ಭಾರತದಲ್ಲಿ ಗತವೈಭವಕ್ಕೆ ಮರಳುತ್ತಿದೆ ನಿಸ್ಸಾನ್: ಈ ಕಾರಿದ್ದರೇ ಕಂಪನಿಗೆ ಎಲ್ಲವೂ ಸಾಧ್ಯ!

ನಿಸ್ಸಾನ್ ಮೋಟಾರ್ ಇಂಡಿಯಾ, ತನ್ನ ರಫ್ತು ಕಾರ್ಯಾಚರಣೆಯ ಪ್ರಾರಂಭದಿಂದ ಇಲ್ಲಿಯವರೆಗೆ 1.1 ಮಿಲಿಯನ್ ಯುನಿಟ್ ಕಾರುಗಳ ರಫ್ತು ಮೈಲಿಗಲ್ಲನ್ನು ದಾಟಿದೆ ಎಂದು ಘೋಷಿಸಿದೆ. ಕಂಪನಿಯು 29 ಜೂನ್ 2024 ರಂದು ತಮಿಳುನಾಡಿನ ಎನ್ನೋರ್ ಕಾಮರಾಜರ್ ಬಂದರಿನಲ್ಲಿ 1.1 ಮಿಲಿಯನ್ ಯುನಿಟ್‌ಗಳನ್ನು ದಾಟುವ ಈ ಗಮನಾರ್ಹ ಸಾಧನೆಯನ್ನು ತಲುಪಿದೆ. 1.1ನೇ ಮಿಲಿಯನ್‌ ಮೈಲಿಗಲ್ಲಿನ ಕಾರಾಗಿ ನಿಸ್ಸಾನ್ ಮ್ಯಾಗ್ನೈಟ್ ರಫ್ತಾದ ಕಾರಾಗಿ ಗುರ್ತಿಸಿಕೊಂಡಿದೆ. ಇನ್ನು ಕಂಪನಿಯು ಜೂನ್ ತಿಂಗಳ ಮಾರಾಟವನ್ನು ಸಹ ಘೋಷಿಸಿದ್ದು, ಆ ಕುರಿತ ವಿವರಗಳನ್ನು ಇಲ್ಲಿ ನೋಡೋಣ.

ಕಂಪನಿಯು 2024ರ ಜೂನ್ ತಿಂಗಳಲ್ಲಿ 10,284 ಯುನಿಟ್‌ ಕಾರುಗಳು ಮಾರಾಟವಾಗಿರುವುದಾಗಿ ಘೋಷಿಸಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ ಶೇ 76.3 ರಷ್ಟು ಮತ್ತು ತಿಂಗಳಿನಿಂದ ತಿಂಗಳಿಗೆ ಶೇ65.7 ರಷ್ಟು ಬೆಳವಣಿಗೆ ದಾಖಲಿಸಿದೆ. ಹಾಗೆಯೇ ಇದೇ ತಿಂಗಳ ರಫ್ತು ವಿಷಕಯಕ್ಕೆ ಬಂದರೆ 8,177 ಯೂನಿಟ್‌ ಕಾರುಗಳನ್ನು ಇತರ ದೇಶಗಳಿಗೆ ಕಳುಹಿಸಿದೆ. ಶೇ149 ವಾರ್ಷಿಕ ಬೆಳವಣಿಗೆ ಮತ್ತು ಶೇ104 ತಿಂಗಳ ಬೆಳವಣಿಗೆ ದಾಖಲಿಸಿದೆ.

nissan-motor-india-crosses-export-milestone-of-1-1-million-units

ನಿಸ್ಸಾನ್ ಇಂಡಿಯಾವು ನಿಸ್ಸಾನ್ ಮ್ಯಾಗ್ನೈಟ್‌ನೊಂದಿಗೆ ಉತ್ತಮ ಬೇಡಿಕೆ ಗಳಿಸಿದೆ. ಇದು ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಡಿಸೆಂಬರ್ 2020 ರಲ್ಲಿ ಬಿಡುಗಡೆಯಾದಾಗಿನಿಂದ, ಮ್ಯಾಗ್ನೈಟ್ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಇಲ್ಲಿಯವರೆಗೆ 1,40,000 ಯುನಿಟ್‌ಗಳು ಭಾರತ ಮತ್ತು ವಿದೇಶಗಳಲ್ಲಿ ಮಾರಾಟವಾಗಿವೆ ಎಂದು ಕಂಪನಿ ಹೇಳಿದೆ.

