ಕೇವಲ 6 ಲಕ್ಷಕ್ಕೆ ಸಿಗುವ ಉತ್ತಮ ಎಸ್‌ಯುವಿಗಳು: 27 ಕಿ.ಮೀ ಮೈಲೇಜ್, ಆದ್ರೆ ಬೆಸ್ಟ್ ಯಾವುದು?
ನೀವು ರೂ.6 ಲಕ್ಷ (ಎಕ್ಸ್ ಶೋರೂಂ)ದೊಳಗೆ ಒಂದೊಳ್ಳೆ ಸಣ್ಣ ಎಸ್‌ಯುವಿಯನ್ನು ನೋಡುತ್ತಿದ್ದರೇ, ಈ ಲೇಖನ ನಿಮಗೆ ತುಂಬಾ ಸಹಕಾರಿಯಾಗಬಹುದು. ಈ ಬೆಲೆಯಲ್ಲಿ ನೀವು ಎರಡು ಅದ್ಭುತ ಆಯ್ಕೆಗಳನ್ನು ಹೊಂದಿದ್ದೀರಿ, ಹೌದು ಹ್ಯುಂಡೈ ಎಕ್ಸ್ಟರ್ ಹಾಗೂ ನಿಸ್ಸಾನ್ ಮ್ಯಾಗ್ನೈಟ್ ಕಾರುಗಳು ರೂ.6 ಲಕ್ಷ (ಎಕ್ಸ್ ಶೋರೂಂ)ದೊಳಗೆ ಖರೀದಿಗೆ ಸಿಗುತ್ತವೆ. ಎರಡು ಕಾರುಗಳನ್ನು ಅವುಗಳ ಬೆಲೆ, ಮೈಲೇಜ್, ವೈಶಿಷ್ಟ್ಯಗಳು, ವೇರಿಯೆಂಟ್‌ಗಳು ಮತ್ತು ಇತರ ವಿಶೇಷಣಗಳ ಆಧಾರದ ಮೇಲೆ ಹೋಲಿಸಿ ಇಲ್ಲಿ ವಿವರಿಸಿದ್ದೇವೆ. ಈ ವಿವರಗಳು ನಿಮ್ಮ ಹೊಸ ಕಾರಿನ ಖರೀದಿಗೆ ಸಹಕರಿಸಲಿವೆ.
ಬೆಲೆ & ವೇರಿಯೆಂಟ್‌ಗಳು: ಹ್ಯುಂಡೈ ಎಕ್ಸ್ಟರ್ ಆರಂಭಿಕ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.6 ಲಕ್ಷವಿದ್ದು, ಒಂಬತ್ತು ವೇರಿಯೆಂಟ್‌ಗಳಲ್ಲಿ ಬರುತ್ತದೆ. ಎಕ್ಸ್, ಎಕ್ಸ್ (ಒ), ಎಸ್, ಎಸ್ ಪ್ಲಸ್, ಎಸ್ (ಒ), ಎಸ್ (ಒ) ಪ್ಲಸ್, ಎಸ್ಎಕ್ಸ್, ಎಸ್ಎಕ್ಸ್ (ಒ) ಮತ್ತು ಎಸ್ಎಕ್ಸ್ (ಒ) ಕನೆಕ್ಟ್ ಸೇರಿದಂತೆ ನೈಟ್ ಆವೃತ್ತಿಯು ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒ) ಕನೆಕ್ಟ್ ರೂಪಾಂತರಗಳನ್ನು ಆಧರಿಸಿದೆ. ಹೆಚ್ಚುವರಿಯಾಗಿ, ಸಿಎನ್‌ಜಿ ಆಯ್ಕೆಯಲ್ಲೂ ಲಭ್ಯವಿದೆ.

ನಿಸ್ಸಾನ್ ಮ್ಯಾಗ್ನೈಟ್ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 5.99 ಲಕ್ಷಗಳಾಗಿದೆ. ನಿಸ್ಸಾನ್ ಮ್ಯಾಗ್ನೈಟ್ ಫೇಸ್ ಲಿಫ್ಟ್ ಆರು ವಿಶಾಲ ರೂಪಾಂತರಗಳಲ್ಲಿ ಬರುತ್ತದೆ, ಅವುಗಳೆಂದರೆ ವಿಸಿಯಾ, ವಿಸಿಯಾ ಪ್ಲಸ್, ಅಸೆಂಟಾ, ಎನ್-ಕನೆಕ್ಟಾ, ಟೆಕ್ನಾ ಮತ್ತು ಟೆಕ್ನಾ ಪ್ಲಸ್ ಎಂಬ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.
ವೈಶಿಷ್ಟ್ಯಗಳು: ನೀವು ಆಯ್ಕೆ ಮಾಡುವ ವೇರಿಯೆಂಟ್‌ಗೆ ಅನುಗುಣವಾಗಿ ಫೀಚರ್ಸ್ ಬದಲಾಗುತ್ತವೆ. ಹ್ಯುಂಡೈ ಎಕ್ಸ್‌ಟರ್‌ನಲ್ಲಿ ಎಲ್ಇಡಿ ಡಿಆರ್ಎಲ್‌ಗಳು, 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಕನೆಕ್ಟೆಡ್ ಕಾರ್ ಟೆಕ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಎಸಿನಂತಹ ಕೆಲವು ಪ್ರಮುಖ ವೈಶಿಷ್ಟ್ಯಗಳಿವೆ. ಇದು ಸನ್‌ರೂಫ್ ಮತ್ತು ಡ್ಯುಯಲ್ ಕ್ಯಾಮೆರಾ ಹೊಂದಿರುವ ಡ್ಯಾಶ್ ಕ್ಯಾಮ್ ಸಹ ಹೊಂದಿದೆ.

