ಹೊಸ ಕಾರಿಗೆ ಮನಸೋತ ಜನ... ಒಂದೇ ದಿನ ಬರೋಬ್ಬರಿ 115 ವಾಹನಗಳ ವಿತರಣೆ
ನಿಸ್ಸಾನ್ ಮೋಟಾರ್ ಇಂಡಿಯಾವು ಮಲಯಾಳಂ ಹೊಸ ವರ್ಷದ ಚಿಂಗಮ್‌ನ ಸಂದರ್ಭವಾಗಿ ಕೇರಳದಾದ್ಯಂತ ತನ್ನ ಗ್ರಾಹಕರಿಗೆ 115 ಮ್ಯಾಗ್ನೈಟ್ ಕಾರುಗಳನ್ನು ಡೆಲಿವರಿ ನೀಡಿದೆ. ವಿತರಣೆಗಳು ರಾಜ್ಯದ ನಾಲ್ಕು ನಿಸ್ಸಾನ್ ಡೀಲರ್‌ಶಿಪ್‌ಗಳು ಮತ್ತು ಹತ್ತು ಮಾರಾಟ ಟಚ್‌ಪಾಯಿಂಟ್‌ಗಳಲ್ಲಿ ನಡೆದವು. AMT, Turbo CVT ಮತ್ತು ಮ್ಯಾನುಯಲ್ ವೇರಿಯೆಂಟ್‌ಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಅನ್ನು ವಿತರಿಸಲಾಯಿತು. ಪ್ರತಿಯೊಂದು ಡೀಲರ್‌ಶಿಪ್ ಟಚ್‌ಪಾಯಿಂಟ್ ಹಬ್ಬದ ಸಂಭ್ರಮಾಚರಣೆಯ ವಾತಾವರಣದೊಂದಿಗೆ ನಡೆಸಲಾಗಿದೆ. ಈ ಸಂದರ್ಭವನ್ನು ಎಲ್ಲಾ ಗ್ರಾಹಕರಿಗೆ ಸ್ಮರಣೀಯವಾಗಿಸಲಾಗಿದೆ ಎಂದು ನಿಸ್ಸಾನ್ ಹೇಳಿದೆ.
ನಿಸ್ಸಾನ್‌ನ ಮೊದಲ ಭಾರತ-ನಿರ್ಮಿತ ಎಸ್‌ಯುವಿಯಾಗಿ ಜನಪ್ರಿಯತೆ ಪಡೆದಿರುವ ನಿಸ್ಸಾನ್ ಮ್ಯಾಗ್ನೈಟ್ ಉತ್ತಮ ಕಾರ್ಯಕ್ಷಮತೆ ಮತ್ತು ಮೌಲ್ಯಕ್ಕೆ ಹೆಸರುವಾಸಿಯಾಗಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿರುವ ನಿಸ್ಸಾನ್ ಮ್ಯಾಗ್ನೈಟ್ ಭಾರತದಲ್ಲಿ B-SUV ವಿಭಾಗದಲ್ಲಿ ಬಲವಾದ ಪ್ರಭಾವವನ್ನು ಬೀರಿದೆ. 1,00,000 ಯುನಿಟ್ ಕಾರುಗಳು ದೇಶೀಯವಾಗಿ ಮಾರಾಟವಾಗಿವೆ.

