ಈ ಮಾರುತಿ ಕಾರುಗಳ ಮಾರಾಟ ಕಂಡು ಎದುರಾಳಿಗಳಿಗೆ ಶುರುವಾಯ್ತು ನಡುಕ.. 7.51 ಲಕ್ಷ ಆರಂಭಿಕ ಬೆಲೆ, 5-ಸೀಟರ್!

ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಮಹೀಂದ್ರಾ, ಕಿಯಾ, ಹ್ಯುಂಡೈ, ಹೋಂಡಾ, ನಿಸ್ಸಾನ್ ಜನಪ್ರಿಯ ಕಾರು ತಯಾರಕ ಕಂಪನಿಗಳಾಗಿ ಗುರುತಿಸಿಕೊಂಡಿವೆ. ಈ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಹತ್ತಾರು ಕಾರುಗಳನ್ನು ಮಾರಾಟ ಮಾಡುತ್ತಿವೆ. ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್‌ಗಳಿಗೆ ಹೋಲಿಕೆ ಮಾಡಿದರೆ, ಎಸ್‌ಯುವಿಗಳಿಗೆ ಭಾರೀ ಬೇಡಿಕೆಯಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಳ್ಳುತ್ತಿವೆ. ಇತ್ತೀಚೆಗೆ ಅಕ್ಟೋಬರ್ ತಿಂಗಳ ಕಾಂಪ್ಯಾಕ್ಟ್ ಎಸ್‌ಯುವಿ (Compact SUV) ಮಾರಾಟದ ಅಂಕಿಅಂಶಗಳು ಪ್ರಕಟವಾಗಿದ್ದು, ಇತರೆ ಕಂಪನಿಗಳ ಮಾರಾಟ ಸಂಖ್ಯೆಯನ್ನು ಲೆಕ್ಕಹಾಕಿದರೆ ಮಾರುತಿ ಸುಜುಕಿಯ ಈ ಎಸ್‌ಯುವಿಗಳು ಟಾಪ್ 10ರ ಪಟ್ಟಿನಲ್ಲಿ ಮೊದಲೆರಡು ಸ್ಥಾನದಲ್ಲಿವೆ.

ಮಾರುತಿ ಸುಜುಕಿ ಬ್ರೆಜಾ (Maruti Suzuki Brezza) ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಕಾಂಪ್ಯಾಕ್ಟ್ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಮೊದಲ ಸ್ಥಾನದಲ್ಲಿದೆ. ಕಳೆದ ತಿಂಗಳು (ಅಕ್ಟೋಬರ್ - 2024) 16,565 ಯುನಿಟ್ ಬ್ರೆಜಾ ಕಾರುಗಳನ್ನು ಮಾರಾಟಗೊಳಿಸಲಾಗಿದೆ. 2023 ಇದೇ ಅವಧಿಯಲ್ಲಿ ಮಾರಲ್ಪಟ್ಟ 16,050 ಯುನಿಟ್‌ಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 3% ಪ್ರಗತಿಯಾಗಿದೆ. ಈ ಕಾರು, ರೂ.8.34 ರಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

October 2024 Top 10 Compact Suvs Sales Reprot Brezza Number 1 Fronx Number 2 Punch 3rd Position

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಎರಡನೇ ಸ್ಥಾನದಲ್ಲಿದೆ. ಈ ಎಸ್‌ಯುವಿಯನ್ನು ಕೂಡ ದೊಡ್ಡಸಂಖ್ಯೆಯಲ್ಲಿ ಮಾರಾಟಗೊಳಿಸಲಾಗಿದೆ. ಅಕ್ಟೋಬರ್‌ನಲ್ಲಿ 16,419 ಯುನಿಟ್ ಫ್ರಾಂಕ್ಸ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಅಕ್ಟೋಬರ್‌ ತಿಂಗಳಲ್ಲಿ ಮಾರಲಾದ 11,357 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ಶೇಕಡ 45% ಬೆಳವಣಿಗೆ ಸಾಧಿಸಲಾಗಿದೆ. ನೂತನ ಫ್ರಾಂಕ್ಸ್ ರೂ.7.51 ರಿಂದ ರೂ.13.04 (ಎಕ್ಸ್ ಶೋರೂಂ) ದರವನ್ನು ಹೊಂದಿದೆ.

