Nissan X-Trail: ನಾಳೆ ಬಹುನಿರೀಕ್ಷಿತ ನಿಸ್ಸಾನ್ ಎಕ್ಸ್-ಟ್ರಯಲ್ ಕಾರು ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?

ಜಪಾನ್ ಮೂಲದ ನಿಸ್ಸಾನ್ (Nissan) ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಏಕೈಕ ಮ್ಯಾಗ್ನೈಟ್ (Magnite) ಎಸ್‌ಯುವಿಯನ್ನು ಮಾರಾಟ ಮಾಡುತ್ತಿದೆ. ಈ ಕಾರು ನವೀನ ವಿನ್ಯಾಸ ಮತ್ತು ವೈಶಿಷ್ಟ್ಯ ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳುತ್ತಿದ್ದಾರೆ. ಆ ಕಾರಣಕ್ಕೆ ಗೇಮ್ ಚೇಂಚರ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಸದ್ಯ, ನಿಸ್ಸಾನ್ ಕಂಪನಿಯು ಮತ್ತಷ್ಟು ಸಂಖ್ಯೆಯಲ್ಲಿ ಖರೀದಿದಾರರನ್ನು ಆಕರ್ಷಿಸಲು ನಾಳೆ (ಆಗಸ್ಟ್ 1) ಎಕ್ಸ್-ಟ್ರಯಲ್ (X-Trail) ಕಾರನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಿದೆ. ಇದೊಂದು ಫುಲ್-ಸೈಜ್ ಎಸ್‌ಯುವಿಯಾಗಿದೆ.

ವಿನ್ಯಾಸ (Design): ನೂತನ ನಿಸ್ಸಾನ್ ಎಕ್ಸ್-ಟ್ರಯಲ್ (Nissan X-Trail) ಎಸ್‌ಯುವಿ ಅತ್ಯಾಧುನಿಕ ವಿನ್ಯಾಸವನ್ನು ಪಡೆದಿದೆ. ದೇಶೀಯವಾಗಿ ಕೆಲವೇ ದಿನಗಳ ಹಿಂದೆ ಈ ಕಾರನ್ನು ಅನಾವರಣ ಮಾಡಲಾಗಿತ್ತು. ಇದು 4,680 ಎಂಎಂ ಉದ್ದ, 1,840 ಎಂಎಂ ಅಗಲ ಹಾಗೂ 1,725 ​​ಎಂಎಂ ಎತ್ತರವಿದೆ. ಹೊರಭಾಗದಲ್ಲಿ ಆಕರ್ಷಕವಾದ ಗ್ರಿಲ್, ಎಲ್ಇಡಿ ಹೆಡ್‌ಲೈಟ್‌ಗಳು, 20-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಮತ್ತು 255/40 ಅಳತೆಯ ಟೈರ್‌ಗಳನ್ನು ಹೊಂದಿದೆ. ಹಾಗೆಯೇ ಒಳಭಾಗದ ವಿನ್ಯಾಸ ಸಹ ಉತ್ತಮವಾಗಿದೆ.

Nissan X-Trail Car Launch Tomorrow Expected Price Details

ಕಾರ್ಯಕ್ಷಮತೆ (Performance): ಈ ಕಾರು 1.5-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 12ವಿ ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ.160 ಬಿಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಮತ್ತು 300 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಸಿವಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ. ಇಕೋ, ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ವೈಶಿಷ್ಟ್ಯಗಳು (Features): ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿ ಯುವ ಗ್ರಾಹಕರನ್ನು ಸೆಳೆಯುವ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ ಕನೆಕ್ಟಿವಿಟಿ, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ಡಿಮ್ಮಿಂಗ್ ಐಆರ್‌ವಿಎಂ, ವೈರ್‌ಲೆಸ್ ಚಾರ್ಜರ್‌ ಹಾಗೂ ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್‌ಗಳನ್ನು ಪಡೆದಿದೆ.

Nissan X-Trail Car Launch Tomorrow Expected Price Details

ಸುರಕ್ಷತಾ ವೈಶಿಷ್ಟ್ಯಗಳು (Safety Features): ಹೊಸ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 7 ಏರ್‌ಬ್ಯಾಗ್‌, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್) ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ವಿಡಿಸಿ (ವೆಹಿಕಲ್ ಡೈನಾಮಿಕ್ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಟ್ರಾಕ್ಷನ್ ಕಂಟ್ರೋಲ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಆಸನ ಆಯ್ಕೆ, ಬೆಲೆ (Seat capacity, Price): ನಿಸ್ಸಾನ್ ಎಕ್ಸ್-ಟ್ರಯಲ್ 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಲು ಹೆಚ್ಚು ಸೂಕ್ತವಾಗಿದೆ. ಈಗಾಗಲೇ ಬುಕ್ಕಿಂಗ್ ಆರಂಭವಾಗಿದ್ದು, ರೂ.1 ಲಕ್ಷ ಮುಂಗಡ ಹಣವನ್ನು ಪಾವತಿಸುವ ಮೂಲಕ ಕಾಯ್ದಿರಿಸಬಹುದು. ಪರ್ಲ್ ವೈಟ್, ಡೈಮಂಡ್ ಬ್ಲ್ಯಾಕ್ ಮತ್ತು ಷಾಂಪೇನ್ ಸಿಲ್ವರ್ ಎಂಬ ಬಣ್ಣಗಳೊಂದಿಗೂ ಲಭ್ಯವಿದ್ದು, ರೂ.28 ಲಕ್ಷದಿಂದ ರೂ.32 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

Nissan X-Trail Car Launch Tomorrow Expected Price Details

ಪ್ರತಿಸ್ಪರ್ಧಿ ಕಾರುಗಳು (Rival Cars): ಈ ಕಾರಿಗೆ ಟೊಯೊಟಾ ಫಾರ್ಚುನರ್, ಜೀಪ್ ಮೆರಿಡಿಯನ್, ಎಂಜಿ ಗ್ಲೋಸ್ಟರ್, ಹ್ಯುಂಡೈ ಟಕ್ಸನ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಟಾಟಾ ಸಫಾರಿಗಳು ಪ್ರಬಲ ಎದುರಾಳಿಯಾಗಿವೆ. ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿ ಮೇಲೆ ಗ್ರಾಹಕರು ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಡುಗಡೆಗೊಂಡ ನಂತರ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, July 31, 2024, 10:39 [IST]
English summary
Nissan x trail car launch tomorrow expected price details
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+