ಇದು ಪ್ರಸ್ತುತ ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಬ್ರೂನಿ, ಕೀನ್ಯಾ, ಮಾರಿಷಸ್, ಮೊಜಾಂಬಿಕ್, ಸೆಶೆಲ್ಸ್, ಉಗಾಂಡಾ, ತಾಂಜಾನಿಯಾ, ಜಾಂಬಿಯಾ, ಬೋಟ್ಸ್‌ವಾನಾ, ನಮೀಬಿಯಾ, ಸ್ವಾಜಿಲ್ಯಾಂಡ್, ಜಿಂಬಾಬ್ವೆ, ನೇಪಾಳ, ಬಾಂಗ್ಲಾದೇಶ, ಮತ್ತು ನೇಪಾಳ ಸೇರಿದಂತೆ 17 ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ ಎಂದು ನಿಸ್ಸಾನ್ ಕಂಪನಿ ತಿಳಿಸಿದೆ.
ಗ್ರಾಹಕರ ವಿಕಸನದ ಅಗತ್ಯಗಳನ್ನು ಪೂರೈಸಲು, ಕಂಪನಿಯು ಇತ್ತೀಚೆಗೆ ನಿಸ್ಸಾನ್ ಮ್ಯಾಗ್ನೈಟ್ EZ-Shift ಮತ್ತು ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯ ಬಿಡುಗಡೆಯೊಂದಿಗೆ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಿದೆ. ಹೆಚ್ಚು ಮಾರಾಟವಾಗುವ ಮ್ಯಾಗ್ನೈಟ್ ಕುಟುಂಬಕ್ಕೆ ಈ ಸೇರ್ಪಡೆಗಳು ವೈವಿಧ್ಯಮಯ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತವೆ ಎಂದು ನಿಸ್ಸಾನ್ ಹೇಳಿದೆ.

ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಮಾತನಾಡಿ, "ಈ ಶುಭ ದಿನದಂದು 115 ಮ್ಯಾಗ್ನೈಟ್ ಕಾರುಗಳನ್ನು ಕೇರಳದ ಗ್ರಾಹಕರಿಗೆ ತಲುಪಿಸುವ ಮೂಲಕ ಚಿಂಗಮ್ ಅನ್ನು ಆಚರಿಸಲು ನಾವು ಸಂತೋಷಪಡುತ್ತೇವೆ. ಚಿಂಗಮ್ ಆರಂಭದೊಂದಿಗೆ ನಮ್ಮ ಡೆಲಿವರಿಗಳನ್ನು ನೀಡಿವ ಮೂಲಕ, ಗ್ರಾಹಕರಿಗೆ ಹೊಸ ವರ್ಷದ ಆರಂಭವನ್ನು ಇನ್ನಷ್ಟು ವಿಶೇಷವಾಗಿಸಿದ್ದೇವೆ ಎಂದರು.
X-TRAIL ಬಿಡುಗಡೆ: ನಿಸ್ಸಾನ್ ಇತ್ತೀಚೆಗೆ ಹೊಸ 4ನೇ ತಲೆಮಾರಿನ 'ಮೇಡ್ ಇನ್ ಜಪಾನ್' X-TRAIL ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ವಿಶ್ವದ ಮೊದಲ ಉತ್ಪಾದನಾ ವೇರಿಯಬಲ್ ಕಂಪ್ರೆಷನ್ ಎಂಜಿನ್ ಅನ್ನು ಒಳಗೊಂಡಿದೆ, ಅಸಾಧಾರಣ ಪವರ್ ಮತ್ತು ಇಂಧನ ದಕ್ಷತೆಯನ್ನು (ಮೈಲೇಜ್) ನೀಡುತ್ತದೆ.

ಇದು D-ಹಂತದ ಲಾಜಿಕ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಇತ್ತೀಚಿನ 3ನೇ ತಲೆಮಾರಿನ XTRONIC CVT ಯನ್ನು ಹೊಂದಿದೆ. ಇದಲ್ಲದೆ, 12V ALiS (ಅಡ್ವಾನ್ಸ್ಡ್ ಲಿಥಿಯಂ-ಐಯಾನ್ ಬ್ಯಾಟರಿ ಸಿಸ್ಟಮ್)ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಇಂಧನ ಆರ್ಥಿಕತೆಯನ್ನು ಗಣನೀಯವಾಗಿ ಸುಧಾರಿಸುತ್ತದೆ, ಟಾರ್ಕ್ ಅಸಿಸ್ಟ್, ವಿಸ್ತೃತ ಐಡಲ್ ಸ್ಟಾಪ್ ಪ್ರಯೋಜನಗಳನ್ನು ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








