ಶ್ರೀಮಂತ ಕಾರು ಮಾಲೀಕನಿಗೆ ತಮ್ಮ ಪವರ್ ತೋರಿಸಿದ ಪೊಲೀಸರು!

ಕಾರನ್ನು ರಸ್ತೆಯಲ್ಲಿ ಓಡಿಸಬೇಕಾದರೆ ಅಗತ್ಯ ದಾಖಲೆಗಳು ಎಷ್ಟು ಮುಕ್ಯವೋ ನಂಬರ್‌ ಪ್ಲೇಟ್ ಕೂಡ ಅಷ್ಟೇ ಮುಖ್ಯ. ನಂಬರ್ ಪ್ಲೇಟ್ ಇಲ್ಲದೇ ವಾಹನ ಓಡಿಸಿ ತಪ್ಪಿಸಿಕೊಳ್ಳಬಹುದು ಎಂದು ಕೆಲವರು ಭಾವಿಸುತ್ತಾರೆ. ಬಹಳಷ್ಟು ಜನ ತಪ್ಪಿಸಿಕೊಂಡ ಉದಾಹರಣೆಗಳು ಕೂಡ ಇವೆ. ಆದ್ರೆ ಇದು ಒಮ್ಮೆ ಪೊಲಿಸರ ಗಮನಕ್ಕೆ ಬಂದರೆ ಖಂಡಿತ ನಿಮ್ಮ ವಾಹನವನ್ನು ವಶಪಡಿಸಿಕೊಳ್ಳುವುದು ಖಚಿತ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇತ್ತೀಚೆಗೆ ನಂಬರ್ ಪ್ಲೇಟ್ ಇಲ್ಲದ ಕಾರಣ ದುಬಾರಿ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 400ಡಿ ಕಾರನ್ನು ಒಡಿಶಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಬಿಳಿ ಬಣ್ಣದ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 400 ಡಿ ಐಷಾರಾಮಿ ಕಾರು ಒಡಿಶಾದ ಭುವನೇಶ್ವರದಲ್ಲಿ ನಂಬರ್ ಪ್ಲೇಟ್ ಇಲ್ಲದೆ ಓಡಿಸುತ್ತಿದ್ದ ಕಾರಣ ಕಮಿಷನರೇಟ್ ಪೊಲೀಸರು ವಶಪಡಿಸಿಕೊಂಡಿದ್ದರು. ಯಾವುದೇ ನೋಂದಣಿ ಸಂಖ್ಯೆಯಿಲ್ಲದೆ ಅದನ್ನು ಏಕೆ ಓಡಿಸಲಾಗುತ್ತಿದೆ ಎಂದು ಚಾಲಕನನ್ನು ಕೇಳಿದಾಗ, ಸರಿಯಾದ ಉತ್ತರ ಕೊಟ್ಟಿಲ್ಲ.

odisha-police-seized-benz-car-running-without-number-plate

ಈ ಹಿನ್ನೆಲೆಯಲ್ಲಿ ಕಾರನ್ನು ಸಂಚಾರ ಪೊಲೀಸರು ವಶಪಡಿಸಿಕೊಂಡು ಠಾಣೆಗೆ ಹೊತ್ತೊಯ್ದಿದ್ದಾರೆ. ಈ ನಿರ್ದಿಷ್ಟ ಕಾರಿನ ಮಾಲೀಕ ಯಾರೆಂದು ವರದಿಯಾಗಿಲ್ಲ. ಈ ಎಸ್‌ಯುವಿ ಬೆಲೆಯು ಬರೋಬ್ಬರಿ 1.54 ಕೋಟಿ ರೂ. ಈ ಮರ್ಸಿಡಿಸ್ ಎಸ್‌ಯುವಿ ನಂಬರ್ ಪ್ಲೇಟ್ ಇಲ್ಲದೆ ಏಕೆ ಓಡಾಡುತ್ತಿತ್ತು ಎಂಬುದರ ಬಗ್ಗೆ ಈವರೆಗೆ ತಿಳಿದುಬಂದಿಲ್ಲ.

ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಾಫಿಕ್ ಎಸಿಪಿ ಜಯಂತ್ ಡೋರಾ, ನಂಬರ್ ಪ್ಲೇಟ್ ಇಲ್ಲದೆ ಅಥವಾ ಫ್ಯಾನ್ಸಿ ನಂಬರ್‌ನೊಂದಿಗೆ ವಾಹನ ಓಡಿಸಿದರೆ ಅದನ್ನು ವಶಪಡಿಸಿಕೊಳ್ಳುತ್ತೇವೆ. ಬಿಡುಗಡೆ ಆದೇಶವನ್ನು ಹಾಜರುಪಡಿಸಿದ ನಂತರವೇ ವಾಹನವನ್ನು ಮಾಲೀಕರಿಗೆ ಹಸ್ತಾಂತರಿಸಲಾಗುವುದು. ನೋಂದಣಿ ಸಂಖ್ಯೆ ಏಕೆ ಇಲ್ಲ ಎಂಬುದಕ್ಕೆ ಸರಿಯಾದ ದಾಖಲೆಗಳನ್ನು ತೋರಿಸಿದರೆ ಅವರನ್ನು ಹೋಗಲು ಬಿಡುತ್ತೇವೆ, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

odisha-police-seized-benz-car-running-without-number-plate

ದುಬಾರಿ ಕಾರಿದು: ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 400ಡಿ ಜರ್ಮನ್ ಐಷಾರಾಮಿ ಕಾರಾಗಿದ್ದು, ಭಾರತದಲ್ಲಿ ಮಾರಾಟ ಮಾಡುವ ಟಾಪ್-ಆಫ್-ಲೈನ್ 7-ಸೀಟರ್ ಎಸ್‌ಯುವಿಯಾಗಿದೆ. ಇದರ ಬೆಲೆಯು ಭಾರತದಲ್ಲಿ ರೂ.1.54 ಕೋಟಿಗಳಾಗಿದೆ. ಇದು 3.0-ಲೀಟರ್ ಇನ್‌ಲೈನ್-6 ಡೀಸೆಲ್ ಎಂಜಿನ್ ಹೊಂದಿದೆ. 326 ಬಿಹೆಚ್‌ಪಿ ಪವರ್ ಮತ್ತು 700 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ವರ್ಷದ ಮಾರ್ಚ್‌ನಲ್ಲಿ ಒಡಿಶಾ ಪೊಲೀಸರು ಹಲವಾರು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದರು. ಈ ಐಷಾರಾಮಿ ಕಾರುಗಳಲ್ಲಿ ಪೋರ್ಷೆ ಕೇಯೆನ್, ಬಿಎಂಡಬ್ಲ್ಯು ಎಕ್ಸ್ 7, ಮರ್ಸಿಡಿಸ್ ಬೆಂಝ್ ಇಕ್ಯೂಸಿ ಮತ್ತು ರೇಂಜ್ ರೋವರ್ ವೆಲಾರ್ ಕೂಡ ಇವೆ. ಇವುಗಳ ಜೊತೆಗೆ ಆಡಿ ಎ 4, ಟೊಯೊಟಾ ಇನ್ನೋವಾ ಕ್ರಿಸ್ಟಾ, ಟೊಯೊಟಾ ಫಾರ್ಚೂನರ್, ಮಾರುತಿ ಗ್ರ್ಯಾಂಡ್ ವಿಟಾರಾ, ಟಾಟಾ ನೆಕ್ಸಾನ್, 2 ಹ್ಯುಂಡೈ ಕ್ರೆಟಾಗಳು, ಸ್ವಿಫ್ಟ್, ರೆನಾಲ್ಟ್ ಕಿಗರ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ.

odisha-police-seized-benz-car-running-without-number-plate

ಈ ಹೈ ಎಂಡ್ ಕಾರುಗಳ ಚಾಲಕರು ಮದ್ಯದ ಅಮಲಿನಲ್ಲಿರುವುದು ಕಂಡುಬಂದಿದ್ದರಿಂದ ಪೊಲೀಸರು ಈ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಒಡಿಶ್ಶಾ ರಾಜ್ಯದಲ್ಲಿ ಕುಡಿದು ವಾಹನ ಚಲಾಯಿಸುವುದನ್ನು ತಡೆಯುವ ಸಲುವಾಗಿ ಒಡಿಶಾ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಕುಡಿದು ವಾಹನ ಚಲಾಯಿಸುವುದು ಕಂಡುಬಂದರೆ ವಾಹನವನ್ನು ವಶಪಡಿಸಿಕೊಂಡು ಕೋರ್ಟ್‌ಗೆ ಹಾಜರು ಪಡಿಸಲಾಗುವುದು, ಎರಡನೇ ಬಾರಿಗೆ ಹಿಡಿದರೆ ವಾಹನವನ್ನು ವಶಪಡಿಸಿಕೊಂಡು ಪರವಾನಗಿ ರದ್ದುಗೊಳಿಸಲಾಗುವುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 30, 2024, 12:26 [IST]
English summary
Odisha police seized benz car running without number plate
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+