7-ಆಸನಗಳ ಬೆಸ್ಟ್ ಫ್ಯಾಮಿಲಿ ಕಾರಿದು: ಗ್ರಾಹಕರು ಖರೀದಿಸುತ್ತಿಲ್ಲ.. ಅಕ್ಟೋಬರ್‌ನಲ್ಲಿ ಕೇವಲ ಎರಡು ಕಾರು ಮಾರಾಟ!

ನಿಸ್ಸಾನ್ (Nissan), ಪ್ರಮುಖ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇತ್ತಿಚೆಗೆ ಅಕ್ಟೋಬರ್ (2024) ತಿಂಗಳ ಕಾರು ಮಾರಾಟದ ಅಂಕಿಅಂಶಗಳ ವರದಿ ಪ್ರಕಟಗೊಂಡಿದ್ದು, 'ಮ್ಯಾಗ್ನೈಟ್' ಎಸ್‌ಯುವಿ ನೆರವಿನಿಂದ ಕಂಪನಿಯು ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಕಳೆದ ತಿಂಗಳು ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆ, 3,121 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 2,573 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 21% ಬೆಳವಣಿಗೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಮಾರಾಟ ಮಾಡಿದ 2,113 ಯುನಿಟ್‌ಗೆ ಹೋಲಿಸಿದರೆ ತಿಂಗಳ ಮಾರಾಟದಲ್ಲಿಯೂ ಶೇಕಡ 48% ಅಭಿವೃದ್ಧಿ ಸಾಧಿಸಲಾಗಿದೆ.

ನಿಸ್ಸಾನ್ ಕಂಪನಿ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಈ ಆಗಸ್ಟ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದ್ದ ಹೊಚ್ಚ ಹೊಸ ಫ್ಯಾಮಿಲಿ ಎಸ್‌ಯುವಿ ಎಕ್ಸ್-ಟ್ರಯಲ್ (X-Trail) ಮಾರಾಟ ಮಾತ್ರ ಕುಸಿತವಾಗಿದೆ. ಸೆಪ್ಟೆಂಬರ್‌ನಲ್ಲಿ 13 ಯುನಿಟ್‌ ಎಕ್ಸ್-ಟ್ರಯಲ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡಲಾಗಿತ್ತು ಅಕ್ಟೋಬರ್‌ನಲ್ಲಿ ಕೇವಲ 2 ಯುನಿಟ್‌ಗಳನ್ನು ಮಾತ್ರ ಮಾರಲಾಗಿದೆ. ಮಾರಾಟ ಪ್ರಮಾಣ ಇಳಿಮುಖವಾಗುತ್ತಿರುವ ಬಗ್ಗೆ ನಿಖರವಾದ ಕಾರಣಗಳು ಬಹಿರಂಗಗೊಂಡಿಲ್ಲ. ಈ ನವೆಂಬರ್‌ನಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

Nissan X-trail Suv October 2024 Sales Report Only Two Units Delivered Details

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ನೂತನ 'ನಿಸ್ಸಾನ್ ಎಕ್ಸ್-ಟ್ರಯಲ್' ಕಾರು, ರೂ.49.92 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಪರ್ಲ್ ವೈಟ್ & ಡೈಮಂಡ್ ಬ್ಲ್ಯಾಕ್ ಸೇರಿದಂತೆ 3 ಬಣ್ಣಗಳನ್ನು ಪಡೆದಿದೆ. ಈ ಎಸ್‌ಯುವಿ ಹೊರಭಾಗದಲ್ಲಿ ಅತ್ಯಾಕರ್ಷಕ ವಿನ್ಯಾಸವನ್ನು ಒಳಗೊಂಡಿದ್ದು, ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಹೊಂದಿದೆ.

ಈ ಕಾರು 12ವಿ ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿರುವ 1.5-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 160 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 300 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಸಿವಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ. ಜೊತೆಗೆ ಇಕೋ, ಸ್ಟ್ಯಾಂಡರ್ಡ್ & ಸ್ಪೋರ್ಟ್ ಎಂಬ 3 ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

Nissan X-trail Suv October 2024 Sales Report Only Two Units Delivered Details

ನೂತನ ನಿಸ್ಸಾನ್ ಎಕ್ಸ್-ಟ್ರಯಲ್ ಕಾರು, 7 ಆಸನ (ಸೀಟ್) ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (8-ಇಂಚು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (12.3-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್‌, ಪನೋರಮಿಕ್ ಸನ್‌ರೂಫ್ ಹಾಗೂ ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಎಕ್ಸ್-ಟ್ರಯಲ್ ಎಸ್‌ಯುವಿ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್) ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ವಿಡಿಸಿ (ವೆಹಿಕಲ್ ಡೈನಾಮಿಕ್ ಕಂಟ್ರೋಲ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

Nissan X-trail Suv October 2024 Sales Report Only Two Units Delivered Details

ಇದೆಲ್ಲ ಒಂದು ಕಡೆಯಾದರೆ ನಿಸ್ಸಾನ್ ಕಂಪನಿಯ ಗೇಮ್ ಚೇಂಜರ್ ಎಸ್‌ಯುವಿ ಎಂದೇ ಬಣ್ಣಿಸಲಾದ ಮ್ಯಾಗ್ನೈಟ್ (Magnite) ಕಾರಿನ ಮಾರಾಟ ಮಾತ್ರ ಹೆಚ್ಚಾಗುತ್ತಲೇ ಇದೆ. ಕಳೆದ ತಿಂಗಳು (ಅಕ್ಟೋಬರ್-2024) 3,119 ಯುನಿಟ್ ಮ್ಯಾಗ್ನೈಟ್ ಕಾರುಗಳನ್ನು ಮಾರಾಟಗೊಳಿಸಲಾಗಿದೆ. 2023ರ ಅಕ್ಟೋಬರ್‌ನಲ್ಲಿ ಮಾರಲ್ಪಟ್ಟ 2,573 ಯುನಿಟ್‌ಗಳಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 21% ಬೆಳವಣಿಗೆಯಾಗಿದೆ. ಸೆಪ್ಟೆಂಬರ್‌ನಲ್ಲಿ 2,100 ಯುನಿಟ್‌ಗಳನ್ನು ಮಾರಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ ತಿಂಗಳ ಮಾರಾಟ ಪ್ರಮಾಣ 49% ಪ್ರಗತಿಯಾಗಿದೆ.

ಈ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ ರೂ.5.99 ಲಕ್ಷದಿಂದ ರೂ.11.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 17.4 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಜನರು ಓಡಾಟ ನಡೆಸಬಹುದು.

ನೂತನ ಕಾರು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (8-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (7-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 4-ಕಲರ್ ಆಂಬಿಯೆಂಟ್ ಲೈಟಿಂಗ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360-ಡಿಗ್ರಿ ಕ್ಯಾಮೆರಾಗಳನ್ನು ಪಡೆದಿದೆ.

More from DriveSpark

Article Published On: Monday, November 18, 2024, 12:19 [IST]
English summary
Nissan x trail suv october 2024 sales report only two units delivered details
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+