ಓಮ್ನಿಯ ಹೊಸ ಆವೃತ್ತಿಯೇ? ಮನೆಯಂತಿರುವ ಆಕರ್ಷಕ ವಾಹನ ಬಿಡುಗಡೆ! ವಿಶೇಷತೆಗಳೇನು?

ಭಾರತದಲ್ಲಿ ಎಲ್ಲರಿಗೂ ಮಾರುತಿ ಸುಜುಕಿ ಓಮ್ನಿ ಚಿರಪರಿಚಿತ, ಇದು ಸಣ್ಣ ಕುಟುಂಬಕ್ಕೆ ಪರಿಪೂರ್ಣ ಕಾರಾಗಿ ಗುರ್ತಿಸಿಕೊಂಡಿತ್ತು. ಇತ್ತೀಚೆಗೆ ಇದೇ ರೀತಿಯ ಕಾರೊಂದನ್ನು ನಿಸ್ಸಾನ್ ಬಿಡುಗಡೆ ಮಾಡಿದೆ. ಇದನ್ನು ನಿಸ್ಸಾನ್ ಕಾರಾವಾನ್ ಮೈ-ರೂಂ ಎಡಿಷನ್ (ನಿಸ್ಸಾನ್ ಉರ್ವಾನ್ ಅಥವಾ ನಿಸ್ಸಾನ್ ಎನ್‌ವಿ350) ಎಂದು ಕರೆಯಲಾಗುತ್ತದೆ. ಇದನ್ನು ಮೊನ್ನೆಯಷ್ಟೆ ಜಪಾನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಟೊಯೊಟಾ ಹೈಸ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಮೈಕ್ರೋ ಬಸ್ ವರ್ಗದ ಅಡಿಯಲ್ಲಿ ಬರುವ ವಾಹನವಾಗಿದೆ. ಈ ಮಿನಿ ಬಸ್ ಕುರಿತ ವಿಶೆಷತೆಗಳನ್ನು ಇಲ್ಲಿ ನೋಡೋಣ.

ಎಲ್ಲಾ ಮೈಕ್ರೋ ಬಸ್‌ಗಳಲ್ಲಿ ನೀಡುವ ಸ್ಟ್ಯಾಂಡರ್ಡ್ ಅಗಲ ಮತ್ತು ರೂಫ್‌ನೊಂದಿಗೆ ಉದ್ದವಾದ ರೂಪಾಂತರದಲ್ಲಿ ಈ ಕಾರನ್ನು ನಿರ್ಮಿಸಲಾಗಿದೆ. ಗ್ರಾಹಕರ ಗಮನವನ್ನು ಸೆಳೆಯಲು ನಿಸ್ಸಾನ್ ತನ್ನ ವೈಶಿಷ್ಟ್ಯಗಳನ್ನು ಸಂಪೂರ್ಣವಾಗಿ ಪ್ರದರ್ಶಿಸಲು ಕಾರವಾನ್‌ನ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ. ಇದು ಹೊರಭಾಗದಿಂದ ಸಣ್ಣ ಕಾರವಾನ್‌ನಂತೆ ಸರಳವಾಗಿ ಕಾಣುತ್ತದೆ.

nissan-caravan-myroom-edition-launched-in-japan

ಚಿತ್ರಗಳಲ್ಲಿ ಕಾಣಿಸಿಕೊಂಡಂತೆ ಹೊರಭಾಗದಲ್ಲಿ ಬ್ಲಾಕ್ ಬಂಪರ್‌ಗಳು, ಬ್ಲಾಕ್ ಡೋರ್ ಹ್ಯಾಂಡಲ್‌ಗಳು ಮತ್ತು ಐರನ್ ವೀಲ್ ಗಳೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಹಾಗೆಯೇ ಒಳಭಾಗದಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ತುಂಬಿದ್ದು, ಈ ಕಾರವಾನ್ ಆವೃತ್ತಿಯು ನಮ್ಮ ಕೈಯಲ್ಲಿದ್ದರೆ ಮನೆ ಅಗತ್ಯವೇ ಇಲ್ಲ ಎಂದೆನಿಸುತ್ತದೆ.

ಈ ವಾಹನವು ಕೈಯಲ್ಲಿದ್ದರೆ ಹೋಟೆಲ್ ಸಹ ಅಗತ್ಯವಿಲ್ಲ. ವಿಶೇಷವಾಗಿ, ಈ ವಾಹನವನ್ನು ಪ್ರವಾಸಿ ಪ್ರದೇಶದಲ್ಲಿ ಮಿನಿ ಮನೆಯಾಗಿ ಬಳಸಬಹುದು. ಹಾಗಾಗಿಯೇ ನಿಸ್ಸಾನ್ ಈ ಕಾರವಾನ್‌ನ ರೂಪಾಂತರಕ್ಕೆ 'MyRoom' ಎಂದು ಹೆಸರಿಸಿದೆ. ನಿಮ್ಮ ಮನೆಗೆ ಸಾಮಾನ್ಯವಾಗಿ ಬೇಕಾಗುವ ಸೌಕರ್ಯಗಳನ್ನು ಒಳಗೊಂಡಿದೆ. ಈ ವಿಶೇಷ ಆವೃತ್ತಿಯಲ್ಲಿ ಸಾಕಷ್ಟು ವುಡ್ ಮೆಟೀರಿಯಲ್ ಬಳಸಲಾಗಿದೆ.

