ಫಾರ್ಚೂನರ್‌ಗೆ ಸರಿಯಾದ ಪ್ರತಿಸ್ಪರ್ಧಿ ಬರುತ್ತಿದೆ! ರಾಜಕಾರಣಿಗಳು ಈ ಕಾರಿಗಾಗಿ ಮುಗಿಬೀಳಲಿದ್ದಾರೆ!

ಜನಪ್ರಿಯ ಕಾರು ತಯಾರಕ ಕಂಪನಿ ನಿಸ್ಸಾನ್ (Nissan) ಬಗ್ಗೆ ಪ್ರತ್ಯೇಕವಾಗಿ ಪರಿಚಯಿಸುವ ಅಗತ್ಯವಿಲ್ಲ. ಒಂದು ಕಾಲದಲ್ಲಿ ಭಾರತದಲ್ಲಿ ಉತ್ತಮ ಬೇಡಿಕೆಯೊಂದಿಗೆ ಜನಪ್ರಿಯತೆ ಪಡೆದಿದ್ದ ಬ್ರಾಂಡ್ ಇದು, ಏಪ್ರಿಲ್ 2023 ರಲ್ಲಿ ತನ್ನ ಕಿಕ್ಸ್ ಕಾರನ್ನು ಸ್ಥಗಿತಗೊಳಿಸಿದ ನಂತರ, ಮ್ಯಾಗ್ನೈಟ್ ಅನ್ನು ದೇಶದಲ್ಲಿ ನಿಸ್ಸಾನ್‌ನ ಏಕೈಕ ಕೊಡುಗೆಯಾಗಿ ಮುಂದುವರಿಸುತ್ತಿದೆ.

ಕಂಪನಿಯು ಇದೀಗ ಹೊಸ ಅಲೆ ಎಬ್ಬಿಸಲು ನಿಸ್ಸಾನ್ ಎಕ್ಸ್-ಟ್ರೈಲ್ (Nissan X-Trail) ಎಂಬ ಎಸ್‌ಯುವಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ಕಾರನ್ನು ಭಾರತದಲ್ಲಿ ಇನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲವಾದರೂ, ಕೆಲವು ತಿಂಗಳ ಹಿಂದೆ ಎಕ್ಸ್-ಟ್ರೈಲ್ ಎಸಯುವಿಯನ್ನು ಭಾರತದಲ್ಲಿ ಪ್ರದರ್ಶಿಸಿತ್ತು. ಮುಂದಿನ ಆಗಸ್ಟ್ ವೇಳೆಗೆ ಭಾರತದಲ್ಲಿ ಪರಿಚಯಿಸುವ ಸಾಧ್ಯತೆಯಿದ್ದು, ಈ ಮುಂಬರುವ ಎಸ್‌ಯುವಿಯನ್ನು CBU (ಸಂಪೂರ್ಣ ನಿರ್ಮಿಸಲಾದ ಕಾರು) ಮಾದರಿಯಾಗಿ ಸೀಮಿತ ಸಂಖ್ಯೆಯಲ್ಲಿ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡಲಿದೆ. ಈ ಹಿಂದೆ ತನ್ನ ಮೊದಲ ಮತ್ತು ಎರಡನೇ ತಲೆಮಾರುಗಳಲ್ಲಿ ಮಾರಾಟವಾಗುತ್ತಿದ್ದ ಎಕ್ಸ್-ಟ್ರೈಲ್ ಈಗ ತನ್ನ ನಾಲ್ಕನೇ ತಲೆಮಾರಿನಲ್ಲಿ ಪುನರಾಗಮನ ಮಾಡಲಿದೆ.

nissan-x-trail-will-launch-august-in-india

2021 ರಿಂದ Nissan X-Trail 2 ಮತ್ತು 3ನೇ ಜೆನ್ ಮಾದರಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಭಾರತದಲ್ಲೂ ಟೆಸ್ಟ್ ಮಾಡುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಈಗ 4ನೇ ಜೆನ್ ನವೀಕರಣದ ನಂತರ ಈ ಕಾರು 2023 ರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಭಾರತಕ್ಕೆ ಮಾತ್ರ ಪರಿಚಯಿಸಿರಲಿಲ್ಲ. ಈಗ ಆ ಸಮಯ ಬಂದಿದ್ದು, ನಿಸ್ಸಾನ್ ಎಕ್ಸ್-ಟ್ರೈಲ್ ಎಸ್‌ಯುವಿ ಆಗಸ್ಟ್ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.