ನಿಸ್ಸಾನ್ ಮ್ಯಾಗ್ನೈಟ್ ಅನ್ನು 15 ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಕೂಡ ಮಾಡಲಾಗಿದೆ. ಸೀಶೆಲ್ಸ್, ಬಾಂಗ್ಲಾದೇಶ, ಉಗಾಂಡಾ ಮತ್ತು ಬ್ರೂನಿಯಲ್ಲಿ ಇತ್ತೀಚಗೆ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ನಿಸ್ಸಾನ್ ಮೋಟಾರ್ ಇಂಡಿಯಾ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಓಮನ್, ಕತಾರ್, ಬಹ್ರೇನ್ ಮತ್ತು ಕುವೈತ್‌ಗೆ ರಫ್ತು ಮಾಡುವತ್ತ ಗಮನಹರಿಸಿದೆ.

nissan-motor-india-crosses-export-milestone-of-1-1-million-units

ಕಂಪನಿ ಬೆಳವಣಿಗೆಯ ಕಾರ್ಯತಂತ್ರದ ಭಾಗವಾಗಿ, ನಿಸ್ಸಾನ್ ಮೋಟಾರ್ ಇಂಡಿಯಾ ದೇಶಾದ್ಯಂತ ತನ್ನ ನೆಟ್‌ವರ್ಕ್ ಅನ್ನು ವಿಸ್ತರಿಸುತ್ತಿದೆ. ಶ್ರೀನಗರ, ಸೇಲಂ, ದೆಹಲಿ ಮತ್ತು ದುರ್ಗಾಪುರದಲ್ಲಿ ಇತ್ತೀಚಿನ ಸೇರ್ಪಡೆಗಳೊಂದಿಗೆ, ನಿಸ್ಸಾನ್ ಈಗ 272 ಟಚ್‌ಪಾಯಿಂಟ್‌ಗಳ ನೆಟ್‌ವರ್ಕ್ ಅನ್ನು ಹೊಂದಿದೆ. ರಾಷ್ಟ್ರವ್ಯಾಪಿ ಗುಣಮಟ್ಟದ ಮಾರಾಟ ಮತ್ತು ಸೇವಾ ಅನುಭವ ಒದಗಿಸುವ ಗುರಿ ಹೊಂದಿರುವುದಾಗಿ ಹೇಳಿಕೊಂಡಿದೆ.

ಹಲವು ಸವಾಲುಗಳ ಹೊರತಾಗಿಯೂ, ನಾವು ಚೇತರಿಸಿಕೊಳ್ಳುತ್ತಿದ್ದೇವೆ, ಚುರುಕುತನದೊಂದಿಗೆ ಮಾರುಕಟ್ಟೆಯ ಚಂಚಲತೆಗೆ ಹೊಂದಿಕೊಳ್ಳುತ್ತಿದ್ದೇವೆ. ಭಾರತದಲ್ಲಿ ಮತ್ತು ನಮ್ಮ ರಫ್ತು ಮಾರುಕಟ್ಟೆಗಳಲ್ಲಿ ನಮ್ಮ ಗ್ರಾಹಕರ ವಿಕಸನದ ಆದ್ಯತೆಗಳಿಗೆ ಚುರುಕುತನ ಮತ್ತು ಸ್ಪಂದಿಸುವುದನ್ನು ಮುಂದುವರಿಸುತ್ತೇವೆ. ಸಾಮರ್ಥ್ಯ ಮತ್ತು ಹೊಂದಾಣಿಕೆಯ ಜೊತೆಗೆ ನಾವೀನ್ಯತೆಯ ಮೇಲೆ ಕೇಂದ್ರೀಕರಿಸುತ್ತೇವೆ ಎಂದು ಕಂಪನಿ ಹೇಳಿದೆ.

ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಮಾತನಾಡಿ, "ಈ ಅದ್ಭುತ ಮತ್ತು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ನಾವು ಇಡೀ ತಂಡವನ್ನು ಅಭಿನಂದಿಸುತ್ತೇವೆ. ಮ್ಯಾಗ್ನೈಟ್ ಮತ್ತು ಸನ್ನಿ ನಮ್ಮ ರಫ್ತು ವ್ಯವಹಾರವನ್ನು ಮುನ್ನಡೆಸುತ್ತಿವೆ. ಪ್ರಮುಖ ಮಾರುಕಟ್ಟೆಗಳಲ್ಲಿ, ಭಾರತದಲ್ಲಿ ತಯಾರಿಸಲಾದ ನಿಸ್ಸಾನ್ ಕಾರುಗಳಿಗೆ ಸಾಟಿಯಿಲ್ಲದ ಬೇಡಿಕೆಯನ್ನು ಪಡಿಯುತ್ತಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, July 3, 2024, 11:41 [IST]
English summary
Nissan motor india crosses export milestone of 1 1 million units
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+