ಹ್ಯುಂಡೈ, ಟಾಟಾ ಕಂಪನಿಗಳಿಗೆ ಭಾರೀ ಸ್ಪರ್ಧೆಯೊಡ್ಡುತ್ತಿದೆ ಈ ಕಾರು: ಭರ್ಜರಿ ಡಿಸ್ಕೌಂಟ್‌ಗೆ ಮುಗಿಬಿದ್ದ ಜನ!
ಭಾರತದಲ್ಲಿ ಕೆಲವು ದಿನಗಳ ಹಿಂದಿನವರೆಗೂ ನಿಸ್ಸಾನ್ ಕಂಪನಿ ಮಾರಾಟ ಮಾಡುತ್ತಿರುವ ಏಕೈಕ ವಾಹನವಾಗಿತ್ತು. ಆ ಸಾಲಿಗೆ ಕೆಲವು ವಾರಗಳ ಹಿಂದೆ ಕಂಪನಿಯು ತನ್ನ ಟ್ರೇಲ್ ಎಕ್ಸ್ ಎಂಬ ಕಾರನ್ನು ಸೇರಿಸುವುದರ ಮೂಲಕ ಒಬ್ಬಂಟಿಯಾಗಿದ್ದ ಮ್ಯಾಗ್ನೈಟ್‌ಗೆ ಜೊತೆಗಾರನನ್ನು ನೀಡಿತ್ತು. ಎಂಟ್ರಿ ಲೆವೆಲ್ ಸಬ್ ಕಾಂಪಾಕ್ಟ್ ಎಸ್‌ಯುವಿ ಆಗಿರುವ ಈ ನಿಸ್ಸಾನ್ ಮ್ಯಾಗ್ನೈಟ್ ಭಾರತದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಮಸ್ಕುಲರ್ ಲುಕ್, ಉತ್ತಮವಾದ ಮೈಲೇಜ್ ಹಾಗೂ ಬೇಕಾದಷ್ಟು ಸ್ಥಳಾವಕಾಶ ಈ ಕಾರನ್ನು ಇದೇ ಸೆಗ್ಮೆಂಟ್‌ನ ಇತರ ಕಾರುಗಳಿಗಿಂತ ವಿಶೇಷವಾಗಿದೆ.
ಇದೀಗ ದೊರೆತಿರುವ ಮಾಹಿತಿಗಳ ಪ್ರಕಾರ ಕಂಪನಿ ಭಾರತದಲ್ಲಿ ತನ್ನ ಮ್ಯಾಗ್ನೈಟ್ ಕಾರು ಮಾದರಿಗೆ ಭಾರೀ ಆಫರ್ ಅನ್ನು ನೀಡುತ್ತಿದೆ. ಈ ಮೂಲಕ ಕಾರಿನ ಮಾರಾಟವನ್ನು ಅಧಿಕಗೊಳಿಸಲು ಕಂಪನಿ ಮಾಸ್ಟರ್ ಪ್ಲಾನ್ ಮಾಡಿದೆ ಎಂದರೆ ತಪ್ಪಾಗಲಾರದು. ನೀವೇನಾದರೂ ಹೊಸ ಕಾರನ್ನು ಖರೀದಿಸುವ ಯೋಜನೆಯಲ್ಲಿದ್ದರೆ, ನಿಸ್ಸಾನ್ ಮ್ಯಾಗ್ನೈಟ್ ಖರೀದಿಸಲು ಇದು ಸುಸಮಯ ಎಂದೇ ಹೇಳಬಹುದು.

ಸದ್ಯಕ್ಕೆ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಆಯ್ದ ವೇರಿಯಂಟ್‌ಗಳಿಗೆ ಕಂಪನಿ ಸುಮಾರು ೨೫ ಸಾವಿರ ರೂಗಳ ಹಲವಾರು ಆಕ್ಸಸರಿ ಪ್ಯಾಕ್ ಅನ್ನು ರಿಯಾಯಿತಿ ದರದಲ್ಲಿ ನೀಡುತ್ತಿದೆ. ಇದರ ಜೊತೆಗೆ ೩೫ ಸಾವಿರ ರೂಗಳ ವರೆಗೆ ಎಕ್ಸ್‌ಚೇಂಜ್ ಬೋನಸ್, ಹತ್ತು ಸಾವಿರ ರೂಗಳ ಕಾರ್ಪೋರೇಟ್ ಡಿಸ್ಕೌಂಟ್ ಸಹ ಲಭ್ಯವಿದೆ. ಇದಲ್ಲದೆ ಇನ್ನೂ ಇತರ ಕೊಡುಗೆಗಳ ಜೊತೆಗೆ ೮೫ ಸಾವಿರ ರೂಗಳವರೆಗೆ ಕಂಪನಿ ಡಿಸ್ಕೌಂಟ್ ಲಭ್ಯವಿದೆ.