ಈ ಕಾರು ಈಗಾಗಲೇ ಭಾರತದಲ್ಲಿ ಮಾರಾಟವಾಗುತ್ತಿರುವ ಫಾರ್ಚೂನರ್‌ಗೆ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ. ಮೊದಲೇ ಹೇಳಿದಂತೆ ಇದು ಭಾರತದಲ್ಲಿ ನಿರ್ಮಾಣವಾಗುವುದಿಲ್ಲ, ಬದಲಾಗಿ ವಿದೇಶದಲ್ಲಿ ನಿರ್ಮಾಣಗೊಂಡು ಭಾರತಕ್ಕೆ ಕಾರನ್ನು ಆಮದು ಮಾಡಿಕೊಳ್ಳಲಾಗುವುದು. ಅಲ್ಲದೇ ಭಾರತದಲ್ಲಿ ಕೇವಲ 2,500 ಕಾರುಗಳನ್ನು ಮಾತ್ರ ಮಾರಾಟಕ್ಕೆ ನೀಡಲಾಗುವುದು.

nissan-x-trail-will-launch-august-in-india

ಈ ಕಾರು ಕೇವಲ ಪೆಟ್ರೋಲ್ ರೂಪಾಂತರದಲ್ಲಿ ಮಾತ್ರ ಲಭ್ಯವಾಗುವ ನಿರೀಕ್ಷೆಯಿದೆ. 1.5 ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 201 ಬಿಹೆಚ್‌ಪಿ ಪವರ್ ಮತ್ತು 305 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಸಿವಿಟಿ ಗೇರ್ ಬಾಕ್ಸ್ ಅಳವಡಿಸಲಾಗಿದ್ದು, ಟೂ ವ್ಹೀಲ್ ಡ್ರೈವ್ ಮತ್ತು ಫೋರ್ ವ್ಹೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹಿಂದೆ ನಿಸ್ಸಾನ್ ಈ ಕಾರನ್ನು ಭಾರತದಲ್ಲಿ ಪ್ರದರ್ಶಿಸಿದಾಗ, ಇದನ್ನು ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಕಾರು ಎಂದು ಪ್ರದರ್ಶಿಸಲಾಯಿತು. ಆದರೆ ಈಗ ಕಾರಣಾಂತರಗಳಿಂದ ಭಾರತದಲ್ಲಿ ಅದನ್ನು ಪೆಟ್ರೋಲ್ ಎಂಜಿನ್ ಆಗಿ ಮಾತ್ರ ಮಾರಾಟ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.

ನಿಸ್ಸಾನ್ ಎಕ್ಸ್-ಟ್ರೈಲ್ ಎಸ್‌ಯುವಿಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದರಿಂದ ಇದರ ಬೆಲೆ ಹೆಚ್ಚಾಗಬಹುದು. ಆದರೂ ಈ ಕಾರು ಫಾರ್ಚೂನರ್‌ನಂತಹ ಕಾರುಗಳೊಂದಿಗೆ ಸ್ಪರ್ಧಿಸುವ ಸಾಧ್ಯತೆಯಿದೆ, ಜೊತೆಗೆ ಕೇವಲ 2,500 ಕಾರುಗಳನ್ನು ಆಮದು ಮಾಡಿಕೊಳ್ಳುವುದರಿಂದ ಅನೇಕ ರಾಜಕಾರಣಿಗಳಿಂದ ಹಿಡಿದು ದೊಡ್ಡ ಕೈಗಾರಿಕೋದ್ಯಮಿಗಳನ್ನು ಸೆಳೆಯುವ ಸಾಧ್ಯತೆಗಳು ಹೆಚ್ಚಾಗಿವೆ.

nissan-x-trail-will-launch-august-in-india

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಣುತ್ತಿರುವ ನಿಸ್ಸಾನ್ ಎಕ್ಸ್-ಟ್ರೈಲ್ ಎಸ್‌ಯುವಿ ಖಂಡಿತವಾಗಿಯೂ ಗ್ರಾಹಕರನ್ನು ಆಕರ್ಷಿಸಲು ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ಕಾರಾಗಿದೆ. ಈ ಕಾರಿಗೆ ವಿದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಕಾರಣದಿಂದಲೇ ಭಾರತದಲ್ಲೂ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಆಮದು ಮಾಡಿಕೊಳ್ಳಲಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 27, 2024, 13:49 [IST]
English summary
Nissan x trail will launch august in india
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+