ಅಗ್ಗದ 7-ಸೀಟರ್ ಎಂಪಿವಿಗೆ ಸಖತ್ ಡಿಮ್ಯಾಂಡ್: ಅಕ್ಟೋಬರ್‌ನಲ್ಲಿ 18 ಸಾವಿರ ಕಾರುಗಳ ಮಾರಾಟ!

ಪ್ರತಿ ವರ್ಷದಂತೆ ಈ ವರ್ಷವು ಹಬ್ಬದ ಸೀಸನ್‌ನಲ್ಲಿ ಕಾರು ಉದ್ಯಮವು ಅತ್ಯುತ್ತಮ ಮಾರಾಟವನ್ನು ಕಂಡಿದೆ. ದಸರಾ, ದೀಪಾವಳಿ ಹಬ್ಬಗಳಿಗೆ ಕಾರು ಕಂಪನಿಗಳು ಭಾರೀ ರಿಯಾಯಿತಿಗಳನ್ನು ನೀಡುವ ಮೂಲಕ ಗ್ರಾಹಕರಿಗೂ ತಮ್ಮಿಷ್ಟದ ಕನಸಿನ ಕಾರುಗಳನ್ನು ಖರೀದಿಸಲು ಸಹಕರಿಸಿವೆ. ಅಂದಹಾಗೆ ಭಾರತದಲ್ಲಿ ಈ ಬಾರಿ ಯಾವೆಲ್ಲಾ ಕಾರುಗಳು ಉತ್ತಮ ಮಾರಾಟವನ್ನು ದಾಖಲಿಸಿವೆ, ಟಾಪ್‌-10 ಕಾರು ಪಟ್ಟಿಯಲ್ಲಿ ಯಾವೆಲ್ಲಾ ಕಾರುಗಳು ಸ್ಥಾನ ದಕ್ಕಿಸಿಕೊಂಡಿವೆ ಎಂಬುದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಮಾರುತಿ, ಟಾಟಾ, ಹ್ಯುಂಡೈ, ಮಹೀಂದ್ರಾ ಕಾರುಗಳು ಟಾಪ್‌-10 ಪಟ್ಟಿಯಲ್ಲಿವೆ.

ಅಕ್ಟೋಬರ್ 2024 ರಲ್ಲಿ, ಮಾರುತಿ ಸುಜುಕಿಯ ಎರ್ಟಿಗಾ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಅಕ್ಟೋಬರ್‌ 2023 ರಲ್ಲಿ ಮಾರಾಟವಾಗಿದ್ದ 14,209 ಕಾರುಗಳಿಗೆ ಹೋಲಿಸಿದರೆ ಈ ಬಾರಿ 18,785 ಕಾರುಗಳು ಮಾರಾಟವಾಗುವ ಮೂಲಕ ವಾರ್ಷಿಕವಾಗಿ ಶೇ32 ರಷ್ಟು ಬೆಳವಣಿಗೆ ಸಾಧಿಸಿದೆ. ಎರಡನೇ ಸ್ಥಾನದಲ್ಲೂ ಮಾರುತಿಯ ಜನಪ್ರಿಯ ಸ್ವಿಫ್ಟ್ ಕಾರಿದೆಯಾದ್ರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಮಾರಾಟವಾಗಿವೆ.

october-2024-car-sales-report-ertiga-swift-creta-brezza

ಸ್ವಿಫ್ಟ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಅಕ್ಟೋಬರ್‌ 2023 ರಲ್ಲಿ ಮಾರಾಟವಾಗಿದ್ದ 20,598 ಕಾರುಗಳಿಗೆ ಹೋಲಿಸಿದರೆ ಈ ಬಾರಿ 17,539 ಕಾರುಗಳು ಮಾರಾಟವಾಗುವ ಮೂಲಕ ಶೇ 15 ರಷ್ಟು ಕುಸಿತ ಕಂಡಿದೆ. ಹ್ಯುಂಡೈ ಕ್ರೆಟಾ ಮೂರನೇ ಸ್ಥಾನದಲ್ಲಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 2023 ರ ಅಕ್ಟೋಬರ್‌ನಲ್ಲಿ ಮಾರಾಟವಾಗಿದ್ದ 13,077 ಕಾರುಗಳಿಗೆ ಹೋಲಿಸಿದರೆ ಈ ಬಾರಿ 17,497 ಕಾರುಗಳು ಮಾರಾಟವಾಗುವ ಮೂಲಕ ಶೆ34 ರಷ್ಟು ಬೆಳವಣಿಗೆ ಸಾಧಿಸಿದೆ.