ಮ್ಯಾಗ್ನೈಟ್ (Nissan Magnite) ಎರಡು ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಯಲ್ಲಿ ದೇಶೀಯ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಹಾಗೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಟರ್ಬೊ ಎಂಜಿನ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ 5 ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ.
ಮ್ಯಾಗ್ನೈಟ್ ಎಸ್‌ಯುವಿ ಬಿಡುಗಡೆಯಾಗಿ ಮೂರು ವರ್ಷಗಳು ಕಳೆದಿದ್ದು, ನಿಸ್ಸಾನ್ ಈ ಬಾರಿ ವಿಶ್ವಕಪ್ ಪ್ರಾಯೋಜಿಕತ್ವ ವಹಿಸಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ಕಂಪನಿ ಮುಂದಾಗಿದ್ದು, ಮ್ಯಾಗ್ನೈಟ್ ನವೀನ ರೂಪಾಂತರಗಳನ್ನು ಬಿಡುಗಡೆಗೊಳಿಸುತ್ತಿದೆ. ನಿಸ್ಸಾನ್ - ರೆನಾಲ್ಟ್ ಕಂಪನಿಯೊಂದಿಗೆ ಪಾಲುದಾರಿಗೆ ಹೊಂದಿದ್ದು, ರೆನಾಲ್ಟ್ ಇಸಿ-ಆರ್ ಕಾರಿನಿಂದ 5-ಸ್ವೀಡ್ ಆಟೋಮೇಟೆಡ್ ಮ್ಯಾನುವಲ್ (ಎಎಂಟಿ) ಗೇರ್‌ಬಾಕ್ಸ್ ಪಡೆಯಲು ತಿರ್ಮಾನಿಸಿತು.
ಎಂಟಿ ಗೇರ್‌ಬಾಕ್ಸ್ ಪಡೆದುಕೊಂಡಿರುವುದರಿಂದ ಮ್ಯಾಗ್ನೈಟ್ ಈ ರೂಪಾಂತರಕ್ಕೆ 'ಇಝಡ್-ಶಿಫ್ಟ್' ಎಂಬ ಹೆಸರು ಬಂದಿದೆ. ಹಿಂಭಾಗದಲ್ಲಿ ಇಝಡ್-ಶಿಫ್ಟ್ (EZ-Shift) ಬ್ಯಾಡ್ಜ್ ಹೊಂದಿದೆ. ಸಿವಿಟಿ (CVT) ಗೇರ್‌ಬಾಕ್ಸ್ ಆಯ್ಕೆಯೊಂದಿರುವ ರೂಪಾಂತರಕ್ಕೆ ಹೋಲಿಸಿದರೆ, ಸ್ವಲ್ಪ ಭಿನ್ನವಾದ ಶಿಫ್ಟರ್ ಹೊಂದಿದ್ದು, ಹೊಸ ಲಿವರ್, ಅದರ ಶೈನಿ ಕ್ರೋಮ್ ಸೆಂಟರ್ ನಲ್ಲಿ ವಿಭಿನ್ನ ಮೋಡ್‌ಗಳನ್ನು ಪಡೆದಿದೆ.
ಹೊಸ ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ರೂಪಾಂತರದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆಶ್ಚರ್ಯ ಸಂಗತಿಯೊಂದು ಇಲ್ಲಿದೆ. ಇದು, 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಜೊತೆಯಲ್ಲಿ ಎಎಂಟಿ ಗೇರ್‌ಬಾಕ್ಸ್ ಹೊಂದಿರುವ ಏಕೈಕ ಆವೃತ್ತಿಯಾಗಿದೆ. ಟರ್ಬೋಚಾರ್ಜ್ಡ್ ಎಂಜಿನ್ ನಿಸ್ಸಾನ್ ಮ್ಯಾಗ್ನೈಟ್ ಆವೃತ್ತಿಯು ಇನ್ನೂ ಸಿವಿಟಿ (CVT) ಗೇರ್‌ಬಾಕ್ಸ್ ಆಯ್ಕೆಯನ್ನು ಹಾಗೆಯೇ ಉಳಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








