TATA ಸಾಧನೆಗೆ ತಲೆದೂಗಿದ ನಿತಿನ್‌ ಗಡ್ಕರಿ: ಭಾರತ್‌ NCAP ಕ್ರ್ಯಾಶ್‌ಟೆಸ್ಟ್‌ನಲ್ಲೂ 5 ಸ್ಟಾರ್‌ ಗಳಿಸಿದ ಟಾಟಾ ಕಾರುಗಳು

ನಿಮಗೆಲ್ಲಾ ತಿಳಿದಿರುವಂತೆ ಟಾಟಾ ಮೋಟಾರ್ಸ್‌ನ ಟಾಟಾ ನೆಕ್ಸಾನ್‌ ಇವಿ ಮತ್ತು ಟಾಟಾ ಪಂಚ್‌ ಎಲೆಕ್ಟ್ರಿಕ್‌ ಕಾರು ಇತ್ತೀಚೆಗಷ್ಟೇ ಭಾರತದ ಕ್ರ್ಯಾಶ್‌ಟೆಸ್ಟ್‌ ಆಗಿರುವಂತಹ ಭಾರತ್‌ ಎನ್‌ಕ್ಯಾಪ್‌ನಲ್ಲಿ 5 ಸ್ಟಾರ್‌ ರೇಟಿಂಗ್‌ ಅನ್ನು ಪಟೆದುಕೊಂಡಿತ್ತು. ನಿನ್ನೆಯಷ್ಟೇ ಈ ಕ್ರ್ಯಾಶ್‌ ಟೆಸ್ಟ್‌ನ ಫಲಿತಾಂಶಗಳು ಬಂದಿದ್ದು, ಪ್ರಮುಖ ಮಾಧ್ಯಮಗಳು ಸೇರಿದಂತೆ ಸಾಮಾಜಿ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾ ಪೂರವೇ ಟಾಟಾ ಮೋಟಾರ್ಸ್‌ಗೆ ಹರಿದು ಬಂದಿತ್ತು. ಇದೀಗ ಜನಸಾಮಾನ್ಯರು ಮಾತ್ರವಲ್ಲದೇ ದೇಶದ ಉನ್ನತ ಹುದ್ದೆಯಲ್ಲಿ ಇರುವವರು ಸಹ ಈಗ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಇದೀಗ ನಿತಿನ್‌ ಗಡ್ಕರಿ ಸಹ ಆ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ಹೌದು, ಟಾಟಾ ಮೋಟಾರ್ಸ್‌ನ ನೆಕ್ಸಾನ್‌ ಇವಿ ಮತ್ತು ಪಂಚ್‌ ಇವಿ ಭಾರತ್‌ ಎನ್‌ಕ್ಯಾಪ್‌ ಕ್ರ್ಯಾಶ್‌ ಟೆಸ್ಟ್‌ನಲ್ಲಿ 5 ಸ್ಟಾರ್‌ ರೇಟಿಂಗ್‌ ಪಡೆದುದರ ಕುರಿತಾಗಿ ನಿತಿನ್‌ ಗಡ್ಕರಿಯವರು ಅಭಿನಂದನೆ ಸಲ್ಲಿಸಿದ್ದು, ಟಾಟಾದ ಈ ಕಾರುಗಳು ಗ್ರಾಹಕರು ಪ್ರಯಾಣಿಸಲು ಬಳಸಬಹುದಾದ ಅತ್ಯಂತ ಸುರಕ್ಷಿತವಾದ ವಾಹನವಾಗಿ ನಿಮ್ಮ ಮುಂದಿದೆ ಎಂದು ಹೇಳಿದ್ದರು. ಭಾರತ್‌ ಎನ್‌ಕ್ಯಾಪ್‌ ಈ ಕಾರುಗಳನ್ನು ಎಲ್ಲಾ ಮಾನದಂಡಗಳಿಗೆ ಒಳಪಡಿಸಿ ಪರೀಕ್ಷಿಸಿದೆ ಎಂದು ಹೇಳಿದ್ದಾರೆ.

commends

ಈ ಟಾಟಾ ನೆಕ್ಸಾನ್ ಇವಿಯನ್ನು ಭಾರತ್ NCAP (Bharat NCAP) ಕ್ರ್ಯಾಶ್-ಟೆಸ್ಟ್ ಮಾಡಿದೆ ಮತ್ತು ಐದು ಸ್ಟಾರ್ ಗಳ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಇದು ಹ್ಯಾರಿಯರ್, ಸಫಾರಿ ಮತ್ತು ಪಂಚ್ ಇವಿ ನಂತರ ಸ್ವದೇಶಿ ಕ್ರ್ಯಾಶ್ ಪರೀಕ್ಷೆಗೆ ಒಳಪಡುವ ನಾಲ್ಕನೇ ಮಾದರಿಯಾಗಿದೆ. ಭಾರತ್ NCAP ಕ್ರ್ಯಾಶ್-ಟೆಸ್ಟ್‌ನಲ್ಲಿ ಈ ಜನಪ್ರಿಯ ಟಾಟಾ ನೆಕ್ಸಾನ್ ಇವಿಯು (Tata Nexon EV) ವಯಸ್ಕ ಪ್ರಯಾಣಿಕರ ವಿಭಾಗದಲ್ಲಿ 32 ಅಂಕಗಳಲ್ಲಿ 29.86 ಅಂಕಗಳನ್ನು ಗಳಿಸಿದೆ.

