ಅತ್ಯಂತ ಪವರ್‌ಫುಲ್ ಪೆಟ್ರೋಲ್ ಕಾರುಗಳಿವು... ಕೇವಲ 10 ಲಕ್ಷದೊಳಗೆ ಸಿಗುತ್ತವೆ!

ಭಾರತದಲ್ಲಿ 10 ಲಕ್ಷ ರೂ.ಗಿಂತ (ಎಕ್ಸ್‌ ಶೋರೂಂ) ಕಡಿಮೆ ಬೆಲೆಯಲ್ಲಿ ಪವರ್‌ಫುಲ್‌ ಪರ್ಫಾಮೆನ್ಸ್‌ನೊಂದಿಗೆ ಸಿಗುವ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಕಾರುಗಳು ಬಹಳಷ್ಟಿವೆ. ಆದ್ರೆ ಅವುಗಳಲ್ಲಿ ಟಾಪ್‌ ಸ್ಥಾನಗಳಲ್ಲಿ ಕೈಗೆಟುಕುವ ಬೆಲೆಯ ಜೊತೆಗೆ ಪರ್ಫಾಮೆನ್ಸ್ ಕೂಡ ನೀಡುವ ಕಾರುಗಳನ್ನು ಹುಡುಕುವುದು ತುಸು ಕಷ್ಟದ ಸಂಗತಿ. ಆದರೆ ಚಿಂತಿಸಬೇಡಿ, ನಿಮಗಾಗಿ ಬೆಸ್ಟ್ ಕಾರುಗಳನ್ನು ಹುಡುಕಿ ಇಲ್ಲಿ ಪಟ್ಟಿ ಮಾಡಿದ್ದೇವೆ. ಇನ್ನೊಂದು ಮೂರು ಲಕ್ಷ ಹೆಚ್ಚು ಖರ್ಚು ಮಾಡಿದ್ರೆ ಇನ್ನೂ ಹೆಚ್ಚಿನ ಪರ್ಫಾಮೆನ್ಸ್ ನೀಡುವ ಕಾರುಗಳು ಸಿಗುತ್ತವೆ. ಒಟ್ಟಾರೆ 13 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವ ಕಾರುಗಳನ್ನು ಸಹ ಇಲ್ಲಿ ನೀಡಿದ್ದೇವೆ.

ಮಹೀಂದ್ರಾ ಎಕ್ಸ್ ಯುವಿ 3ಎಕ್ಸ್ಒ (Mahindra XUV 3XO): ಈ ವಿಭಾಗದಲ್ಲಿ ಅತ್ಯಂತ ಪವರ್‌ಫುಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಕಾರ್ ಪಟ್ಟಿಯಲ್ಲಿ ಮಹೀಂದ್ರಾ ಎಕ್ಸ್ ಯುವಿ 3ಎಕ್ಸ್ಒ ಮೊದಲ ಸ್ಥಾನದಲ್ಲಿದೆ. ಇದರ ಬೆಲೆಗಳು 10.69 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ. ಈಗಾಗಲೇ ಮಾರುಕಟ್ಟೆಯಲ್ಲಿ ಈ ಕಾರು ಭಾರೀ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ.

powerful-turbocharged-petrol-cars-in-india-under-rs-10-lakh

ಎರಡು ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಇದರಲ್ಲಿ ಒಂದು ಹೆಚ್ಚು ಶಕ್ತಿಶಾಲಿ 1.2-ಲೀಟರ್ ಎಂಜಿನ್‌ ಪಡೆದಿದೆ. ಇದು 129 ಬಿಹೆಚ್‌ಪಿ ಪವರ್ ಮತ್ತು 230 ಎನ್ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹ್ಯುಂಡೈ ವೆನ್ಯೂ (Hyundai Venue): ಹ್ಯುಂಡೈ ವೆನ್ಯೂ ಎರಡನೇ ಸ್ಥಾನದಲ್ಲಿದ್ದು, ಭಾರತದಲ್ಲಿ ಇದರ ಎಕ್ಸ್ ಶೋರೂಂ ದರ ರೂ.10.40 ಲಕ್ಷಗಳಾಗಿದೆ. 1.0-ಲೀಟರ್ 3 ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 118 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಬರುತ್ತದೆ.

powerful-turbocharged-petrol-cars-in-india-under-rs-10-lakh

ಹ್ಯುಂಡೈ ಐ20 ಎನ್ ಲೈನ್ (Hyundai i20 N Line): ಮೂರನೇ ಸ್ಥಾನದಲ್ಲಿ ಹ್ಯುಂಡೈ ಐ20 ಎನ್ ಲೈನ್ ಇದ್ದು, ಇದರ ಬೆಲೆಗಳು 9.99 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 12.52 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ)ಇದೆ. ಈ ಕಾರು 1.0 ಲೀಟರಿನ 3 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 118 ಬಿಹೆಚ್‌ಪಿ ಪವರ್ ಹಾಗೂ 172 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್, ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಿದೆ.

ಟಾಟಾ ನೆಕ್ಸಾನ್ (Tata Nexon): ಟಾಟಾ ಮೋಟಾರ್ಸ್ ನೆಕ್ಸಾನ್‌ಗೆ ಮೂಲ ಟ್ರಿಮ್‌ನಿಂದ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ನೀಡುತ್ತದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.8.00 ಲಕ್ಷಗಳಾಗಿದೆ. 1.2 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 118 ಬಿಹೆಚ್‌ಪಿ ಪವರ್ ಹಾಗೂ 172 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಎಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಿದೆ.

powerful-turbocharged-petrol-cars-in-india-under-rs-10-lakh

ಟಾಟಾ ಆಲ್ಟ್ರೋಜ್ ರೇಸರ್(Tata Altroz Racer): ಟಾಟಾ ಇತ್ತೀಚೆಗೆ ಆಲ್ಟ್ರೊಜ್‌ನ ಅತ್ಯಂತ ಪ್ರಬಲ ಆವೃತ್ತಿಯಾದ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡಿದೆ. ಆಲ್ಟ್ರೋಜ್ ರೇಸರ್‌ನ ಬೆಲೆಗಳು ರೂ. 9.49 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). ಹೆಚ್ಚು ಪವರ್‌ಫುಲ್ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ.

ಇದರ ಪವರ್‌ಫುಲ್ ಎಂಜಿನ್ 118 bhp ಪವರ್ ಮತ್ತು 172 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. Altroz ​​ನ ಈ ಸ್ಪೋರ್ಟಿ ಕಾರು ಪ್ರಸ್ತುತ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ಬಿಡುಗಡೆಯಾದಾಗಿನಿಂದ ಕಾರು ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಮಾರಾಟದಲ್ಲಿ ಹೊಸ ಅಲೆ ಎಬ್ಬಿಸುತ್ತಿದೆ.

Article Published On: Thursday, July 25, 2024, 11:57 [IST]
English summary
Powerful turbocharged petrol cars in india under rs 10 lakh
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+