Nissan: ಭಾರತದಿಂದ 2,700 ಕಾರುಗಳ ರಫ್ತು: 6 ಲಕ್ಷದ ಕಾರಿಗೆ ವಿದೇಶಗಳಲ್ಲಿ ಸಖತ್ ಡಿಮ್ಯಾಂಡ್!
ನಿಸ್ಸಾನ್ ಮೋಟಾರ್ ಇಂಡಿಯಾ (Nissan Motor India) ಇತ್ತೀಚೆಗೆ ಬಿಡುಗಡೆ ಮಾಡಿರುವ ನಿಸ್ಸಾನ್ ಮ್ಯಾಗ್ನೈಟ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲು ಪ್ರಾರಂಭಿಸಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಹೊಸ ಫೇಸ್‌ಲಿಫ್ಟ್ ನಿಸ್ಸಾನ್ ಮ್ಯಾಗ್ನೈಟ್ ಬಿಡುಗಡೆಯ ಸಮಯದಲ್ಲಿ ಮಾಡಿದ ಪ್ರಕಟಣೆಗೆ ಅನುಗುಣವಾಗಿ, ಕಂಪನಿಯು ಈಗ ಚೆನ್ನೈನಲ್ಲಿರುವ ನಿಸ್ಸಾನ್‌ನ ಅಲೈಯನ್ಸ್ JV ಸ್ಥಾವರದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ತನ್ನ ಇತ್ತೀಚಿನ ಕಾರುಗಳನ್ನು ಕಳುಹಿಸಿಕೊಡುತ್ತಿದೆ. ಭಾರತದಲ್ಲಿ ನಿರ್ಮಾಣವಾಗಿರುವ ಹೊಸ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಸ್ವೀಕರಿಸಿದ ಮೊದಲ ದೇಶವಾಗಿ ದಕ್ಷಿಣ ಆಫ್ರಿಕಾ ಈಗ ಗುರ್ತಿಸಿಕೊಂಡಿದೆ.
ಬಿಡುಗಡೆಯಾದಾಗಿನಿಂದ ಹೊಸ ಮ್ಯಾಗ್ನೈಟ್ ಎಸ್‌ಯುವಿಯ 2,700 ಯುನಿಟ್ ಕಾರುಗಳನ್ನು ಚೆನ್ನೈ ಬಂದರಿನಿಂದ ರವಾನಿಸಲಾಗಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಬಿಡುಗಡೆಯು ಇತ್ತೀಚೆಗೆ ಅಕ್ಟೋಬರ್ 2024 ರಲ್ಲಿ ದೆಹಲಿಯಲ್ಲಿ ನಡೆಯಿತು. ಹೊಸ ನಿಸ್ಸಾನ್ ಮ್ಯಾಗ್ನೈಟ್ SUV ಯ ಪರಿಚಯವು ನಿಸ್ಸಾನ್‌ಗೆ ರಫ್ತು ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಕಂಪನಿ ಹೇಳಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 'ಮೇಡ್ ಇನ್ ಇಂಡಿಯಾ' ಮ್ಯಾಗ್ನೈಟ್‌ನ ನಿರಂತರ ಬೇಡಿಕೆ ಮತ್ತು ಜನಪ್ರಿಯತೆಯನ್ನು ಪರಿಗಣಿಸಿ, ನಿಸ್ಸಾನ್ ತನ್ನ ಒಟ್ಟು ರಫ್ತು ಹೆಜ್ಜೆಗುರುತನ್ನು ಈಗ ಲೆಫ್ಟ್ - ಹ್ಯಾಂಡ್ ಡ್ರೈವ್ (ಎಡಗೈ ಸ್ಟೀರಿಂಗ್ ಹೊಂದಿರುವ ದೇಶಗಳು) ಮಾರುಕಟ್ಟೆಗಳನ್ನು ಒಳಗೊಂಡಂತೆ 65 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸಲು ಸಜ್ಜಾಗಿದೆ.