ನಿಸ್ಸಾನ್ ಮ್ಯಾಗ್ನೈಟ್ 8-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋ-ಡಿಮ್ಮಿಂಗ್ ಐಆರ್ ವಿಎಂ ಮತ್ತು ನಾಲ್ಕು-ಬಣ್ಣದ ಆಂಬಿಯೆಂಟ್ ಲೈಟಿಂಗ್ ಹೊಂದಿದೆ. ಜೊತೆಗೆ ಕೂಲ್ಡ್ ಗ್ಲೋವ್ ಬಾಕ್ಸ್, ಅದರ ಕೆಳಗೆ ಸ್ಟೋರೇಜ್ ಸ್ಪೇಸ್ ಹೊಂದಿರುವ ಫ್ರಂಟ್ ಆರ್ಮ್ರೆಸ್ಟ್ ಮತ್ತು ವೈರ್ ಲೆಸ್ ಫೋನ್ ಚಾರ್ಜರ್ ಅನ್ನು ಸಹ ಪಡೆಯುತ್ತದೆ. ಇದು ರಿಮೋಟ್ ಎಂಜಿನ್ ಸ್ಟಾರ್ಟ್ ವೈಶಿಷ್ಟ್ಯವನ್ನು ಸಹ ಪಡೆದಿದೆ.
ಎಂಜಿನ್: ನಿಸ್ಸಾನ್ ಮ್ಯಾಗ್ನೈಟ್ ಫೇಸ್ ಆವೃತ್ತಿಯು 1 - ಲೀಟರ್ ನ್ಯಾಚುರಲಿ - ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 5 - ಸ್ಪೀಡ್ ಮ್ಯಾನುವಲ್ ಅಥವಾ 5 - ಸ್ಪೀಡ್ ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್ಮಿಷನ್‌ನೊಂದಿಗೆ ಬರುತ್ತದೆ. ಹಾಗೆಯೇ 1 - ಲೀಟರ್ ಟರ್ಬೊ - ಪೆಟ್ರೋಲ್ ಎಂಜಿನ್, 5 - ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ನೊಂದಿಗೆ ಬರುತ್ತದೆ.

ಹ್ಯುಂಡೈ ಎಕ್ಸ್‌ಟರ್‌ನಲ್ಲಿ 1.2 - ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 5 - ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 5 - ಸ್ಪೀಡ್ ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಬರುತ್ತದೆ. ಇದರ ಜೊತೆಗೆ 1.2 - ಲೀಟರ್ ಪೆಟ್ರೋಲ್ ಸಿಎನ್ ಜಿ ಆಯ್ಕೆಯಿದ್ದು, ಇದು 5 - ಸ್ಪೀಡ್ ಮ್ಯಾನುವಲ್ ನೊಂದಿಗೆ ಮಾತ್ರ ಬರುತ್ತದೆ.
ಮೈಲೇಜ್: ಹ್ಯುಂಡೈ ಎಕ್ಸ್‌ಟರ್ 1.2-ಲೀಟರ್ ಪೆಟ್ರೋಲ್ ಎಂಟಿ-19.4 ಕಿ.ಮೀ, 1.2-ಲೀಟರ್ ಪೆಟ್ರೋಲ್ ಎಎಂಟಿ-19.2 ಕಿ.ಮೀ ಹಾಗೂ 1.2-ಲೀಟರ್ ಸಿಎನ್‌ಜಿನಲ್ಲಿ 27.1 ಕಿ.ಮೀ ಮೈಲೇಜ್ ಬರುತ್ತದೆ. ನಿಸ್ಸಾನ್ ಮ್ಯಾಗ್ನೈಟ್ 1-ಲೀಟರ್ ಎಂಟಿ 19.4 ಕಿ.ಮೀ, 1-ಲೀಟರ್ ಎಎಂಟಿ 19.7 ಕಿ.ಮೀ, 1-ಲೀಟರ್ ಟರ್ಬೊ-ಪೆಟ್ರೋಲ್ ಎಂಟಿ 19.9 ಕಿ.ಮೀ ಹಾಗೂ 1-ಲೀಟರ್ ಟರ್ಬೊ ಪೆಟ್ರೋಲ್ ಸಿವಿಟಿ 17.9 ಕಿ.ಮೀ ಮೈಲೇಜ್ ನೀಡುತ್ತವೆ.


Click it and Unblock the Notifications