ನಡೆಸಲಾದ ಎರಡು ಟೆಸ್ಟ್ ಗಳು 'ಫ್ರಂಟಲ್ ಆಫ್‌ಸೆಟ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್' ಅನ್ನು ಒಳಗೊಂಡಿವೆ, ಇದರಲ್ಲಿ ಎಲೆಕ್ಟ್ರಿಕ್ ಎಸ್‍ಯುವಿ 16 ರಲ್ಲಿ 14.26 ಅಂಕಗಳನ್ನು ಗಳಿಸಿತು ಮತ್ತು 'ಸೈಡ್ ಮೂವಬಲ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್', ಅಲ್ಲಿ ಅದು 16 ರಲ್ಲಿ 15.60 ಅಂಕಗಳನ್ನು ಗಳಿಸಿತು. ಇನ್ನು ಕ್ರ್ಯಾಶ್-ಟೆಸ್ಟ್‌ನಲ್ಲಿ ಮಕ್ಕಳ ವಿಭಾಗಕ್ಕೆ ಸಂಬಂಧಿಸಿದಂತೆ, ನೆಕ್ಸಾನ್ ಇವಿಯು 23.95 ಡೈನಾಮಿಕ್ ಸ್ಕೋರ್ ಗಳಿಸಿದೆ.

ಇದರ CRS ಇನ್‌ಸ್ಟಾಲೇಶನ್ ಸ್ಕೋರ್ 12/12, ಮತ್ತು ವಾಹನ ಮೌಲ್ಯಮಾಪನ ಸ್ಕೋರ್ 9/13 ಆಗಿದೆ. ಟಾಟಾ ನೆಕ್ಸಾನ್ ಇವಿ ಮುಂಭಾಗದ ಆಫ್‌ಸೆಟ್ ಟೆಸ್ಟ್ ನಲ್ಲಿ, ನೆಕ್ಸಾನ್ ಇವಿಯು ಚಾಲಕ ಮತ್ತು ಪ್ರಯಾಣಿಕರ ತಲೆ ಮತ್ತು ಕುತ್ತಿಗೆಗೆ ಉತ್ತಮ ರಕ್ಷಣೆಯನ್ನು ನೀಡಿತು. ಚಾಲಕನ ಎದೆಯು ಸಾಕಷ್ಟು ರಕ್ಷಣೆಯನ್ನು ತೋರಿಸಿದೆ, ಆದರೆ ಪ್ರಯಾಣಿಕರ ಎದೆಯು ಉತ್ತಮ ರಕ್ಷಣೆಯನ್ನು ತೋರಿಸಿದೆ.

ಭಾರತ್ ಎನ್‌ಸಿಎಪಿ ಪರೀಕ್ಷೆಗೆ ಟಾಟಾ ಪಂಚ್ ಇವಿಯ 'ಎಂಪವರ್ಡ್ ಪ್ಲಸ್ ಎಸ್ ಲಾಂಗ್ ರೇಂಜ್' ರೂಪಾಂತರ (ವೇರಿಯೆಂಟ್)ವನ್ನು ಒಳಪಡಿಸಲಾಗಿತ್ತು. ಆದಾಗ್ಯೂ ಈ ಫಲಿತಾಂಶವು ಎಲ್ಲ ಮಾದರಿಗಳಿಗೆ ಅನ್ವಯಿಸುತ್ತದೆ. ಈ ಕಾರು ವಯಸ್ಕರ ರಕ್ಷಣೆ ವಿಭಾಗ (Adult Occupant Protection)ದಲ್ಲಿ 32ಕ್ಕೆ 31.46 ಅಂಕಗಳನ್ನು ಪಡೆದಿದ್ದರೆ, ಮಕ್ಕಳ ರಕ್ಷಣೆ ವಿಭಾಗ (Child Occupant Protection)ದಲ್ಲಿ 49ಕ್ಕೆ 45 ಅಂಕಗಳನ್ನು ಗಳಿಸಿದೆ.

ಅದೇ ರೀತಿಯಲ್ಲಿ ಮುಂಭಾಗವನ್ನು ತಡೆಗೋಡೆಗೆ ಗುದ್ದಿಸಿ ಮಾಡಿದ ಪರೀಕ್ಷೆ (Frontal Offset Deformable Barrier Test)ಯಲ್ಲಿ 16ಕ್ಕೆ 15.71 ಮತ್ತು ಬದಿಗಳಿಗೆ ಡಿಕ್ಕಿಯೊಡೆಸಿ ನಡೆಸುವ ಪರೀಕ್ಷೆ (Side Movable Deformable Barrier Test)ಯಲ್ಲಿ 16ಕ್ಕೆ 15.74 ಅಂಕಗಳನ್ನು ಪಡೆದಿದೆ. ಈ ಮೂಲಕ 5-ಸ್ಟಾರ್ ರೇಟಿಂಗ್ ಅನ್ನು ತನ್ನದಾಗಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 14, 2024, 16:43 [IST]
English summary
Nitin gadkari commends tata motors for achieving a 5 star bharat ncap rating for their punch and nex
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+