nissan-caravan-myroom-edition-launched-in-japan

ನಿಸ್ಸಾನ್ ಈ ವಾಹನದಲ್ಲಿ ಹಾಸಿಗೆ ಮತ್ತು ಡೈನಿಂಗ್ ಟೇಬಲ್ ನಂತಹ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಇದು ಟು - ಇನ್ - ಒನ್ ಫೋಲ್ಡಿಂಗ್ ಬೆಡ್ ಹೊಂದಿದ್ದು, ಇದನ್ನು ಐಚ್ಛಿಕ ಲಿಫ್ಟ್ - ಅಪ್ ಬೆಡ್‌ ಆಗಿ ಬದಲಾಯಿಸಬಹುದು. ಇದರ ಜೊತೆಗೆ ಲಾಕ್ - ಇನ್ - ಪ್ಲೇಸ್ ವಿವಿಧೋದ್ದೇಶ ಟೇಬಲ್ ಅನ್ನು ಇರಿಸಬಹುದು. ಈ ಮೂಲಕ ವಾಹನವನ್ನು ಮಿನಿ ಕಚೇರಿಯಾಗಿಯೂ ಬಳಸಬಹುದು ಎಂದು ನಿಸ್ಸಾನ್ ಹೇಳಿದೆ.

ಇದಕ್ಕಾಗಿ, ನಿಸ್ಸಾನ್ ಸೀಟುಗಳನ್ನು ಸಂಪೂರ್ಣವಾಗಿ ಮಡಚುವ ಸೌಲಭ್ಯವನ್ನು ಒದಗಿಸಿದೆ. ಡ್ರೈವ್ ಮೋಡ್, ಲಿವಿಂಗ್ ರೂಮ್ ಮೋಡ್ ಮತ್ತು ಬೆಡ್ ರೂಮ್ ಮೋಡ್ ಸೇರಿದಂತೆ ಮೂರು ವಿಭಿನ್ನ ಸ್ಥಾನಗಳಲ್ಲಿ ಹೊಂದಿಸಬಹುದಾಗಿದೆ. ಇವಿಷ್ಟೇ ಅಲ್ಲದೇ ಮಬ್ಬಾಗಿಸಬಹುದಾದ ರೂಫ್ ಸ್ಪಾಟ್‌ಲೈಟ್‌ಗಳು ಮತ್ತು ವಿಂಡೋ ಸ್ಕ್ರೀನ್‌ಗಳನ್ನು ಕೂಡ ಒಳಗೊಂಡಿದೆ.

nissan-caravan-myroom-edition-launched-in-japan

ಈ ವಾಹನವು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಬರುತ್ತದೆ, ಇದರಲ್ಲಿ 2000cc QR20DE ಪೆಟ್ರೋಲ್ ಎಂಜಿನ್ 129 hp ಪವರ್ ಮತ್ತು 178 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೊಂದು ಮಿತ್ಸುಬಿಷಿ ಮೂಲದ 2500cc 4N16 ಡೀಸೆಲ್ ಪವರ್‌ಟ್ರೇನ್ ಇದ್ದು, ಇದು 130 hp ಪವರ್ ಮತ್ತು 370 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ನಿಸ್ಸಾನ್ ಕಾರವಾನ್ ಮೈ ರೂಮ್‌ನ ಎರಡೂ ಎಂಜಿನ್‌ಗಳು ಒಂದೇ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆಯುತ್ತವೆ, ಇವು 7 - ಸ್ಪೀಡ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್‌ ಹೊಂದಿದ್ದು, ಇದು ಹಿಂದಿನ ಚಕ್ರಗಳಿಗೆ ಪವರ್ ವರ್ಗಾಯಿಸುತ್ತದೆ. ಡೀಸೆಲ್ ಎಂಜಿನ್ ಐಚ್ಛಿಕ 4 - ವೀಲ್ ಡ್ರೈವ್ ಆಯ್ಕೆಯನ್ನು ಹೊಂದಿದೆ.

ನಿಸ್ಸಾನ್ ಕಾರವಾನ್ ಮೈ ರೂಮ್ ¥5,516,500 (31,48,606 ಲಕ್ಷ ರೂ.)ಗಳ ಆರಂಭಿಕ ಬೆಲೆ ಹೊಂದಿದೆ. ಅಲ್ಲದೆ, ಇದರ ಗರಿಷ್ಠ ಬೆಲೆ (ಟಾಪ್‌ ವೇರಿಯೆಂಟ್) (¥6,855,200) 39.13 ರೂ. ಲಕ್ಷಕ್ಕೆ ಏರುತ್ತದೆ. ನಿಸ್ಸಾನ್ ಕಾರವಾನ್ 'MyRoom' ವ್ಯಾನ್ ಭಾರತದಲ್ಲೂ ಬಿಡುಗಡೆಯಾಗಬೇಕೆ? ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Wednesday, August 14, 2024, 8:30 [IST]
English summary
Nissan caravan myroom edition launched in japan
Read more on nissan new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+