ಮೂರನೇ ಸ್ಥಾನದಲ್ಲಿ ಟಾಟಾ ಪಂಚ್ (Tata Punch) ಇದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಹೋದ ತಿಂಗಳು 15,740 ಯುನಿಟ್ ಪಂಚ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಅಕ್ಟೋಬರ್‌ನಲ್ಲಿ ಮಾರಲ್ಪಟ್ಟ 15,317 ಯುನಿಟ್‌ಗಳಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 3% ಪ್ರಗತಿ ಕಾಣಲಾಗಿದೆ. ಈ ಪಂಚ್ ಎಸ್‌ಯುವಿ ರೂ.6.13 ರಿಂದ 10.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ.

October 2024 Top 10 Compact Suvs Sales Reprot Brezza Number 1 Fronx Number 2 Punch 3rd Position

ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿ ನಾಲ್ಕನೇ ಸ್ಥಾನದಲ್ಲಿದ್ದರೂ ಮಾರಾಟ ಪ್ರಮಾಣ ಮಾತ್ರ ಕುಸಿತವಾಗಿದೆ. ಕಳೆದ ತಿಂಗಳು (ಅಕ್ಟೋಬರ್ - 2024) 14,759 ಯುನಿಟ್ ನೆಕ್ಸಾನ್ ಕಾರುಗಳನ್ನು ಮಾರಾಟಲಾಗಿದೆ. 2023ರ ಅಕ್ಟೋಬರ್‌ನಲ್ಲಿ 16,887 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಶೇಕಡ -13% ಇಳಿಕೆಯಾಗಿದೆ. ಈ ನೆಕ್ಸಾನ್ ಕಾರು ರೂ.8 ರಿಂದ ರೂ.15.50 ಲಕ್ಷ ದರದಲ್ಲಿ ಖರೀದಿದಾರರಿಗೆ ಲಭ್ಯವಿದೆ.

ಐದನೇ ಸ್ಥಾನದಲ್ಲಿ ಹ್ಯುಂಡೈ ವೆನ್ಯೂ (Hyundai Venue) ಎಸ್‌ಯುವಿ ಇದ್ದು, ಈ ಕಾರಿನ ಮಾರಾಟವು ಇಳಿಮುಖವಾಗಿದೆ. ಅಕ್ಟೋಬರ್‌ನಲ್ಲಿ 10,901 ಯುನಿಟ್ ವೆನ್ಯೂ ಕಾರುಗಳನ್ನು ಮಾರಾಟಗೊಳಿಸಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 11,581 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ -6% ಕುಸಿತವಾಗಿದೆ. ಹೊಸ ವೆನ್ಯೂ ರೂ.7.94 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ.

October 2024 Top 10 Compact Suvs Sales Reprot Brezza Number 1 Fronx Number 2 Punch 3rd Position

ಕಿಯಾ ಸೋನೆಟ್ (Kia Sonet) ಎಸ್‌ಯುವಿ ಆರನೇ ಸ್ಥಾನದಲ್ಲಿದ್ದು, ಮಾರಾಟ ಪ್ರಮಾಣ ಧಿಡೀರನೇ ಹೆಚ್ಚಳಹೊಂದಿದೆ. ಹೋದ ತಿಂಗಳು 9,699 ಯುನಿಟ್ ಸೋನೆಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 6,493 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡ 49% ಬೆಳವಣಿಗೆಯಾಗಿದೆ. ಈ ಕಾರು ರೂ.8 ರಿಂದ ರೂ.15.77 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ.

ಏಳನೇ ಸ್ಥಾನದಲ್ಲಿ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿ ಇದ್ದು, ಅಕ್ಟೋಬರ್‌ನಲ್ಲಿ 9,562 ಯುನಿಟ್ ಮಾರಾಟ ಮಾಡಲಾಗಿದ್ದು, ಶೇಕಡ 97% ಪ್ರಗತಿಯಾಗಿದೆ. ಎಂಟನೇ ಸ್ಥಾನದಲ್ಲಿ ಹ್ಯುಂಡೈ ಎಕ್ಸ್‌ಟರ್ (7,127 ಯುನಿಟ್), ಒಂಬತ್ತನೇ ಸ್ಥಾನದಲ್ಲಿ ನಿಸ್ಸಾನ್ ಮ್ಯಾಗ್ನೈಟ್ (3,119 ಯುನಿಟ್) ಮತ್ತು ಹತ್ತನೇ ಸ್ಥಾನದಲ್ಲಿ ಟೊಯೊಟಾ ಟೈಸರ್ (3,092 ಯುನಿಟ್) ಕಾರಿದೆ.

Article Published On: Friday, November 8, 2024, 12:19 [IST]
English summary
October 2024 top 10 compact suvs sales reprot brezza number 1 fronx number 2 punch 3rd position
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+