ಮಾರುತಿ ಸುಜುಕಿ ಬ್ರೆಝಾ ನಾಲ್ಕನೇ ಸ್ಥಾನದಲ್ಲಿದ್ದು, ಕಳೆದ ತಿಂಗಳು 16,565 ಕಾರುಗಳಳ ಮಾರಾಟದೊಂದಿಗೆ ಶೇ3 ರಷ್ಟು ಬೆಳವಣಿಗೆ ಸಾಧಿಸಿದೆ. ಐದನೇ ಸ್ಥಾನದಲ್ಲಿ ಮಹೀಂದ್ರಾದ ಪ್ರಮುಖ ಕಾರುಗಳಾದ ಮಹೀಂದ್ರಾ ಸ್ಕಾರ್ಪಿಯೋ ಸರಣಿಯ ಒಟ್ಟು 15,677 ಕಾರುಗಳು ಮಾರಾಟವಾಗಿವೆ. ಇದು ವರ್ಷದಿಂದ ವರ್ಷಕ್ಕೆ ಶೇ15 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇದು ಕಂಪನಿಗೆ ಹೇಳಿಕೊಳ್ಳುವ ಮಟ್ಟಕ್ಕೆ ಮಾರಾಟವನ್ನು ತಂದುಕೊಟ್ಟಿಲ್ಲ ಎಂದು ಹೇಳಬಹುದು.

october-2024-car-sales-report-ertiga-swift-creta-brezza

ಮಾರುತಿ ಸುಜುಕಿ ಬಲೆನೊ 2023 ರ ಅಕ್ಟೋಬರ್‌ನಲ್ಲಿ ಮಾರಾಟವಾದ 16,594 ಕಾರುಗಳಿಗೆ ಹೋಲಿಸದರೆ ಈ ಬಾರಿ 16,082 ಕಾರುಗಳು ಮಾರಾಟವಾಗುವ ಮೂಲಕ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಉಳಿದಂತೆ ಮಾರುತಿಯ ಮತ್ತೊಂದು ಪ್ರಮುಖ ಕಾರಾದ ಫ್ರಾಂಕ್ಸ್ 2024 ರ ಅಕ್ಟೋಬರ್‌ನಲ್ಲಿ 16,419 ಕಾರುಗಳು ಮಾರಾಟವಾಗಿವೆ. ವರ್ಷದಿಂದ ವರ್ಷಕ್ಕೆ ಶೇ45 ಎಷ್ಟು ಹೆಚ್ಚಳವನ್ನು ಸಾಧಿಸಿದೆ. ಈ ಮೂಲಕ ಏಳನೇ ಸ್ಥಾ ದಕ್ಕಿಸಿಕೊಂಡಿದೆ.

ಟಾಟಾ ಪಂಚ್ 15,740 ಕಾರುಗಳ ಮಾರಾಟದೊಂದಿಗೆ ಎಂಟನೇ ಸ್ಥಾನದಲ್ಲಿದ್ದು, ಇದು 2023 ಅಕ್ಟೋಬರ್‌ನಲ್ಲಿ 15,317 ಕಾರುಗಳು ಮಾರಾಟವಾಗಿದ್ದವು. ಈ ಮೂಲಕ ಶೇ3 ರಷ್ಟು ಬೆಳವಣಿಗೆಯಾಗಿದೆ. ಟಾಟಾ ನೆಕ್ಸಾನ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಒಂಬತ್ತು ಹಾಗೂ ಹತ್ತನೇ ಸ್ಥಾನದಲ್ಲಿವೆ. ನೆಕ್ಸಾನ್ 14,759 ಕಾರುಗಳು ಮಾರಾಟವಾಗಿ ಶೇ13 ಕುಸಿತವಾದರೇ, 14,083 ಕಾರುಗಳ ಮಾರಾಟದೊಂದಿಗೆ ಗ್ರಾಂಡ್ ವಿಟರಾ ಶೇ30 ಬೆಳವಣಿಗೆಯನ್ನು ಸಾಧಿಸಿದೆ.

october-2024-car-sales-report-ertiga-swift-creta-brezza

ಭಾರತದಲ್ಲಿ ಸದ್ಯ ಈ ಕಾರುಗಳು ಟಾಪ್-10 ಪಟ್ಟಿಯಲ್ಲಿ ಸ್ಥಾನ ದಕ್ಕಿಸಿಕೊಂಡಿವೆ. ಇವು ಮುಂಬರುವ ದಿನಗಳಲ್ಲೂ ಉತ್ತಮ ಮಾರಾಟ ಕಾಣುವ ಸಾದ್ಯತೆ ಇದೆ. ಅಕ್ಟೋಬರ್ ತಿಂಗಳಲ್ಲಿ ದೇಶಾದ್ಯಂತ ಭಾರೀ ಮಳೆಯ ಕಾರಣ ಮಾರಾಟದಲ್ಲಿ ತುಸು ಹಿಂದುಳಿದಿರುವುದಾಗಿ ವಾಹನ ಉದ್ಯಮದ ಪ್ರಮುಖರು ತಿಳಿಸಿದ್ದಾರೆ. ಅದರೆ ಆಟೋ ವಲಯಕ್ಕೆ ಈ ಮಾರಾಟ ಅಂಕಿಅಂಶಗಳು ಉತ್ತಮ ಬೆಳವಣಿಗೆಯೆಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 7, 2024, 11:59 [IST]
English summary
October 2024 car sales report ertiga swift creta brezza
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+