2020 ರಲ್ಲಿ ಮೊದಲ ಬಾರಿಗೆ ನಿಸ್ಸಾನ್ ಮ್ಯಾಗ್ನೈಟ್ ಬಿಡುಗಡೆಯಾದಾಗಿನಿಂದ, ದಕ್ಷಿಣ ಆಫ್ರಿಕಾದ ಮಾರುಕಟ್ಟೆಯಲ್ಲಿ ಮೇಡ್ ಇನ್ ಇಂಡಿಯಾ ಕಾಂಪ್ಯಾಕ್ಟ್ ಎಸ್‌ಯುವಿಗೆ ಗ್ರಾಹಕರಿಂದ ಅದ್ಭುತವಾದ ಸ್ವೀಕಾರ ಮತ್ತು ಬೇಡಿಕೆಯನ್ನು ನೋಡಿದ್ದೇವೆ. ಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ರಫ್ತು ಭಾರತದ ಸ್ಥಾನವನ್ನು ರಫ್ತು ಕೇಂದ್ರವಾಗಿ ಬಲಪಡಿಸುತ್ತದೆ ಎಂದು ನಿಸ್ಸಾನ್ ಇಂಡಿಯಾ ರೀಜನ್ ಬ್ಯುಸಿನೆಸ್ ಅಧ್ಯಕ್ಷ ಫ್ರಾಂಕ್ ಟೊರೆಸ್ ಹೇಳಿದರು.

ಹೊಸ ಫೇಸ್‌ಲಿಫ್ಟ್ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ, ಮರುವಿನ್ಯಾಸಗೊಳಿಸಲಾದ ಪ್ರೀಮಿಯಂ ವಿನ್ಯಾಸದೊಂದಿಗೆ ಬಲವಾದ ರಸ್ತೆ ಉಪಸ್ಥಿತಿಯನ್ನು ಹೊಂದಿದೆ. ಜೊತೆಗೆ ಭಾರತದಲ್ಲಿ ತನ್ನ ಸೆಗ್ಮೆಂಟಿನಲ್ಲಿಯೇ ಮೊದಲ ಬಾರಿಗೆ 20 ಕ್ಕೂ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದೆ. ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಮತ್ತು ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಸೇರಿದಂತೆ 40 ಕ್ಕೂ ಹೆಚ್ಚು ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಭಾರತೀಯ ಮ್ಯಾಗ್ನೈಟ್: ಹೊಸ 2024ರ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.99 ಲಕ್ಷದಿಂದ ರೂ.11.50 ಲಕ್ಷಗಳಾಗಿದೆ. ವೇರಿಯೆಂಟ್‌ಗಳಿಗೆ ಅನುಗುಣವಾಗಿ 8 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಡಿಸ್ಪ್ಲೇ, ಲೆದರೆಟ್ ಒಳಾಂಗಣ, ಆಂಬಿಯೆಂಟ್ ಲೈಟಿಂಗ್, 7-ಇಂಚಿನ ಟಿಎಫ್‌ಟಿ ಡ್ರೈವರ್ ಡಿಸ್ಪ್ಲೇ ನೀಡಲಾಗಿದೆ.

ಇವಿಷ್ಟೇ ಅಲ್ಲದೇ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ರಿಮೋಟ್ ಫಂಕ್ಷನ್‌ಗಳೊಂದಿಗೆ ಹೊಸ ಐ-ಕೀ, 6-ಸ್ಪೀಕರ್ 3D ಸರೌಂಡ್ ಸಿಸ್ಟಮ್, 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಡಿಸ್ಪ್ಲೇ, 6 ಏರ್ ಬ್ಯಾಗ್‌ಗಳು, 3 ಪಾಯಿಂಟ್ ಸೀಟ್ ಬೆಲ್ಟ್, ಎಲ್ಲಾ ಸೀಟುಗಳಿಗೆ ಸೀಟ್ ಬೆಲ್ಟ್ ರಿಮೈಂಡರ್, ISOFIX ಚೈಲ್ಡ್ ಸೀಟ್ ಮೌಂಟ್ ನೀಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








