬಿಕೆಯನ್ನು ಈ ಗಮನಾರ್ಹ ಸಾಧನೆಯು ಪ್ರತಿಬಿಂಬಿಸುತ್ತದೆ. ನಿಸ್ಸಾನ್ ತನ್ನ ಭಾರತದ ಕಾರ್ಯಾಚರಣೆಗಳು, ವಿತರಕರು, ಪಾಲುದಾರರು ಮತ್ತು ಗ್ರಾಹಕರಿಗೆ ಬದ್ಧವಾಗಿದೆ ಎಂದರು.

nissan-5-lakh-domestic-sales-milestone-total-sales-9040-units-november-2024

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್‌ನ ದೃಢವಾದ ಬದ್ಧತೆಯ ಭಾಗವಾಗಿ ಮತ್ತು ಅದರ ಗ್ರಾಹಕರ ವಿಕಸನದ ಅಗತ್ಯಗಳನ್ನು ಪೂರೈಸಲು, ನಾವು ಇತ್ತೀಚೆಗೆ ಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ಬಿಡುಗಡೆಯೊಂದಿಗೆ ನಮ್ಮ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಿದ್ದೇವೆ. ನಮ್ಮ ರಫ್ತು ಸಂಖ್ಯೆಯಲ್ಲಿನ ಅಭೂತಪೂರ್ವ ಬೆಳವಣಿಗೆಯು ನ್ಯೂ ನಿಸ್ಸಾನ್ ಮ್ಯಾಗ್ನೈಟ್‌ನಿಂದ ಹೆಚ್ಚಾಗಿದೆ. ಇದು ಪ್ರಪಂಚದಾದ್ಯಂತ ವಿಶ್ವದರ್ಜೆಯ ಉತ್ಪನ್ನಗಳನ್ನು ತಲುಪಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದರು.

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 'ಮೇಡ್ ಇನ್ ಇಂಡಿಯಾ' ಮ್ಯಾಗ್ನೈಟ್‌ಗೆ ಹೆಚ್ಚುತ್ತಿರುವ ಬೇಡಿಕೆಯು ನಿಸ್ಸಾನ್ ತನ್ನ ರಫ್ತನ್ನು 45 ಕ್ಕೂ ಹೆಚ್ಚು ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸಲು ಅನುವು ಮಾಡಿಕೊಟ್ಟಿದೆ. ಇದು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಲೆಫ್ಟ್-ಹ್ಯಾಂಡ್ ಡ್ರೈವ್ ಸೇರಿದಂತೆ 65 ಕ್ಕೂ ಹೆಚ್ಚು ದೇಶಗಳಿಗೆ ತನ್ನ ಒಟ್ಟು ಉಪಸ್ಥಿತಿಯನ್ನು ತರುತ್ತದೆ ಎಂಬ ವಿಶ್ವಾಸವಿದೆ.

nissan-5-lakh-domestic-sales-milestone-total-sales-9040-units-november-2024

ಈ ಹೊಸ ಮೈಲಿಗಲ್ಲು ನಿಸ್ಸಾನ್‌ಗೆ ಮಹತ್ವದ ರಫ್ತು ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್ 20 ಕ್ಕೂ ಹೆಚ್ಚು ಮೊದಲ ಮತ್ತು ಅತ್ಯುತ್ತಮ - ವಿಭಾಗದ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆಯೇ 55 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುವ, ಒಳಗೆ ಮತ್ತು ಹೊರಗೆ ಗುಣಮಟ್ಟದ, ಸೊಗಸಾದ ವಿನ್ಯಾಸವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 3, 2024, 15:16 [IST]
English summary
Nissan 5 lakh domestic sales milestone total sales 9040 units november 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+